ಟಿಟಿ ಆ್ಯಂಬುಲೆನ್ಸ್ ಹೆಸರಲ್ಲಿ ಲೂಟಿಯಾಗ್ತಿದೆ ಲಕ್ಷ ಲಕ್ಷ ಹಣ, ಡ್ರೈವರ್ಗಳೇ ಹೇಳಿದ ಕರ್ಮಕಾಂಡ!
ಬೆಂಗಳೂರು: ಮಹಾಮಾರಿ ಕೊರೊನಾ ರಾಜಧಾನಿಯಲ್ಲಿ ತನ್ನ ಪ್ರತಾಪ ಮುಂದುವರೆಸಿದೆ. ಈ ನಡುವೆ ಆರೋಗ್ಯ ಇಲಾಖೆ ಕೂಡ ಅಂದ ದರ್ಬಾರ್ ನಡೆಸುತ್ತಿದೆ. ಕೊರೊನಾ ಹೆಸರಲ್ಲಿ ಸಿಕ್ಕಿದ ಕಡೆಯಲೆಲ್ಲ ಕಾಸು ಮಾಡೋಕೆ ನಿಂತಿದೆ ಎಂಬ ಆರೋಪ ಕೇಳಿ ಬಂದಿದೆ. ಹೌದು ಟಿಟಿ ಆ್ಯಂಬುಲೆನ್ಸ್ ನಿಂತಲ್ಲೇ ನಿಂತರು ತಿಂಗಳು ತಿಂಗಳು ಲಕ್ಷ ಲಕ್ಷ ಬಾಡಿಗೆಯನ್ನು ಸುಳಿಗೆ ಮಾಡಲಾಗುತ್ತಿದೆಯಂತೆ. ನಿಂತಿರುವ ಜಾಗದಲ್ಲೇ ವಾಹನವನ್ನ ಆನ್ ಮಾಡಿ ಬಿಡೋದ್ಯಾಕೆ? ಇನ್ನು ನಿಂತಿರುವ ಜಾಗದಲ್ಲೇ ವಾಹನವನ್ನು ಆನ್ ಮಾಡಿ ಬಿಡಲಾಗುತ್ತೆ. ರೋಗಿಗಳನ್ನ ಆಸ್ಪತ್ರೆಗೆ ಶಿಫ್ಟ್ ಮಾಡದಿದ್ರು […]

ಬೆಂಗಳೂರು: ಮಹಾಮಾರಿ ಕೊರೊನಾ ರಾಜಧಾನಿಯಲ್ಲಿ ತನ್ನ ಪ್ರತಾಪ ಮುಂದುವರೆಸಿದೆ. ಈ ನಡುವೆ ಆರೋಗ್ಯ ಇಲಾಖೆ ಕೂಡ ಅಂದ ದರ್ಬಾರ್ ನಡೆಸುತ್ತಿದೆ. ಕೊರೊನಾ ಹೆಸರಲ್ಲಿ ಸಿಕ್ಕಿದ ಕಡೆಯಲೆಲ್ಲ ಕಾಸು ಮಾಡೋಕೆ ನಿಂತಿದೆ ಎಂಬ ಆರೋಪ ಕೇಳಿ ಬಂದಿದೆ. ಹೌದು ಟಿಟಿ ಆ್ಯಂಬುಲೆನ್ಸ್ ನಿಂತಲ್ಲೇ ನಿಂತರು ತಿಂಗಳು ತಿಂಗಳು ಲಕ್ಷ ಲಕ್ಷ ಬಾಡಿಗೆಯನ್ನು ಸುಳಿಗೆ ಮಾಡಲಾಗುತ್ತಿದೆಯಂತೆ.
ನಿಂತಿರುವ ಜಾಗದಲ್ಲೇ ವಾಹನವನ್ನ ಆನ್ ಮಾಡಿ ಬಿಡೋದ್ಯಾಕೆ?
ಇನ್ನು ನಿಂತಿರುವ ಜಾಗದಲ್ಲೇ ವಾಹನವನ್ನು ಆನ್ ಮಾಡಿ ಬಿಡಲಾಗುತ್ತೆ. ರೋಗಿಗಳನ್ನ ಆಸ್ಪತ್ರೆಗೆ ಶಿಫ್ಟ್ ಮಾಡದಿದ್ರು ನಿಂತಲ್ಲೇ ಓಡಿಸಿ ಲೆಕ್ಕ ತೋರಿಸಲಾಗುತ್ತಂತೆ.
ಅನಾವಶ್ಯಕವಾಗಿ ಟಿಟಿ ಆ್ಯಂಬುಲೆನ್ಸ್ನಿಂದ ಸಾರ್ವಜನಿಕರ ಹಣ ಪೋಲು ಮಾಡಲಾಗುತ್ತಿದೆ. ಟಿಟಿ ಆ್ಯಂಬುಲೆನ್ಸ್ ಹೆಸರಲ್ಲಿ ಫುಲ್ ಗೋಲ್ ಮಾಲ್ ನಡೀತಿದೆ. ಅವಶ್ಯಕತೆಗೂ ಮೀರಿ ಬಾಡಿಗೆ ಪಡೆದು ಆಫೀಸರ್ಸ್ ಹಣ ನುಂಗುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಒಂದು ಟಿಟಿ ಆ್ಯಂಬುಲೆನ್ಸ್ಗೆ ತಿಂಗಳಿಗೆ 1 ಲಕ್ಷ 30 ಸಾವಿರ ರೂಪಾಯಿ ಬಾಡಿಗೆ ಇದೆಯಂತೆ. 2 ಸಾವಿರ ಕಿಲೋ ಮೀಟರ್ ಬಳಿಕ 1 ಕಿಲೋಮೀಟರ್ ಗೆ 16 ರೂಪಾಯಿ ಹೆಚ್ಚುವರಿ ಹಣ ನೀಡಲಾಗುತ್ತಿದೆ. ಇನೋವಾ ಕಾರ್ಗಳಿಗೆ ದಿನಕ್ಕೆ 4300 ಪ್ಲಸ್ ಜಿಎಸ್ಟಿ ನೀಡಲಾಗುತ್ತೆ.
ಆದ್ರೆ ಟಿಟಿ ಆ್ಯಂಬುಲೆನ್ಸ್ ಮಾಲೀಕರಿಗೆ ನೀಡುವುದು 90 ಸಾವಿರ ರೂಪಾಯಿ. ಉಳಿದಿಲ್ಲಾ ಹಣವನ್ನು ಅಧಿಕಾರಿಗಳು ಜೇಬಿಗಿಳಿಸಿಕೊಳ್ಳುತ್ತಿದ್ದಾರಂತೆ. ಟಿಟಿ ಆ್ಯಂಬುಲೆನ್ಸ್ಗಳು ಕೂಡ ನಿಂತಲ್ಲಿ ನಿಂತ್ರು ಬಾಡಿಗೆ ನೀಡಲಾಗುತ್ತಿದೆ. ಆ್ಯಂಬುಲೆನ್ಸ್ ಡ್ರೈವರ್ಗಳೇ ಆರೋಗ್ಯ ಇಲಾಖೆಯ ಕರ್ಮಕಾಂಡ ಬಾಯಿಬಿಟ್ಟಿದ್ದಾರೆ.
ಟಿಟಿ ಆ್ಯಂಬುಲೆನ್ಸ್ಗಳ ಬದಲು 108 ಆ್ಯಂಬುಲೆನ್ಸ್ಗಳನ್ನೇ ಸರಿಯಾಗಿ ಬಳಸಬಹುದಿತ್ತು. ಹಣ ಲೂಟಿ ಹೊಡೆಯಲು ಟಿಟಿ ಆ್ಯಂಬುಲೆನ್ಸ್ಗಳನ್ನ ಮುಂದಿಟ್ಟುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.