ಬಾಗಲಕೋಟೆ: ಓವರ್ ಟೇಕ್​ ಮಾಡಲು ಹೋಗಿ ಕುತ್ತು ತಂದುಕೊಂಡ ಬಾಲಕರು, ಕ್ಯಾಂಟರ್ ಅಡಿ ಬಿದ್ದು ಮೂವರ ಸಾವು

ಬಾಗಲಕೋಟೆ ತಾಲೂಕಿನ ಸೀಮಿಕೇರಿ ಬೈಪಾಸ್‌ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಎಡಗಡೆ ಓವರ್ ಟೇಕ್ ಮಾಡಲು ಹೋಗಿ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹನುಮ ಜಯಂತಿ ಮೆರವಣಿಗೆ ವೀಕ್ಷಿಸಲು ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಸದ್ಯ ಘಟನಾ ಸ್ಥಳಕ್ಕೆ ಕಲಾದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಬಾಗಲಕೋಟೆ: ಓವರ್ ಟೇಕ್​ ಮಾಡಲು ಹೋಗಿ ಕುತ್ತು ತಂದುಕೊಂಡ ಬಾಲಕರು, ಕ್ಯಾಂಟರ್ ಅಡಿ ಬಿದ್ದು ಮೂವರ ಸಾವು
ಮೃತ ಬಾಲಕರು
Updated By: ಗಂಗಾಧರ​ ಬ. ಸಾಬೋಜಿ

Updated on: May 08, 2025 | 1:57 PM

ಬಾಗಲಕೋಟೆ, ಮೇ 08: ಓವರ್ ಟೇಕ್​ ಮಾಡಲು ಹೋಗಿ ಕ್ಯಾಂಟರ್​ ಅಡಿ ಬಿದ್ದು ಬೈಕ್​ನಲ್ಲಿ ತೆರಳುತ್ತಿದ್ದ ಮೂವರು ಬಾಲಕರು (boys) ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಬಾಗಲಕೋಟೆ (Bagalkote) ತಾಲೂಕಿನ ಸೀಮಿಕೇರಿ ಬೈಪಾಸ್​ನಲ್ಲಿ ನಡೆದಿದೆ. ಮುರನಾಳ ಗ್ರಾಮದ‌ ನಿವಾಸಿಗಳಾದ ಸಿದ್ದು ರಾಜು ಗಣಿ (16), ಸಂತೋಷ ಕೂಡಗಿ (16) ಮತ್ತು ಕಾಮಣ್ಣ ಕುಪಲಿ (16) ಮೃತ ಬಾಲಕರು. ಘಟನಾ ಸ್ಥಳಕ್ಕೆ ಕಲಾದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಊರಲ್ಲಿ ಹನುಮ ಜಯಂತಿ ಹಿನ್ನೆಲೆ ಡಿಜೆ ಮೆರವಣಿಗೆ ಆಯೋಜಿಸಲಾಗಿತ್ತು. ಹೀಗಾಗಿ ಡಿಜೆ ಮೆರವಣಿಗೆ ನೋಡಲು ಮೂವರು ಬಾಲಕರು ಬೈಕ್​ನಲ್ಲಿ ತೆರಳಿದ್ದರು. ಗದ್ದನಕೇರಿ ಕ್ರಾಸ್​ನಿಂದ ಹುಬ್ಬಳ್ಳಿ ಮಾರ್ಗವಾಗಿ  ತೆರಳುತ್ತಿದ್ದ ಬೈಕ್​ಗೆ ​​ಕ್ಯಾಂಟರ್ ಡಿಕ್ಕಿಯಾಗಿದೆ. ಸ್ಥಳದಲ್ಲೇ ಮೂವರು ಬಾಲಕರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಪಕ್ಕದ ಮನೆಯವರ ಮೇಲಿನ ದ್ವೇಷಕ್ಕೆ ಬಾಲಕನನ್ನ ಅಪಹರಿಸಿ ಹತ್ಯೆ, ಕೊಲೆ ಸತ್ಯ ಬಿಚ್ಚಿಟ್ಟ ಆರೋಪಿ ಪುತ್ರಿ

ಇದನ್ನೂ ಓದಿ
ಬಾಗಲಕೋಟೆ: ಓವರ್ ಟೇಕ್​ ಮಾಡಲು ಹೋಗಿ ಕುತ್ತು ತಂದುಕೊಂಡ ಬಾಲಕರು
ಬೆಂಗಳೂರು: ಪಕ್ಕದ ಮನೆಯವರ ಮೇಲಿನ ದ್ವೇಷಕ್ಕೆ ಬಾಲಕನನ್ನ ಅಪಹರಿಸಿ ಹತ್ಯೆ
ಶಿವಮೊಗ್ಗ: ಕ್ರಿಕೆಟ್​ ಆಡುವಾಗ ಸ್ನೇಹಿತರ ನಡುವೆ ಜಗಳ, ಓರ್ವನ ಕೊಲೆ
ಮಗಳ ಸಾವಿಗೆ ಪ್ರತೀಕಾರ: ಪುತ್ರಿಯನ್ನ ಕೊಂದಿದ್ದ ಆರೋಪಿ ತಂದೆಯನ್ನೇ ಕೊಂದ!

ಅಪಘಾತದ ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ಎಡಗಡೆಯಿಂದ ಓವರ್ ಟೇಕ್ ಮಾಡಲು ಹೋಗಿ ಬಾಲಕರ ಯಡವಟ್ಟು ಮಾಡಿಕೊಂಡಿದ್ದಾರೆ. ರಸ್ತೆ ಬದಿ ಐವರು ಯುವಕರು ಹೊರಟಿದ್ದರು. ಅವರಿಗೆ ಡಿಕ್ಕಿ ಹೊಡೆದು ಬೈಕ್ ಪಲ್ಟಿ ಆಗಿದ್ದು, ನೇರವಾಗಿ ಕ್ಯಾಂಟರ್​​ ಅಡಿಗೆ ಸಿಲುಕಿದ್ದಾರೆ.

ಗದ್ದನಕೇರಿ ಕ್ರಾಸ್​ನಿಂದ ಹುಬ್ಬಳ್ಳಿ ‌ಮಾರ್ಗವಾಗಿ ಕ್ಯಾಂಟರ್​ ಚಾಲಕ ಸರಿಯಾಗಿ ತನ್ನ ಮಾರ್ಗದಲ್ಲಿ ಹೊರಟಿದ್ದ. ಬಾಲಕರ ಎಡವಟ್ಟಿನಿಂದ ಅವಘಡ ಸಂಭವಿಸಿದೆ. ಇನ್ನು ಬಾಲಕರು ಹೆಲ್ಮೆಟ್ ಧರಿಸಿರಲಿಲ್ಲ ಮತ್ತು ತ್ರಿಬಲ್ ರೈಡಿಂಗ್ ಹೊರಟ್ಟಿದ್ದರು. ಎಡಗಡೆ ಓವರ್ ಟೇಕ್ ಕಾರಣದಿಂದ ಜೀವ ಕಳೆದುಕೊಂಡಿದ್ದಾರೆ.

ವಿದ್ಯುತ್ ಸ್ಪರ್ಶಿಸಿ ಓರ್ವ ಕಾರ್ಮಿಕ ಸಾವು

ವಿದ್ಯುತ್ ಸ್ಪರ್ಶಿಸಿ ಓರ್ವ ಕಾರ್ಮಿಕ ಸಾವನ್ನಪ್ಪಿರುವಂತಹ ಘಟನೆ ರಾಯಚೂರು ತಾಲೂಕಿನ ಶಕ್ತಿನಗರ ಬಳಿಯಿರುವ ಆರ್​​ಟಿಪಿಎಸ್​​ ವಿದ್ಯುತ್ ಉತ್ಪಾದನಾ ಘಟಕದಲ್ಲಿ ನಡೆದಿದೆ. ವಾಟರ್ ಕ್ಲಾರಿಫೈರ್ ಕ್ಲೀನ್ ಮಾಡುವಾಗ ವಿದ್ಯುತ್ ಸ್ಪರ್ಶಿಸಿ ಘಟನೆ ಸಂಭವಿಸಿದೆ. ಕಾರ್ಮಿಕ ತಿಮ್ಮಾರೆಡ್ಡಿ(28) ಮೃತಪಟ್ಟಿದ್ದು, ಇನ್ನುಳಿದ ಮೂವರಿಗೆ ಗಾಯಗಳಾಗಿವೆ.

ಇದನ್ನೂ ಓದಿ: ಹಾವೇರಿಯಲ್ಲಿ ಭೀಕರ ಅಪಘಾತ: ಜವರಾಯನ ಅಟ್ಟಹಾಸಕ್ಕೆ 6 ಜನರು ಸ್ಥಳದಲ್ಲೇ ಸಾವು

ಗೊಂಡಿರುವ ರಂಗಪ್ಪ, ಹನುಮೇಶ್, ವಿರೇಶ್​ಗೆ ಆರ್​ಟಿಪಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಘಟನೆಗೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. RTPS ಅಧಿಕಾರಿಗಳು ಯಾವುದೇ ಸುರಕ್ಷತೆ ನೀಡದೇ ಕೆಲಸಕ್ಕೆ ಹಚ್ಚಿದ್ದಾರೆ ಎನ್ನಲಾಗುತ್ತಿದೆ. ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮೃತ ಕಾರ್ಮಿಕನ ಕುಟುಂಬಸ್ಥರು ಆಗ್ರಹಿಸಿದ್ದಾರೆ. ರಾಯಚೂರು ತಾಲೂಕಿನ ಶಕ್ತಿನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 1:12 pm, Thu, 8 May 25