ಕಾಮಗಾರಿಗಾಗಿ ಅರಣ್ಯ ನಾಶಪಡಿಸಿರುವ ಆರೋಪ; ಶೃಂಗೇರಿ ಮಠದ ಗುತ್ತಿಗೆದಾರನ ವಿರುದ್ಧ FIR

ಶೃಂಗೇರಿ ಸಮೀಪದ ಮಾರುತಿ ಬೆಟ್ಟದಲ್ಲಿ ಗುಡ್ಡದ ಮೇಲೆ JCB ಬಳಸಿ ಕಾಮಗಾರಿ ಮಾಡಿದ ಹಿನ್ನೆಲೆ ರಸ್ತೆಗೆ ಅಡ್ಡಲಾಗಿ ಗುಡ್ಡದ ಮಣ್ಣು ಕುಸಿದು ಬಿಳುತ್ತಿದೆ. ಸದ್ಯ ಕಾಮಗಾರಿಗೆ ಗುಡ್ಡ ನಾಶ, ಮರಗಳ ಕಡಿತ ಹಿನ್ನೆಲೆ ಶೃಂಗೇರಿ ವಲಯ ಅರಣ್ಯ ಇಲಾಖೆ ಕಚೇರಿಯಲ್ಲಿ FIR ದಾಖಲಾಗಿದೆ.

ಕಾಮಗಾರಿಗಾಗಿ ಅರಣ್ಯ ನಾಶಪಡಿಸಿರುವ ಆರೋಪ; ಶೃಂಗೇರಿ ಮಠದ ಗುತ್ತಿಗೆದಾರನ ವಿರುದ್ಧ FIR
ಶೃಂಗೇರಿ ಮಠದ ಗುತ್ತಿಗೆದಾರನ ವಿರುದ್ಧ FIR
Follow us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಆಯೇಷಾ ಬಾನು

Updated on: Jan 27, 2024 | 11:43 AM

ಚಿಕ್ಕಮಗಳೂರು, ಜ.27: ಶೃಂಗೇರಿ ಮಠದಿಂದ (Sringeri Mutt) ನಿರ್ಮಾಣವಾಗುತ್ತಿರುವ ಕಾಮಗಾರಿಗಾಗಿ ಅರಣ್ಯ ನಾಶಪಡಿಸಿರುವ ಆರೋಪದ ಮೇಲೆ ಶೃಂಗೇರಿ ಮಠದ ಗುತ್ತಿಗೆದಾರ ಸಂದೀಪ್ ವಿರುದ್ಧ FIR ದಾಖಲಾಗಿದೆ. ಶೃಂಗೇರಿ ಮಠದಿಂದ ಗುಡ್ಡದ ಮೇಲೆ ಶಂಕರಾಚಾರ್ಯರ ಪ್ರತಿಮೆ ಬಳಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಗುತ್ತಿಗೆ ಪಡೆದಿದ್ದ ಸಂದೀಪ್ ಅವರು ಗುಡ್ಡ ನಾಶ, ಮರಗಳ ಕಡಿತ ಹಿನ್ನೆಲೆ ಶೃಂಗೇರಿ ವಲಯ ಅರಣ್ಯ ಇಲಾಖೆಯ ಕಚೇರಿಯಲ್ಲಿ FIR ದಾಖಲಾಗಿದೆ.

ಶೃಂಗೇರಿ ಮಠದಿಂದ ನಿರ್ಮಾಣವಾಗಿರುವ ಶಂಕರಾಚಾರ್ಯರ ಪ್ರತಿಮೆ ಬಳಿ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಕೆಳ ಭಾಗದಲ್ಲಿ ಮಣ್ಣು ಕುಸಿತ ಹಿನ್ನೆಲೆ ಮರಗಳ ಕಡಿದು ಕಾಂಪೌಂಡ್ ಗೋಡೆ ನಿರ್ಮಾಣ ಮಾಡಲಾಗಿದೆ. ಶೃಂಗೇರಿ ಸಮೀಪದ ಮಾರುತಿ ಬೆಟ್ಟದಲ್ಲಿ ಗುಡ್ಡದ ಮೇಲೆ JCB ಬಳಸಿ ಕಾಮಗಾರಿ ಮಾಡಿದ ಹಿನ್ನೆಲೆ ರಸ್ತೆಗೆ ಅಡ್ಡಲಾಗಿ ಗುಡ್ಡದ ಮಣ್ಣು ಕುಸಿದು ಬಿಳುತ್ತಿದೆ. ಸದ್ಯ ಕಾಮಗಾರಿಗೆ ಗುಡ್ಡ ನಾಶ, ಮರಗಳ ಕಡಿತ ಹಿನ್ನೆಲೆ ಶೃಂಗೇರಿ ವಲಯ ಅರಣ್ಯ ಇಲಾಖೆ ಕಚೇರಿಯಲ್ಲಿ FIR ದಾಖಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಶೃಂಗೇರಿ RFO ಶೃತಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

ಅರಣ್ಯ ಇಲಾಖೆ ಜನವರಿ 2 ರಂದೇ FIR ದಾಖಲಿಸಿ ತನಿಖೆ ನಡೆಸುತ್ತಿದೆ. ನೂರಾರು ಮರಗಳ ಕಡಿತ, ಗುಡ್ಡ ನಾಶವಾದ ಹಿನ್ನೆಲೆ ಸ್ವಯಂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಗುತ್ತಿಗೆದಾರ ಸಂದೀಪ್ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ವಿಜಯನಗರ: ಹಂಪಿ ವಿರೂಪಾಕ್ಷ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಜಾರಿ

ಕಾಫಿನಾಡಿನ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ದಂಡು

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣ, ಪ್ರಸಿದ್ಧ ದೇವಾಲಯಗಳಿಗೆ 2023ರಲ್ಲಿಯೇ 80 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿ ದಾಖಲೆ ನಿರ್ಮಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಕಾಣಸಿಗುವ ಮುಗಿಲೆತ್ತರದ ಬೆಟ್ಟಗಳು, ಪ್ರಪಾತಗಳು, ಜಲಪಾತಗಳು, ಹುಲ್ಲುಗಾವಲುಗಳು ಸೇರಿದಂತೆ ಧಾರ್ಮಿಕ ಕ್ಷೇತ್ರಗಳನ್ನು ಒಳಗೊಂಡಿರುವ ವೈವಿಧ್ಯಮಯ ಪ್ರದೇಶಗಳಿರುವ ಚಿಕ್ಕಮಗಳೂರು ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. 2023ರಲ್ಲೇ 80 ಲಕ್ಷಕ್ಕೂ ಅಧಿಕ ಪ್ರವಾಸಿಗರು ಬಂದಿದ್ದು, ಡಿಸೆಂಬರ್ ಒಂದೇ ತಿಂಗಳಿನಲ್ಲಿ 11 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದಾರೆ. ಅದರಲ್ಲಿ ಹೆಚ್ಚಿನ ಪ್ರವಾಸಿಗರು ಮಹಿಳೆಯರೇ ಎಂಬುದು ವಿಶೇಷವಾಗಿದೆ.

ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಮಹತ್ವದ ಗ್ಯಾರಂಟಿಯಾಗಿರುವ ಶಕ್ತಿ ಯೋಜನೆ ಜಾರಿಯಾದ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿತಾಣ ,ಪುರಾಣ ಪ್ರಸಿದ್ಧ ದೇವಾಲಯಗಳಿಗೆ ಆಗಮಿಸಿದ್ದಾರೆ ಅದರಲ್ಲಿ ಶೃಂಗೇರಿ ಶಾರದಾಂಬೆ ಮಠ, ಹೊರನಾಡು ಅನ್ನಪೂರ್ಣೇಶ್ವರಿ , ಮುಳ್ಳಯ್ಯನಗಿರಿ, ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ, ಕುದುರೆ ಮುಖಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದಾರೆ. ಶಕ್ತಿ ಯೋಜನೆ ಜಾರಿಯಾದ ದಿನದಿಂದ ಡಿಸೆಂಬರ್ ವರೆಗೂ 2 ಕೋಟಿ 51 ಲಕ್ಷದ 77 ಸಾವಿರದ 953 ಮಹಿಳೆಯರು ಪ್ರಯಾಣವನ್ನ KSRTC ಬಸ್ಸುಗಳಲ್ಲಿ ಮಾಡಿದ್ದಾರೆ. ಜಿಲ್ಲೆಗೆ ಆಗಮಿಸಿದ ಪ್ರವಾಸಿಗರಲ್ಲಿ ಹೆಚ್ಚಾಗಿ ಮಹಿಳೆಯರು ಭೇಟಿ ನೀಡಿರುವುದರ ಹಿಂದೆ ಶಕ್ತಿ ಯೋಜನೆ ಎಫೆಕ್ಟ್ ಎನ್ನಲಾಗಿದೆ

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ