AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಕಲಿ ಇ-ಮೇಲ್ ಬಳಸಿ 2 ಕೋಟಿಗೂ ಹೆಚ್ಚು ಹಣ ವಂಚನೆ, ಮಧ್ಯ ಪ್ರದೇಶದಲ್ಲಿ ಅಡಗಿದ್ದ ಆರೋಪಿ ಬಂಧಿಸಿದ ಬಳ್ಳಾರಿ ಪೊಲೀಸ್

ಮಧ್ಯಪ್ರದೇಶದ ಅಗರ್ವಾಲ್ ಕೋಲ್ ಕಾರ್ಪೋರೇಷನ್ ಕಂಪನಿ ಕಲ್ಲಿದ್ದಲು ಖರೀದಿಗೆ ಬಳ್ಳಾರಿಯ ಹಿಂದುಸ್ತಾನ್ ಮೆಟಲ್ ಪ್ರೈವೇಟ್ ಲಿಮಿಟೆಟ್ ಕಂಪನಿಗೆ ಹಣ ವರ್ಗಾವಣೆ ಮಾಡಿತ್ತು. ಹಣ ವರ್ಗಾವಣೆ ಬಗ್ಗೆ ಮಾಹಿತಿ ಪಡೆದಿದ್ದ ಖದೀಮ ಅಜಯ್ ಕುಮಾರ್ ಜೈಸ್ವಾಲ್, ಅಗರ್ವಾಲ್ ಕಂಪನಿಯ ನಕಲಿ ಇ ಮೇಲೆ ಕ್ರಿಯೇಟ್ ಮಾಡಿ, ಕಂಪನಿಯ ಬ್ಯಾಂಕ್ ಅಕೌಂಟ್ ನಂಬರ್ ಚೇಂಜ್ ಆಗಿದೆ ಅಂತಾ ಹಿಂದುಸ್ತಾನ್ ಕಂಪನಿಗೆ ಮೇಲ್ ಕಳಿಸಿ ವಂಚಿಸಿದ್ದಾನೆ.

ನಕಲಿ ಇ-ಮೇಲ್ ಬಳಸಿ 2 ಕೋಟಿಗೂ ಹೆಚ್ಚು ಹಣ ವಂಚನೆ, ಮಧ್ಯ ಪ್ರದೇಶದಲ್ಲಿ ಅಡಗಿದ್ದ ಆರೋಪಿ ಬಂಧಿಸಿದ ಬಳ್ಳಾರಿ ಪೊಲೀಸ್
ನಕಲಿ ಇ-ಮೇಲ್ ಬಳಸಿ 2 ಕೋಟಿಗೂ ಹೆಚ್ಚು ಹಣ ವಂಚನೆ
ವಿನಾಯಕ ಬಡಿಗೇರ್​
| Edited By: |

Updated on: Sep 19, 2024 | 9:12 AM

Share

ಬಳ್ಳಾರಿ, ಸೆ.19: ನಕಲಿ ಈ ಮೇಲ್ (E mail) ಬಳಸಿ 2 ಕೋಟಿ 11 ಲಕ್ಷದ 50 ಸಾವಿರ ರೂಪಾಯಿ ಹಣವನ್ನು ವಂಚಿಸಿದ್ದ ಆರೋಪಿಯನ್ನು ಹಣದ ಸಮೇತ ಅರೆಸ್ಟ್ ಮಾಡಲಾಗಿದೆ. ಬಳ್ಳಾರಿ ಪೊಲೀಸರು (Ballari Police) ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಬಳ್ಳಾರಿಯಿಂದ ಮಧ್ಯಪ್ರದೇಶಕ್ಕೆ ಹೋಗಿ ಹಣದ ಸಮೇತ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.

ಆರೋಪಿ ಅಜಯ್ ಕುಮಾರ್ ಜೈಸ್ವಾಲ್ ಎಂಬಾತ ಕಲ್ಲಿದ್ದಲು ಸಪ್ಲೆ ಮಾಡುವ ಕಂಪನಿಗೆ 2 ಕೋಟಿ 11 ಲಕ್ಷ ವಂಚಿಸಿದ್ದಾನೆ. ಮಧ್ಯಪ್ರದೇಶದ ಅಗರ್ವಾಲ್ ಕೋಲ್ ಕಾರ್ಪೋರೇಷನ್ ಕಂಪನಿ ಕಲ್ಲಿದ್ದಲು ಖರೀದಿಗೆ ಬಳ್ಳಾರಿಯ ಹಿಂದುಸ್ತಾನ್ ಮೆಟಲ್ ಪ್ರೈವೇಟ್ ಲಿಮಿಟೆಟ್ ಕಂಪನಿಗೆ ಹಣ ವರ್ಗಾವಣೆ ಮಾಡಿತ್ತು. ಹಣ ವರ್ಗಾವಣೆ ಬಗ್ಗೆ ಮಾಹಿತಿ ಪಡೆದಿದ್ದ ಖದೀಮ ಅಜಯ್ ಕುಮಾರ್ ಜೈಸ್ವಾಲ್, ಅಗರ್ವಾಲ್ ಕಂಪನಿಯ ನಕಲಿ ಇ ಮೇಲೆ ಕ್ರಿಯೇಟ್ ಮಾಡಿ, ಕಂಪನಿಯ ಬ್ಯಾಂಕ್ ಅಕೌಂಟ್ ನಂಬರ್ ಚೇಂಜ್ ಆಗಿದೆ ಅಂತಾ ಹಿಂದುಸ್ತಾನ್ ಕಂಪನಿಗೆ ಮೇಲ್ ಕಳಿಸಿ ವಂಚಿಸಿದ್ದಾನೆ.

ಇದನ್ನೂ ಓದಿ: ಹಾಸನ: ಕಾಡಂಚಿನ ಭಾಗದ ಜನರ ನಿದ್ದೆಗೆಡಿಸಿದ ಡೀಮ್ಡ್ ಫಾರೆಸ್ಟ್ ಗುಮ್ಮ, ಒಕ್ಕಲೆಬ್ಬಿಸುವಿಕೆಯ ಆತಂಕ

ಇನ್ನು ಫೇಕ್ ಮೇಲ್ ಅನ್ನು ನಂಬಿದ ಹಿಂದುಸ್ತಾನ್ ಕಂಪನಿ ಅಜಯ್ ಕುಮಾರ್ ಜೈಸ್ವಾಲ್ ಕಳಿಸಿದ್ದ ಅಕೌಂಟ್ ನಂಬರ್ ಗೆ ಹಣ ಹಾಕಿದೆ. ಮಧ್ಯಪ್ರದೇಶ ಮೂಲದ ಅಜಯ್ ಕುಮಾರ ಜೈಸ್ವಾಲ್ ನ ಅಕೌಂಟ್‌ಗೆ ಹಣ ಹಾಕಿದ್ದಾರೆ. ತನ್ನ ಖಾತೆಗೆ ಬಂದ 2 ಕೋಟಿ 11 ಲಕ್ಷ ಹಣವನ್ನ ಇತರೆ 18 ಖಾತೆಗಳಿಗೆ ಹಾಕಿ ಆರೋಪಿ ಹಣವನ್ನು ಡ್ರಾ ಮಾಡಿಕೊಂಡಿದ್ದ. ಹಿಂದುಸ್ತಾನ್ ಕಂಪನಿ, ಅರ್ಗವಾಲ್ ಕಂಪನಿಗೆ ಕಲ್ಲಿದ್ದಲು ಕಳಿಸಿ ಎಂದಾಗ ಹಣ ವಾಪಸ್ ಹಾಕಿದ್ದೇವೆ ಎಂದಿದ್ದಾರೆ. ಸೆಪ್ಟೆಂಬರ್ 3ನೇ ತಾರೀಖು ಹಣ ಹಾಕಲಾಗಿದೆ ಅಂತಾ ಹಿಂದುಸ್ತಾನ್ ಕಂಪನಿ ತಿಳಿಸಿದೆ. ಈ ಮೂಲಕ ವಂಚನೆ ಬೆಳಕಿಗೆ ಬಂದಿದೆ.

ಸೆಪ್ಟೆಂಬರ್ 3 ರಂದು ಹಣ ವಂಚನೆ ಗೊತ್ತಾಗಿ, ಬಳ್ಳಾರಿ ಸೈಬರ್ ಠಾಣೆಗೆ ಹಿಂದುಸ್ತಾನ್ ಕಂಪನಿ ದೂರು ದಾಖಲಿಸಿತ್ತು. ಕೂಡಲೇ ಬಳ್ಳಾರಿ ಎಸ್ಪಿ ಶೊಭಾ ರಾಣಿ ಅವರಿಂದ ಪ್ರಕರಣ ಭೇದಿಸಲು ಡಿ.ಎಸ್.ಪಿ ಸಂತೋಷ್ ನೇತೃತ್ವದ ತಂಡ ರಚನೆ ಮಾಡಲಾಗಿದ್ದು ಕೆವೈಸಿ ಹಾಗೂ ಹಣ ವರ್ಗಾವಣೆಯಾದ ಖಾತೆ ಜಾಡು ಹಿಡಿದು ಮಧ್ಯಪ್ರದೇಶದ ಸಿದ್ದಿ ಜಿಲ್ಲೆಯಲ್ಲಿ ಅಡಗಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯಿಂದ 1 ಕೋಟಿ, 21 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ. ಆರೋಪಿ ಬೇರೆ ಬೇರೆ ಖಾತೆಗೆ ಹಾಕಿದ್ದ 27.97 ಲಕ್ಷ ಹಣವನ್ನು ಪೊಲೀಸರು ಫ್ರೀಜ್ ಮಾಡಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ