ನಾಲ್ಕೈದು ಸರ್ವೆ ನಡೆದ್ರೂ ಆಂಧ್ರ-ಕರ್ನಾಟಕ ಗಡಿ ಗುರುತು ಸಿಕ್ಕಿಲ್ಲ.. ಅನುಮಾನಕ್ಕೆ ಕಾರಣವಾದ ಅಧಿಕಾರಿಗಳ ನಡೆ

ಕರ್ನಾಟಕ-ಆಂಧ್ರ ಪ್ರದೇಶದ ಗಡಿ ಗುರುತು ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗಡಿ ಗುರುತು ಪತ್ತೆ ಹಚ್ಚುವ ದಶಕದಿಂದಲೂ ಕಗ್ಗಂಟ್ಟಾಗಿ ಉಳಿದಿದೆ. ಇದುವರೆಗೆ ನಾಲ್ಕೈದು ಸರ್ವೆಗಳು ನಡೆದ್ರೂ ಇದುವರೆಗೆ ಆಂಧ್ರ-ಕರ್ನಾಟಕ ಗಡಿ ಗುರುತು ಪತ್ತೆ ಹಚ್ಚಲು ಸಾಧ್ಯವಾಗದಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ನಾಲ್ಕೈದು ಸರ್ವೆ ನಡೆದ್ರೂ ಆಂಧ್ರ-ಕರ್ನಾಟಕ ಗಡಿ ಗುರುತು ಸಿಕ್ಕಿಲ್ಲ.. ಅನುಮಾನಕ್ಕೆ ಕಾರಣವಾದ ಅಧಿಕಾರಿಗಳ ನಡೆ
Follow us
ಆಯೇಷಾ ಬಾನು
|

Updated on: Dec 23, 2020 | 7:28 AM

ಬಳ್ಳಾರಿ: ಗಣಿಗಾರಿಕೆ. ಆಂಧ್ರ-ಕರ್ನಾಟಕ ಭಾಗದ ಗಡಿ ಪ್ರದೇಶದಲ್ಲಿ ಎಗ್ಗಿಲ್ಲದೇ ನಡೆಯುತ್ತಿತ್ತು. ಹೀಗೆ ಅಕ್ರಮ ಗಣಿಗಾರಿಕೆ ಉತ್ತುಂಗದಲ್ಲಿ ನಡೆಯುತ್ತಿರುವಾಗ ಕೆಲ ಗಣಿ ಕಂಪನಿಗಳು ಕರ್ನಾಟಕ-ಆಂಧ್ರ ಗಡಿ ಒತ್ತುವರಿ ಮಾಡಿ ಗಣಿಗಾರಿಕೆ ನಡೆಸಿದ ಆರೋಪಗಳು ಕೇಳಿ ಬಂದಿದ್ದವು. ಹೀಗಾಗಿ ಗಡಿ ಒತ್ತುವರಿ ಮಾಡಿಕೊಂಡಿರುವುದನ್ನ ಪತ್ತೆ ಹಚ್ಚಿ ಗಡಿ ಗುರುತಿಸಬೇಕು ಅಂತಾ ಒಂದು ದಶಕದಿಂದಲೂ ಹೋರಾಟ ನಡೆಯುತ್ತಲೇ ಇತ್ತು.

ಈ ಹಿಂದೆ ಲೋಕಾಯುಕ್ತ ವರದಿಯಲ್ಲೂ ಕೆಲ ಗಣಿ ಕಂಪನಿಗಳು ಗಡಿ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಉಲ್ಲೇಖ ಮಾಡಲಾಗಿತ್ತು. ಜೊತೆಗೆ ಸಿಇಸಿ ಕೂಡ ಜಂಟಿ ಸರ್ವೆ ನಡೆಸಿತ್ತು. ಆದ್ರೆ ಗಡಿ ಗುರುತು ಪತ್ತೆ ಹಚ್ಚಿರಲಿಲ್ಲ. ಆಗ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಸುಪ್ರೀಂಕೋರ್ಟ್ ಜಂಟಿ ಸರ್ವೆ ನಡೆಸುವಂತೆ ಎರಡು ರಾಜ್ಯದ ಅಧಿಕಾರಿಗಳಿಗೆ ಆದೇಶ ಮಾಡಿತ್ತು. ಈ ಹಿನ್ನೆಲೆಯಲ್ಲಿ ಡೆಹ್ರಾಡೂನ್‌ನಿಂದ 20 ಕ್ಕೂ ಹೆಚ್ಚು ಸರ್ವೆ ಅಧಿಕಾರಿಗಳು, ಎರಡು ರಾಜ್ಯಗಳಿಂದ ಸರ್ವೆ ಅಧಿಕಾರಿಗಳು, ಅರಣ್ಯಾಧಿಕಾರಿಗಳ ಜೊತೆಗೆ ಸ್ಥಳೀಯ ಅಧಿಕಾರಿಗಳು ಕೂಡ ಸರ್ವೆ ನಡೆಸಿ ವರದಿ ಸಲ್ಲಿಸಿದ್ರು.

ಅನುಮಾನಕ್ಕೆ ಎಡೆಯಾದ ಅಧಿಕಾರಿಗಳ ನಡೆ: ಆದರೂ ಕೂಡ ನಿಖರವಾಗಿ ಗಡಿ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಈಗ ಮತ್ತೊಮ್ಮೆ ಸುಪ್ರೀಂಕೋರ್ಟ್ ಸರ್ವೆ ಆಫ್ ಇಂಡಿಯಾದ ಅಧಿಕಾರಿಗಳಿಗೆ ಗಡಿ ಗುರುತು ಪತ್ತೆ ಹಚ್ಚುವಂತೆ ನಿರ್ದೇಶನ ನೀಡಿದೆ. ಈಗಾಗಲೇ ಅಧಿಕಾರಿಗಳು 1896ರ ನಕ್ಷೆ ಪ್ರಕಾರ ಸರ್ವೆ ಮಾಡಿ ವಾಪಾಸ್ ಆಗಿದ್ದಾರೆ. ಆದ್ರೆ ಅಧಿಕಾರಿಗಳ ಸರ್ವೇಗೆ ಒಪ್ಪದ ದೂರುದಾರ ಟಪಾಲ್ ಗಣೇಶ್, 1887ರ ನಕ್ಷೆಯ ಪ್ರಕಾರವೇ ಗಡಿ ಗುರುತು ಗುರುತಿಸುವ ಕಾರ್ಯ ಆಗಬೇಕಿದೆ ಎಂದು ಒತ್ತಾಯಿಸಿದ್ದಾರೆ.

ಸರ್ವೆ ಆಫ್ ಇಂಡಿಯಾದ ಅಧಿಕಾರಿಗಳಿಗೆ ಬಳ್ಳಾರಿ ಜಿಲ್ಲಾಧಿಕಾರಿ ಐದು ಪತ್ರಗಳನ್ನ ಬರೆದಿದ್ದಾರೆ. ಯಾವ ಆಧಾರದ ಮೇಲೆ ಸರ್ವೆ ನಡೆಸಲಾಗುತ್ತಿದೆ. ಜೊತೆಗೆ ಹಿಂದಿನ ಸ್ಕೆಚ್ ಗಳನ್ನ ನೀಡುವಂತೆ ಪತ್ರ ಬರೆದಿದ್ದಾರೆ. ಆದ್ರೆ ಇದುವರೆಗೆ ಸರ್ವೆ ಆಫ್ ಇಂಡಿಯಾದ ಅಧಿಕಾರಿಗಳಿಂದ ಉತ್ತರ ಬಂದಿಲ್ಲವಂತೆ. ಕಳೆದ 10-12 ವರ್ಷಗಳಿಂದಲೂ ಸರ್ವೆ ಆಫ್ ಇಂಡಿಯಾದ ಅಧಿಕಾರಿಗಳು ಸಮರ್ಪಕವಾಗಿ ಸರ್ವೆ ನಡೆಸಿ ಆಂಧ್ರ-ಕರ್ನಾಟಕ ಗಡಿ ಗುರುತು ಪತ್ತೆ ಹಚ್ಚುವುದು ಬಿಟ್ಟು ಕೇವಲ ವಿಳಂಬ ಮಾಡುತ್ತಿದ್ದಾರೆ. ಹೀಗಾಗಿ ಸರ್ವೆ ಆಫ್ ಇಂಡಿಯಾದ ಅಧಿಕಾರಿಗಳು ಒತ್ತಡಕ್ಕೆ ಮಣಿದಿದ್ದಾರೆ ಅನ್ನೋ ಆರೋಪ ಕೇಳಿ ಬರುತ್ತಿದೆ.

ಕರ್ನಾಟಕ-ಆಂಧ್ರ ಗಡಿ ಗುರುತು ಸರ್ವೆ ಕಾರ್ಯ ಕಳೆದ ಒಂದು ದಶಕದಿಂದಲೂ ವಿಳಂಬ ಯಾಕೆ ಆಗುತ್ತಿದೆ ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ. ಸುಪ್ರೀಂ ಆದೇಶದ ನಂತರವೂ ಅಧಿಕಾರಿಗಳು ಸರ್ವೆ ಪೂರ್ಣಗೊಳಿಸದೇ ವಾಪಾಸ್ ಹೋಗಿರುವುದು ಅಚ್ಚರಿ ತಂದಿದೆ.

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ