Avaratri Amavasya 2022: ಬೆಳಗಾವಿಯಲ್ಲಿ ಅವರಾತ್ರಿ ಅಮವಾಸ್ಯೆ ಸಂಭ್ರಮ, ನದಿ ಸ್ನಾನ ಮಾಡಿ, ದೇವರಿಗೆ ಪೂಜೆ
ಪ್ರತಿ ವರ್ಷ ಅದ್ಧೂರಿಯಾಗಿ ಈ ಜಾತ್ರೆಯನ್ನ ಆಚರಿಸ್ತಿದ್ರು. ಆದ್ರೆ, ಕೊರೊನಾದಿಂದಾಗಿ ಎರಡು ವರ್ಷ ಜಾತ್ರೆಯನ್ನ ಆಚರಿಸಿರಲಿಲ್ಲ. ಹೀಗಾಗಿ, ಈ ಬಾರಿ ಭಕ್ತಿ ಭಾವದಿಂದ ಜನರೆಲ್ಲ ಜಾತ್ರೆಯಲ್ಲಿ ಪಾಲ್ಗೊಂಡು, ನದಿಯಲ್ಲಿ ಪುಣ್ಯಸ್ನಾನ ಮಾಡಿದ್ರು.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕಲ್ಲೊಳ ಗ್ರಾಮದ ಕೃಷ್ಣಾ ನದಿಯ ತಟ್ಟದಲ್ಲಿ ಭಕ್ತಿ ಭಾವ ಮೇಳೈಸಿದೆ. ಎರಡು ವರ್ಷದಿಂದ ಈ ಗ್ರಾಮದಲ್ಲಿ ಜಾತ್ರೆ ರದ್ದಾಗಿತ್ತು. ಕ್ರೂರಿ ಕೊರೊನಾ ಜನರ ಹಬ್ಬಕ್ಕೆ ಕೊಳ್ಳಿ ಇಟ್ಟಿತ್ತು. ಆದ್ರೆ, ಈ ಸಲ ಮತ್ತೆ ಎಲ್ರೂ ಜಾತ್ರೆ ಮಾಡಿದ್ರು. ನದಿಯಲ್ಲಿ ಸ್ನಾನ ಮಾಡಿ, ದೇವರಿಗೆ ಪೂಜೆ ಮಾಡಿದ್ರು. ಅವರಾತ್ರಿ ಅಮವಾಸ್ಯೆ ಹಿನ್ನೆಲೆಯಲ್ಲಿ ಫೆಬ್ರವರಿ 01 ಜಾತ್ರೆ ನಡೆಯಿತು. 108 ಗ್ರಾಮಗಳ ದೇವರುಗಳ ಪಲ್ಲಕ್ಕಿಗಳನ್ನ ಹೊತ್ತು ತಂದಿದ್ರು. ಬೀರದೇವರ, ಮಾರುತಿ, ಮಹಾದೇವ, ಏಕನಾಥ್ ಸೇರಿದಂತೆ ಅನೇಕ ದೇವರ ಮೂರ್ತಿಗಳನ್ನ ನದಿಯಲ್ಲಿ ತೊಳೆದು, ತಾವೂ ಕೂಡ ಸ್ನಾನ ಮಾಡಿದ್ರು. ಜೋಳದ ದಂಟಿನ ತೆಪ್ಪ ಮಾಡಿ ದೀಪಹಚ್ಚಿ ಬಾಗಿನ ರೂಪದಲ್ಲಿ ಗಂಗೆಗೆ ಸಮರ್ಪಿಸಿದ್ರು.
ಅಂದಹಾಗೇ, ಪ್ರತಿ ವರ್ಷ ಅದ್ಧೂರಿಯಾಗಿ ಈ ಜಾತ್ರೆಯನ್ನ ಆಚರಿಸ್ತಿದ್ರು. ಆದ್ರೆ, ಕೊರೊನಾದಿಂದಾಗಿ ಎರಡು ವರ್ಷ ಜಾತ್ರೆಯನ್ನ ಆಚರಿಸಿರಲಿಲ್ಲ. ಹೀಗಾಗಿ, ಈ ಬಾರಿ ಭಕ್ತಿ ಭಾವದಿಂದ ಜನರೆಲ್ಲ ಜಾತ್ರೆಯಲ್ಲಿ ಪಾಲ್ಗೊಂಡು, ನದಿಯಲ್ಲಿ ಪುಣ್ಯಸ್ನಾನ ಮಾಡಿದ್ರು. ಇನ್ನು, ಕವಳ ಋಷಿ ಇಲ್ಲಿ ತಪ್ಪಸ್ಸು ಮಾಡಿದ್ರಿಂದ ಗ್ರಾಮಕ್ಕೆ ಕಲ್ಲೋಳ ಎಂಬ ಹೆಸ್ರು ಬಂದಿದೆಯಂತೆ. ಹೀಗಾಗಿ, ಕತ್ತಿ ಮೂಲಕ ಹೊಡೆದುಕೊಂಡು ಋಷಿಗೆ ತಮ್ಮ ಭಕ್ತಿ ಸರ್ಮಪಿಸಿದ್ರು. ಈ ವೇಳೆ ದೇವರ ಸಂಚಾರವಾಗಿ ಕಾರ್ಣಿಕ ನುಡಿದಿದ್ದು, ಎಲ್ಲ ರೋಗವೂ ನಾಶವಾಗುತ್ತೆ ಎಂಬ ಸೂಚನೆಯನ್ನ ದೇವರು ಕೊಟ್ಟಿದೆಯಂತೆ. ಒಟ್ಟಿನಲ್ಲಿ ತಲೆಮಾರುಗಳಿಂದ ನಡೆದು ಬಂದಿರುವ ಜಾತ್ರೆಯನ್ನ, ಜನರೆಲ್ಲ ಒಟ್ಟಿಗೆ ಸೇರಿ ಆಚರಿಸಿದ್ರು. ಈ ಮೂಲಕ, ಎರಡು ವರ್ಷದಿಂದ ಸ್ತಗಿತವಾಗಿದ್ದ ಜಾತ್ರೆ ಮತ್ತೆ ಚಾಲನೆ ಕೊಟ್ರು.
ವರದಿ: ವಿನಾಯಕ್ ಗುರವ್, ಟಿವಿ9 ಚಿಕ್ಕೋಡಿ
ಇದನ್ನೂ ಓದಿ: ಡಿವೋರ್ಸ್ ಬಳಿಕ ರಜನಿ ಪುತ್ರಿಗೆ ಮತ್ತೆ ಕಂಟಕ; ಆಸ್ಪತ್ರೆಗೆ ದಾಖಲಾದ ಐಶ್ವರ್ಯಾ ರಜನಿಕಾಂತ್