AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ; ಮತ್ತೆ‌ ಹೋರಾಟಕ್ಕೆ ಸಜ್ಜಾದ ಬಸವ ಜಯಮೃತ್ಯುಂಜಯಶ್ರೀ

ಕಳೆದ ಮೂರು ವರ್ಷದಿಂದ ಪಂಚಮಸಾಲಿ ಮೀಸಲಾತಿ ನೀಡುವಂತೆ ಆಗ್ರಹಿಸಿ ಹೋರಾಟಗಳು ನಡೆಯುತ್ತಲೇ ಬಂದಿತ್ತು. ಆದರೆ, ಸ್ವಲ್ಪ ದಿನಗಳ ಕಾಲ ಇದು ತಣ್ಣಗಾಗಿತ್ತು. ಇದೀಗ ಮತ್ತೆ 2ಎ ಮೀಸಲಾತಿ ಕೂಗು ಕೇಳಿಬಂದಿದ್ದು, ಈ ಕುರಿತು ಇಳಕಲ್​ನಲ್ಲಿ ಮಾತನಾಡಿದ ಬಸವ ಜಯಮೃತ್ಯುಂಜಯ ಶ್ರೀಗಳು, ‘ಮೀಸಲಾತಿಗೆ ಆಗ್ರಹಿಸಿ ನಾಳೆ(ಜು.03)ಯಿಂದ ಆಗ್ರಹ ಪತ್ರ ಚಳವಳಿ ಆರಂಭಿಸಲಿದ್ದೇವೆ ಎಂದರು.

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ; ಮತ್ತೆ‌ ಹೋರಾಟಕ್ಕೆ ಸಜ್ಜಾದ ಬಸವ ಜಯಮೃತ್ಯುಂಜಯಶ್ರೀ
ಬಸವ ಜಯಮೃತ್ಯುಂಜಯ ಸ್ವಾಮೀಜಿ
ರವಿ ಹೆಚ್ ಮೂಕಿ, ಕಲಘಟಗಿ
| Edited By: |

Updated on: Jul 02, 2024 | 10:05 PM

Share

ಬಾಗಲಕೋಟೆ, ಜು.02: ಇಷ್ಟು ದಿನ ತಣ್ಣಗಾಗಿದ್ದ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ. ಹೌದು, ಮತ್ತೆ‌ ಮೀಸಲಾತಿ ಹೋರಾಟಕ್ಕೆ ಬಸವ ಜಯಮೃತ್ಯುಂಜಯಶ್ರೀ(Basava Jaya Mrityunjaya Shree) ಸಜ್ಜಾಗಿದ್ದಾರೆ. ಈ ಕುರಿತು ಬಾಗಲಕೋಟೆ ಜಿಲ್ಲೆಯ ಇಳಕಲ್​ನಲ್ಲಿ ಮಾತನಾಡಿದ ಶ್ರೀಗಳು, ‘ಮೀಸಲಾತಿಗೆ ಆಗ್ರಹಿಸಿ ನಾಳೆ(ಜು.03)ಯಿಂದ ಆಗ್ರಹ ಪತ್ರ ಚಳವಳಿ ಆರಂಭಿಸಲಿದ್ದೇವೆ. ಈ ಬಾರಿ ಶಾಸಕ ವಿನಯ್​ ಕುಲಕರ್ಣಿ ಮನೆಯಿಂದಲೇ ಈ ಹೋರಾಟ ಶುರುವಾಗುತ್ತದೆ ಎಂದಿದ್ದಾರೆ.

ಇನ್ನು ನಮ್ಮ ಸಮುದಾಯದ(ಪಂಚಮಸಾಲಿ)20 ಜನ ಶಾಸಕರಿದ್ದಾರೆ. ಅವರೆಲ್ಲರ ಮನೆಗಳಿಗೆ ಹೋಗುತ್ತೇವೆ. ಅಧಿವೇಶನದಲ್ಲಿ ಮೀಸಲಾತಿ ಪರ, ಸಾಮಾಜಿಕ ನ್ಯಾಯದ ಪರ ಧ್ವನಿ ಎತ್ತಲು ಶಾಸಕರಿಗೆ ಮನವಿ ಮಾಡುತ್ತೇವೆ. ಹೀಗಾಗಿ ನಾಳೆಯಿಂದ ಪಂಚಮಸಾಲಿ ಸಮುದಾಯಕ್ಕೆ 2Aಮೀಸಲಾತಿಗಾಗಿ ಆಗ್ರಹಿಸಿ ಪತ್ರ ಚಳುವಳಿ ಮಾಡಲಿದ್ದೇವೆ ಎಂದು ಜಯಮೃತ್ಯುಂಜಯಶ್ರೀ ಹೇಳಿದರು.

ಇದನ್ನೂ ಓದಿ:ದಾನ ಕೊಟ್ಟ ವಸ್ತು ಬಗ್ಗೆ ಎಂದಿಗೂ ನೆನಪಿಡುವುದಿಲ್ಲ, ಎಲ್ಲಿಯೂ ಮಾತಾಡಲ್ಲ: ಪಂಚಮಸಾಲಿ ಸ್ವಾಮೀಜಿ ಹೇಳಿಕೆಗೆ ಮುರುಗೇಶ್ ನಿರಾಣಿ ಪ್ರತಿಕ್ರಿಯೆ

ಕಳೆದ ಕಳೆದ ಮೂರು ವರ್ಷದಿಂದ ಹೋರಾಟ

ಇನ್ನು ಪಂಚಮಸಾಲಿ ಮೀಸಲಾತಿ ನೀಡುವಂತೆ ಆಗ್ರಹಿಸಿ ಶ್ರೀಗಳು ಕಳೆದ ಮೂರು ವರ್ಷದಿಂದ ಹೋರಾಟ ನಡೆಸಿದ್ದಾರೆ. ಈ ಕುರಿತು ಕಳೆದ ಮೇ. 22 ರಂದು ಧಾರವಾಡದಲ್ಲಿ ಮಾತನಾಡಿದ್ದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು, ‘ಈ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೂ ಹೋರಾಟ ಮುಂದುವರೆಸಲಾಗುವುದು ಎಂದಿದ್ದರು. ಅದರಂತೆ ಇದೀಗ ಮತ್ತೆ ಹೋರಾಟಕ್ಕೆ ಸಜ್ಜಾಗಿದ್ದು, ನಾಳೆಯಿಂದಲೇ ಪತ್ರ ಚಳುವಳಿ ಆರಂಭಿಸಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ