ಹೊನಲು ಬೆಳಕಿನಲ್ಲಿ ರಂಗೇರಿದ ಟಗರು ಫೈಟ್: ಪ್ರೇಕ್ಷಕರಿಗೆ ಸಖತ್ ಕಿಕ್
ಬಾಗಲಕೋಟೆ: ರಂಗೇರಿರುವ ಅಖಾಡ. ಆ ಅಖಾಡದಲ್ಲಿ ಗೆಲವು ನಂದೇ ಅಂತ ಗುದ್ದಾಡುತ್ತಿರುವ ಟಗರುಗಳು. ಡಿಕ್ಕಿ ಹೊಡೆಯುತ್ತಾ ಎದುರಾಳಿಯನ್ನು ಮಣ್ಣು ಮುಕ್ಕಿಸಲು ಹೋರಾಟ. ಕೊಬ್ಬಿದ ಟಗರುಗಳ ಅಬ್ಬರದ ಕಾಳಗ ಕಂಡು ಸಿಳ್ಳೇ, ಕೇಕೆ ಹಾಕಿ ಸಂಭ್ರಮಿಸುತ್ತಿರುವ ಪ್ರೇಕ್ಷಕರು. ಬಾಗಲಕೋಟೆ ಜಿಲ್ಲೆ ಬೀಳಗಿ ಪಟ್ಟಣದ ಸಿದ್ದೇಶ್ವರ ಪ್ರೌಢಶಾಲೆ ಆವರಣದಲ್ಲಿ ಸಂಗೊಳ್ಳಿ ರಾಯಣ್ಣ ಗೆಳೆಯರ ಬಳಗದಿಂದ ರಾಯಣ್ಣ ಹುತಾತ್ಮ ದಿನಾಚರಣೆ ಪ್ರಯುಕ್ತ ರಾಷ್ಟ್ರಮಟ್ಟದ ಟಗರಿನ ಕಾಳಗ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಮಹಾರಾಷ್ಟ್ರ, ಆಂಧ್ರ, ತಮಿಳುನಾಡು ಸೇರಿದಂತೆ ರಾಜ್ಯ ಮತ್ತು ಪರರಾಜ್ಯದಿಂದ 200ಕ್ಕೂ ಹೆಚ್ಚು […]
ಬಾಗಲಕೋಟೆ: ರಂಗೇರಿರುವ ಅಖಾಡ. ಆ ಅಖಾಡದಲ್ಲಿ ಗೆಲವು ನಂದೇ ಅಂತ ಗುದ್ದಾಡುತ್ತಿರುವ ಟಗರುಗಳು. ಡಿಕ್ಕಿ ಹೊಡೆಯುತ್ತಾ ಎದುರಾಳಿಯನ್ನು ಮಣ್ಣು ಮುಕ್ಕಿಸಲು ಹೋರಾಟ. ಕೊಬ್ಬಿದ ಟಗರುಗಳ ಅಬ್ಬರದ ಕಾಳಗ ಕಂಡು ಸಿಳ್ಳೇ, ಕೇಕೆ ಹಾಕಿ ಸಂಭ್ರಮಿಸುತ್ತಿರುವ ಪ್ರೇಕ್ಷಕರು.
ಬಾಗಲಕೋಟೆ ಜಿಲ್ಲೆ ಬೀಳಗಿ ಪಟ್ಟಣದ ಸಿದ್ದೇಶ್ವರ ಪ್ರೌಢಶಾಲೆ ಆವರಣದಲ್ಲಿ ಸಂಗೊಳ್ಳಿ ರಾಯಣ್ಣ ಗೆಳೆಯರ ಬಳಗದಿಂದ ರಾಯಣ್ಣ ಹುತಾತ್ಮ ದಿನಾಚರಣೆ ಪ್ರಯುಕ್ತ ರಾಷ್ಟ್ರಮಟ್ಟದ ಟಗರಿನ ಕಾಳಗ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಮಹಾರಾಷ್ಟ್ರ, ಆಂಧ್ರ, ತಮಿಳುನಾಡು ಸೇರಿದಂತೆ ರಾಜ್ಯ ಮತ್ತು ಪರರಾಜ್ಯದಿಂದ 200ಕ್ಕೂ ಹೆಚ್ಚು ಟಗರುಗಳು ಭಾಗಿಯಾಗಿದ್ದವು. ಹಾಲು ಹಲ್ಲು, ನಾಲ್ಕು ಹಲ್ಲು, ಆರು ಹಲ್ಲು, ಎಂಟು ಹಲ್ಲು ಎಂಬಂತೆ ವಿವಿಧ ವಿಭಾಗಗಳಲ್ಲಿ ನಡೆದ ಟಗರಿನ ಕಾಳಗ ನೋಡುಗರನ್ನು ರೋಮಾಂಚನಗೊಳಿಸಿತು. ಅದಕ್ಕೆ ಅನುಗುಣವಾಗಿ ಬಹುಮಾನ ನೀಡಲಾಯ್ತು.
ಹೊನಲು ಬೆಳಕಿನಲ್ಲಿ ಟಗರು ಕಾಳಗ: ಇನ್ನು ಟಗರಿನ ಕಾಳಗವನ್ನು ಹೊನಲು ಬೆಳಕಿನಲ್ಲಿ ಆಯೋಜಿಸಿದ್ದು ವಿಶೇಷವಾಗಿತ್ತು. ಟಗರಿನ ಕಾಳಗದ ಮೈದಾನದ ಸುತ್ತಲೂ ಲೈಟಿಂಗ್ನಲ್ಲಿ ನಡೆದ ರೋಚಕ ಗುದ್ದಾಟ ನೋಡುಗರನ್ನು ಸೆಳೆಯಿತು. ಬಲಭೀಮರಂತೆ ದಷ್ಟಪುಷ್ಟವಾಗಿ ಸೊಕ್ಕಿನಿಂದ ಕೊಬ್ಬಿದ ಟಗರುಗಳ ಕಾಳಗ ಜಗಜಟ್ಟಿಗಳ ಸೆಣಸಾಟವನ್ನು ನೆನಪಿಸುವಂತಿತ್ತು. ಈ ಟಗರು ಕಾಳಗ ನೋಡಲು ಜಿಲ್ಲೆ ಮಾತ್ರವಲ್ಲದೆ ಬೇರೆ ಜಿಲ್ಲೆಗಳಿಂದ ಯುವಕರು,ರೈತರು ಆಗಮಿಸಿ ಎಂಜಾಯ್ ಮಾಡಿದ್ರು.
Published On - 9:01 am, Thu, 30 January 20