ಸಮಾಜ ಒಡೆಯುತ್ತಿರುವ ಕುತಂತ್ರಿಗಳನ್ನು ನಿರ್ಲಕ್ಷಿಸುವುದು ಎಂದು ಅವರು ಹೇಳಿದ್ದಾರೆ. ಸಚಿವ ನಿರಾಣಿ ಹೆಸರಲ್ಲಿ ಶ್ರೀಪೀಠಕ್ಕೆ ಕೊಟ್ಟ ವಸ್ತು ವಾಪಸ್ ಮಾಡುವುದು. ಅವರು ನೀಡಿರುವ ವಸ್ತುಗಳನ್ನ ವಾಪಸ್ ಕೊಡಲು ನಿರ್ಣಯ ಕೈಗೊಳ್ಳಲಾಗಿದೆ. ಈ 3 ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಭೆ ಬಳಿಕ ಜಯಮೃತ್ಯುಂಜಯಶ್ರೀ ಹೇಳಿದ್ದಾರೆ. ದಾನ ಕೊಟ್ಟ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೇಳ್ತಿದ್ದಾರೆ. ಪದೇಪದೆ ಹೇಳುವುದರಿಂದ ಸಮಾಜದ ಜನರಿಗೆ ನೋವಾಗಿದೆ. ಭಕ್ತರ ಋಣದಲ್ಲಿರಲು ಇಷ್ಟ ಪಡ್ತೀನಿ ವ್ಯಕ್ತಿಯ ಋಣದಲ್ಲಿರಲ್ಲ. 14 ವರ್ಷ ನನ್ನ ಸಾಕಿ ಬೆಳೆಸಿದ್ದು ಭಕ್ತರು, ಯಾವ ವ್ಯಕ್ತಿಯಲ್ಲ ಎಂದು ಜಯಮೃತ್ಯುಂಜಯ ಶ್ರೀ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಲಿಂಗಾಯತ ಪಂಚಮಸಾಲಿ 4ನೇ ಪೀಠ ಮಹಿಳಾ ಪೀಠ ಸ್ಥಾಪನೆಗೆ ಸಿದ್ಧತೆ ವಿಚಾರವಾಗಿ ಪಂಚಮಸಾಲಿ ಸಮುದಾಯದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಪ್ರತಿಕ್ರಿಯೆ ನೀಡಿದ್ದಾರೆ. ಪೀಠಗಳ ಸ್ಥಾಪನೆಗಿಂತ ಮೀಸಲಾತಿಗೆ ಒತ್ತಡ ಹಾಕಲಿ. ಸತ್ಯಾಗ್ರಹ, ಹೋರಾಟ ಮಾಡಲಿ. ಆದರೆ ಈ ಸಮಯದಲ್ಲಿ ಪೀಠ ಅಗತ್ಯವಿತ್ತಾ?, ಪೀಠದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಜನರಿಗೂ ಗೊತ್ತಿದೆ. ಮೀಸಲಾತಿಗಾಗಿ ಮಹಿಳೆಯರಿಂದ ಹೋರಾಟ ಮುಂದುವರಿಯುತ್ತೆ ಎಂದು ಹೇಳಿದ್ದಾರೆ.
ಪಂಚಮಸಾಲಿ ಸಮುದಾಯದ ಸಭೆಯಲ್ಲಿ 3 ಪ್ರಮುಖ ನಿರ್ಣಯ ಕೈಗೊಂಡಿದ್ದೇವೆ. ಲಕ್ಷ್ಮಣ್ ನಿರಾಣಿ, ಸಂಗಮೇಶ್ ನಿರಾಣಿ ಪೀಠಕ್ಕಾಗಿ ದಾನ ಮಾಡಿದ್ದೇವೆಂದು ಹೇಳಿದ್ದಾರೆ. ಸ್ವಾಮೀಜಿಗಳಿಗೆ ಅವರು ಕೊಟ್ಟ ವಸ್ತುಗಳನ್ನ ಮರಳಿ ಕೊಡುವ ನಿರ್ಣಯ ಮಾಡಿದ್ದೇವೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಮಾರ್ಚ್ ಒಳಗಾಗಿ ಸರ್ಕಾರ ಪ್ರಕಟಿಸಬೇಕು: ಜಯಮೃತ್ಯುಂಜಯ ಸ್ವಾಮೀಜಿ
ಇದನ್ನೂ ಓದಿ: ವೀರಶೈವ ಲಿಂಗಾಯತ ಪಂಚಮಸಾಲಿ ರಾಜ್ಯಾಧ್ಯಕ್ಷರಾಗಿ ಜಿ.ಪಿ.ಪಾಟೀಲ್ ಆಯ್ಕೆ: ಪ್ರತಿಧ್ವನಿಸಿದ 2ಎ ಮೀಸಲಾತಿ ಆಗ್ರಹ