‘ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಕೊಡುವುದಾಗಿ ಹೇಳಿದ್ದೆ; ಮಾತು ಉಳಿಸಿಕೊಳ್ಳುತ್ತೇವೆ’

| Updated By: ganapathi bhat

Updated on: Jan 01, 2022 | 3:05 PM

ಸಾರಿಗೆ ಇಲಾಖೆಯಲ್ಲಿ ಬದಲಾವಣೆ ತರಲು ಪ್ರಾಮಾಣಿಕ ಯತ್ನ ಮಾಡುತ್ತೇವೆ. ಉತ್ತರ ಕರ್ನಾಟಕ ಎಲ್ಲಾ ಭಾಗಗಳಿಗೆ ಸಾರಿಗೆ​ ಸಂಪರ್ಕ ಕಲ್ಪಿಸ್ತೇವೆ. ಸಾರಿಗೆ ಇಲಾಖೆಯಲ್ಲಿ ಅಮಾನತಾದ ಸಿಬ್ಬಂದಿ ಮರುನೇಮಕ ಮಾಡುತ್ತೇವೆ ಎಂದು ಬಾಗಲಕೋಟೆಯಲ್ಲಿ ಬಿ. ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.

‘ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಕೊಡುವುದಾಗಿ ಹೇಳಿದ್ದೆ; ಮಾತು ಉಳಿಸಿಕೊಳ್ಳುತ್ತೇವೆ’
ಬಿ. ಶ್ರೀರಾಮುಲು
Follow us on

ಬಾಗಲಕೋಟೆ: ವಾಲ್ಮೀಕಿ ಸಮುದಾಯಕ್ಕೆ ಶೇಕಡಾ 7.5ರಷ್ಟು ಮೀಸಲಾತಿಗೆ ಬೇಡಿಕೆ ಇದೆ. ನಮ್ಮ ಸರ್ಕಾರ ಬಂದರೆ ಮೀಸಲಾತಿ ಕೊಡುವುದಾಗಿ ಹೇಳಿಕೆ ನೀಡಿದ್ದೆ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಕೊಡಿಸುವುದಾಗಿ ಹೇಳಿದ್ದೆ. ಯಾವುದೇ ನಿರ್ಧಾರ ಕಾನೂನಾತ್ಮಕವಾಗಿ ತೆಗೆದುಕೊಳ್ಳುತ್ತೇನೆ. ನಾವು ಕೊಟ್ಟ ಮಾತು ಉಳಿಸಿಕೊಳ್ಳುವ ಕೆಲಸ ಮಾಡುತ್ತೇವೆ ಎಂದು ಬಾಗಲಕೋಟೆಯಲ್ಲಿ ಸಾರಿಗೆ ಸಚಿವ ಬಿ.  ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.

ಎಲ್ಲಾ ಜಿಲ್ಲೆಗಳಲ್ಲಿ ಸ್ವಯಂಚಾಲಿತ ಪರೀಕ್ಷಾ ಪಥದ ಸ್ಥಾಪನೆ ಮಾಡಲಾಗುತ್ತದೆ. ಅಪಘಾತ ತಡೆಗಟ್ಟಲು ಸಾರಿಗೆ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಸಾರಿಗೆ ಇಲಾಖೆಯಲ್ಲಿ ಎಲ್ಲವೂ ಆನ್​ಲೈನ್​ನಲ್ಲಿ ನಡೆಯುತ್ತಿದೆ. ಜನರು RTO ಕಚೇರಿಗೆ ಬರುವುದು ತಪ್ಪುತ್ತದೆ. ಡ್ರೈವಿಂಗ್ ಲೈಸೆನ್ಸ್ ಪಡೆಯುವ ಹಳೆ ಪದ್ಧತಿ ಬದಲಿಸುತ್ತೇವೆ ಎಂದು ಶ್ರೀರಾಮುಲು ತಿಳಿಸಿದ್ದಾರೆ.

ಸಾರಿಗೆ ಇಲಾಖೆಯಲ್ಲಿ ಬದಲಾವಣೆ ತರಲು ಪ್ರಾಮಾಣಿಕ ಯತ್ನ ಮಾಡುತ್ತೇವೆ. ಉತ್ತರ ಕರ್ನಾಟಕ ಎಲ್ಲಾ ಭಾಗಗಳಿಗೆ ಸಾರಿಗೆ​ ಸಂಪರ್ಕ ಕಲ್ಪಿಸ್ತೇವೆ. ಸಾರಿಗೆ ಇಲಾಖೆಯಲ್ಲಿ ಅಮಾನತಾದ ಸಿಬ್ಬಂದಿ ಮರುನೇಮಕ ಮಾಡುತ್ತೇವೆ ಎಂದು ಬಾಗಲಕೋಟೆಯಲ್ಲಿ ಬಿ. ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.

ನಾನು ಡಿಸಿಎಂ ಆಗದಿದ್ದರೂ ಈಗಲೂ ದೊಡ್ಡ ನಾಯಕನೇ. ಡಿಸಿಎಂ ಆಗುವುದೆಲ್ಲಾ ಅಗ್ನಿಪರೀಕ್ಷೆ, ಆಗಲಿ ನೋಡೋಣ. ಎಲ್ಲರ ಇಚ್ಛೆ ಇದ್ದರೆ ಮುಂದೆ ಡಿಸಿಎಂ ಆಗಬಹುದು. ಜನಾರ್ದನ ರೆಡ್ಡಿ ರಾಜಕೀಯ ಭವಿಷ್ಯದ ಬಗ್ಗೆ ನಾನು ಹೇಳಲ್ಲ. ಅವರ ರಾಜಕೀಯ ಭವಿಷ್ಯದ ಬಗ್ಗೆ ಹೇಳುವುದು ಸಮಂಜಸವಲ್ಲ ಎಂದು ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದಾರೆ.

ಮುಖ್ಯಮಂತ್ರಿ ಬೊಮ್ಮಾಯಿ ಬದಲಾಗುತ್ತಾರೆ ಎಂಬ ವಿಚಾರವಾಗಿ ರಾಮುಲು ಪ್ರತಿಕ್ರಿಯೆ ನೀಡಿದ್ದಾರೆ. ಕಾರ್ಯಕಾರಿಣಿ ಸಭೆಯಲ್ಲಿ ಈ ಕುರಿತು ಸ್ಪಷ್ಟವಾಗಿ ಹೇಳಿದ್ದಾರೆ. ಸಿಎಂ ಬದಲಾವಣೆ ಇಲ್ಲ ಎಂದು ನಾಯಕರು ಸ್ಪಷ್ಟವಾಗಿ ಹೇಳಿದ್ದಾರೆ. ಸಿಎಂ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಬುದ್ಧಿವಂತರು ನಮ್ಮ ಸ್ಪೀಡ್ ಕಟ್ ಮಾಡಲು ಹೀಗೆ ಹೇಳ್ತಾರೆ ಎಂದು ಬಾಗಲಕೋಟೆಯಲ್ಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ಇದನ್ನೂ ಓದಿ: Local Bodies Election Result: ಬಿಡದಿ ಪುರಸಭೆ ಜೆಡಿಎಸ್ ತೆಕ್ಕೆಗೆ, ನಾಯಕನಹಟ್ಟಿ ಪ.ಪಂ.ನಲ್ಲಿ ಬಿ.ಶ್ರೀರಾಮುಲುಗೆ ಭಾರಿ ಮುಖಭಂಗ

ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿ: ಸರ್ಕಾರಕ್ಕೆ ಲೈಫ್​ಲೈನ್ ನೀಡಿದ್ದೇವೆ ಎಂದ ವಚನಾನಂದ ಸ್ವಾಮೀಜಿ

Published On - 3:01 pm, Sat, 1 January 22