ಬಾಗಲಕೋಟೆ ದಲಿತ ಯುವಕನ ಹತ್ಯೆಗೆ ಬಿಗ್ ಟ್ವಿಸ್ಟ್: ಅನುಮಾನಪಟ್ಟು ಹೊಡೆದು ಕೊಂದ್ರಾ?

ಬಾಗಲಕೋಟೆಯ ಸಾವಳಗಿ ಗ್ರಾಮದಲ್ಲಿ ನಡೆದ ದಲಿತ ಯುವಕನ ಹತ್ಯೆ ಪ್ರಕರಣ ತೀವ್ರ ಗೊಂದಲ ಸೃಷ್ಟಿಸಿದೆ. ಶಾಲಾ ಸ್ನೇಹ ಸಮ್ಮೇಳನದಲ್ಲಿ ವಿದ್ಯಾರ್ಥಿನಿಯರಿಗೆ ಕಲ್ಲು ಹೊಡೆದಿದ್ದಕ್ಕೆ ಥಳಿಸಿ ಕೊಲ್ಲಲಾಯಿತು ಎಂಬ ಆರೋಪವಿದ್ದರೆ, ದಲಿತ ಮುಖಂಡರು ಮಲಗಿದ್ದ ವ್ಯಕ್ತಿಯನ್ನು ಎಳೆದು ಹಲ್ಲೆ ಮಾಡಿದ್ದಾರೆ ಎನ್ನುತ್ತಿದ್ದಾರೆ. ಸದ್ಯ ಸಾವಳಗಿ ಠಾಣೆಯಲ್ಲಿ ಕೊಲೆ ಪ್ರಕರಣ ಕೂಡ ದಾಖಲಾಗಿದೆ.

ಬಾಗಲಕೋಟೆ ದಲಿತ ಯುವಕನ ಹತ್ಯೆಗೆ ಬಿಗ್ ಟ್ವಿಸ್ಟ್: ಅನುಮಾನಪಟ್ಟು ಹೊಡೆದು ಕೊಂದ್ರಾ?
ಮೃತ ಯುವಕ
Image Credit source: tv9 kannada
Edited By:

Updated on: Mar 13, 2026 | 8:19 PM

ಬಾಗಲಕೋಟೆ, ಮಾರ್ಚ್​​ 13: ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದ ಸರ್ಕಾರಿ ಕನ್ನಡ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ವೇಳೆ ದಲಿತ ಯುವಕ ಸಾವನ್ನಪ್ಪಿರುವ (death) ಘಟನೆ ಸದ್ಯ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ವಿದ್ಯಾರ್ಥಿನಿಯರಿಗೆ ಕಲ್ಲು ಹೊಡೆದಿದ್ದಕ್ಕೆ ಸ್ಥಳೀಯರು ಬಡಿದು ಕೊಂದಿದ್ದಾರೆ ಎಂದು ಆರೋಪವಿದೆ. ಇನ್ನೊಂದೆಡೆ ಯುವಕ ಕಲ್ಲು ಎಸೆದಿಲ್ಲ ಎನ್ನುವುದು ದಲಿತ ನಾಯಕರ ಮಾತು. ಮಲಗಿದ್ದ ದಲಿತ ವ್ಯಕ್ತಿಯನ್ನು ಎಳೆದು ಹಲ್ಲೆ ಮಾಡಿದ ದೃಶ್ಯ ಸಿಸಿ ಕ್ಯಾಮರಾದಲ್ಲಿದೆ ಎಂದಿದ್ದಾರೆ. ಹೀಗಾಗಿ ಈ ಪ್ರಕರಣ ಗೊಂದಲಮಯವಾಗಿದೆ.

ಈ ಬಗ್ಗೆ ಮಾಧ್ಯಮಗಳಲ್ಲಿ ಬೇರೆ ಬೇರೆ ರೀತಿ ಸುದ್ದಿಗಳು ಪ್ರಸಾರವಾಗುತ್ತಿವೆ. ಹೆಣ್ಣು ಮಕ್ಕಳು ಬಟ್ಟೆ ಬದಲಾಯಿಸುತ್ತಿದ್ದಾಗ ಕದ್ದು ನೋಡಿದನೆಂದು ಸ್ಥಳೀಯರು ಥಳಿಸಿದ ಪರಿಣಾಮ ಆತ ಹೃದಯಾಘಾತದಿಂದ ಸಾವನ್ನಪ್ಪಿದನೆಂದು, ಕಾಲ್ತುಳಿತಕ್ಕೆ ಸಾವನ್ನಪ್ಪಿದ ಎನ್ನಲಾಗುತ್ತಿದೆ. ಆದರೆ ಮಲಗಿದ್ದ ಯುವಕನನ್ನು ಎಳೆದು ತಂದು ಹಲ್ಲೆ ಮಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆ ಮೂಲಕ ಇಡೀ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದೆ. ಸಾವಳಗಿ ಠಾಣೆಯಲ್ಲಿ ಕೊಲೆ ಪ್ರಕರಣ ಕೂಡ ದಾಖಲಾಗಿದೆ.

ನಡೆದಿದ್ದೇನು?

ಮಾರ್ಚ 11ರ ರಾತ್ರಿ 9ಗಂಟೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿತ್ತು. ಕಾರಣ ಗ್ರಾಮದ ಸರ್ಕಾರಿ ಕನ್ನಡ ಪ್ರೌಢಶಾಲೆಯ ಮಕ್ಕಳ ವಾರ್ಷಿಕ ಸ್ನೇಹ ಸಮ್ಮೇಳನ ಜರುಗಿತ್ತು. ಮಕ್ಕಳು, ಪೋಷಕರು, ಶಾಲೆಯ ಸಿಬ್ಬಂದಿ ಸಾಂಸ್ಕೃತಿಕ ಕಾರ್ಯಕ್ರಮದ ಸಂಭ್ರಮದಲ್ಲಿ ತೊಡಗಿದ್ದರು. ಗ್ರಾಮಸ್ಥರು ಕೂಡ ಕಾರ್ಯಕ್ರಮ ವೀಕ್ಷಣೆಗೆ ಬಂದಿದ್ದರು. ಈ ವೇಳೆ ಕೆಲ ಯುವಕರು ಗ್ರಾಮ ಪಂಚಾಯಿತಿ ಕಟ್ಟಡದ ಮೇಲ್ಛಾವಣಿ ಮೇಲೆ ಕುಳಿತು ಕ್ರಾರ್ಯಕ್ರಮ ನೋಡುತ್ತಿದ್ದರು.

ಮೂವರ ವಿರುದ್ಧ ಎಫ್​​ಐಆರ್ ದಾಖಲು 

ಈ ವೇಳೆ ಮೇಲಿಂದ ಕೆಳಗಡೆ ಕುಳಿತವರ ಮೇಲೆ ಯುವಕರ ಒಂದು ಗುಂಪು ಚಿಕ್ಕಚಿಕ್ಕ ಕಲ್ಲುಗಳನ್ನು ಎಸೆದು ಚುಡಾಯಿಸಿದೆ. ಈ ಮಧ್ಯೆ ಕೆಳಗೆ ಕುಳಿತವರು ಹಾಗೂ ಮೇಲೆ ಕುಳಿತ ಯುವಕರ ಎರಡು ಗುಂಪುಗಳ ನಡುವೆ ಹೊಡೆದಾಟವಾಗಿದೆ. ನಂತರ ದಲಿತ ಯುವಕ ಸುದೀಪ್ ಪಾಂಗೆ (೧೯) ಪ್ರಾಣಬಿಟ್ಟಿದ್ದಾನೆ. ಈ ಬಗ್ಗೆ ಸಾವಳಗಿ ಠಾಣೆಯಲ್ಲಿ ಕೊಲೆ ಎಂದು ಪ್ರಕರಣ ದಾಖಲಾಗಿದೆ. ಕ್ರೈಂ ನಂ.47/2026 ರಂತೆ ಕೊಲೆ ಪ್ರಕರಣದೊಂದಿಗೆ ಎಸ್.ಸಿ, ಎಸ್.ಟಿ (ಅತ್ಯಾಚಾರ ನಿರೋಧ)ಕಾಯ್ದೆಯ ಕಲಂ ಅಡಿ ಪ್ರಕರಣ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ವಿಜಯ್ , ರಾಜು ಮತ್ತು ಮಲ್ಲಿಕಾರ್ಜುನ ವಿರುದ್ಧ ಎಫ್​​ಐಆರ್ ದಾಖಲಾಗಿದೆ.

ಇದನ್ನೂ ಓದಿ: ವಿದ್ಯಾರ್ಥಿನಿಯರು ಬಟ್ಟೆ ಬದಲಾಯಿಸುವಾಗ ಕದ್ದು ನೋಡಿದ ಆರೋಪದಲ್ಲಿ ಥಳಿಸಿದ ಸ್ಥಳೀಯರು: ಹೃದಯಾಘಾತದಿಂದ ಯುವಕ ಸಾವು

ಇನ್ನು ವಾರ್ಷಿಕ ಸ್ನೇಹ ಸಮ್ಮೇಳನದ ಕಾರ್ಯಕ್ರಮದ ವೇಳೆ ಯುವಕರ ಒಂದು ಗುಂಪು ಚಿಕ್ಕ ಚಿಕ್ಕ ಕಲ್ಲು ಎಸೆದು ಚುಡಾಯಿಸುತ್ತಿದ್ದ ಸಂದರ್ಭದಲ್ಲಿ ಸ್ಥಳೀಯ ಎಸ್​ಡಿಎಂಸಿ ಸದಸ್ಯ ವಿಜಯ್ ಹಾಗೂ ಸ್ಥಳೀಯರಾದ ರಾಜು ಮತ್ತು ಮಲ್ಲಿಕಾರ್ಜುನ ಅವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ‌. ಈ ಸಂದರ್ಭದಲ್ಲಿ ವಿಜಯ್, ರಾಜು, ಮಲ್ಲಿಕಾರ್ಜುನ ಸುದೀಪ್​​ ಪಾಂಗೆ(19) ಎನ್ನುವ ಯುವಕನ ಮೇಲೆ ಹಲ್ಲೆ ಮಾಡುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತು ಮೃತನ ಕುಟುಂಬಸ್ಥರು ಸಾವಳಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅವರನ್ನ ಬಂಧಿಸಲಾಗಿದ್ದು, ಸದ್ಯ ತನಿಖೆ ಮುಂದುವರೆದಿದೆ.

ದಲಿತ ಮುಖಂಡರು ಹೇಳಿದ್ದಿಷ್ಟು 

ಇನ್ನು ಈ ಬಗ್ಗೆ ಮಾತಾಡಿದ ಸಾವಳಗಿ ಗ್ರಾಮದ ದಲಿತ ಮುಖಂಡ ರಾಜು ‌ಮೇಲಿನಕೇರಿ, ಮಾಧ್ಯಮಗಳಲ್ಲಿ ಬೇರೆ ಬೇರೆ ರೀತಿ ಸುದ್ದಿಗಳು ಪ್ರಸಾರವಾಗುತ್ತಿವೆ. ಯುವಕ ವಿದ್ಯಾರ್ಥಿನಿಯರು ಬಟ್ಟೆ ಬದಲಿಸುವುದನ್ನು ನೋಡಿ ಕಲ್ಲು ಎಸೆಯುತ್ತಿದ್ದ, ಇನ್ನು ಕೆಲ ಮಾಧ್ಯಮಗಳಲ್ಲಿ ಕಾಲ್ತುಳಿತಕ್ಕೆ ಸಾವನ್ನಪ್ಪಿದ ಎಂದು ಬರುತ್ತಿದೆ. ಅದೆಲ್ಲವು ಸತ್ಯಕ್ಕೆ ದೂರವಾದದ್ದು. ಆತ ಗ್ರಾಮ ಪಂಚಾಯಿತಿ ಮೇಲೆ‌ ಕುಡಿದು ಮಲಗಿದ್ದ. ಯಾರು ಕಲ್ಲು ಎಸೆದಿದ್ದಾರಾ ಗೊತ್ತಿಲ್ಲ. ಮಲಗಿದ್ದ ದಲಿತ ವ್ಯಕ್ತಿಯನ್ನು ಎಳೆದು ಹಲ್ಲೆ ಮಾಡಿದ ದೃಶ್ಯ ಸಿಸಿ ಕ್ಯಾಮರಾದಲ್ಲಿದೆ. ಎಫ್​ಐಆರ್ ಪ್ರಕಾರ ವರದಿ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ ಎಂದರು.

ಇದನ್ನೂ ಓದಿ: ಮುಸ್ಲಿಂ ವ್ಯಕ್ತಿಯನ್ನು ಲವ್ ಮಾಡಿ ಮತಾಂತರಗೊಂಡ ವಿವಾಹಿತ ಮಹಿಳೆ: ಈಗ ಅಸಲಿ ರೂಪ ತೋರಿಸಿದ ಪತಿ

ಒಟ್ಟಾರೆ ಗ್ರಾಮದಲ್ಲಿ ಮಕ್ಕಳ ವಾರ್ಷಿಕ ಸ್ನೇಹ ಸಮ್ಮೇಳ ಸಂಭ್ರಮ ಸಡಗರದಿಂದ ಸಮಾರೋಪವಾಗಬೇಕಿತ್ತು. ಆದರೆ ಯುವಕರ ನಡುವಿನ ಕ್ಷುಲ್ಲಕ ಜಗಳ ಕೊಲೆಯಲ್ಲಿ ಅಗತ್ಯವಾಗಿದ್ದು, ಪೊಲೀಸರು ಈ ಕುರಿತು ತನಿಖೆ ಮುಂದುವರೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Ravi H Mooki

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More
Follow Us