AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ಮಧ್ಯೆ ಜಗಳ: ತಲವಾರ್​ನಿಂದ‌ ಮಾರಣಾಂತಿಕ ಹಲ್ಲೆ

Bagalkote News: ಅವರು ಓದಿ ಎತ್ತರಕ್ಕೆ ಬೆಳೆದು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ಕೊಡಬೇಕಾದವರು. ವೈದ್ಯಕೀಯ, ಲಾ, ನರ್ಸಿಂಗ್ ಓದುತ್ತಿರುವ ವಿದ್ಯಾರ್ಥಿಗಳು ಕ್ಷುಲ್ಲಕ ಕಾರಣಕ್ಕೆ ಜಗಳಾಡಿದ್ದಾರೆ. ಪೆನ್‌ ಹಿಡಿಯಬೇಕಿರುವವರು ತಲವಾರ್ ಹಿಡಿದು ಹಲ್ಲೆ‌ ಮಾಡಿರುವಂತಹ ಘಟನೆ ಬಾಗಲಕೋಟೆಯ ವಿದ್ಯಾಗಿರಿಯ ಎಂಬಿಎ ಕಾಲೇಜು ಬಳಿ ನಡೆದಿದೆ.

ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ಮಧ್ಯೆ ಜಗಳ: ತಲವಾರ್​ನಿಂದ‌ ಮಾರಣಾಂತಿಕ ಹಲ್ಲೆ
ಪ್ರಾತಿನಿಧಿಕ ಚಿತ್ರ
ರವಿ ಹೆಚ್ ಮೂಕಿ, ಕಲಘಟಗಿ
| Updated By: ಗಂಗಾಧರ​ ಬ. ಸಾಬೋಜಿ|

Updated on:Aug 12, 2023 | 8:28 PM

Share

ಬಾಗಲಕೋಟೆ ಆಗಸ್ಟ್​ 12: ನಗರದಲ್ಲಿ ಇತ್ತೀಚೆಗೆ ಮೇಲಿಂದ‌ ಮೇಲೆ ತಲವಾರ್ (Talwar) ಹಾರಾಟ ಶುರುವಾಗಿವೆ. ಕಳೆದ ತಿಂಗಳ 14 ರಂದು ತಲವಾರ್​ನಿಂದ ಒಬ್ಬ ಯುವಕನ‌ ಮೇಲೆ ಹಲ್ಲೆ‌ ನಡೆಸಲಾಗಿತ್ತು. ಅದಕ್ಕಿಂತ ಮೊದಲು ಮೂರು ಪ್ರತ್ಯೇಕ ಪ್ರಕರಣದಲ್ಲಿ ತಲವಾರ್​ನಿಂದ ಹಲ್ಲೆ ನಡೆಸಲಾಗುತ್ತು. ಇದೀಗ ಮತ್ತೆ ನಿನ್ನೆ ರಾತ್ರಿ ತಲವಾರ್​ನಿಂದ‌ ಇಬ್ಬರು ಸಹೋದರರ‌ ಮೇಲೆ ಹಲ್ಲೆ‌ ಮಾಡಿರುವಂತಹ ಘಟನೆ ನಡೆದಿದೆ. ಬಾಗಲಕೋಟೆಯಲ್ಲಿ ಕಾನೂನು ಓದುತ್ತಿರು ವಿಜಯ್ ಬೇವೂರ, ಹುಬ್ಬಳ್ಳಿಯಲ್ಲಿ ವೈದ್ಯಕೀಯ ಓದುತ್ತಿರುವ ವಿಜಯ್ ಸಹೋದರ ಶರಣು ಬೇವೂರ ಮೇಲೆ‌ ತಲವಾರ್​ನಿಂದ ಹಲ್ಲೆ ಮಾಡಲಾಗಿದೆ.

ವಿಠ್ಠಲ‌ ಬಂಟನೂರು, ಮುತ್ತು ಬಳಿಗಾರ, ವಿಲಾಸ ಜಾಧವ, ಸಮೀರ್ ಎಂಬುವರಿಂದ ಹಲ್ಲೆ‌ ಮಾಡಲಾಗಿದೆ. ನಗರದ ವಿದ್ಯಾಗಿರಿಯ ಎಂಬಿಎ ಕಾಲೇಜು ಬಳಿ ವಿಜಯ್ ಹಾಗೂ ಸಹೋದರ ಶರಣು ಬೈಕ್‌ ಮೇಲೆ ಹೊರಡುವ ವೇಳೆ ತಲವಾರ್​ನಿಂದ ಹಲ್ಲೆ‌ ಮಾಡಿದ್ದಾರೆ. ಘಟನೆಯಲ್ಲಿ ವಿಜಯ್ ಬೇವೂರನ ಎರಡು ಕೈಗಳನ್ನು ಕತ್ತರಿಸಲಾಗಿದೆ. ಶರಣು ಬೇವೂರಗೆ ಸಾಮಾನ್ಯ ಗಾಯವಾಗಿದೆ. ಗಾಯಾಳುಗಳನ್ನು ಮೊದಲು ಜಿಲ್ಲಾಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಿ ನಂತರ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರೆದಿದೆ.

ಇದನ್ನೂ ಓದಿ: ಬೆಂಗಳೂರು: ಆಟೋ ಹಿಂದೆ ಮಾರಕಾಸ್ತ್ರ! ಚಾಲಕನ ವಿರುದ್ಧ ಕ್ರಮಕ್ಕೆ ನೆಟ್ಟಿಗರ ಒತ್ತಾಯ

ಶರಣು ಬೇವೂರ ಹುಬ್ಬಳ್ಳಿಯಲ್ಲಿ ವೈದ್ಯಕೀಯ ಓದುತ್ತಿದ್ದು, ಬಾಗಲಕೋಟೆಯಲ್ಲಿ ಲಾ‌ ಓದುತ್ತಿರುವ ಸಹೋದರ ವಿಜಯ್ ನೋಡೋದಕ್ಕೆ ಅಂತ ಬಂದಿದ್ದ. ಆದರೆ ನಿನ್ನೆ ಮಧ್ಯಾಹ್ನ ಹಲ್ಲೆಗೊಳಗಾದ ವಿಜಯ್ ಹಲ್ಲೆ ಮಾಡಿದವರು ಸ್ನೇಹಿತರೇ ಆಗಿದ್ದು ಕ್ರಿಕೆಟ್ ಆಡುವ ವೇಳೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದೆ. ಜಗಳ‌ ಮುಗಿದು ಎಲ್ಲರೂ ಮನೆಗೆ ಹೋದರೆ ರಾತ್ರಿ 7.45 ರ ವೇಳೆಗೆ ವಿಠ್ಠಲ, ಮುತ್ತು ಬಳಿಗಾರ, ವಿಲಾಸ, ಸಮೀರ್ ಎಲ್ಲರೂ ಕೂಡಿದ್ದಾರೆ. ಬೈಕ್ ಮೇಲೆ‌ ಹೊರಟಿದ್ದ ವಿಜಯ್ ಹಾಗೂ ಶರಣು ಮೂತ್ರ ವಿಸರ್ಜನೆ ಮಾಡಿ ಮತ್ತೆ ಬೈಕ್ ಏರಲು ಮುಂದಾದಾಗ ಬೈಕ್ ಒದ್ದು ಕೆಡವಿ ವಿಜಯ್ ಮೇಲೆ ತಲವಾರ್​ನಿಂದ ಹಲ್ಲೆ‌ ಮಾಡಲು ಶುರು ಮಾಡಿದ್ದಾರೆ.

ಸಹೋದರ ವಿಜಯ್ ಜೊತೆಗಿದ್ದ ಶರಣು ಬಿಡಿಸೋಕೆ ಮುಂದಾದಾಗ ಆತನ ಮೇಲೂ ಹಲ್ಲೆ‌ ಮಾಡಿ ಎಸ್ಕೇಪ್‌ ಆಗಿದ್ದಾರೆ. ಆದರೆ ಯಾಕೆ ಹೊಡೆದರು ಅಂತ ನಮಗೆ ಏನು ಗೊತ್ತಾಗ್ತಿಲ್ಲ ಅಂತ ಹೆಳ್ತಿದ್ದಾರೆ ಹಲ್ಲೆಗೊಳಗಾದ ಶರಣು. ಘಟನೆ ಸುದ್ದಿ ತಿಳಿದು ಕೂಡಲೇ ಸ್ಥಳಕ್ಕೆ ತೆರಳಿದ ಬಾಗಲಕೋಟೆ ನವನಗರ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಸದ್ಯಕ್ಕೆ ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ ಕ್ರಿಕೆಟ್ ಆಡುವ ವೇಳೆ ನಡೆದ ಸಣ್ಣ ಕಿರಿಕ್‌ನಿಂದ ಹಲ್ಲೆ‌ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಆದರೆ ವಿಜಯ್ ಸಂಪೂರ್ಣ ಗುಣಮುಖರಾದ ಮೇಲೆ‌ ಸತ್ಯಾಂಶ ಬಯಲಿಗೆ ಬರಲಿದೆ.

ಇದನ್ನೂ ಓದಿ: TV9 Kannada Digital Impact: ಮನಿ ಡಬ್ಲಿಂಗ್ ಪ್ರಕರಣದಲ್ಲಿ ಬಾಗೇಪಲ್ಲಿ ಪೊಲೀಸರ ಶಾಮೀಲು: ಸಾಲು ಸಾಲು ಮೂವರು ಪೊಲೀಸರು ಅಮಾನತು

ಸದ್ಯ ವಿಠ್ಠಲ, ವಿಲಾಸನನ್ನು ನವನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ‌ನಡೆಸುತ್ತಿದ್ದಾರೆ. ಕಳೆದ ತಿಂಗಳು 14 ರಂದು ಸಂಜೀವ್ ಎಂಬ ರೌಡಿಶೀಟರ್‌ ಮೇಲೆ ತಲವಾರ್​ನಿಂದ ಹಲ್ಲೆ‌ ನಡೆಸಲಾಗಿತ್ತು. ಅದಕ್ಕೂ‌ ಮುನ್ನ ಕಾಲೇಜು ವಿದ್ಯಾರ್ಥಿಗಳು ಮೊಬೈಲ್ ವಿಚಾರಕ್ಕೆ ತಲವಾರ್​ನಿಂದ ಹಲ್ಲೆ‌ಮಾಡಿದ್ದರು. ಐದಾರು ತಿಂಗಳಲ್ಲಿ ಒಟ್ಟು ಐದು ಪ್ರಕರಣಗಳಲ್ಲಿ‌ ತಲವಾರ್ ಹಾರಾಡಿದೆ‌.

ಮೇಲಿಂದ‌ ಮೇಲೆ ತಲವಾರ್ ಹಾರಾಟ ಹಿನ್ನೆಲೆ ಇತ್ತೀಚೆಗಷ್ಟೆ ಬಾಗಲಕೋಟೆ ಜಿಲ್ಲೆ ಪೊಲೀಸರು ರೌಡಿ ಶೀಟರ್ ಗಳೆ ಮನೆ ಮೇಲೆ ದಾಳಿ‌ಮಾಡಿ‌ ಲಾಂಗು, ಮಚ್ಚು, ತಲವಾರ್ ಜಪ್ತಿ‌ಮಾಡಿಕೊಂಡಿದ್ದರು. ಇದೀಗ ಇತರೆ ಪುಂಡ ಯುವಕರು ವಿವಿಧ ಕೇಸ್​ನಲ್ಲಿ ಭಾಗಿಯಾದವರ ಮನೆ ಮೇಲೂ ದಾಳಿ‌ ಮಾಡಿ‌ ತಲವಾರ್ ಸೇರಿದಂತೆ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗುವುದು ಎಂದು ಎಸ್​ಪಿ ಎಚ್ಚರಿಕೆ‌ ನೀಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:28 pm, Sat, 12 August 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ