ಬೆಂಗಳೂರು: ತಿರುಪತಿಯಲ್ಲಿ ಜಮೀನು ಕೊಡಿಸುವ ನೆಪದಲ್ಲಿ ಆಂಧ್ರ ಮೂಲದ ಉದ್ಯಮಿಗೆ ವಂಚನೆ
ತಿರುಮತಿಯಲ್ಲಿ ಜಮೀನು ಕೊಡಿಸುವ ನೆಪದಲ್ಲಿ ಆಂಧ್ರಪ್ರದೇಶ ಮೂಲದ ಉದ್ಯಮಿಯನ್ನು ಬೆಂಗಳೂರು ನಗರಕ್ಕೆ ಕರೆಸಿ 1.9 ಕೋಟಿ ಹಣ ಪಡೆದು ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಉದ್ಯಮಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಹೈಗ್ರೌಂಡ್ ಪೊಲೀಸರು, ಐವರು ಆರೋಪಿಗಳ ಬಂಧಿಸಿದ್ದಾರೆ.
ಬೆಂಗಳೂರು, ನ.7: ತಿರುಮತಿಯಲ್ಲಿ ಜಮೀನು ಕೊಡಿಸುವ ನೆಪದಲ್ಲಿ ಆಂಧ್ರಪ್ರದೇಶ ಮೂಲದ ಉದ್ಯಮಿಯನ್ನು ಬೆಂಗಳೂರು (Bengaluru) ನಗರಕ್ಕೆ ಕರೆಸಿ 1.9 ಕೋಟಿ ಹಣ ಪಡೆದು ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಉದ್ಯಮಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಹೈಗ್ರೌಂಡ್ ಪೊಲೀಸರು, ಐವರು ಆರೋಪಿಗಳ ಬಂಧಿಸಿದ್ದಾರೆ.
ತಿರುಪತಿಯಲ್ಲಿ 14 ಎಕರೆ ಜಮೀನು ಕೊಡಿಸುವುದಾಗಿ ಆರೋಪಿಗಳು ನಂಬಿಸಿದ್ದಾರೆ. ಅದರಂತೆ ಬೆಂಗಳೂರಿನ ಪ್ರತಿಷ್ಠಿತ ಅಶೋಕ ಹೋಟೆಲ್ಗೆ ಉದ್ಯಮಿಯನ್ನು ಕರೆಸಿ ಡೀಲ್ ಮಾಡಿಕೊಂಡಿದ್ದಾರೆ. ಅಲ್ಲದೆ, 1 ಕೋಟಿ 9 ಸಾವಿರ ರೂಪಾಯಿ ಅಡ್ವಾನ್ಸ್ ಪಡೆದಿದ್ದಾರೆ.
ಇದನ್ನೂ ಓದಿ: ಹಾವೇರಿ: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಕುರಂಬಗೊಂಡ ಶಾಖೆ ಸಿಬ್ಬಂದಿಯಿಂದ ವಂಚನೆ
ಈ ವೇಳೆ ಹಣ ಪಡೆದು ಉದ್ಯಮಿಯ ಸ್ನೇಹಿತನ ಜೊತೆ ಜಮೀನು ತೋರಿಸುದಾಗಿ ಕರೆದೊಯ್ದಿದ್ದರು. ಬೆಂಗಳೂರಿನ ಹೊರವಲಯ ಹೊಗುತಿದ್ದಂತೆ ಜ್ಯೂಸ್ ತರಲು ಗಾಡಿ ನಿಲ್ಲಿಸಿದ್ದರು. ಉದ್ಯಮಿ ಸ್ನೇಹಿತನಿಗೆ ಜ್ಯೂಸ್ ತರಲು ಹೇಳಿ ಕಳುಹಿಸಿದ್ದರು. ಆತ ಕಾರ್ನಿಂದ ಇಳಿದು ಹೊದಾಗ ಹಣದ ಸಮೇತ ಕಾರ್ನಲ್ಲಿ ಎಸ್ಕೇಪ್ ಆಗಿದ್ದರು.
ಘಟನೆ ಸಂಬಂಧ ಹಣ ಕಳೆದುಕೊಂಡ ಹೈಗ್ರೌಂಡ್ ಪೊಲೀಸರು ಪ್ರಕರಣ ದಾಖಲಿಸಿದ್ದರು. ಬಂಧಿತರಿಂದ 60 ಲಕ್ಷ ಹಣ ಹಾಗೂ 40 ಲಕ್ಷ ಮೌಲ್ಯದ ಆಭರಣ ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ