AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೇಪಾಳದಲ್ಲಿ ‌ಚಿನ್ನದಂತಹ ಸಾಧನೆ ಮಾಡಿದ ಬಾಗಲಕೋಟೆ ಸೋದರರು, ಶಹಭಾಸ್​ ಎಂದ ಬಾದಾಮಿ ಶಾಸಕ ಸಿದ್ದರಾಮಯ್ಯ

ನಾಗರಾಜ ಪಿಯುಸಿ‌‌ ಮುಗಿಸಿದ್ದು, 23 ವರ್ಷದೊಳಗಿನ ವಿಭಾಗದಲ್ಲಿ ಚಿನ್ನ.. ಯುವರಾಜ 17 ವರ್ಷದೊಳಗಿನ ವಿಭಾಗದಲ್ಲಿ ಚಿನ್ನದ ಬೇಟೆಯಾಡಿದ್ದಾರೆ. ಇಬ್ಬರೂ ಸಹೋದರರ ಸಾಧನೆಗೆ ಬಾದಾಮಿ ಶಾಸಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಫೇಸ್ ಬುಕ್‌ನಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

ನೇಪಾಳದಲ್ಲಿ ‌ಚಿನ್ನದಂತಹ ಸಾಧನೆ ಮಾಡಿದ ಬಾಗಲಕೋಟೆ ಸೋದರರು, ಶಹಭಾಸ್​ ಎಂದ ಬಾದಾಮಿ ಶಾಸಕ ಸಿದ್ದರಾಮಯ್ಯ
ನೇಪಾಳದಲ್ಲಿ ‌ಚಿನ್ನದ ಬೇಟೆಯಾಡಿದ ಬಾಗಲಕೋಟೆ ಬ್ರದರ್ಸ್
TV9 Web
| Edited By: |

Updated on: Jul 30, 2022 | 2:55 PM

Share

ಬಾಗಲಕೋಟೆ: ನೇಪಾಳದಲ್ಲಿ ನಡೆದ 7ನೇ ಇಂಡೊ-ನೇಪಾಳ ಅಂತರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಬಾಗಲಕೋಟೆ ಸಹೋದರರು ಚಿನ್ನದ ಬೇಟೆಯಾಡಿದ್ದಾರೆ. 1500 ಮೀಟರ್ ಓಟದ ಸ್ಪರ್ಧೆಯಲ್ಲಿ ಸಹೋದರರು ಚಿನ್ನದಂತಹ ಸಾಧನೆ ಮಾಡಿದ್ದಾರೆ. ಚಿನ್ನ ಗೆದ್ದು ಭಾರತದ ಬಾವುಟ ಹಾರಿಸಿದವರು ನಾಗರಾಜ್ ಗಾಣೀಗೇರ್ ಮತ್ತು ಯುವರಾಜ್ ಗಾಣೀಗೇರ್. ಇವರು ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲ್ಲೂಕಿನ ತೋಗುಣಿಸಿ ಗ್ರಾಮದವರು.

ನೇಪಾಳದ ಪೊಖ್ರಾ ನಗರದ ರಂಗಶಾಲಾ ಕ್ರೀಡಾಂಗಣದಲ್ಲಿ ನಡೆದ ಇಂಡೊ-ನೇಪಾಳ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 1500 ಮೀಟರ್ ಓಟದ ಸ್ಪರ್ಧೆಯಲ್ಲಿ ನಾಗರಾಜ ಗಾಣಿಗೇರ 4 ನಿಮಿಷ 34 ಸೆಕೆಂಡ್ ನಲ್ಲಿ ಓಡಿದರೆ.. ಯುವರಾಜ ಗಾಣಿಗೇರ 4 ನಿಮಿಷ 32 ಸೆಕೆಂಡ್ ನಲ್ಲಿ ಗುರಿ ತಲುಪಿದ್ದಾರೆ.

ನಾಗರಾಜ ಪಿಯುಸಿ‌‌ ಮುಗಿಸಿದ್ದು, 23 ವರ್ಷದೊಳಗಿನ ವಿಭಾಗದಲ್ಲಿ ಚಿನ್ನ.. ಯುವರಾಜ 17 ವರ್ಷದೊಳಗಿನ ವಿಭಾಗದಲ್ಲಿ ಚಿನ್ನದ ಬೇಟೆಯಾಡಿದ್ದಾರೆ. ಇಬ್ಬರೂ ಸಹೋದರರ ಸಾಧನೆಗೆ ಬಾದಾಮಿ ಶಾಸಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಫೇಸ್ ಬುಕ್‌ನಲ್ಲಿ ಖಾತೆಯಲ್ಲಿ ಸಂತಸ ವ್ಯಕ್ತಪಡಿಸಿದ್ದು, ಶುಭ ಹಾರೈಸಿದ್ದಾರೆ.

ನೇಪಾಳದಲ್ಲಿ ನಡೆದ ಇಂಡೊ-ನೇಪಾಳ ಇಂಟರ್ ನ್ಯಾಷನಲ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಜಾಗತಿಕ ಮಟ್ಟದಲ್ಲಿ ದೇಶದ ಕೀರ್ತಿ ಹೆಚ್ಚಿಸಿದ ಬಾದಾಮಿ ತಾಲ್ಲೂಕಿನ ತೋಗುಣಸಿ ಗ್ರಾಮದ ಯುವರಾಜ ಗಾಣಿಗೇರ ಹಾಗೂ ನಾಗರಾಜ ಗಾಣಿಗೇರ ಅವರಿಗೆ ಅಭಿನಂದನೆಗಳು. ಕ್ರೀಡಾ ಬದುಕಿನಲ್ಲಿ ಇನ್ನಷ್ಟು ದೊಡ್ಡ ಸಾಧನೆಗಳು ನಿಮ್ಮ‌ ಕೈಗೂಡಲಿ. ನಿಮ್ಮ ಸಾಧನೆ ನಾಡಿನ ಗ್ರಾಮೀಣ ಪ್ರತಿಭೆಗಳಿಗೆ ಪ್ರೇರಣೆಯಾಗಲಿ ಎಂದು ಹಾರೈಸುತ್ತೇನೆ ಅಂತಾ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿ, ಸಿದ್ದರಾಮಯ್ಯ ಶುಭ ಕೋರಿದ್ದಾರೆ.

Follow Us
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​