ಮಾನವ-ಪ್ರಾಣಿ ಸಂಘರ್ಷ ಅತಿರೇಕಕ್ಕೆ ತಲುಪಿರುವಾಗ.. ಅರಣ್ಯ ಇಲಾಖೆಯ ರೈಲ್ವೆ ಬ್ಯಾರಿಕೇಡ್​​ಗೂ ಡೋಂಟ್​ ಕೇರ್​ ಅಂದ ಬುದ್ಧಿವಂತ ಗಜರಾಜ! ಮುಂದೇನು?

Human animal conflict: ಇದರಿಂದ ರೈಲ್ವೆ ಬ್ಯಾರಿಕೇಡ್ ಹಾಕಿದರೂ ಆನೆಗಳು ಡೋಂಟ್ ಕೇರ್ ಅಂತಿರೋದ್ರಿಂದ ಅರಣ್ಯ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈಗಾಗಲೇ ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡಿ ನಾಗರಹೊಳೆ, ಬಂಡೀಪುರ ಅರಣ್ಯದಂಚಿನ ಪ್ರದೇಶದಲ್ಲಿ ರೈಲ್ವೆ ಬ್ಯಾರಿಕೇಡ್ ಹಾಕಲಾಗಿದ್ದು, ಇದೀಗ ಅದನ್ನೂ ದಾಟುತ್ತಿರುವುದರಿಂದ ಇಲಾಖೆಗೆ ಮುಂದೇನು ಅನ್ನೋ ಪ್ರಶ್ನೆ ಶುರುವಾಗಿದೆ.

ಮಾನವ-ಪ್ರಾಣಿ ಸಂಘರ್ಷ ಅತಿರೇಕಕ್ಕೆ ತಲುಪಿರುವಾಗ.. ಅರಣ್ಯ ಇಲಾಖೆಯ ರೈಲ್ವೆ ಬ್ಯಾರಿಕೇಡ್​​ಗೂ ಡೋಂಟ್​ ಕೇರ್​ ಅಂದ ಬುದ್ಧಿವಂತ ಗಜರಾಜ! ಮುಂದೇನು?
ಅರಣ್ಯ ಇಲಾಖೆಯ ರೈಲ್ವೆ ಬ್ಯಾರಿಕೇಡ್​​ಗೂ ಡೋಂಟ್​ ಕೇರ್​ ಅಂದ ಬುದ್ಧಿವಂತ ಗಜರಾಜ!
Follow us
ದಿಲೀಪ್​, ಚೌಡಹಳ್ಳಿ
| Updated By: ಸಾಧು ಶ್ರೀನಾಥ್​

Updated on: Nov 07, 2023 | 11:51 AM

ಮಾನವ ಪ್ರಾಣಿ ಸಂಘರ್ಷ (Human animal conflict) ಎಂಬುದು ಇತ್ತೀಚೆಗೆ ಅತಿರೇಕಕ್ಕೆ ತಲುಪಿದೆ. ನಿನ್ನೆಯಷ್ಟೇ ಮೈಸೂರಿನಲ್ಲಿ ಹುಲಿ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ವ್ಯಾಘ್ರನ ಬಂಧನಕ್ಕೆ ಶೋಧ ಕಾರ್ಯ ಮುಂದುವರೆದಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಎರಡನೆಯ ಚಿರತೆಯೊಂದು ನಡುಊರಿನಲ್ಲಿ ಕಾಣಿಸಿಕೊಂಡಿದೆ. ಇನ್ನು ಇತ್ತೀಚಿಗೆ ಗಜರಾಜಗಳು ಕಾಡಿನಿಂದ ನಾಡಿಗೆ ಲಗ್ಗೆ ಇಡುತ್ತಲೆ ಇವೆ. ಇಂತಹ ಪ್ರಕರಣಗಳನ್ನ ತಪ್ಪಿಸಲು ಅರಣ್ಯ ಇಲಾಖೆ (forest) ಒಂದಿಲ್ಲೊಂದು ಪರಿಹಾರ ಮಾರ್ಗ ಕಂಡು ಹಿಡಿಯುತ್ತಲೆ ಇದೆ. ಆದ್ರೆ ಆನೆಗಳು ಮಾತ್ರ ಮನುಷ್ಯನಿಗಿಂತ ಹೆಚ್ಚು ಬುದ್ದಿವಂತಿಕೆ ತೋರಿಸತ್ತಲೆ ಇದೆ. ಇದೀಗಾ ಆನೆ ನಗರಕ್ಕೆ ಬರುವುದಕ್ಕೆ ಕಡಿವಾಣ ಹಾಕುವ ಪ್ರಯತ್ನದಲ್ಲಿ ಪರಿಹಾರ ಸಿಕ್ಕಿಯೇ ಬಿಟ್ಟಿತ್ತು ಎನ್ನುವಾಗಲೆ, ಆನೆಗಳು ಮತ್ತೆ ತಮ್ಮ ಬುದ್ದಿ ಶಕ್ತಿ ತೋರಿಸಿದೆ. ಆನೆಗಳು ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಬುದ್ಧಿವಂತ ಜೀವಿಗಳಾಗಿವೆ ಎಂಬುದನ್ನು ಸಾಬೀತುಪಡಿಸುವಂತಿದೆ ಈ ಪ್ರಸಂಗ.

ಕಾಡಂಚಿನ ಜಮೀನಿಗೆ ಆನೆಗಳು ದಿನೇ ದಿನೇ ಲಗ್ಗೆ ಇಡುತ್ತಲೆ ಇದೆ… ಇದರಿಂದ ಪ್ರತಿದಿನ ಮಾನವ ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಲೆ ಇದೆ. ಇದನ್ನ ತಪ್ಪಿಸಲು ಅರಣ್ಯ ಇಲಾಖೆ ಒಂದಿಲ್ಲೊಂದು ಕ್ರಮ ತೆಗೆದುಕೊಳ್ಳುತ್ತಲೆ ಇದೆ. ಮೊದಲಿಗೆ ಆನೆ ಕಂದಕ ತೋಡಲಾಗಿತ್ತು, ನಂತರ ಸೋಲಾರ್ ಬೇಲಿ, ಹ್ಯಾಂಗಿಂಗ್ ಸೋಲಾರ್ ಬೇಲಿ ಹೀಗೆ ನಾನಾ ರೀತಿಯ ಕಸರತ್ತನ್ನು ಮಾಡಲಾಗಿತ್ತು.

ಇದನ್ನೂ ಓದಿ: ಮೈಸೂರು: ಹುಲಿ ಸೆರೆಗಾಗಿ ಕಾರ್ಯಾಚರಣೆಗಿಳಿದ ವಿಶೇಷ ತಂಡ: 6 ಸಿಸಿ ಕ್ಯಾಮರಾ ಅಳವಡಿಸಿದ ಅರಣ್ಯ ಇಲಾಖೆ

ಆದ್ರೆ ಇದ್ಯಾವುದಕ್ಕೂ ಆನೆಗಳು ಡೋಂಟ್ ಕೇರ್ ಎಂದು, ಇದನ್ನ ದಾಟಿ ಬರಲು ಪರ್ಯಾಯ ಮಾರ್ಗ ಕಂಡುಕೊಂಡಿದ್ದವು. ಇತ್ತೀಚಿಗೆ ಇದಕ್ಕೆ ಶಾಶ್ವತ ಪರಿಹಾರ ಸಿಕ್ಕಿಯೇ ಬಿಟ್ಟಿತ್ತು ಅಂತ ರೈಲ್ವೆ ಹಳಿಗಳನ್ನು ಬಳಸಿ ಬ್ಯಾರಿಕೇಡ್ ನಿರ್ಮಾಣ ಮಾಡಲಾಗಿತ್ತು. ‌ಆದ್ರೀಗಾ ಅದನ್ನೂ ದಾಟಲು ಆನೆಗಳ ಮುಂದಾಗಿವೆ. ಮೊದಲಿಗೆ ಕಡಿಮೆ ಎತ್ತರ ಇರೋ ಪ್ರದೇಶದಲ್ಲಿ ದಾಟುತ್ತಿದೆ ಎಂದು ಹೇಳಲಾಗುತಿತ್ತು. ಆದರೀಗ ಎತ್ತರವೇ ಇದ್ದರೂ ಅದನ್ನೂ ಸಲೀಸಾಗಿ ಕಾಲನ್ನು ಆಚೆಗೆ ಹಾಕಿಕೊಂಡು ದಾಟಲು ಮುಂದಾಗಿದೆ.

ಇದನ್ನೂ ಓದಿ: ಮೈಸೂರಿನಲ್ಲಿ ಹುಲಿ ದಾಳಿಗೆ ಮತ್ತೊಂದು ಬಲಿ: ವ್ಯಾಘ್ರನ ಬಂಧನಕ್ಕೆ ಮುಂದುವರೆದ ಶೋಧ ಕಾರ್ಯ

ಇದರಿಂದ ರೈಲ್ವೆ ಬ್ಯಾರಿಕೇಡ್ ಹಾಕಿದರೂ ಆನೆಗಳು ಡೋಂಟ್ ಕೇರ್ ಅಂತಿರೋದ್ರಿಂದ ಅರಣ್ಯ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈಗಾಗಲೇ ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡಿ ನಾಗರಹೊಳೆ, ಬಂಡೀಪುರ ಅರಣ್ಯದಂಚಿನ ಪ್ರದೇಶದಲ್ಲಿ ರೈಲ್ವೆ ಬ್ಯಾರಿಕೇಡ್ ಹಾಕಲಾಗಿದ್ದು, ಇದೀಗ ಅದನ್ನೂ ದಾಟುತ್ತಿರುವುದರಿಂದ ಇಲಾಖೆಗೆ ಮುಂದೇನು ಅನ್ನೋ ಪ್ರಶ್ನೆ ಶುರುವಾಗಿದೆ. ಈ ಕಾರಣದಿಂದ ಬ್ಯಾರಿಕೇಡ್ ಎತ್ತರ ಮಾಡುವುದಾಗಲಿ ಅಥವ ಬ್ಯಾರಿಕೇಡ್ ಮೇಲೆ ಸೋಲಾರ್ ತಂತಿ ಹಾಕಿದ್ರೆ ಕಡಿವಾಣ ಬೀಳಬಹುದು ಎಂದು ಶಿವು, ವನ್ಯಜೀವಿ ಛಾಯಾಗ್ರಾಹಕ ಹಾಗೂ ಉರಗ ತಜ್ಞ ಅವರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆ, ಇದೀಗ ಜನ ಚಾಪೆ ಕೆಳಗೆ ನುಸುಳಿದ್ರೆ ತಾನು ರಂಗೋಲಿ ಕೆಳಗೆ ನುಸುಳಬಲ್ಲೆ ಅನ್ನುತ್ತಿದೆ ಗಜರಾಜ. ಮುಂದೆ ಇದಕ್ಕೆ ಪರಿಹಾರ ಏನು, ಹೇಗೆ ಕಂಡುಕೊಳ್ಳಬೇಕು ಎಂಬುದೇ ದೊಡ್ ಪ್ರಶ್ನೆಯಾಗಿದೆ.

ಮೈಸೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ