AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆ: ಸಿದ್ದರಾಮಯ್ಯ ಅಭಿಮಾನಿಗೆ ಹೆಚ್​ವೈ ಮೇಟಿ ಕಪಾಳಮೋಕ್ಷ!

ತಳ್ಳಾಟ ವೇಳೆ ಕಾಲು ತುಳಿದಿದ್ದಕ್ಕೆ ಹೆಚ್.ವೈ. ಮೇಟಿ ಕಪಾಳಮೋಕ್ಷ ಮಾಡಿದ್ದಾರೆ. ಶಿರೂರಿನ ಸಿದ್ದು ಎಂಬ ವ್ಯಕ್ತಿಗೆ ಹೆಚ್.ವೈ. ಮೇಟಿ ಕಪಾಳಮೋಕ್ಷ ಮಾಡಿದ್ದಾರೆ. ಬಾದಾಮಿಯಲ್ಲಿ ಕಲ್ಯಾಣ ಮಂಪಟ ಉದ್ಘಾಟನೆ ವೇಳೆ ಘಟನೆ ನಡೆದಿದೆ.

ಬಾಗಲಕೋಟೆ: ಸಿದ್ದರಾಮಯ್ಯ ಅಭಿಮಾನಿಗೆ ಹೆಚ್​ವೈ ಮೇಟಿ ಕಪಾಳಮೋಕ್ಷ!
ಹೆಚ್​ವೈ ಮೇಟಿ
TV9 Web
| Updated By: ganapathi bhat|

Updated on:Nov 13, 2021 | 6:37 PM

Share

ಬಾಗಲಕೋಟೆ: ಸಿದ್ದರಾಮಯ್ಯ ಅಭಿಮಾನಿಗೆ ಹೆಚ್.ವೈ. ಮೇಟಿ ಕಪಾಳಮೋಕ್ಷ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿಯ ಕಾರ್ಯಕ್ರಮದಲ್ಲಿ ನಡೆದಿದೆ. ಸಿದ್ದರಾಮಯ್ಯರನ್ನು ನೋಡುವುದಕ್ಕೆ ಅಭಿಮಾನಿಗಳು ಬಂದಿದ್ದರು. ನೂಕುನುಗ್ಗಲು ವೇಳೆ ಹೆಚ್.ವೈ. ಮೇಟಿಯನ್ನ ಜನರು ತಳ್ಳಾಡಿದ್ದಾರೆ. ತಳ್ಳಾಟ ವೇಳೆ ಕಾಲು ತುಳಿದಿದ್ದಕ್ಕೆ ಹೆಚ್.ವೈ. ಮೇಟಿ ಕಪಾಳಮೋಕ್ಷ ಮಾಡಿದ್ದಾರೆ. ಶಿರೂರಿನ ಸಿದ್ದು ಎಂಬ ವ್ಯಕ್ತಿಗೆ ಹೆಚ್.ವೈ. ಮೇಟಿ ಕಪಾಳಮೋಕ್ಷ ಮಾಡಿದ್ದಾರೆ. ಬಾದಾಮಿಯಲ್ಲಿ ಕಲ್ಯಾಣ ಮಂಪಟ ಉದ್ಘಾಟನೆ ವೇಳೆ ಘಟನೆ ನಡೆದಿದೆ.

ಬಾಗಲಕೋಟೆ: ಸಿದ್ದರಾಮಯ್ಯಗೆ ವಿವಿಧ ಮಠಾಧೀಶರಿಂದ ಬಹುಪರಾಕ್ ಸಿದ್ದರಾಮಯ್ಯ ಮತ್ತೆ ಸಿಎಂ ಆಗಲೆಂದು ಶ್ರೀಗಳು ಹರಸಿದ್ದಾರೆ. ಸಿದ್ದರಾಮಯ್ಯಗೆ ವಿವಿಧ ಮಠಾಧೀಶರು ಬಹುಪರಾಕ್ ಹಾಕಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಘಟನೆ ನಡೆದಿದೆ. ಖಾಸಗಿ ಕಾರ್ಯಕ್ರಮದಲ್ಲಿ ಶ್ರೀಗಳು ಹಾಡಿ ಹೊಗಳಿದ್ದಾರೆ. ಮೂರುಸಾವಿರ ಮಠದ ಗುರುಸಿದ್ದ ರಾಜಯೋಗಿಂದ್ರಶ್ರೀ, ಹುನಗುಂದ ತಾಲೂಕಿನ ಸಿದ್ದನಕೊಳ್ಳದ ಶಿವಕುಮಾರಶ್ರೀ, ಕೊಲ್ಹಾರದ ದಿಗಂಬರೇಶ್ವರ ಮಠದ ಕಲ್ಲಿನಾಥಶ್ರೀ ಹೀಗೆ ಹಾರೈಸಿದ್ದಾರೆ. ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕೆಂದು ಶುಭಹಾರೈಕೆ ಕೋರಿದ್ದಾರೆ.

ಈಗಾಗಲೇ ‌ಮಾತಾಡಿದ ಎಲ್ಲ ಸ್ವಾಮೀಜಿಗಳು ನನಗೆ ಶುಭವಾಗಲಿ ಅಂತ ಹಾರೈಸಿದ್ದಾರೆ. ಆಶೀರ್ವಾದ ಮಾಡಿದ್ಧಾರೆ. ಅಭಿಮಾನದ ಮಾತುಗಳನ್ನಾಡಿದ್ದಾರೆ. ಎಲ್ಲ ಸ್ವಾಮೀಜಿಗಳಿಗೂ ಕೂಡ ನಾನು ಋಣಿಯಾಗಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಬಿಟ್​ ಕಾಯಿನ್ ಕೇಸ್​ನಲ್ಲಿ ಪ್ರಭಾವಿಗಳಿಬ್ಬರಿರುವ ಮಾಹಿತಿ ಲಭ್ಯವಾಗಿದೆ ಎಂದು ಬಾದಾಮಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಇಬ್ಬರು ಪ್ರಭಾವಿ ನಾಯಕರಿದ್ದಾರೆ ಎಂಬ ಮಾಹಿತಿ ಇದೆ. ತನಿಖೆ ಮಾಡುವ ಅಧಿಕಾರ ಇರೋದು ಮುಖ್ಯಮಂತ್ರಿಗೆ. ಹೆಸರು ಬಹಿರಂಗಪಡಿಸಿ ಎಂದು ಮುಖ್ಯಮಂತ್ರಿಗೆ ಹೇಳಿದೆ. ಪೊಲೀಸರು ಶ್ರೀಕಿಯಿಂದ ಬಿಟ್ ಕಾಯಿನ್ ವಶಕ್ಕೆ ಪಡೆದಿದ್ದಾರೆ. ಬಿಟ್​ ಕಾಯಿನ್​​ ರಿಕವರಿ ಮಾಡಿದ್ದಾರೆ ಎಂದು ಹೇಳುತ್ತಾರೆ. ವಶಕ್ಕೆ ಪಡೆದ ಬಿಟ್ ಕಾಯಿನ್ ಯಾರ ಹತ್ತಿರ ಹೋಗಿದೆ. ಆ ಬಿಟ್​ ಕಾಯಿನ್​​ ಯಾರಿಗೆ ಟ್ರಾನ್ಸ್​​ಫರ್ ಆಗಿದೆ? ಪೊಲೀಸರಿಗೆ ಹೋಗಿದ್ಯಾ, ರಾಜಕಾರಣಿಗಳಿಗೆ ಹೋಗಿದ್ಯಾ? ಜಪ್ತಿ ಮಾಡಿದ್ದಾರೆ ಅಂತಾರೆ, ಹಾಗಾದ್ರೆ ಹೆಸರು ಹೇಳಬೇಕಲ್ಲ. ಇದರಲ್ಲಿ ಕಾಂಗ್ರೆಸ್​ನವರಿದ್ದಾರೆ ಎಂದು ಸಿಎಂ ಹೇಳುತ್ತಾರೆ. ಕಾಂಗ್ರೆಸ್​​ನವರ ಹೆಸರು ಹೇಳಿ, ಅವರನ್ನು ಅರೆಸ್ಟ್ ಮಾಡಿ. ಯಾವ ಪಕ್ಷದವರಿದ್ದಾರೆ ಹೇಳಬೇಕಲ್ಲಾ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ: ‘ಪ್ರಶಾಂತ್​ ಸಂಬರಗಿ ನೋಡಿದ್ರೆ ಮೇಟಿ ನೆನಪಾಗ್ತಾರೆ’; ಬಿಗ್​ ಬಾಸ್​ನಿಂದ ಹೊರಬಂದ ಚಂದ್ರಚೂಡ್​ ಹೋಲಿಕೆ

ಇದನ್ನೂ ಓದಿ: ಮಾಜಿ ಸಚಿವ ಮೇಟಿ ಪ್ರಕರಣವನ್ನೇ ಮುಚ್ಚಿ ಹಾಕಿದವರಿಂದ ನೈತಿಕತೆ ಕಲಿಯಬೇಕಿಲ್ಲ.. ಕಾಂಗ್ರೆಸ್ ನಾಯಕರಿಗೆ ಬೊಮ್ಮಾಯಿ ತಿರುಗೇಟು

Published On - 5:46 pm, Sat, 13 November 21