ಹೊಸ ಶಿಕ್ಷಣ ನೀತಿ ಬಗ್ಗೆ ಗೊತ್ತಿಲ್ಲದಿದ್ರೆ ಬೇರೆಯವರ ಬಳಿ ಕೇಳಿ ತಿಳಿಯಲಿ: ಡಿಕೆ ಶಿವಕುಮಾರ್​ಗೆ ಅಶ್ವತ್ಥ್ ನಾರಾಯಣ ತಿರುಗೇಟು

ಭಾರತ ಅಭಿವೃದ್ಧಿ ದೇಶ ಆಗಬೇಕು, ಅಂದ್ರೆ ರಾಷ್ಟ್ರೀಯ ಶಿಕ್ಷಣ ನೀತಿ ಸಹಾಯ ಆಗುತ್ತೆ. ವಿದ್ಯಾರ್ಥಿಗಳಿಗೆ ಸದೃಢ ಹಾಗೂ ಉತ್ತಮ ಶಿಕ್ಷಣ ನೀತಿ ಕೊಡಬೇಕು. ವಿದ್ಯಾರ್ಥಿಗಳ ಸಬಲೀಕರಣ, ವಿದ್ಯಾರ್ಥಿಗಳ ಭವಿಷ್ಯ ಉತ್ತಮ ಆಗಬೇಕು ಎಂದು ಅಶ್ವತ್ಥ್ ನಾರಾಯಣ ಹೇಳಿದ್ದಾರೆ.

ಹೊಸ ಶಿಕ್ಷಣ ನೀತಿ ಬಗ್ಗೆ ಗೊತ್ತಿಲ್ಲದಿದ್ರೆ ಬೇರೆಯವರ ಬಳಿ ಕೇಳಿ ತಿಳಿಯಲಿ: ಡಿಕೆ ಶಿವಕುಮಾರ್​ಗೆ ಅಶ್ವತ್ಥ್ ನಾರಾಯಣ ತಿರುಗೇಟು
ಡಾ. ಅಶ್ವತ್ಥ ನಾರಾಯಣ

ಬೆಂಗಳೂರು: ಎನ್​ಇಪಿ ಅಂದ್ರೆ ನಾಗ್ಪುರ್ ಶಿಕ್ಷಣ ನೀತಿ ಎಂದಿದ್ದ ಕಾಂಗ್ರೆಸ್ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ಗೆ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್‌ ನಾರಾಯಣ ತಿರುಗೇಟು ನೀಡಿದ್ದಾರೆ. ಹೊಸ ಶಿಕ್ಷಣ ನೀತಿಯ (NEP) ಬಗ್ಗೆ ಗೊತ್ತಿಲ್ಲದಿದ್ರೆ ಬೇರೆಯವರ ಬಳಿ ಕೇಳಿ ತಿಳಿಯಲಿ. ಇಲ್ಲದಿದ್ರೆ ಪರಿಷತ್‌ನಲ್ಲಿ ನಾನೇ ಅವರಿಗೆ ತಿಳಿಸುತ್ತೇನೆ. ಡಿ.ಕೆ. ಶಿವಕುಮಾರ್‌ ಹೇಳಿಕೆ ಅವರಿಗೇ ತಿರುಗುಬಾಣವಾಗುತ್ತೆ. ಎನ್‌ಇಪಿ ಬಗ್ಗೆ ಡಿಕೆಶಿ ನ್ಯಾಯಬದ್ಧವಾಗಿ ವಿರೋಧಿಸುತ್ತಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಶಿಕ್ಷಕರಿಗೆ ಅಪಮಾನ ಮಾಡ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ ಭಾನುವಾರ ಹೇಳಿಕೆ ನೀಡಿದ್ದಾರೆ.

ಭಾರತ ಅಭಿವೃದ್ಧಿ ದೇಶ ಆಗಬೇಕು, ಅಂದ್ರೆ ರಾಷ್ಟ್ರೀಯ ಶಿಕ್ಷಣ ನೀತಿ ಸಹಾಯ ಆಗುತ್ತೆ. ವಿದ್ಯಾರ್ಥಿಗಳಿಗೆ ಸದೃಢ ಹಾಗೂ ಉತ್ತಮ ಶಿಕ್ಷಣ ನೀತಿ ಕೊಡಬೇಕು. ವಿದ್ಯಾರ್ಥಿಗಳ ಸಬಲೀಕರಣ, ವಿದ್ಯಾರ್ಥಿಗಳ ಭವಿಷ್ಯ ಉತ್ತಮ ಆಗಬೇಕು ಎಂದು ಅಶ್ವತ್ಥ್ ನಾರಾಯಣ ಹೇಳಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಡಿ.ಕೆ ಶಿವಕುಮಾರ್ ಆಕ್ಷೇಪ
‘ಎನ್​ಇಪಿ ಅಂದ್ರೆ ನಾಗ್ಪುರ್ ಎಜುಕೇಷನ್ ಪಾಲಿಸಿ’ ಎಂದು ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಡಿ.ಕೆ. ಶಿವಕುಮಾರ್​ ಆಕ್ಷೇಪ ವ್ಯಕ್ತಪಡಿಸಿದ್ದರು. ಕೇಂದ್ರ ಸರ್ಕಾರದ ಹೊಸ ಎನ್​ಇಪಿ ಸರಿಕಾಣುತ್ತಿಲ್ಲ. ನಾನು ಕೂಡ ಶಿಕ್ಷಣ ಸಂಸ್ಥೆ ನಡೆಸುತ್ತೇನೆ, ಟ್ರಸ್ಟಿಯಾಗಿದ್ದೇನೆ. ಆದರೂ ರಾಷ್ಟ್ರೀಯ ಶಿಕ್ಷಣ ನೀತಿ ಅರ್ಥೈಸಿಕೊಳ್ಳಲಾಗುತ್ತಿಲ್ಲ. ಎನ್​ಇಪಿ ಬಗ್ಗೆ ಸಂಸತ್, ವಿಧಾನಸಭೆಯಲ್ಲಿ ಚರ್ಚೆಯಾಗಿಲ್ಲ. ಯಾರ ಅನುಕೂಲಕ್ಕಾಗಿ ಎನ್​ಇಪಿ ಜಾರಿಗೆ ಹೊರಟಿದ್ದಾರೆ ಎಂದು ಪ್ರಶ್ನೆ ಮಾಡಿದ್ದರು.

ಎನ್​ಇಪಿ ಬಗ್ಗೆ ಶಿಕ್ಷಕರು, ಉಪನ್ಯಾಸಕರಿಗೆ ಮಾಹಿತಿಯಿಲ್ಲ. ಯಾರಿಗೂ ಮಾಹಿತಿ ನೀಡದೆ ಎನ್​ಇಪಿ ಜಾರಿಗೆ ತರಾತುರಿ ಮಾಡಲಾಗುತ್ತಿದೆ. ರಾಜ್ಯದ ಉನ್ನತ ಶಿಕ್ಷಣ ಸಚಿವರು ಆಸಕ್ತಿ ತೋರುತ್ತಿದ್ದಾರೆ. ಆದರೆ, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ನಮ್ಮ ವಿರೋಧವಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಎನ್​ಇಪಿ ಜಾರಿಯಾಗಿಲ್ಲ. ಆದರೆ, ಕರ್ನಾಟಕದಲ್ಲಿ ಮಾತ್ರ ಎನ್​ಇಪಿ ಜಾರಿಗೆ ಒತ್ತಡ ಹೇರಲಾಗುತ್ತಿದೆ. ಹಿಂಬಾಗಿಲ ಮೂಲಕ ಹಿಂದಿ ಹೇರಲು ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು.

ಸಿಎಂ ಬಸವರಾಜ ಬೊಮ್ಮಾಯಿ ಬೇರೆ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಆದರೆ, ಶಿಕ್ಷಣ ಸಚಿವರು ಮಾತ್ರ ಎನ್​ಇಪಿ ಜಾರಿಗೆ ಆಸಕ್ತಿ ವಹಿಸಿದ್ದಾರೆ. ಅಧಿಕಾರಿಗಳ ಜತೆ ಸಚಿವರು ಸಭೆ ಮೇಲೆ ಸಭೆ ನಡೆಸ್ತಿದ್ದಾರೆ. ಈ ಮಧ್ಯೆ, ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಜನರು ಗಾಬರಿಯಾಗಿದ್ದಾರೆ. ಎನ್​ಇಪಿ ಜಾರಿ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯಾಗಬೇಕು. ಶಿಕ್ಷಣ ತಜ್ಞರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಜತೆ ಚರ್ಚೆ ನಡೆಯಬೇಕು. ವಿಧಾನಸಭೆ, ವಿಧಾನಪರಿಷತ್​ನಲ್ಲಿ ಚರ್ಚೆಯಾಗಬೇಕು. ಏನಾದ್ರೂ ಆಕ್ಷೇಪಗಳಿದ್ದರೆ ರಾಜ್ಯ ಸರ್ಕಾರ ಆಲಿಸಬೇಕು ಎಂದು ಶಿವಕುಮಾರ್ ತಿಳಿಸಿದ್ದರು.

ಶಿಕ್ಷಣ ಸಚಿವರಿಗೆ ಸಾಮಾನ್ಯ ಜ್ಞಾನವಿಲ್ಲದಂತೆ ಕಾಣಿಸುತ್ತಿದೆ. ಎನ್​ಇಪಿ ಜಾರಿಯಾದರೆ ನಗರವಾಸಿಗಳಿಗಷ್ಟೇ ಅನುಕೂಲ ಆಗಲಿದೆ. ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಎನ್​ಇಪಿಯಿಂದ ಸಮಸ್ಯೆ ಆಗಲಿದೆ. ಸರ್ಕಾರ ಎಲ್ಲಾ ಮಕ್ಕಳಿಗೂ ಮೂಲಸೌಕರ್ಯ ಕಲ್ಪಿಸಿದೆಯಾ ಎಂದು ಹಾಗೂ ಎನ್​ಇಪಿ ಬಗ್ಗೆ ಸಮಗ್ರ ಚರ್ಚೆಯಾಗಬೇಕು ಎಂದು ಆಗ್ರಹ ವ್ಯಕ್ತಪಡಿಸಿದ್ದಾರೆ. ಅಲ್ಲಿಯವರೆಗೆ ಎನ್​ಇಪಿ ಜಾರಿಮಾಡಬಾರದು ಎಂದು ಒತ್ತಾಯಿಸಿದ್ದರು.

ಇದನ್ನೂ ಓದಿ: ಕೊತ್ವಾಲ್ ರಾಮಚಂದ್ರ ತೀರಿಕೊಂಡಾಗ ನಾನು ಪ್ರೈಮರಿ ಸ್ಕೂಲ್​ನಲ್ಲಿದ್ದೆ: ಡಿಕೆ ಶಿವಕುಮಾರ್ ಹೇಳಿಕೆಗೆ ಸಿಟಿ ರವಿ ಟಾಂಗ್

ಇದನ್ನೂ ಓದಿ: ಪಂಚಾಯತ್ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ; ಕಾರ್ಯಕರ್ತರ ಜೊತೆ ಸಭೆ, ಪ್ರತಿಭಟನೆ ನಡೆಸುತ್ತೇವೆ: ಡಿ ಕೆ ಶಿವಕುಮಾರ್

Read Full Article

Click on your DTH Provider to Add TV9 Kannada