AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆ: ದೆವ್ವ ಬಿಡಿಸುವುದಾಗಿ ಮಹಿಳೆಗೆ ಜ್ಯೋತಿಷಿ ಮಾಡುವುದು ಹೀಗಾ..?

ಬಾಗಲಕೋಟೆ ಜಿಲ್ಲೆಯ ತೇರದಾಳದಲ್ಲಿ ಲಕ್ಷ್ಮಿ ಲಾಗಲೋಟಿ ಎಂಬ ಖಾಸಗಿ ಬ್ಯಾಂಕ್ ಉದ್ಯೋಗಿ ತಮ್ಮ ಮಗುವಿನ ಅನಾರೋಗ್ಯದ ಹೆಸರಿನಲ್ಲಿ ಜ್ಯೋತಿಷಿ ಸೀಮಾಶಾಂಭವಿ ಶೆಟ್ಟಿ ಅವರಿಂದ ₹28 ಲಕ್ಷ ವಂಚಿಸಲ್ಪಟ್ಟಿದ್ದಾರೆ. ಜ್ಯೋತಿಷಿ, ಮಗುವಿಗೆ ದೆವ್ವ ತಗುಲಿದೆ ಎಂದು ಹೇಳಿ, ಹೋಮ ಹವನಗಳ ಹೆಸರಿನಲ್ಲಿ ಲಕ್ಷ್ಮಿ ಅವರಿಂದ ಹಣ ಪಡೆದಿದ್ದಾಳೆ. ಲಕ್ಷ್ಮಿ ಅವರು ತಮ್ಮ ಚಿನ್ನಾಭರಣ ಮತ್ತು ತಾಯಿಯ ಠೇವಣಿ ಹಣವನ್ನು ಕಳೆದುಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಪ್ರಕರಣ ದಾಖಲಾಗಿದೆ.

ಬಾಗಲಕೋಟೆ: ದೆವ್ವ ಬಿಡಿಸುವುದಾಗಿ ಮಹಿಳೆಗೆ ಜ್ಯೋತಿಷಿ ಮಾಡುವುದು ಹೀಗಾ..?
ಜ್ಯೋತಿಷಿ ಸೀಮಾಶಾಂಭವಿ
ರವಿ ಹೆಚ್ ಮೂಕಿ, ಕಲಘಟಗಿ
| Updated By: ವಿವೇಕ ಬಿರಾದಾರ|

Updated on: Jun 17, 2025 | 4:22 PM

Share

ಬಾಗಲಕೋಟೆ, ಜೂನ್​ 17: ದೆವ್ವ ಬಿಡಿಸುವುದಾಗಿ ಹೇಳಿ ಜ್ಯೋತಿಷಿಯು (Astrologer) ಮಹಿಳೆಗೆ ವಂಚಿಸಿರುವ ಘಟನೆ ಬಾಗಲಕೋಟೆ (Bagalkote) ಜಿಲ್ಲೆ ತೇರದಾಳ ಪಟ್ಟಣದಲ್ಲಿ ನಡೆದಿದೆ. ತೇರದಾಳ ಪಟ್ಟಣದ ಲಕ್ಷ್ಮಿ ಲಾಗಲೋಟಿ ವಂಚನೆಗೊಳಗಾದವರು. ಜ್ಯೋತಿಷಿ ಸೀಮಾಶಾಂಭವಿ ಶೆಟ್ಟಿ ವಂಚಿಸಿದ ಆರೋಪಿ. ಲಕ್ಷ್ಮಿ ಲಾಗಲೋಟಿ ಅವರು ತೇರದಾಳದಲ್ಲಿನ ಖಾಸಗಿ ಸಹಕಾರಿ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ‌ಲಕ್ಷ್ಮಿ ಅವರ ಎರಡು ವರ್ಷದ ಮಗುವಿಗೆ ಮೇಲಿಂದ ಮೇಲೆ ಜ್ವರ ಬರುತ್ತಿತ್ತು. ಸುಮಾರು ದಿನಗಳಿಂದ ಕಡಿಮೆಯಾಗಿರಲಿಲ್ಲ.

ಆಗ, ಲಕ್ಷ್ಮಿ ಅವರ ಸ್ನೇಹಿತೆ ಮಹಾರಾಷ್ಟ್ರದ ಕೊಲ್ಹಾಪುರ ಮೂಲದ ಜ್ಯೋತಿಷಿ ಸೀಮಾಶಾಂಭವಿಯನ್ನು ಪರಿಚಯ ಮಾಡಿಸಿಕೊಟ್ಟಿದ್ದಾರೆ. ನಂತರ ಒಂದು ದಿನ ಲಕ್ಷ್ಮಿ ಅವರಿಗೆ ಕರೆ ಮಾಡಿದ ಜ್ಯೋತಿಷಿ ಸೀಮಾಶಾಂಭವಿ ನಿಮ್ಮ ಮಗುವಿನ ದೇಹದಲ್ಲಿ ನಿಮ್ಮ ತಾಯಿ ದೆವ್ವವಾಗಿ ಸೇರಿಕೊಂಡಿದ್ದಾಳೆ. ಹೋಮ ಹವನ, ವಿಶೇಷ ಪೂಜೆ ಮಾಡಬೇಕು ಎಂದು ಹೇಳಿದ್ದಾಳೆ. ನಂತರ, ಮಗುವಿನ ಹೆಸರಲ್ಲಿ ಪೂಜೆ, ನವಗ್ರಹ ಹೋಮ ಸೇರಿದಂತೆ ವಿವಿಧ ಹೋಮ ಮಾಡಿದ್ದೇನೆ ಎಂದು ಸೀಮಾಶಾಂಭವಿಯು ಲಕ್ಷ್ಮಿ ಅವರಿಗೆ ವಿಡಿಯೋ ಕಳುಹಿಸಿ, ಹಣ ನೀಡುವಂತೆ ಹೇಳಿದ್ದಾಳೆ. ಇದನ್ನು ನಂಬಿದ ಲಕ್ಷ್ಮಿಯವರು ಸೀಮಾಶಾಂಭವಿ ಕೇಳಿದಾಗಲೆಲ್ಲ ಪೋನ್ ಪೆ, ಆರ್​ಟಿಜಿಎಸ್ ಮೂಲಕ ಬರೊಬ್ಬರಿ 28 ಲಕ್ಷ ಹಣ ವರ್ಗಾವಣೆ ಮಾಡಿದ್ದಾರೆ.

ಇದನ್ನೂ ಓದಿ: ಮಹಿಳೆಯ ಬೆತ್ತಲೆ ವಿಡಿಯೋ ಮಾಡಿ ಬ್ಲ್ಯಾಕ್​ಮೇಲ್, ಅತ್ಯಾಚಾರ ಯತ್ನ: ಕೇರಳದ ಪೆರಿಂಗೋಟ್ಟುಕ್ಕಾರದ ಅರ್ಚಕ ಬೆಂಗಳೂರಿನಲ್ಲಿ ಬಂಧನ

ಇದನ್ನೂ ಓದಿ
Image
ಯುವತಿ ಮೇಲೆ ರ‍್ಯಾಪಿಡೊ ಚಾಲಕ ಹಲ್ಲೆ:ಅಸಲಿಯತ್ತು ಬಯಲು, FIR​ನಲ್ಲೇನಿದೆ?
Image
ಬಾಗಲಕೋಟೆಯಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ: ಶಿಕ್ಷಕ ಬಂಧನ
Image
ಹೆರಿಗೆ ವಾರ್ಡ್​ನಲ್ಲಿ ಮಲಗಿ ಬೇರೆ ಮಗು ಕದ್ದು ತನ್ನದೆಂದ ಮಹಿಳೆ!
Image
ಗರ್ಭಾವಸ್ಥೆಯ ಹಸುವಿನ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆದ ದುಷ್ಕರ್ಮಿಗಳು

ಲಕ್ಷ್ಮಿ ಚಿನ್ನ ಮಾರಿ, ತಾಯಿಯ ಠೇವಣಿ ಹಣವನ್ನು ಸೀಮಾಶಾಂಭವಿಗೆ ನೀಡಿದ್ದಾರೆ ಕೈ ಸುಟ್ಟುಕೊಂಡಿದ್ದಾರೆ. ಜ್ಯೀತಿಷಿ ಸೀಮಾಶಾಂಭವಿಯು ಹಣ ಪಡೆದು ಲಕ್ಷ್ಮಿ ಅವರಿಗೆ ವಂಚಿಸಿದ್ದಾಳೆ. ಘಟನೆ ಸಂಬಂಧ ಬಾಗಲಕೋಟೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ