ಕಾಂಗ್ರೆಸ್ ಅಭ್ಯರ್ಥಿಗಳು ಸಾಲುಗಟ್ಟಿ ನಿಂತಿದ್ದಾರೆ, ಬಿಜೆಪಿಯ ಗದ್ದಿಗೌಡರಗೆ 5ನೇ ಬಾರಿ ಲಕ್ಕು ಕುದುರುತ್ತದಾ?

2004ರಿಂದ ನಿರಂತರವಾಗಿ ಬಾಗಲಕೋಟೆ ಸಂಸದರಾಗಿ ಗದ್ದಿಗೌಡರ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. ಇನ್ನು ಕಾಂಗ್ರೆಸ್ ನಲ್ಲಿ ಟಿಕೆಟ್ ಫೈಟ್ ಜೋರಾಗಿದ್ದು ಕಳೆದ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿ ವೀಣಾ ಕಾಶಪ್ಪನವರ, ಮಾಜಿ ಸಚಿವ ಅಜಯಕುಮಾರ ಸರನಾಯಕ್, ಸಚಿವ ಶಿವಾನಂದ ಪಾಟಿಲ್ ಮಗಳು ಸಂಯುಕ್ತಾ ಪಾಟಿಲ್ ರೇಸ್ ನಲ್ಲಿ ಪ್ರಮುಖ ಸ್ಥಾನದಲ್ಲಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಗಳು ಸಾಲುಗಟ್ಟಿ ನಿಂತಿದ್ದಾರೆ, ಬಿಜೆಪಿಯ ಗದ್ದಿಗೌಡರಗೆ 5ನೇ ಬಾರಿ ಲಕ್ಕು ಕುದುರುತ್ತದಾ?
ಬಿಜೆಪಿಯ ಗದ್ದಿಗೌಡರಗೆ 5ನೇ ಬಾರಿ ಲಕ್ಕು ಕುದುರುತ್ತದಾ?
Follow us
| Updated By: ಸಾಧು ಶ್ರೀನಾಥ್​

Updated on:Mar 16, 2024 | 1:02 PM

ಯಾವುದೇ ರಾಜಕೀಯ ಕುಟುಂಬದ ಹಿನ್ನೆಲೆ ಇಲ್ಲದೆ ಆ ಕ್ಷೇತ್ರದ ಅಭ್ಯರ್ಥಿ (BJP PC Gaddi Gowdar) ನಿರಂತರವಾಗಿ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಇದೀಗ ಅವರಿಗೇ 2024ರ ಬಿಜೆಪಿ ಲೋಕಸಭೆ ಟಿಕೆಟ್ ಸಿಕ್ಕಿದ್ದು ಮತ್ತೆ ಅಖಾಡಕ್ಕೆ ಸಿದ್ದರಾಗಿದ್ದಾರೆ. ಇನ್ನೊಂದು ಕಡೆ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಇಂದಿಗೂ ಅಭ್ಯರ್ಥಿ ಫೈನಲ್ ಆಗಿಲ್ಲ. ಒಬ್ಬರು ಪರಾಜಿತ ಅಭ್ಯರ್ಥಿ ಶಾಸಕನ ಪತ್ನಿ, ಇನ್ನೊಬ್ಬ ಮಾಜಿ ಸಚಿವ, ಒಬ್ಬಳು ಸಚಿವರ ಮಗಳು, ಮೂರು ಜನ ಮುಖ್ಯ ರೇಸ್ ನಲ್ಲಿದ್ದು ಕೈ ಟಿಕೆಟ್ ಯಾರಿಗೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಬಾಗಲಕೋಟೆ (Bagalkot) ಜಿಲ್ಲೆ ವೀರೇಂದ್ರ ಪಾಟಿಲ್, ನಿಜಲಿಂಗಪ್ಪ, ರಾಮಕೃಷ್ಣ ಹೆಗಡೆಯಂತ ನಾಯಕರ ರಾಜಕೀಯಕ್ಕೆ ಸಾಕ್ಷಿಯಾದ ಜಿಲ್ಲೆ. ಇಲ್ಲಿ 90ರ ದಶಕದಲ್ಲಿ ರಾಮಕೃಷ್ಣ ಹೆಗಡೆ ಜಮಖಂಡಿಯ ಸಿದ್ದು ನ್ಯಾಮಗೌಡ ಎದುರು ಸ್ಪರ್ಧಿಸಿ ಪರಾಭವಗೊಂಡಿದ್ದರು. ವೀರೇಂದ್ರ ಪಾಟಿಲ್ ನಿಜಲಿಂಗಪ್ಪ ಅಂತವರಿಗೆ ರಾಜಕೀಯ ಭವಿಷ್ಯ ಕೊಟ್ಟ ಜಿಲ್ಲೆ ಬಾಗಲಕೋಟೆ. ಇಂತಹ ನೆಲದಲ್ಲಿ ಇದೀಗ ಲೋಕಸಭೆ ಕಣ ರಂಗೇರುತ್ತಿದೆ.

ಇಷ್ಟು ದಿನ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷದಲ್ಲಿ ಅಭ್ಯರ್ಥಿ ಆಯ್ಕೆಯಾಗಿರಲಿಲ್ಲ. ಆದರೆ ಎರಡು ದಿನದ ಹಿಂದೆ ಬಿಜೆಪಿ ಪಕ್ಷದಿಂದ ಹಾಲಿ ಸಂಸದ ಪಿಸಿ ಗದ್ದಿಗೌಡರ ಅವರಿಗೆ ಮತ್ತೆ ಟಿಕೆಟ್ ಒಲಿದಿದೆ. ಬಿಜೆಪಿಯಲ್ಲಿ ರಾಜ್ಯ ಉಪಾಧ್ಯಕ್ಷ ಮುರುಗೇಶ್​ ನಿರಾಣಿ, ನಿವೃತ್ತ ಐಎಎಸ್ ಅಧಿಕಾರಿ ಪ್ರಕಾಸ್ ಪರಪ್ಪ ರೇಸ್ ನಲ್ಲಿದ್ದರು. ಆದರೆ ನಿರೀಕ್ಷೆಯಂತೆ ಟಿಕೆಟ್ ಪುನಃ ಗದ್ದಿಗೌಡರ ಪಾಲಾಗಿದೆ.

ಪಿಸಿ ಗದ್ದಿಗೌಡರ ಅವರು ಅಜಾತಶತ್ರು ಅಂತ ಕರೆಯಬಹುದು ಬಿಜೆಪಿ ಅಷ್ಟೆ ಯಾಕೆ ಕಾಂಗ್ರೆಸ್ ಪಕ್ಷದಲ್ಲೂ ಅವರ ವಿರೋಧಿಗಳಿಲ್ಲ. ಎಲ್ಲರ ಜೊತೆ ಸ್ನೇಹದಿಂದ ಇರುವ ಗದ್ದಿಗೌಡರ ಕೆಲಸ ಮಾಡಿಲ್ಲ. ಆದರೆ ಒಂದೊಂದು ಅವಧಿಯಲ್ಲೂ ಒಂದೊಂದು ಅಲೆಯಿಂದ ಆರಿಸಿ ಬಂದಿದ್ದಾರೆ. ಅವರನ್ನು ಅದೃಷ್ಟವಂತ ರಾಜಕಾರಣಿ ಅಂತಾನೂ ಕರೆಯುತ್ತಾರೆ.

2004ರಿಂದ ನಿರಂತರವಾಗಿ ಬಾಗಲಕೋಟೆ ಸಂಸದರಾಗಿ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ ಗದ್ದಿಗೌಡರ. ಇವರು ಕ್ಷೇತ್ರಕ್ಕೆ ಯಾವುದೇ ಅಭಿವೃದ್ದಿ ಕೆಲಸ ಮಾಡಿಲ್ಲ ಎಂದು ಜನಮಾನಸದಲ್ಲಿ ಬೇರೂರಿದೆ. ಆದರೆ ಗದ್ದಿಗೌಡರ ಮಾತ್ರ ನಾನು ಮಾಡಿದ ಅಭಿವೃದ್ದಿ ಕಾರ್ಯ ನನ್ನ ರಿಪೋರ್ಟ್ ಕಾರ್ಡ್ ನೋಡಿಯೇ ಟಿಕೆಟ್ ಕೊಟ್ಟಿದ್ದಾರೆ. ನಾನು ಮಾಡಿದ ಅಭಿವೃದ್ದಿ ಕಾರ್ಯ ಜನರಿಗೆ ಗೊತ್ತಾಗಿಲ್ಲ. ಅವುಗಳನ್ನು ತಿಳಿಸಿ ಮತ್ತೆ ಜನರ ಬಳಿ ಹೋಗಿ ಮೋದಿ ಅವರ ಆಶೀರ್ವಾದ, ಯಡಿಯೂರಪ್ಪ ಹಾಗೂ ಪಕ್ಷದ ಆಸರೆಯಿಂದ ಮತ್ತೆ ಆಯ್ಕೆಯಾಗುವ ವಿಶ್ವಾಸವಿದೆ ಅಂತಾರೆ.

ಇನ್ನು ಕಾಂಗ್ರೆಸ್ ನಲ್ಲಿ ಟಿಕೆಟ್ ಫೈಟ್ ಜೋರಾಗಿದ್ದು ಕಳೆದ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿ ವೀಣಾ ಕಾಶಪ್ಪನವರ, ಮಾಜಿ ಸಚಿವ ಅಜಯಕುಮಾರ ಸರನಾಯಕ್, ಸಚಿವ ಶಿವಾನಂದ ಪಾಟಿಲ್ ಮಗಳು ಸಂಯುಕ್ತಾ ಪಾಟಿಲ್ ರೇಸ್ ನಲ್ಲಿ ಪ್ರಮುಖ ಸ್ಥಾನದಲ್ಲಿದ್ದಾರೆ. ಕಳೆದ ಬಾರಿ 1 ಲಕ್ಷ 68 ಸಾವಿರ ಮತಗಳಿಂದ ಸೋತಿದ್ದ ವೀಣಾ ಕಾಸಪ್ಪನವರ ಸೋತರೂ ಜನರ ಸಂಪರ್ಕ ಬಿಟ್ಟಿಲ್ಲ ಎಂಬುದು ಗಮನಾರ್ಹ.

ಐದು ವರ್ಷದಿಂದ ನಿರಂತರವಾಗಿ ಕ್ಷೇತ್ರಲ್ಲಿ ಓಡಾಡುತ್ತಲೇ ಇದ್ದಾರೆ. ಜನರ ಜೊತೆ ಬೆರೆತಿದ್ದಾರೆ. ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಪತ್ನಿ ವೀಣಾ ಕಾಶಪ್ಪನವರ ಪ್ರಮುಖ ಆಕಾಂಕ್ಷಿ. ಆದರೆ ಇವರಿಗೆ ಟಿಕೆಟ್​ ಕೊಡೋದಕ್ಕೆ ಸ್ಥಳೀಯ ಹಿರಿಯ ಕಾಂಗ್ರೆಸ್ಸಿಗರ ವಿರೋಧವಿದೆ. ವಿಜಯಾನಂದ ಕಾಶಪ್ಪನವರ ವರ್ತನೆ ಅವರ ಪತ್ನಿಗೆ ಹಿನ್ನಡೆಯಾಗುತ್ತಿದೆ.

ಇನ್ನು ಮಾಜಿ ಸಚಿವ ಅಜಯಕುಮಾರ ಸರನಾಯಕ ತೀವ್ರ ಪೈಪೋಟಿ ನಡೆಸಿದ್ದಾರೆ. ಈ ಮಧ್ಯೆ ಇದೀಗ ಜವಳಿ ಸಚಿವ ಶಿವಾನಂದ ಪಾಟಿಲ್ ಮಗಳು ಸಂಯುಕ್ತಾ ಪಾಟಿಲ್ ಮೇಲ್ಪಂಕ್ತಿಗೆ ಬಂದಿದ್ದಾರೆ. ಇನ್ನು ಈ ಬಗ್ಗೆ ಮಾತಾಡಿದ ಸಚಿವ ಶಿವಾನಂದ ಪಾಟಿಲ್ ಜನರ ಒತ್ತಾಯದ ಮೇರೆ ಮಗಳು ಅರ್ಜಿ ಸಲ್ಲಿಸಿದ್ದಾಳೆ. ಜಿಲ್ಲೆಯ ಎಲ್ಲ ಕಾಂಗ್ರೆಸ್ ನಾಯಕರ ಸಹಕಾರವಿದೆ. ಅಂತಿಮವಾಗಿ ಟಿಕೆಟ್ ಯಾರಿಗೇ ಕೊಟ್ಟರೂ ನಾನು ಪ್ರಚಾರ ಮಾಡುತ್ತೇನೆ ಅಂತಾರೆ.

ವೀಣಾ ಕಾಸಪ್ಪನವರ ಕೂಡ ಟಿಕೆಟ್ ಗಾಗಿ ಪ್ರಯತ್ನ ನಡೆಸಿದ್ದು ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದಾರೆ. ವೀಣಾ ಕಾಶಪ್ಪನವರ ಅಭಿಮಾನಿಗಳು ಮಾತ್ರ ಸೋತೂ ಐದು ವರ್ಷ ಬಿಟ್ಟೂಬಿಡದೆ ಕ್ಷೇತ್ರದಲ್ಲಿ ಜನರ ಜೊತೆ ನಿಂತಿದ್ದಾರೆ. ಎಲ್ಲೇ ಜನರ ಸಮಸ್ಯೆ ಕಂಡು ಬಂದರೂ ಸ್ಪಂದಿಸಿದ್ದಾರೆ. ಅವರಿಗೇನೆ ಟಿಕೆಟ್ ಕೊಡಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ಒಂದು ಕಡೆ ಬಿಜೆಪಿ ಅಭ್ಯರ್ಥಿ ಆಯ್ಕೆಯಾಗಿ ಅಖಾಡದಲ್ಲಿದ್ದರೆ, ಕಾಂಗ್ರೆಸ್ ಮಾತ್ರ ಇಂದಿಗೂ ಟಿಕೆಟ್ ಫೈನಲ್ ಮಾಡಿಲ್ಲ. ಮೂರು ಜನರು ತೀವ್ರ ಪೈಪೋಟಿಯಲ್ಲಿದ್ದು ಇದಕ್ಕೆ ಒಂದೆರಡು ದಿನದಲ್ಲಿ ಉತ್ತರ ಸಿಗುವ ನಿರೀಕ್ಷೆ ಇದೆ.

Published On - 1:02 pm, Sat, 16 March 24

ತಾಜಾ ಸುದ್ದಿ
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು