ಡಿಕೆ ಶಿವಕುಮಾರ್ ಸಂಪುಟದ 13 ಸಚಿವರಿಗೆ ಕೊಠಡಿ ಹಂಚಿಕೆ, ರಾಮಲಿಂಗಾರೆಡ್ಡಿಗೆ ಬಂಪರ್

ಕರ್ನಾಟಕದ ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ತಮ್ಮ ಸಂಪುಟದ ಎಲ್ಲಾ 13 ಸಚಿವರಿಗೆ ಈಗಾಗಲೇ ಖಾತೆಗಳನ್ನು ಹಂಚಿಕೆಯಾಗಿದೆ. ಈ ಪೈಕಿ ಕೆಲವು ಸಚಿವರು ಸಿದ್ದರಾಮಯ್ಯ ಸರ್ಕಾರದಲ್ಲಿ ನಿಭಾಯಿಸಿದ್ದ ಖಾತೆಗಳನ್ನೇ ಮರಳಿ ಪಡೆದುಕೊಂಡಿದ್ದರೆ, ಮತ್ತೆ ಕೆಲವು ಸಚಿವರು ಹೊಸ ಖಾತೆಗಳನ್ನು ನೀಡಲಾಗಿದೆ. ಆದ್ರೆ, ಕೆಲವರಿಗೆ ಖಾತೆಗಳ ಬಗ್ಗೆ ಅಸಮಾಧಾನ ಇದೆ. ಇದರ ಮಧ್ಯೆ ಇದೀಗ ನೂತನ ಸಚಿವರಿಗೆ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ಕೊಠಡಿ ಹಂಚಿಕೆ ಮಾಡಲಾಗಿದೆ. ಹಾಗಾದ್ರೆ, ಯಾವ ಸಚಿವರಿಗೆ ಯಾವ ಕೊಠಡಿ ನೀಡಲಾಗಿದೆ ಎನ್ನುವ ಡಿಟೇಲ್ಸ್ ಇಲ್ಲಿದೆ.

ಡಿಕೆ ಶಿವಕುಮಾರ್ ಸಂಪುಟದ 13 ಸಚಿವರಿಗೆ ಕೊಠಡಿ ಹಂಚಿಕೆ, ರಾಮಲಿಂಗಾರೆಡ್ಡಿಗೆ ಬಂಪರ್
Dk Shivakumar Cabinet
Edited By:

Updated on: Jun 08, 2026 | 4:11 PM

ಬೆಂಗಳೂರು, (ಜೂನ್ 07): ಡಿಕೆ ಶಿವಕುಮಾರ್ ಸಂಪುಟದ (DK Shivakumar Cabinet) ಮೊದಲ ಹಂತದ ನೂತನ 13 ಸಚಿವರಿಗೆ  ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ. ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಸಚಿವರಿಗೆ ಕೊಠಡಿ ಹಂಚಿಕೆ ಮಾಡಿ ಇಂದು (ಜೂನ್ 08) ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿದ್ದು, ಇದಲ್ಲಿ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡಿಲ್ಲವೆಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಾಮಲಿಂಗಾರೆಡ್ಡಿ ಅವರಿಗೆ ಬರೋಬ್ಬರಿಗೆ ನಾಲ್ಕು ಕೊಠಡಿಗಳನ್ನು ನೀಡಲಾಗಿದೆ. ಹೌದು…ರಾಮಲಿಂಗಾರೆಡ್ಡಿಗೆ 335, 336, 337, 337A ಕೊಠಡಿಗಳ ಹಂಚಿಕೆ ಮಾಡಲಾಗಿದೆ. ಈ ಮೂಲಕ ಅವರನ್ನು ಸಮಾಧಾನಪಡಿಸುವ ಪ್ರಯತ್ನ ಇದಾಗಿದೆ ಎನ್ನಲಾಗಿದೆ.

ಮುಖ್ಯಾಂಶಗಳು

  • ಡಿಕೆಶಿ ಸಂಪುಟದ 13 ಸಚಿವರಿಗೆ ವಿಧಾನಸೌಧ, ವಿಕಾಸಸೌಧದಲ್ಲಿ ಕೊಠಡಿ ಹಂಚಿಕೆ
  • ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿಗೆ 4 ಕೊಠಡಿಗಳ ಹಂಚಿಕೆ
  • ಈ ಹಿಂದೆ ಡಿಸಿಎಂ ಆಗಿದ್ದಾಗ ಡಿ‌.ಕೆ.ಶಿವಕುಮಾರ್ ಬಳಸುತ್ತಿದ್ದ ಕಚೇರಿ ರಾಮಲಿಂಗಾರೆಡ್ಡಿಗೆ
  • ಸಿಎಂ ಕಚೇರಿಯಂತೆ ನವೀಕರಣ ಮಾಡಿಸಿದ್ದ ಡಿ.ಕೆ.ಶಿವಕುಮಾರ್
  • ಈಗ ಅದೇ ಕೊಠಡಿಗಳನ್ನು ಸಚಿವ ರಾಮಲಿಂಗಾರೆಡ್ಡಿಗೆ ನೀಡಿ ಆದೇಶ

ಜಲಸಂಪನ್ಮೂಲ ಸಚಿವ ರಾಮಲಿಂಗರೆಡ್ಡಿಗೆ 335, 336, 337, 337A ಒಟ್ಟು 4 ಕೊಠಡಿಗಳ ಹಂಚಿಕೆ ಮಾಡಲಾಗಿದೆ. ಈ ಹಿಂದೆ ಡಿಸಿಎಂ ಆಗಿದ್ದಾಗ ಡಿ‌.ಕೆ.ಶಿವಕುಮಾರ್ ಬಳಸುತ್ತಿದ್ದ ಕಚೇರಿ ಸಿಎಂ ಕಚೇರಿಯಂತೆ ನವೀಕರಣ ಮಾಡಿಸಿದ್ದರು. ಈಗ ಅದೇ ಕೊಠಡಿಗಳನ್ನು ಸಚಿವ ರಾಮಲಿಂಗಾರೆಡ್ಡಿಗೆ ಬಿಟ್ಟುಕೊಟ್ಟಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಜೋರಾಯ್ತು ಸಚಿವ ಸ್ಥಾನಕ್ಕಾಗಿ ಸರ್ಕಸ್: 20 ಸ್ಥಾನಗಳಿಗಾಗಿ 60ಕ್ಕೂ ಹೆಚ್ಚು ಶಾಸಕರಿಂದ ಮಹಾ ಲಾಬಿ

ಯಾರ‍್ಯಾರಿಗೆ ಯಾವ ಕೊಠಡಿ?

  1. ಪರಮೇಶ್ವರ್ ಉಪ ಮುಖ್ಯಮಂತ್ರಿ (ಕಂದಾಯ ಮತ್ತು ಯುವಸಬಲೀಕರಣ) – ವಿಧಾನಸೌಧ 327/327a
  2.  ಕೆ.ಎಚ್ ಮುನಿಯಪ್ಪ, (ಆಹಾರ ಸಚಿವ)- ವಿಧಾನಸೌಧ – 340a/341/341a
  3. ಕೆಜೆ ಜಾರ್ಜ್ (ಇಂಧನ ಮತ್ತು ಪ್ರವಾಸೋದ್ಯುಮ) – ವಿಧಾನಸೌಧ, 317/317a
  4. ಎಂಬಿ ಪಾಟೀಲ್,  (ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ) – ವಿಧಾನಸೌಧ – 344/344a
  5.  ರಾಮಲಿಂಗಾರೆಡ್ಡಿ, (ಜಲಸಂಪನ್ಮೂಲ ಸಚಿವ) – ವಿಧಾನಸೌಧ, 335/336/337/337a
  6. ಸತೀಶ್ ಜಾರಕಿಹೊಳಿ, (ಲೋಕೋಪಯೋಗಿ ಸಚಿವ) – ವಿಕಾಸಸೌಧ, 444/445
  7.  ಕೃಷ್ಣ ಬೈರೇಗೌಡ, ಸಚಿವ -(ಬೆಂಗಳೂರು ನಗರಾಭಿವೃದ್ಧಿ ಸಚಿವ)  ವಿಕಾಸಸೌಧ, 244/245
  8.  ಪ್ರಿಯಾಂಕ್ ಖರ್ಗೆ, (ಗೃಹ ಇಲಾಖೆ ಮತ್ತು ಐಟಿಬಿಟಿ) – ವಿಕಾಸ ಸೌಧ, 242, 243
  9. ಯುಟಿ ಖಾದರ್,  (ಆರೋಗ್ಯ ಸಚಿವ) – ವಿಧಾನಸೌಧ, 315/315a
  10.  ಈಶ್ವರ್ ಖಂಡ್ರೆ, (ಗ್ರಾಮೀಣಾಭಿವೃದ್ಧಿ ಸಚಿವ) – ವಿಕಾಸಸೌಧ, 36/37
  11.  ಯತೀಂದ್ರ ಸಿದ್ದರಾಮಯ್ಯ, (ನಗರಾಭಿವೃದ್ಧಿ ಸಚಿವ) – ವಿಧಾನಸೌಧ, 314/314a
  12.  ಶರಣಪ್ರಕಾಶ್ ಪಾಟೀಲ್, (ವೈದ್ಯಕೀಯ ಶಿಕ್ಷಣ ಸಚಿವ) – ವಿಕಾಸಸೌಧ. 344/345
  13.  ಬೈರತಿ ಸುರೇಶ್, (ಸಾರಿಗೆ ಸಚಿವ) – ವಿಧಾನಸೌಧ, 316/316a

ಮುಖ್ಯಮಂತ್ರಿಗಳ ಗೃಹ ಕಚೇರಿ ದ್ವಾರ ಬದಲು

ಕುಮಾರಕೃಪಾ ಅತಿಥಿ ಗೃಹ ಇನ್ಮುಂದೆ ಮುಖ್ಯಮಂತ್ರಿಗಳ ಗೃಹ ಕಚೇರಿಯಾಗಲಿದೆ. ಸದ್ಯ ಮುಖ್ಯ ದ್ವಾರ ಪೂರ್ವ ಭಾಗದಲ್ಲಿದ್ದು, ಪೂರ್ವ ಭಾಗದ ದ್ವಾರದಲ್ಲೇ ಎಲ್ಲರ ಓಡಾಟ ಇತ್ತು. ಆದ್ರೆ, ಪೂರ್ವ ಭಾಗದಲ್ಲಿರುವ ಕಚೇರಿಯ ಮುಖ್ಯ ದ್ವಾರವನ್ನು ಬದಲಾವಣೆ ಮಾಡಲಾಗಿದ್ದು, ಸಿಎಂ ಡಿಕೆ ಶಿವಕುಮಾರ್ ತಮ್ಮ ಗೃಹ ಕಚೇರಿಗೂ ಉತ್ತರ ಬಾಗಿಲಿನಿಂದಲೇ ಪ್ರವೇಶ ದ್ವಾರ ಮಾಡಿಕೊಂಡಿದ್ದಾರೆ.

ಈಗ ಉತ್ತರ ಬಾಗಿಲಿನ ಮೂಲಕವೇ ಓಡಾಟ ಮಾಡಲು ನಿರ್ಧಾರ ಮಾಡಲಾಗಿದ್ದು,ಈಗಾಗಲೇ ಮುಖ್ಯಮಂತ್ರಿಗಳ ಗೃಹ ಕಚೇರಿಗಾಗಿ ನವೀಕರಣ ಕಾರ್ಯ ಭರದಿಂದ ಸಾಗಿದೆ. ಹೊಸ ಎಸಿ, ಹೊಸ ಬೃಹತ್ ಟಿವಿ ಸೇರಿದಂತೆ ಗೃಹ ಕಚೇರಿಯಲ್ಲಿ ಹೊಸ ಪೀಠೋಪಕರಣ ಅಳವಡಿಕೆ ಮಾಡಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಸನ್ನ ಗಾಂವ್ಕರ್​

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
Loading...
Unable to load recommendations.
Follow Us