ಮನಸ್ಸು ಬದಲಾಯಿಸಿದ ಮಾಲೀಕ: ಅಭಿಮಾನಿಗಳ ಒತ್ತಾಯದ ಮೇರೆಗೆ 7 ಸ್ಟಾರ್ ಸುಲ್ತಾನ್ ಕುರ್ಬಾನಿ ಕೊಡದಿರಲು ನಿರ್ಧಾರ

|

Updated on: Jun 27, 2023 | 10:11 AM

ಸಾಮಾಜಿಕ ಜಾಲತಾಣದಲ್ಲಿ 7 ಸ್ಟಾರ್ ಸುಲ್ತಾನ್ ಕುರ್ಬಾನಿ ವಿರುದ್ಧ ಅಭಿಯಾನ ಶುರುವಾಗಿದ್ದು ಅನೇಕ ಅಭಿಮಾನಿಗಳು ಟಗರನ್ನು ಕೊಲ್ಲಬೇಡಿ. ಅದರಿಂದ ನಿಮಗೆ ಗೌರವ ಎಂದು ಮನವಿ ಮಾಡಿದ್ದರು. ಅಭಿಮಾನಿಗಳ ಮನವಿಗೆ ಒಪ್ಪಿದ ಮಾಲೀಕ ಮನಸ್ಸು ಬದಲಾಯಿಸಿದ್ದಾರೆ.

ಮನಸ್ಸು ಬದಲಾಯಿಸಿದ ಮಾಲೀಕ: ಅಭಿಮಾನಿಗಳ ಒತ್ತಾಯದ ಮೇರೆಗೆ 7 ಸ್ಟಾರ್ ಸುಲ್ತಾನ್ ಕುರ್ಬಾನಿ ಕೊಡದಿರಲು ನಿರ್ಧಾರ
7 ಸ್ಟಾರ್ ಸುಲ್ತಾನ್ ಗೆದ್ದ ಪ್ರಶಸ್ತಿಗಳು
Follow us on

ಬಾಗಲಕೋಟೆ: ಡಾಲಿ ಧನಂಜಯ್​ ನಿರ್ಮಾಣದ ಟಗರು ಪಲ್ಯ (Tagaru Palya Movie) ಸಿನಿಮಾದಲ್ಲಿ ನಟಿಸಿರುವ ಹಾಗೂ ಅನೇಕ ಟಗರು ಕಾಳಗದಲ್ಲಿ ಗೆದ್ದು ಬಹುಮಾನಗಳನ್ನು ಬಾಚಿಕೊಂಡಿರುವ 7 ಸ್ಟಾರ್ ಸುಲ್ತಾನ್(7 Star Sultan) ಎಂಬ ಹೆಸರಿನ ಟಗರನ್ನು ಈ ಬಕ್ರೀದ್ ಹಬ್ಬಕ್ಕೆ(Bakrid) ಕುರ್ಬಾನಿ ನೀಡದಿರಲು ಮಾಲೀಕ ನಿರ್ಧರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ 7 ಸ್ಟಾರ್ ಸುಲ್ತಾನ್ ಕುರ್ಬಾನಿ ವಿರುದ್ಧ ಅಭಿಯಾನ ಶುರುವಾಗಿದ್ದು ಅನೇಕ ಅಭಿಮಾನಿಗಳು ಟಗರನ್ನು ಕೊಲ್ಲಬೇಡಿ. ಅದರಿಂದ ನಿಮಗೆ ಗೌರವ ಎಂದು ಮನವಿ ಮಾಡಿದ್ದರು. ಅಭಿಮಾನಿಗಳ ಮನವಿಗೆ ಒಪ್ಪಿದ ಮಾಲೀಕ ಮನಸ್ಸು ಬದಲಾಯಿಸಿದ್ದಾರೆ.

7 ಸ್ಟಾರ್ ಸುಲ್ತಾನ್ ಅಭಿಮಾನಿಗಳ ಅಭಿಮಾನಕ್ಕೆ ಮಣಿದು ಕುರ್ಬಾನಿ‌ ಕೊಡದಿರಲು ಟಗರು ಮಾಲೀಕ ಯುನೀಸ್ ಗಡೇದ್ ನಿರ್ಧರಿಸಿದ್ದಾರೆ. ಬಾಗಲಕೋಟೆ ತಾಲೂಕಿನ ಸುತಗುಂಡಾರ ಗ್ರಾಮದ‌ ಯುನೀಸ್ ಅವರು ಬಕ್ರೀದ್ ಹಬ್ಬಕ್ಕೆ ಕುರ್ಬಾನಿ ಕೊಡಲೆಂದೇ ಎರಡೂವರೆ ವರ್ಷದ ಹಿಂದೆ ಈ ಟಗರನ್ನು 1 ಲಕ್ಷ 88 ಸಾವಿರದ ಐನೂರು ರೂ ಗೆ ಖರೀದಿಸಿದ್ದರು. ಆದ್ರೆ ಕುರ್ಬಾನಿಗೂ ಮುನ್ನ ಟಗರನ್ನು ಕಾಳಗಕ್ಕೆ ಇಳಿಸಲಾಗಿದ್ದು ಟಗರು ಅನೇಕ ಬಹುಮಾನಗಳನ್ನು ತನ್ನದಾಗಿಸಿಕೊಂಡಿದೆ. ಇಲ್ಲಿಯ ವರೆಗೆ 34 ಕಣಗಳಲ್ಲಿ ಪ್ರಥಮ ಬಹುಮಾನ ಗಳಿಸಿದ್ದು ಸುಮಾರು 20 ಲಕ್ಷದಷ್ಟು ಹಣ, ಬೆಳ್ಳಿ, ಬಂಗಾರ, ಬೈಕ್​ಗಳನ್ನ ಗೆದ್ದು ಬೀಗಿದೆ. ಹೀಗಾಗಿ ಮಾಲೀಕ ಯುನೀಸ್ ಈ ಟಗರಿಗೆ 7 ಸ್ಟಾರ್ ಸುಲ್ತಾನ್ ಎಂದು ಹೆಸರಿಟ್ಟರು.

ಇದನ್ನೂ ಓದಿ: 7 Star Sultan: ‘ಟಗರು ಪಲ್ಯ’ ಚಿತ್ರದಲ್ಲಿ ನಟಿಸಿದ ‘7 ಸ್ಟಾರ್​ ಸುಲ್ತಾನ್​’ ಕುರುಬಾನಿಗೆ ಸೋಶಿಯಲ್​ ಮೀಡಿಯಾದಲ್ಲಿ ವಿರೋಧ

ಆದ್ರೆ ಅಂದುಕೊಂಡಂತೆ ಈ ಬಾರಿಯ ಬಕ್ರೀದ್ ಹಬ್ಬಕ್ಕೆ ಈ ಟಗರನ್ನ ಕುರ್ಬಾನಿ ನೀಡಲು ನಿರ್ಧರಿಸಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ 7 ಸ್ಟಾರ್ ಸುಲ್ತಾನ್ ಟಗರಿನ ಅಭಿಮಾನಿಗಳಿಗೆ ಬೇಸರವಾಗಿತ್ತು. ಸಾಧಕ ಟಗರನ್ನು ಕುರ್ಬಾನಿ‌ ಮಾಡದಂತೆ ಅಭಿಮಾನಿಗಳಿಂದ ಸಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರುವಾಗಿತ್ತು. ಹೀಗಾಗಿ ಅಭಿಮಾನಿಗಳ ಒತ್ತಾಸೆಗೆ‌ ಮಣಿದು 7 ಸ್ಟಾರ್ ಸುಲ್ತಾನನ ಕುರ್ಬಾನಿ ಕೊಡದಿರಲು ಯುನೀಸ್ ನಿರ್ಧರಿಸಿದ್ದಾರೆ. ಸಾಧಕ ಟಗರಿನ ಬದಲಿಗೆ, ದೇವರಿಗೆ ಬೇರೆ ಟಗರನ್ನ ಬಲಿ ಕೊಡಲು ನಿರ್ಧರಿಸಿದ್ದಾರೆ.

ಬಿಳಿ ಬಣ್ಣದ ‘7 ಸ್ಟಾರ್​ ಸುಲ್ತಾನ್​’ ಅಭಿಮಾನಿಗಳ ಬಳಗ ದೊಡ್ಡದಿದೆ. ಇದರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿವೆ. ಸಿನಿಮಾಗಳ ಮಾಸ್​ ಡೈಲಾಗ್​ಗಳನ್ನು ಅಳವಡಿಸಿ ಈ ಟಗರಿನ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ. ‘ಸುಲ್ತಾನ್​ ಟಗರಿನಿಂದ ಅದರ ಮಾಲೀಕರು ಕೂಡ ಫೇಮಸ್​ ಆಗಿದ್ದಾರೆ.

ಬಾಗಲಕೋಟೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ