
ಬಾಗಲಕೋಟೆ , (ಫೆಬ್ರವರಿ 06): ಬಾಗಲಕೋಟೆ ಜನರು ಆಲಮಟ್ಟಿ ಜಲಾಶಯಕ್ಕೆ ಮನೆ ಮಠ ಆಸ್ತಿ ಪಾಸ್ತಿ ಹಿರಿಯರ ಕನಸು ಎಲ್ಲವನ್ನು ಕೃಷ್ಣಾರ್ಪಣೆ ಮಾಡಿ ಊರು ಬಿಟ್ಟವರು. ಆ ಸಂತ್ರಸ್ತರ ಪುನರ್ವಸತಿಗೆ ನಿರ್ಮಾಣವಾದ ನಗರವೇ ನವನಗರ. ಮನೆಗಳ ನಿರ್ಮಾಣಕ್ಕೆ ಅಂತ ಇರುವ ಜಾಗದಲ್ಲೂ ಮಸೀದಿ (mosque) ನಿರ್ಮಾಣ ಕಾಮಗಾರಿ ನಡೆಯುತ್ತಿವೆ. ಮೊದಲು ತಗಡಿನ ಶೆಡ್ ತರಹ ಕಟ್ಟಿ ಮುಂದೆ ಅವುಗಳನ್ನು ಮಸೀದಿಗಳನ್ನಾಗಿ ನಿರ್ಮಾಣ ಮಾಡಲಾಗುತ್ತದೆ. ಇದಕ್ಕೆ ರೊಚ್ಚಿಗೆದ್ದ ಸಾರ್ವಜನಿಕರು ಹಾಗೂ ಹಿಂದು ಕಾರ್ಯಕರ್ತರು ಹೋರಾಟದ ಹಾದಿ ಹಿಡಿದಿದ್ದಾರೆ.
ನವನಗರದಲ್ಲಿ ಮನೆಗಳಿಗೆ ಅಂತ ಸಂತ್ರಸ್ತರಿಗೆ ನೀಡಿದ ಜಾಗವನ್ನು ಹೆಚ್ಚಿನ ಹಣ ಕೊಟ್ಟು ಖರೀದಿಸಲಾಗತ್ತಿದ್ದು, ನಂತರ ಆ ಜಾಗದಲ್ಲಿ ಸದ್ದಿಲ್ಲದೇ ಮಸೀದಿ ಕಟ್ಟಡ ಕಾಮಗಾರಿಗಳು ಶುರುವಾಗ್ತಿವೆ.ಮೊದಲು ತಗಡಿನ ಶೆಡ್ ತರಹ ಕಟ್ಟಿ ಮುಂದೆ ಅವುಗಳನ್ನು ಮಸೀದಿಗಳನ್ನಾಗಿ ನಿರ್ಮಾಣ ಮಾಡಲಾಗುತ್ತದೆ.ಇದಕ್ಕೆ ರೊಚ್ಚಿಗೆದ್ದ ಸಾರ್ವಜನಿಕರು ಹಾಗೂ ಹಿಂದು ಕಾರ್ಯಕರ್ತರು ಹೋರಾಟದ ಹಾದಿ ಹಿಡಿದಿದ್ದಾರೆ.ಎಲ್ಲೆಂದರಲ್ಲಿ ಮಸೀದಿ ಕಟ್ಟಿಸಿ ಸ್ಪೀಕರ್ ಅಳವಡಿಸಿ ಆಜಾನ್ ಕೂಗುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ವೃದ್ದರ ಆರೋಗ್ಯದ ಮೇಲೆ ತೊಂದರೆಯಾಗುತ್ತದೆ.ಕೂಡಲೆ ಇಂತಹ ಕೃತ್ಯಕ್ಕೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಚಂಡಿಗಢ ಮಾದರಿಯಲ್ಲಿ ನವನಗರವನ್ನು ನಿರ್ಮಾಣ ಮಾಡಿ ಸಂತ್ರಸ್ತರಿಗೆ ನಿವೇಶನಗಳನ್ನ ಹಂಚಿಕೆ ಮಾಡಿದೆ.ಇನ್ನೂ ಹಲವು ಸಂತ್ರಸ್ತರಿಗೆ ನಿವೇಷನಗಳ ಹಂಚಿಕೆ ಆಗಬೇಕಿದೆ.ಇದರ ನಡುವೆಯೇ ಈಗ ಸೆಕ್ಟರ್ ಮಾದರಿಯಲ್ಲಿ ನಿರ್ಮಾಣಗೊಂಡಿರುವ ನವನಗರದಲ್ಲಿ ಬಾಗಲಕೋಟೆ ಪಟ್ಟಣದ ಅಭಿವೃದ್ಧಿ ಪ್ರಾಧಿಕಾರ ಅನಧಿಕೃತ ಮಸೀಸಿಗಳಿಗೆ ಸ್ಥಾಪನೆಗೆ ಪರವಾನಿಗೆ ನೀಡುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿ ಅಕ್ರೋಶ ಹೊರ ಹಾಕಿದ್ದಾರೆ.
ಈ ಸಂಬಮಧ ಬಿಟಿಡಿಎ ಕಚೇರಿಗೆ ಮುತ್ತಿಗೆ ಹಾಕಿ ಎರಡು ದಿನದ ಹಿಂದೆ ಪ್ರತಿಭಟನೆ ನಡೆಸಿದ್ದು, ರಾಜಕೀಯ ಒತ್ತಡಕ್ಕೆ ಮಣಿದು ನಿಯಮಾವಳಿಗಳನ್ನು ಗಾಳಿಗೆ ತೂರಿ ಅಧಿಕಾರಿಗಳು ಬೇಕಾಬಿಟ್ಟಿ ಪರವಾನಗಿ ನೀಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಇದೇ ರೀತಿ ನಿವೇಶನ ಜಾಗದಲ್ಲಿ ಹಳೆ ಬಾಗಲಕೋಟೆಯಲ್ಲೂ ಮಸೀದಿ ನಿರ್ಮಾಣ ಹಿನ್ನೆಲೆ ಕಳೆದ ವರ್ಷ ಜುಲೈ ನಲ್ಲಿ ನಗರಸಭೆ ಎದುರು ಬೃಹತ್ ಪ್ರತಿಭಟನೆ ನಡೆಸಲಾಗಿತ್ತು.ಈಗ ಬಿಟಿಡಿಎ ಎದುರು ನಡೆಸಲಾಗಿದೆ.ಇಷ್ಟಾದರೂ ಅಲ್ಲಲ್ಲಿ ಮಸೀದಿ ನಿರ್ಮಾಣ ಕಾರ್ಯ ನಡೆಯುತ್ತಲೇ ಇವೆ.
ಈ ಬಗ್ಗೆ ಮಾತಾಡಿದ ಬಾಗಲಕೋಟೆಯ ಮಾಜಿ ಶಾಸಕ ವೀರಣ್ಣ ಚರಂತಿಮಠ, ಇದಕ್ಕೆ ಬೇರೆ ಕಡೆಯಿಂದ ಫಂಡಿಂಗ್ ಆಗುತ್ತಿದೆ.ಫಂಡಿಂಗ್ ಆಗುತ್ತಿರೋದರಿಂದಲೇ ಮನೆ ಜಾಗ ಖರೀದಿ ಮಾಡಿ ಮಸೀದಿ ಕಟ್ಟುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಬಿಟಿಡಿಎ ಆರ್ ಒ ಪ್ರತಿಕ್ರಿಯಿಸಿದ್ದು, ಒಂದೊಂದು ಸೆಕ್ಟರ್ ನಲ್ಲಿ ಧಾರ್ಮಿಕ ಉದ್ದೇಶಕ್ಕಾಗಿ ಕಾರ್ನರ್ ಸೈಟ್ ಬಿಡಲಾಗಿದೆ. ಹಿಂದೆ ಬಿಟಿಡಿಎ ಆಡಳಿತ ಮಂಡಳಿ ನಿರ್ಧಾರ ಕೈಗೊಂಡಿದೆ.ನಿವೇಶನಕ್ಕಾಗಿ ನೀಡಿದ ಜಾಗದಲ್ಲಿ ಮಸೀದಿ ಕಟ್ಟಡ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ಕಟ್ಟಡ ಅನುಮತಿ ಪಡೆದು ಕಟ್ಟಬೇಕು.ಇಂಜಿನಿಯರಿಂಗ್ ಸೆಕ್ಷನ್ ಅಧಿಕಾರಿಗಳನ್ನು ಕಳಿಸಿ ಪರಿಶೀಲನೆ ನಡೆಸಿ ಬಿಟಿಡಿಎ ಮುಖ್ಯ ಇಂಜಿನಿಯರ್ ಅವರಿಗೆ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.
ಒಟ್ಟಾರೆ ಅನಧಿಕೃತ ಮಸೀದಿಗಳ ತೆರವುಗೊಳಿಸಲು ಸ್ಥಳೀಯರು ಪಟ್ಟು ಹಿಡಿದಿದ್ದು,ಕ್ರಮ ಜರುಗಿಸದಿದ್ದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಮುಂದೆ ಇದು ಯಾವ ಸ್ವರೂಪ ಪಡೆದುಕೊಳ್ಳಲಿದೆ ಎನ್ನುವುದನ್ನು ಕಾದುನೋಡಬೇಕಿದೆ.