ಕರ್ನಾಟಕದಲ್ಲೂ ಇದೆ ಜಗನಾಥ್​ ಮಂದಿರ, ಪುರಿಯಲ್ಲಿ ಜರುಗುವ ರಥಯಾತ್ರೆ ದಿನವೇ ಇಲ್ಲೂ ರಥೋತ್ಸವ

ವಿಶ್ವ ವಿಖ್ಯಾತ ಪುರಿ ಜಗನ್ನಾಥ ರಥೋತ್ಸವ ಇಂದಿನಿಂದ(ಜುಲೈ 7) ಶುರುವಾಗಲಿದೆ. ಒಡಿಶಾ ರಾಜ್ಯ ಮಾತ್ರವಲ್ಲ ಇಡೀ ದೇಶವೇ ಕಾತುರದಿಂದ ಎದುರು ನೋಡುತ್ತಿರುವ ಪುರಿ ಜಗನ್ನಾಥ ರಥಯಾತ್ರೆ ಇಂದು (ಜುಲೈ 07) ಆರಂಭವಾಗಿದ್ದು, ರಥೋತ್ಸವವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತಾದಿಗಳು ಪುರಿ ಪ್ರವಾಸ ಕೈಗೊಂಡಿದ್ದಾರೆ. ಇನ್ನು ಕರ್ನಾಟಕದಲ್ಲೂ ಸಹ ಜಗನ್ನಾಥ್ ಮಂದಿರ ಇದೆ. ವಿಶೇಷ ಏನಂದ್ರೆ ಪೂರಿಯಲ್ಲಿ ನಡೆಯುವ ರಥಯಾತ್ರೆ ದಿನವೇ ಇಲ್ಲೂ ಸಹ ರಥೋತ್ಸವ ಜರುಗುತ್ತದೆ. ಹಾಗಾದ್ರೆ, ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ ಈ ಜಗನ್ನಾಥ್ ಮಂದಿರ? ಹಿನ್ನೆಲೆ ಏನು? ಎನ್ನುವ ವಿವರ ಇಲ್ಲಿದೆ.

ಕರ್ನಾಟಕದಲ್ಲೂ ಇದೆ ಜಗನಾಥ್​ ಮಂದಿರ, ಪುರಿಯಲ್ಲಿ ಜರುಗುವ ರಥಯಾತ್ರೆ ದಿನವೇ ಇಲ್ಲೂ ರಥೋತ್ಸವ
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ರಮೇಶ್ ಬಿ. ಜವಳಗೇರಾ

Updated on: Jul 07, 2024 | 1:28 PM

ಬಾಗಲಕೋಟೆ, (ಜುಲೈ 97): ನಮ್ಮ ದೇಶದಲ್ಲಿ ಧಾರ್ಮಿಕ ಕೇಂದ್ರಗಳಿಗೆ ಏನು ಕಡಿಮೆಯಿಲ್ಲ.ದೇಶದ ಮೂಲೆ ಮೂಲೆಯಲ್ಲೂ ಪವಿತ್ರ ತೀರ್ಥ ಕ್ಷೇತ್ರಗಳಿವೆ. ಕಾಶಿ, ಅಯೋದ್ಯಾ,ಕಂಚಿ,ಕೇದಾರ, ಧರ್ಮಸ್ಥಳ, ತಿರುಪತಿ ,ಇವುಗಳಲ್ಲಿ ಪೂರಿ ಜಗನ್ನಾಥ ಮಂದಿರ ಕೂಡ ಪ್ರಸಿದ್ದವಾದ ಧಾರ್ಮಿಕ ಕ್ಷೇತ್ರ. ಇಂದು (ಜುಲೈ 07) ಓಡಿಶಾದ ಪುರಿಯಲ್ಲಿ ಜಗನ್ನಾಥ ರಥೋತ್ಸವ ನಡೆಯುತ್ತದೆ. ಲಕ್ಷಾಂತರ ಭಕ್ತರು ಅಲ್ಲಿ ಭಾಗಿಯಾಗ್ತಾರೆ. ಆದರೆ ಅದೇ ಜಗನ್ನಾಥ ಮಂದಿರ ಕರ್ನಾಟಕ ರಾಜ್ಯದಲ್ಲೂ ಸಹ ಇದೆ. ದೇಶದಲ್ಲಿ ಜಗನ್ನಾಥ ಮಂದಿರ ಇರೋದು ಪುರಿಯಲ್ಲಿ,ನಂತರ ಅಹಮದಾಬಾದ್ ನಲ್ಲಿ ಅದು ಬಿಟ್ಟರೆ ಕರ್ನಾಟಕದ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ಪಟ್ಟಣದಲ್ಲಿ ಎಂಬುದು ವಿಶೇಷ. ಇದು ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ.ಇನ್ನೊಂದು ವಿಶೇಷ ಅಂದರೆ ಪುರಿಯಲ್ಲಿ ಜಗನ್ನಾಥನ ರಥೋತ್ಸವ ದಿನವೇ ಗುಳೇದಗುಡ್ಡ ಪಟ್ಟಣದಲ್ಲಿರುವ ಜಗನ್ನಾಥನ ರಥೋತ್ಸವ ಅದ್ಧೂರಿಯಾಗಿ ನಡೆಯುತ್ತದೆ.

ಗುಳೇದಗುಡ್ಡದ ಅರಳಿಕಟ್ಟಿಯಲ್ಲಿ ಜಗನ್ನಾಥ ದೇಗುಲವಿದ್ದು, ಪೂರಿಯಲ್ಲಿ ನಡೆಯುವ ರಥಯಾತ್ರೆ ದಿನವೇ ಗುಳೇದಗುಡ್ಡದಲ್ಲೂ ಸಂಭ್ರಮದಿಂದ ರಥಯಾತ್ರೆ ನಡೆಯುತ್ತದೆ.  ಅದರಂತೆ ಇಂದು(ಜುಲೈ 07) ಪಟ್ಟಣದ ಪುರಸಭೆ, ಸರಾಫ್ ಬಜಾರ್, ಕಂಠಿಪೇಟೆ, ಚೌ ಬಜಾರ್ ಸೇರಿ ಪ್ರಮುಖ ಬೀದಿಗಳ ಮುಖಾಂತರ ಜಗದೀಶ ಮಂದಿರವರೆಗೂ ಜಗನ್ನಾಥ ಮೂರ್ತಿ ಇದ್ದ ರಥೋತ್ಸವ ಜರುಗಿತು.

ಇದನ್ನೂ ಓದಿ: Puri Janannath Rath Yathra 2024: ಪುರಿ ಜಗನ್ನಾಥನ ರಥಯಾತ್ರೆ ಸಂಭ್ರಮ; ನಿಮ್ಮ ಪ್ರೀತಿಪಾತ್ರರಿಗೆ ಈ ಶುಭ ಸಂದೇಶ ಕಳುಹಿಸಿ

ಹೊರ ರಾಜ್ಯದಿಂದಲೂ ಬಂದ ಭಕ್ತರು

ಜಗನ್ನಾಥ ರಥಯಾತ್ರೆ ಹಿನ್ನಲೆಯಲ್ಲಿ ಗುಳೇದಗುಡ್ಡ ಪಟ್ಟಣಕ್ಕೆ ಕರ್ನಾಟಕ ಮಾತ್ರವಲ್ಲದೇ ಹೊರ  ರಾಜ್ಯದಿಂದ ಭಕ್ತರು ಹರಿದು ಬರುತ್ತಾರೆ. ರಥಯಾತ್ರೆ ಮೂಲಕ ಜಗನ್ನಾಥ ಜಗತ್ ಭ್ರಮಣ ಮಾಡುತ್ತಾರೆ. ಪುಣೆ, ಮುಂಬೈ, ಸೊಲ್ಲಾಪುರ, ಲಾತೂರ್ ಸೇರಿ ನಾನಾ ಮೂಲೆಗಳಿಂದ ಬಂದು ಜಗನ್ನಾಥ ರಥೋತ್ಸವದಲ್ಲಿ ಪಾಲ್ಗೊಂಡಿದ್ದು,  12 ಅಡಿಯ ಹೂಗಳಿಂದ ಅಲಂಕಾರಗೊಂಡಿದ್ದ ರಥ ಎಳೆದು ಜಗನ್ನಾಥನ ಕೃಪೆಗೆ ಪಾತ್ರರಾದರು. ರಥೋತ್ಸವಕ್ಕೂ ಮುನ್ನ ಬೆಳಿಗ್ಗೆ ಜಗನ್ನಾಥ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯ್ತು.  ಅಭಿಷೇಕ ,ತುಳಸಿ ಅರ್ಚನೆ,ಕುಂಕುಮಾರ್ಚನೆ ನೆರವೇರಿಸಿ ಬಳಿಕ ಜಗನ್ನಾಥ ಆಷ್ಟಕ ಮಂತ್ರ ಜಪ ಮಾಡುತ್ತಾ ರಥ ಎಳೆಯಲಾಯಿತು.

ಅಟಕಾ ಪೂಜೆಗುಳೇದಗುಡ್ಡದಲ್ಲೇ ಮಾತ್ರ, ಏನಿದು?

ಇನ್ನು ಬೆಳಗ್ಗೆ ರಥೋತ್ಸವದ ಜರುಗಿದ ಬಳಿಕ ಸಂಜೆ ಜಗನ್ನಾಥನಿಗೆ ಅಟಕಾ ಪೂಜೆ ಮಾಡಲಾಗುತ್ತದೆ. ಇದು ದೇಶದ ಯಾವ ಜಗನ್ನಾಥ ಮಂದಿರದಲ್ಲಿ ನಡೆಯಲ್ಲ. ಆದ್ರೆ, ಅಟಕಾ ಪೂಜೆ ಗುಳೇದಗುಡ್ಡದಲ್ಲಿ ಮಾಡುವುದು ಇನ್ನೊಂದು ವಿಶೇಷ. ಹೌದು.. ಜಗನ್ನಾಥನಿಗೆ ಅಟಕಾ ಪೂಜೆ ಬಹಳ‌ ಮಹತ್ವ ಮತ್ತು ವಿಶೇಷವಾಗಿದೆ. ಜಗನ್ನಾಥನಿಗೆ ಅನ್ನ ಪ್ರಸಾದ ನೈವೇದ್ಯ ಮಾಡಲಾಗುತ್ತದೆ. ಮಣ್ಣನಿನ ಮಡಿಕೆಯಲ್ಲಿ ಅನ್ನದ ನೈವೇದ್ಯ ಮಾಡಲಾಗುತ್ತದೆ. ಪವಾಡ ಅಂದರೆ ಮಣ್ಣಿನ ಮಡಿಕೆ ದೇವರಿಗೆ ನೈವೇದ್ಯ ಮಾಡಿದ ನಂತರ ಕೆಲ ಹೊತ್ತಲ್ಲಿ ನಾಲ್ಕು ಭಾಗಗಳಾಗುತ್ತದೆ. ಇದು ಜಗನ್ನಾಥನ ಮಹಿಮೆ.

ಗುಳೇದಗುಡ್ಡ ಜಗನ್ನಾಥ ಮಂದಿರ ರಥಯಾತ್ರೆ ಹಿನ್ನೆಲೆ

ಗುಳೇದಗುಡ್ಡ ಪಟ್ಟಣ ಒಂದು ವ್ಯಾಪಾರ ಕೇಂದ್ರವಾಗಿದೆ. ಇಲ್ಲಿ ಹೆಚ್ಚು ಜನ ಮೆಹರವಾಡೆ ಸಮುದಾಯದ ಜನರಿದ್ದಾರೆ. ಮೆಹರವಾಡೆ ಜನರು ವ್ಯಾಪಾರ ವಹಿವಾಟಿನಲ್ಲಿ ಹೆಚ್ಚಾಗಿ ತೊಡಗೋದು ಎಲ್ಲರಿಗೂ ಗೊತ್ತಿರುವ ವಿಚಾರ.ಇವರೆಲ್ಲರೂ ಜಗನ್ನಾಥನ ಭಕ್ತರು.ಆದರೆ ಇವರಿಗೆ ತಮ್ಮ ವ್ಯಾಪಾರ ವಹಿವಾಟಿನ‌ಲ್ಲಿ ಪೂರಿಗೆ ಹೋಗೋದು ಬಹಳ ದೂರ ಹಾಗೂ ಹೆಚ್ಚು ಸಮಯ ಹಿಡಿಯುತ್ತದೆ. ಇದರಿಂದ ಇಲ್ಲೇ ಪೂರಿ ಜಗನ್ನಾಥನ ಮಂದಿರ ನಿರ್ಮಾಣ ಮಾಡೋಣ ಎಂದು ಸಂಕಲ್ಪ ಮಾಡಿದರು. ಆ ಪ್ರಕಾರ ಎಲ್ಲರೂ ಸೇರಿ 120 ವರ್ಷದ ಹಿಂದೆಯೇ ಪೂರಿ ಜಗನ್ನಾಥ ಮಂದಿರ ನಿರ್ಮಾಣ ಮಾಡಿದ್ದಾರೆ. ಅಂದಿನಿಂದ ಓಡಿಶಾದ ಪುರಿಯಲ್ಲಿ ನಡೆಯುವ ರಥೋತ್ಸವದಂದೇ ಇಲ್ಲಿ ಸಹ ಜನನಾಥನ ರಥೋತ್ಸವ ಜರುಗುತ್ತದೆ. ಪ್ರತಿ ವರ್ಷ ಜಾತ್ರೆ ರಥೋತ್ಸವವನ್ನು ಪುರಿಯಲ್ಲಿ ರಥೋತ್ಸವ ದಿನವೇ ಮಾಡುತ್ತಾ ಬಂದಿದ್ದಾರೆ.

ರಥೋತ್ಸವದ ಉಸ್ತುವಾರಿಗಳಲ್ಲಿ ಒಬ್ಬರಾದ ಗೋಪಾಲ ಭಟ್ಟಡ್ ಈ ಬಗ್ಗೆ ಮಾತಾಡಿದ್ದು, “ಇಲ್ಲಿ ಎಲ್ಲ ಜಾತಿ ಜನಾಂಗದ ಭಕ್ತರು ಭಾಗಿಯಾಗ್ತಾರೆ.ಎಲ್ಲರೂ ಒಟ್ಟಾಗಿ ರಥೋತ್ಸವ ನೆರವೇರಿಸುತ್ತಾರೆ.ಇದು 12 ವರ್ಷದಿಂದ ನಡೆಯುತ್ತಾ ಬಂದಿದೆ .ಭಗವಂತ ಜಗನ್ನಾಥ ಎಲ್ಲರಿಗೂ ಒಳಿತು ಮಾಡಲಿ ಎಂದು ವಿವಿಧ ಪೂಜೆ ಮಾಡುತ್ತೇವೆ ಎಂದರು

ಭಕ್ತೆ ಪೂಜಾ ಎಂಬವರು ಪ್ರತಿಕ್ರಿಯಿಸಿ, “ಇಂದು ಜಗನ್ನಾಥ ರಥೋತ್ಸವ ಹಿನ್ನೆಲೆ ನಮ್ಮ ಎಲ್ಲ ಬಂದು ಬಾಂದವರು ಗುಳೇದಗುಡ್ಡ ಬರ್ತಾರೆ ಎಲ್ಲರೂ ಜಗನ್ನಾಥ ರಥೋತ್ಸವದಲ್ಲಿ ಭಾಗಿಯಾಗುತ್ತೇವೆ.ಪೂಜೆ ಅಭಿಷೇಕ ಮಾಡಿ ಮಂತ್ರಪಟಣೆ ಮಾಡಿ‌ ದೇವರ ಜಪ‌‌ ಮಾಡುತ್ತೇವೆ ಹೇಳಿದರು.

ಒಟ್ಟಾರೆ ಪೂರಿ ಜಗನ್ನಾಥನ ದರ್ಶನಕ್ಕೆ‌ ರಥಯಾತ್ರೆಗೆ ಪೂರಿಗೆ ಹೋಗಬೇಕೆಂದಿಲ್ಲ.ಗುಳೇದಗುಡ್ಡ ಪಟ್ಟಣದಲ್ಲೂ ಆ ಸಂಭ್ರವನ್ನು ಕಾಣಬಹುದಾಗಿದೆ.

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ