ಕೃಷ್ಣಾ, ಘಟಪ್ರಭಾ ನದಿ ನೆರೆಯಿಂದ ತತ್ತರಿಸಿದ ಬಾಗಲಕೋಟೆ; 96 ಮನೆಗಳಿಗೆ ಹಾನಿ

ಪ್ರವಾಹದಿಂದ 19,299 ಹೆಕ್ಟೇರ್ ಕೃಷಿ ಹಾಗೂ 796 ಹೆಕ್ಟೇರ್ ತೋಟಗಾರಿಕಾ ಬೆಳೆಗಳು ಜಲಾವೃತವಾಗಿವೆ ಪಿಡಬ್ಲ್ಯುಡಿಯ 96 ಕಿ.ಮೀ. ರಸ್ತೆ, 3 ಸೇತುವೆಗೆ ಹಾನಿಯಾಗಿದೆ. ಜಿಲ್ಲಾ ಪಂಚಾಯತಿ ವ್ಯಾಪ್ತಿಯ 344 ಕಿ.ಮೀ. ರಸ್ತೆ, 19 ಸೇತುವೆಗೆ ಹಾನಿಯಾಗಿದೆ.

ಕೃಷ್ಣಾ, ಘಟಪ್ರಭಾ ನದಿ ನೆರೆಯಿಂದ ತತ್ತರಿಸಿದ ಬಾಗಲಕೋಟೆ; 96 ಮನೆಗಳಿಗೆ ಹಾನಿ
ಜಲಾವೃತಗೊಂಡ ಮನೆ

ಬಾಗಲಕೋಟೆ: ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಬಾಗಲಕೋಟೆ ಜನರು ತತ್ತರಿಸಿ ಹೋಗಿದ್ದಾರೆ. ಕೃಷ್ಣಾ, ಘಟಪ್ರಭಾ ನದಿ ನೆರೆಯಿಂದ ಜಿಲ್ಲೆಯ 5 ತಾಲೂಕಿನ 50 ಗ್ರಾಮಗಳಲ್ಲಿ ಸಂಕಷ್ಟ ಎದುರಾಗಿದೆ. ಅತಿವೃಷ್ಟಿಯಿಂದ 96 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 38,058 ಜನರು, 35 ಸಾವಿರ ಜಾನುವಾರು ಜಾನುವಾರುಗಳನ್ನು ಸ್ಥಳಾಂತರ ಮಾಡಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 65 ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಕಾಳಜಿ ಕೇಂದ್ರದಲ್ಲಿ 15,180 ಜನ ಆಶ್ರಯ ಪಡೆದಿದ್ದಾರೆ. ಜಾನುವಾರುಗಳಿಗೆ 995 ಮೆಟ್ರಿಕ್ ಟನ್ ಮೇವು ಪೂರೈಕೆ ಮಾಡಲಾಗಿದೆ.

ಪ್ರವಾಹದಿಂದ 19,299 ಹೆಕ್ಟೇರ್ ಕೃಷಿ ಹಾಗೂ 796 ಹೆಕ್ಟೇರ್ ತೋಟಗಾರಿಕಾ ಬೆಳೆಗಳು ಜಲಾವೃತವಾಗಿವೆ ಪಿಡಬ್ಲ್ಯುಡಿಯ 96 ಕಿ.ಮೀ. ರಸ್ತೆ, 3 ಸೇತುವೆಗೆ ಹಾನಿಯಾಗಿದೆ. ಜಿಲ್ಲಾ ಪಂಚಾಯತಿ ವ್ಯಾಪ್ತಿಯ 344 ಕಿ.ಮೀ. ರಸ್ತೆ, 19 ಸೇತುವೆಗೆ ಹಾನಿಯಾಗಿದೆ. 6,247 ವಿದ್ಯುತ್ ಕಂಬಗಳು, 1,859 ಟ್ರಾನ್ಸ್​ಫಾರ್ಮರ್, 17 ವಿದ್ಯುತ್ ಮಾರ್ಗಗಳಿಗೆ ಹಾನಿಯಾಗಿದೆ. ಪ್ರವಾಹದಿಂದ 63 ಅಂಗನವಾಡಿ, 30 ಶಾಲೆಗಳು ಜಲಾವೃತವಾಗಿದ್ದು, 19 ಕುಡಿಯುವ ನೀರಿನ ಯೋಜನೆಗಳಿಗೆ ಹಾನಿಯಾಗಿದೆ.

ಕುಸಿದು ಬಿದ್ದ 6 ಮನೆಗಳು
ಶಿವಮೊಗ್ಗ: ಕೆಲವು ದಿನಗಳಿಂದ ಸುರಿದ ಮಳೆಗೆ 6 ಮನೆಗಳು ಕುಸಿದು ಬಿದ್ದಿವೆ. ಶಿವಮೊಗ್ಗ ನಗರದ ಕಾಮಾಕ್ಷಿ ಬೀದಿಯಲ್ಲಿ ಮನೆಗಳು ಕುಸಿದು ಬಿದ್ದಿವೆ. ಮಹಾನಗರ ಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ ಭೇಟಿ ನೀಡಿ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

ಕುಸಿದು ಬಿದ್ದ ಮನೆ

ಇದನ್ನೂ ಓದಿ

Karnataka Covid-19: ಕರ್ನಾಟಕದಲ್ಲಿ ಹೊಸ ಮಾರ್ಗಸೂಚಿ ಬಿಡುಗಡೆ; ಕೇರಳ, ಮಹಾರಾಷ್ಟ್ರದ ಪ್ರಯಾಣಿಕರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ

ಪ್ರವಾಹದ ಕರಾಳತೆ ಬಿಚ್ಚಿಡುತ್ತಿದೆ ಘಟಪ್ರಭಾ ನದಿ; ಅಪರಿಚಿತ ಶವ ಪತ್ತೆ

(96 houses were damaged by floods in Krishna and Ghataprabha river)

Read Full Article

Click on your DTH Provider to Add TV9 Kannada