ಬಾಗಲಕೋಟೆಯಲ್ಲಿ ಸಿದ್ಧವಾಗಿದೆ ವಿಶೇಷ ಎಲೆಕ್ಟ್ರಿಕ್ ಬೈಕ್; ಹೇಗಿದೆ ನೋಡಿ
ಲಾಕ್ಡೌನ್ನಲ್ಲಿ ಉದ್ಯೋಗ ಇಲ್ಲದೆ ಸುಮ್ಮನಿದ್ದ ಪ್ರಿಂಟಿಂಗ್ ಪ್ರೆಸ್ ಮಾಲೀಕ ಮಂಜುನಾಥ ಜಲಗೇರಿ ಮತ್ತು ಎಲೆಕ್ಟ್ರಿಷಿಯನ್ ಮಹಮ್ಮದ್ ಇಕ್ಬಾಲ್ ಸೇರಿ ವಿಶೇಷ ಎಲೆಕ್ಟ್ರಿಕ್ ಬೈಕ್ ಸಿದ್ಧಪಡಿಸಿದ್ದಾರೆ.
ಬಾಗಲಕೋಟೆ: ಕೊರೊನಾ ಲಾಕ್ಡೌನ್ನಿಂದ ಅದೆಷ್ಟೋ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಹೊಟ್ಟೆ ಪಾಡಿಗೆ ಪರ್ಯಾಯ ಕೆಲಸಗಳನ್ನೂ ಹುಡುಕಿಕೊಂಡಿದ್ದಾರೆ. ಈ ನಡುವೆ ಕೆಲಸವಿಲ್ಲದೆ ಹಲವರಿಗೆ ಕಾಲ ಕಳೆಯುವುದು ಕಷ್ಟವಾಗುತ್ತಿತ್ತು. ಅದರಂತೆ ಜಿಲ್ಲೆಯ ಬಾದಾಮಿ ಪಟ್ಟಣದ ಪ್ರಿಂಟಿಂಗ್ ಪ್ರೆಸ್ ಮಾಲೀಕ ಮಂಜುನಾಥ ಜಲಗೇರಿ ಮತ್ತು ಎಲೆಕ್ಟ್ರಿಷಿಯನ್ ಕೆಲಸ ಮಾಡುವ ಮಹಮ್ಮದ್ ಇಕ್ಬಾಲ್ಗೆ ಕೆಲಸವಿಲ್ಲದೆ ಲಾಕ್ಡೌನ್ನಲ್ಲಿ ನಷ್ಟ ಅನುಭವಿಸುತ್ತಿದ್ದರು. ಈ ನಡುವೆ ಅವರಿಗೆ ಏನಾದರೂ ಹೊಸ ಪ್ರಯೋಗ ಮಾಡಬೇಕು ಅಂತ ಅನಿಸಿದೆ. ಆಗ ಅವರ ತಲೆಗೆ ಹೊಳೆದಿದ್ದು ಎಲೆಕ್ಟ್ರಿಕ್ ಬೈಕ್.
ಲಾಕ್ಡೌನ್ನಲ್ಲಿ ಉದ್ಯೋಗ ಇಲ್ಲದೆ ಸುಮ್ಮನಿದ್ದ ಪ್ರಿಂಟಿಂಗ್ ಪ್ರೆಸ್ ಮಾಲೀಕ ಮಂಜುನಾಥ ಜಲಗೇರಿ ಮತ್ತು ಎಲೆಕ್ಟ್ರಿಷಿಯನ್ ಮಹಮ್ಮದ್ ಇಕ್ಬಾಲ್ ಸೇರಿ ವಿಶೇಷ ಎಲೆಕ್ಟ್ರಿಕ್ ಬೈಕ್ ಸಿದ್ಧಪಡಿಸಿದ್ದಾರೆ. ಐಟಿಐ ಇಲೆಕ್ಟ್ರಿಷಿಯನ್ ಓದಿರುವ ಮಹಮ್ಮದ್ ಇಕ್ಬಾಲ್ ಸದ್ಯ ಎಲೆಕ್ಟ್ರಾನಿಕ್ಸ್ ಶಾಪ್ ಇಟ್ಟುಕೊಂಡಿದ್ದಾರೆ. ಆದರೆ ಲಾಕ್ಡೌನ್ನಲ್ಲಿ ಉದ್ಯೋಗ ಇಲ್ಲದಂತಾಗಿತ್ತು. ಇನ್ನು ಮದುವೆ, ಸಮಾರಂಭಗಳಿಗೆ ಕಡಿವಾಣ ಬಿದ್ದಿದ್ದರಿಂದ ಪತ್ರಿಕೆ ಪ್ರಿಂಟಿಂಗ್ಗೆ ಹೊಡೆತ ಬಿದ್ದಿತ್ತು.
ಈ ವೇಳೆ ಇಬ್ಬರು ಸೇರಿ ಎಲೆಕ್ಟ್ರಿಕ್ ಬೈಕ್ನ ಸಿದ್ಧಪಡಿಸಿದ್ದಾರೆ. ಬೈಕ್ ತಯಾರಿಸಲು ಮಂಜುನಾಥ ಜಲಗೇರಿ ಬಂಡವಾಳ ಹಾಕಿದ್ದಾರೆ. 40 ರಿಂದ 50 ಸಾವಿರ ರೂ. ಖರ್ಚು ಮಾಡಿ ಬೈಕ್ ತಯಾರಿಸಿದ್ದಾರೆ. ಮೂರು ಯುನಿಟ್ ವಿದ್ಯುತ್ ಹೊಂದಿರುವ ನಾಲ್ಕು ಬ್ಯಾಟರಿ ಇವೆ. 12 ವೋಲ್ಟ್ನಂತೆ ನಾಲ್ಕು ಬ್ಯಾಟರಿಗಳನ್ನು ಅಳವಡಿಸಲಾಗಿದೆ. ಹದಿನೈದು ರೂಪಾಯಿ ವಿದ್ಯುತ್ಗೆ 120 ಕಿಲೋಮೀಟರ್ ಬೈಕ್ ಓಡುತ್ತದೆ ಅಂತ ಹೇಳಲಾಗುತ್ತಿದೆ.
ಎಕ್ಸೆಲ್ ಬೈಕ್ ಹಾಗೂ ಕನ್ವರ್ಟರ್, ಎಲೆಕ್ಟ್ರಿಕ್ ಮೋಟರ್ನಿಂದ ಈ ಬೈಕ್ನ ಸಿದ್ಧಪಡಿಸಿದ್ದು, 35 ಕಿಲೋಮೀಟರ್ ವೇಗದಲ್ಲಿ ಓಡುತ್ತದೆ. ರಿವರ್ಸ್ ಬರುವಂತೆ ಬೈಕ್ ತಯಾರಿ ಮಾಡಲಾಗಿದೆ. ಸದ್ಯ ಈ ಬೈಕ್ ನೋಡಲು ಜನರು ಬರುತ್ತಿದ್ದಾರೆ.
ಇದನ್ನೂ ಓದಿ
ಅಂದು ಅಂಕಲ್ ಅಂತ ಹೀಯಾಳಿಸಿದ್ರು, ಈಗ ಛೋಟಾ ಭೀಮ್ ಅಂದ್ರು: ಹಿಗ್ಗಾಮುಗ್ಗಾ ಟ್ರೋಲ್ ಆದ ಪ್ರಭಾಸ್
ಭವಾನಿಪುರದಲ್ಲಿ ಮತಯಂತ್ರ ಸ್ಥಗಿತಗೊಳಿಸಿದ ಟಿಎಂಸಿ ಶಾಸಕ; ಬಿಜೆಪಿ ಅಭ್ಯರ್ಥಿಯಿಂದ ಆರೋಪ
(Two have prepared a special electric bike in Bagalkot)
Published On - 9:42 am, Thu, 30 September 21