AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಗರಸಭೆ ಆಯುಕ್ತರ ಚೇಂಬರ್‌ಗೆ “ಸಾರ್ವಜನಿಕರಿಗೆ ಪ್ರವೇಶವಿಲ್ಲ”: ಬೋರ್ಡ್​ ನೋಡಿ ಉಪ ಲೋಕಾಯುಕ್ತ ಶಾಕ್

ಉಪ ಲೋಕಾಯುಕ್ತರಾದ ಬಿ.ವೀರಪ್ಪ ಅವರು ಇಂದು (ಜುಲೈ 24) ಬಾಗಲಕೋಟೆಯಲ್ಲಿ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬಾಗಲಕೋಟೆ ನಗರಸಭೆ ಆಯುಕ್ತರ ಚೇಂಬರ್‌ಗೆ "ಸಾರ್ವಜನಿಕರಿಗೆ ಪ್ರವೇಶವಿಲ್ಲ" ಎಂಬ ಬೋರ್ಡ್ ಕಂಡು ಬಂದಿದ್ದು, ಇದನ್ನು ನೋಡಿ ಉಪ ಲೋಕಾಯುಕ್ತರಾದ ಬಿ.ವೀರಪ್ಪ ಶಾಕ್ ಆಗಿದ್ದಾರೆ. ಅಲ್ಲದೇ ಈ ಬೊರ್ಡ್​ ಬಗ್ಗೆ ಕೆಂಡಾಮಂಡಲರಾಗಿದ್ದಾರೆ.

ನಗರಸಭೆ ಆಯುಕ್ತರ ಚೇಂಬರ್‌ಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ: ಬೋರ್ಡ್​ ನೋಡಿ ಉಪ ಲೋಕಾಯುಕ್ತ  ಶಾಕ್
Upalokayukta B Veerappa
ರವಿ ಹೆಚ್ ಮೂಕಿ, ಕಲಘಟಗಿ
| Edited By: |

Updated on: Jul 24, 2026 | 10:33 PM

Share

ಮುಖ್ಯಾಂಶಗಳು

  • ಬಾಗಲಕೋಟೆಯಲ್ಲಿ ಸರ್ಕಾರಿ ಕಚೇರಿಗಳಿಗೆ ಉಪ ಲೋಕಾಯುಕ್ತರ ಭೇಟಿ
  • ‘ಸಾರ್ವಜನಿಕರಿಗೆ ಪ್ರವೇಶವಿಲ್ಲ’ ಎಂದು ಬೋರ್ಡ್ ಹಾಕಿದ್ದಕ್ಕೆ ಆಕ್ರೋಶ
  • ಸರ್ಕಾರಿ ಕಚೇರಿಗೆ ಸಾರ್ವಜನಿಕರ ಬದಲು ಇನ್ಯಾರು ಹೋಗಬೇಕು?‌ ಎಂದು ತರಾಟೆ

ಬಾಗಲಕೋಟೆ, (ಜುಲೈ 24): ಬಾಗಲಕೋಟೆಯಲ್ಲಿ (Bagalkot) ಸರ್ಕಾರಿ ಕಚೇರಿಗಳಿಗೆ ಉಪ ಲೋಕಾಯುಕ್ತರಾದ ಬಿ.ವೀರಪ್ಪ  (B Veerappa) ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಕಚೇರಿಗಳ ಕಾರ್ಯವೈಖರಿ ಬಗ್ಗೆ ಸಿಡಿಮಿಡಿಗೊಂಡರು. ಅಲ್ಲದೇ ನಗರಸಭೆ ಆಯುಕ್ತರ ಚೇಂಬರ್ ಮುಂದೆ ‘ಸಾರ್ವಜನಿಕರಿಗೆ ಪ್ರವೇಶವಿಲ್ಲ’ ಎಂದು ಹಾಕಲಾಗಿದ್ದ ಬೋರ್ಡ್ ನೋಡಿ ಶಾಕ್ ಆಗಿದ್ದಾರೆ. ಸರ್ಕಾರಿ ಕಚೇರಿಗೆ ಸಾರ್ವಜನಿಕರ ಬದಲು ಇನ್ಯಾರು ಹೋಗಬೇಕು?‌ ಇದು ಶಾಕಿಂಗ್, 17 ಜಿಲ್ಲೆಗಳಲ್ಲಿ ಮೊದಲ ಬಾರಿ ನೋಡುತ್ತಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಚೇರಿ ಕಾರ್ಯವೈಖರಿ ಪರಿಶೀಲನೆ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪ ಲೋಕಾಯುಕ್ತ ಬಿ.ವೀರಪ್ಪ, ನಗರಸಭೆ ಆಯುಕ್ತರ ಚೇಂಬರ್‌ಗೆ ‘ಸಾರ್ವಜನಿಕರಿಗೆ ಪ್ರವೇಶವಿಲ್ಲ’ ಎಂದು ಬೋರ್ಡ್ ಹಾಕಿದ್ದಾರೆ. ಸರ್ಕಾರಿ ಕಚೇರಿಗೆ ಸಾರ್ವಜನಿಕರ ಬದಲು ಇನ್ಯಾರು ಹೋಗಬೇಕು?‌ ಇದು ಶಾಕಿಂಗ್, 17 ಜಿಲ್ಲೆಗಳಲ್ಲಿ ಮೊದಲ ಬಾರಿ ನೋಡುತ್ತಿದ್ದೇನೆ. ಬಾಗಲಕೋಟೆ ನಗರಸಭೆ ಅಧಿಕಾರಿಗಳ ಅಸಹಕಾರ ಇದೆ. 4 ಜನ ಇಂಜಿನಿಯರ್‌ಗಳು ಸರಿಯಾದ ಮಾಹಿತಿ ಕೊಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ನೋಡಿ: ಸಿಲಿಂಡರ್ ಹೊರಗಿಡಿ, ತಾಜಾ ಎಣ್ಣೆ ಬಳಸಿ: ಬಾಗಲಕೋಟೆ ಬೇಕರಿ ತಪಾಸಣೆ ನಡೆಸಿ ಉಪಲೋಕಾಯುಕ್ತರ ಎಚ್ಚರಿಕೆ

ಅತಿಕ್ರಮಣ ಬಗ್ಗೆ ನೋಟಿಸ್ ಕೊಟ್ಟಿದ್ದಾರೆ. 2-3 ವರ್ಷ ಆದರೂ ಯಾವುದೇ ಕ್ರಮ ಆಗಿಲ್ಲ. ಬರೀ ನೋಟಿಸ್ ಕೊಟ್ಟು ಕ್ರಮ ಕೈಗೊಳ್ಳದಿದ್ದರೆ ಏನು ಪ್ರಯೋಜನ? ಅತಿಕ್ರಮಣ, ಲೈಸೆನ್ಸ್ ಉಲ್ಲಂಘನೆ ಎಷ್ಟು ಆಗಿದೆ ಹಾಗೂ ಎಷ್ಟು ಅತಿಕ್ರಮಣ ಆಗಿದೆ ಎಂಬ ಬಗ್ಗೆ ಸಂಪೂರ್ಣ ವರದಿ ಕೇಳಿದ್ದೇನೆ. ಡ್ಯೂಟಿ ಸರಿಯಾಗಿ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ನಗರಸಭೆ ಕಮಿಷನರ್ ನಾವು ಬರೋದು ಗೊತ್ತಾಗಿ ರಜೆ ಹೋಗಿದ್ದಾರೆ. ನಗರಸಭೆ ಹಾಗೂ BTDA ಮಧ್ಯೆ ಯಾವುದೇ ಹೊಂದಾಣಿಕೆ ಇಲ್ಲ. 2 ಕಡೆ ಪರಿಶೀಲನೆ ನಡೆಸಿ ಕೇಸ್ ರಿಜಿಸ್ಟರ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ದೇವೇಗೌಡ್ರು ನಿವಾಸಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ
ದೇವೇಗೌಡ್ರು ನಿವಾಸಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ
ಸಿಜೆಪಿ ಪ್ರತಿಭಟನೆ: ಮುಂಜಾಗ್ರತಾ ಕ್ರಮವಾಗಿ ಪೊಲೀಸರ ರಜೆ ರದ್ದು
ಸಿಜೆಪಿ ಪ್ರತಿಭಟನೆ: ಮುಂಜಾಗ್ರತಾ ಕ್ರಮವಾಗಿ ಪೊಲೀಸರ ರಜೆ ರದ್ದು
ಚಿಕ್ಕೋಡಿ, ನಿಪ್ಪಾಣಿ ತಾಲೂಕಿನ 8 ಸೇತುವೆಗಳು ಜಲಾವೃತ
ಚಿಕ್ಕೋಡಿ, ನಿಪ್ಪಾಣಿ ತಾಲೂಕಿನ 8 ಸೇತುವೆಗಳು ಜಲಾವೃತ
ಬಿಪಿಎಲ್ ಕಾರ್ಡುದಾರರಿಗೆ ಗುಡ್​ ನ್ಯೂಸ್ ನೀಡಿದ ಆಹಾರ ಸಚಿವ ಮುನಿಯಪ್ಪ
ಬಿಪಿಎಲ್ ಕಾರ್ಡುದಾರರಿಗೆ ಗುಡ್​ ನ್ಯೂಸ್ ನೀಡಿದ ಆಹಾರ ಸಚಿವ ಮುನಿಯಪ್ಪ
ಬಿಡಾಡಿ ವಾಹನಗಳ ಟೋಯಿಂಗ್: ರಸ್ತೆ ಬದಿಯಲ್ಲಿ ನಿಂತಿದ್ದ ವಾಹನಗಳು ಜಪ್ತಿ
ಬಿಡಾಡಿ ವಾಹನಗಳ ಟೋಯಿಂಗ್: ರಸ್ತೆ ಬದಿಯಲ್ಲಿ ನಿಂತಿದ್ದ ವಾಹನಗಳು ಜಪ್ತಿ
‘ಸ್ವಾರ್ಥ ಬಿಡಿ’: ಚಿತ್ರರಂಗದವರ ಬಗ್ಗೆ ಸಾಧುಕೋಕಿಲ ಬೇಸರ
‘ಸ್ವಾರ್ಥ ಬಿಡಿ’: ಚಿತ್ರರಂಗದವರ ಬಗ್ಗೆ ಸಾಧುಕೋಕಿಲ ಬೇಸರ
ಕಾಕ್ರೋಚ್ ಹೋರಾಟಗಾರರಿಗೆ ಮುಲ್ಲಾಗಳು ಬಿರಿಯಾನಿ ತಿನ್ನಿಸ್ತಾವಸ್ರೆ: ಸಿಂಹ
ಕಾಕ್ರೋಚ್ ಹೋರಾಟಗಾರರಿಗೆ ಮುಲ್ಲಾಗಳು ಬಿರಿಯಾನಿ ತಿನ್ನಿಸ್ತಾವಸ್ರೆ: ಸಿಂಹ
ಸಾರಿಗೆ ಸಚಿವರ ಕ್ಷೇತ್ರದಲ್ಲೇ ಗೋದಾಮಾಗಿ ಮಾರ್ಪಟ್ಟಿರುವ ಬಸ್​​ ನಿಲ್ದಾಣ!
ಸಾರಿಗೆ ಸಚಿವರ ಕ್ಷೇತ್ರದಲ್ಲೇ ಗೋದಾಮಾಗಿ ಮಾರ್ಪಟ್ಟಿರುವ ಬಸ್​​ ನಿಲ್ದಾಣ!
ಚಾಲಕನ ಜೀವಕ್ಕಿಂತ ಬಿಯರ್ ಬಾಟಲಿಯೇ ಮುಖ್ಯವಾಯಿತೇ?
ಚಾಲಕನ ಜೀವಕ್ಕಿಂತ ಬಿಯರ್ ಬಾಟಲಿಯೇ ಮುಖ್ಯವಾಯಿತೇ?
ನೀಟ್ ಪ್ರತಿಭಟನೆ, ಮೋದಿ ಹೇಳಿಕೆ ಬಗ್ಗೆ ಪ್ರಲ್ಹಾದ್ ಜೋಶಿ ಮಹತ್ವದ ಹೇಳಿಕೆ
ನೀಟ್ ಪ್ರತಿಭಟನೆ, ಮೋದಿ ಹೇಳಿಕೆ ಬಗ್ಗೆ ಪ್ರಲ್ಹಾದ್ ಜೋಶಿ ಮಹತ್ವದ ಹೇಳಿಕೆ