AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಣ್ಣನಾಗಬೇಕಿದ್ದವನ ಜತೆ ಅನೈತಿಕ ಸಂಬಂಧ: ಸೆಲ್ಫಿ ವಿಡಿಯೋ ಮಾಡುತ್ತಾ ಮಹಿಳೆ ನೇಣಿಗೆ ಶರಣು

ನಾಲ್ಕು ವರ್ಷದ ಹಿಂದಷ್ಟೇ ಮದುವೆಯಾಗಿದ್ದ ಮಹಿಳೆಯ ಗಂಡನಿಂದ ವಿಚ್ಛೇದನ ಪಡೆದುಕೊಂಡು ದೂರವಾಗಿದ್ದಳು. ಬಳಿಕ ಆಕೆ ವಿವಾಹಿತ ಪುರುಷನ ಜೊತೆಗೆ ಸಂಬಂಧ ಇಟ್ಟು ಕೊಂಡಿದ್ದಳು. ಆದ್ರೆ, ಇದೀಗ ಅವನು ಸಹ ಕೈಕೊಟ್ಟಿದ್ದು, ದಿಕ್ಕುತೋಚದೇ ದುರಂತ ಅಂತ್ಯಕಂಡಿದ್ದಾಳೆ. ಸಂಬಂಧದಲ್ಲಿ ಅಣ್ಣನಾಗಬೇಕಿದ್ದವನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದುಮ ಇದೀಗ ಸೆಲ್ಫಿ ವಿಡಿಯೋನಲ್ಲಿ ಕೆಲವರ ಹೆಸರುಗಳನ್ನು ಹೇಳುತ್ತಾ ನೇಣಿಗೆ ಶರಣಾಗಿದ್ದಾಳೆ. ಅಷ್ಟಕ್ಕೂ ಆಗಿದ್ದೇನು? ಈ ಘಟನೆ ನಡೆದಿದ್ದೆಲ್ಲಿ ಎನ್ನುವ ವಿವರ ಈ ಕೆಳಗಿನಂತಿದೆ.

ಅಣ್ಣನಾಗಬೇಕಿದ್ದವನ ಜತೆ ಅನೈತಿಕ ಸಂಬಂಧ: ಸೆಲ್ಫಿ ವಿಡಿಯೋ ಮಾಡುತ್ತಾ ಮಹಿಳೆ ನೇಣಿಗೆ ಶರಣು
ಮುನ್ನಿ
ವಿನಾಯಕ ಬಡಿಗೇರ್​
| Edited By: |

Updated on: Dec 22, 2025 | 8:01 PM

Share

ಬಳ್ಳಾರಿ, (ಡಿಸೆಂಬರ್ 22): ಗಂಡನಿಂದ ದೂರವಾಗಿದ್ದ ಮಹಿಳೆಯೊಬ್ಬರು (Woman) ಸೆಲ್ಫಿ ವಿಡಿಯೋ ಮಾಡುತ್ತಲ್ಲೇ ನೇಣಿಗೆ ಶರಣಾಗಿರುವ ಆಘಾತಕಾರಿ ಘಟನೆ ಬಳ್ಳಾರಿ(Bellary) ಹುಸೇನ್ ನಗರದಲ್ಲಿ ನಡೆದಿದೆ. ತನಗಾದ ಅನ್ಯಾಯವನ್ನು ವಿಡಿಯೋನಲ್ಲಿ ಹೇಳಿಕೊಳ್ಳುತ್ತಲೇ ಮುನ್ನಿ (23) ಎನ್ನುವ ಮಹಿಳೆ ನೇಣಿಗೆ ಕೊರಳೊಡ್ಡಿದ್ದಾಳೆ. ನಾಲ್ಕು ವರ್ಷದ ಹಿಂದಷ್ಟೆ ಮದುವೆಯಾಗಿದ್ದ ಮುನ್ನಿ, ವರ್ಷದ ಹಿಂದೆ ಗಂಡನಿಂದ ವಿಚ್ಛೇದನ ಪಡೆದು ಒಂಟಿಯಾಗಿದ್ದಳು. ಬಳಿಕ ಮಹಮ್ಮದ್ ಶೇಕ್ಷಾವಲ್ಲಿ ಎನ್ನುವ ವಿವಾಹಿತ ಪುರುಷನ ಜೊತೆಗೆ ಸ್ನೇಹ ಬೆಳೆದಿತ್ತು. ಸ್ನೇಹ ಸಂಬಂಧಕ್ಕೆ ತಿರುಗಿತ್ತು. ಅದ್ರೆ, ಇದೀಗ ಏಕಾಏಕಿ ವಿಡಿಯೋ ಮಾಡುತ್ತಲೇ ನೇಣಿಗೆ ಶರಣಾಗಿದ್ದಾಳೆ.

ಗಂಡನಿಂದ ದೂರವಾಗಿದ್ದ ಮುನ್ನಿ

23 ವರ್ಷದ ಮುನ್ನಿ ಮೂರು ವರ್ಷದ ಹಿಂದಷ್ಟೇ ಮದುವೆಯಾಗಿದ್ದರು. ಆದ್ರೆ, ಅದೇನಾಯೋ ಏನೋ ಒಂದು ವರ್ಷದ ಹಿಂದೆ ಪತಿಗೆ ವಿಚ್ಛೇದನೆ ನೀಡಿ ಎರಡು ಮಕ್ಕಳೊಂದಿಗೆ ವಾಸಿಸುತ್ತಿದ್ದಳು. ಈ ಮಧ್ಯೆ ಮಹಮ್ಮದ್ ಶೇಕ್ ಎನ್ನುವ ವಿವಾಹಿತ ಪುರುಷನ ಜೊತೆಗೆ ಸ್ನೇಹ ಬೆಳೆದಿತ್ತು. ಸ್ನೇಹ ಸಂಬಂಧಕ್ಕೆ ತಿರುಗಿತ್ತು. ಅದ್ರೆ, ಇತ್ತೀಚಿಗೆ ಮಹಮ್ಮದ್ ಶೇಕ್ಷಾವಲ್ಲಿ ಹಾಗೂ ಮುನ್ನಿ ಮಧ್ಯೆ ಭಿನ್ನಾಭಿಪ್ರಾಯ ಏರ್ಪಟ್ಟಿತು. ಅಗಾಗ ಗಲಾಟೆಯೂ ಅಗುತ್ತಿದ್ದವು. ಇದೇ ಕಾರಣಕ್ಕೆ ಮುನ್ನಿ ನೇಣಿಗೆ ಶರಣಾಗಿದ್ದಾಳೆ. ಸಾಯುವ ಮುನ್ನ ತನಗಾದ ಅನ್ಯಾಯದ ವಿವರಣೆ ನೀಡುತ್ತಲೇ ಲೈವ್ ವಿಡಿಯೋ ಮಾಡಿ ನೇಣಿಗೆ ಶರಣಾಗಿದ್ದಾಳೆ.

ಇದನ್ನೂ ಓದಿ: ಅತ್ತ ಮದ್ವೆಯಾದ ಗಂಡನೂ ಇಲ್ಲ, ಇತ್ತ ಪ್ರಿಯಕರನೂ ಇಲ್ಲ: ಯುವತಿಯನ್ನು ಒಂಟಿ ಮಾಡಿದ ಆ ವಿಡಿಯೋ

ಅನೈತಿಕ ಸಂಬಂಧವೇ ಮುಳುವಾಯ್ತಾ?

ಇನ್ನೂ ಗಂಡ ಇಲ್ಲದ ಮುನ್ನಿ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದಳು. ಮೆಹಂದಿ ಹಾಕೋದು ಸೇರಿದಂತೆ ಮೇಕಪ್​ ಸಹ ಮಾಡುತ್ತಿದ್ದಳು. ಹೀಗಿರುವಾಗ ಮುನ್ನಿ ಎರಡನೇ ಮದುವೆ ಮಾಡಲು ಮನೆಯಲ್ಲಿ ಸಿದ್ಧತೆ ನಡೆದಿತ್ತು. ಆದ್ರೆ, ಶೆಕ್ಷಾವಲಿ ಜೊತೆಗೆ ಇರೋ ಸಂಬಂಧ ಮುಳುವಾಗಿ ಸಾಯುವ ಹಂತಕ್ಕೆ ಬಂದಿದೆ. ನಿನ್ನೆ (ಡಿಸೆಂಬರ್ 21) ರಾತ್ರಿ ಮನೆಯಲ್ಲಿ ಯಾರು ಇಲ್ಲದ ವೇಳೆ ಮುನ್ನಿ ನೇಣಿಗೆ ಶರಣಾಗಿದ್ದಾಳೆ. ವಿಷಯ ತಿಳಿಯುತ್ತಲೇ ಗಾಂಧಿ ನಗರ ಠಾಣೆಗೆ ಅಗಮಿಸಿದ ಶಾಸಕ ಭರತ್ ರೆಡ್ಡಿ ಕುಟುಂಬಸ್ಥರಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ.

ಅಣ್ಣನಾಗಬೇಕಿದ್ದವನ ಜತೆ ಸಂಬಂಧ

ಇನ್ನು ಶೇಕ್ಷಾವಲ್ಲಿ ಸಂಬಂಧದಲ್ಲಿ  ಮೃತಳ ಅಣ್ಣನಾಗುತ್ತಾನೆ ಎನ್ನುವ ಮಾಹಿತಿಯನ್ನ ಮುನ್ನಿ ಕುಟುಂಬಸ್ಥರು ತಿಳಿಸಿದ್ದಾರೆ. ಹೀಗಾಗಿ ಅನೈತಿಕ ಸಂಬಂಧ ಒಳ್ಳೆದಲ್ಲ ಅಂತ ಹಲವು ಬಾರಿ ಕುಟುಂಬಸ್ಥರು ಇಬ್ಬರಿಗೂ ತಿಳಿ ಹೇಳಿದ್ದರಂತೆ. ಆದ್ರೆ ಇಬ್ಬರ ನಡುವೆ ನಿನ್ನೆ ಏನಾಗಿದೊಯೋ ಏನು ಮುನ್ನಿ ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಲೇ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಈ ಸಂಬಂಧದಲ್ಲಿ ಅಣ್ಣನಾಗಬೇಕಿದ್ದವನ ಕಿರುಕುಳಕ್ಕೆ ಬೇಸತ್ತು ಮುನ್ನಿ ಆತ್ಮಹತ್ಯೆ ಮಾಡ್ಕೊಂಡಿದ್ದಾಳೆಂದು ಕುಟುಂಬದವರ ಆರೋಪಿವಾಗಿದೆ. ಸದ್ಯ ಬಳ್ಳಾರಿಯ ಗಾಂಧಿನಗರ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ತನಿಖೆ ಬಳಿಕವೇ ಆತ್ಮಹತ್ಯೆಗೆ ಕಾರಣವೇನು ಎನ್ನುವುದು ತಿಳಿಯಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ