ನಕಲಿ ಪೊಲೀಸ್ ಎಂದು ತಿಳಿದು ಡೆಪ್ಯೂಟಿ ಫಾರೆಸ್ಟ್ ರೇಂಜರ್ ಬಿತ್ತು ಸಾರ್ವಜನಿಕರಿಂದ ಗೂಸಾ

ಪೋಲಿಸ್ ಸೋಗಿನಲ್ಲಿ ಹೋಟೆಲ್ಗಳಿಗೆ ಹೋಗಿ ಡೆಪ್ಯೂಟಿ ಫಾರೆಸ್ಟ್ ರೇಂಜರ್ ದರ್ಪ ತೋರಿದ್ದಾರೆನ್ನಲಾಗಿದೆ. ಪೋಲೀಸ್ ಅಂತ ಹೇಳಿ ಡೆಪ್ಯೂಟಿ ಫಾರೆಸ್ಟ್ ರೇಂಜರ್ ವಸೂಲಿ ಮಾಡುತ್ತಿದ್ದರಂತೆ.

ನಕಲಿ ಪೊಲೀಸ್ ಎಂದು ತಿಳಿದು ಡೆಪ್ಯೂಟಿ ಫಾರೆಸ್ಟ್ ರೇಂಜರ್ ಬಿತ್ತು ಸಾರ್ವಜನಿಕರಿಂದ ಗೂಸಾ
ಡೆಪ್ಯೂಟಿ ಫಾರೆಸ್ಟ್ ರೇಜರ್ ಕೆಂಚಪ್ಪ
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Sep 19, 2022 | 6:45 PM


ಬಳ್ಳಾರಿ: ನಕಲಿ ಪೊಲೀಸ್ ಎಂದು ಡೆಪ್ಯೂಟಿ ಫಾರೆಸ್ಟ್ ರೇಂಜರ್​ (Deputy Forrest Razor) ಗೆ ಸಾರ್ವಜನಿಕರು ಹಲ್ಲೆ ಮಾಡಿರುವಂತಹ ಘಟನೆ ನಗರದ ವಿಮ್ಸ್ ಆಸ್ಪತ್ರೆ ಸಮೀಪ ರೇಣುಕಾ ಹೊಟೆಲ್ ಬಳಿ ನಡೆದಿದೆ. ಡೆಪ್ಯೂಟಿ ಫಾರೆಸ್ಟ ರೇಂಜರ್ ಕೆಂಚಪ್ಪಗೆ ಸಾರ್ವಜನಿಕರಿಂದ ಗೂಸಾ ನೀಡಲಾಗಿದೆ. ಪೋಲಿಸ್ ಸೋಗಿನಲ್ಲಿ ಹೋಟೆಲ್ಗಳಿಗೆ ಹೋಗಿ ಡೆಪ್ಯೂಟಿ ಫಾರೆಸ್ಟ್ ರೇಂಜರ್ ದರ್ಪ ತೋರಿದ್ದಾರೆನ್ನಲಾಗಿದೆ. ಪೋಲೀಸ್ ಅಂತ ಹೇಳಿ ಡೆಪ್ಯೂಟಿ ಫಾರೆಸ್ಟ್ ರೇಂಜರ್ ವಸೂಲಿ ಮಾಡುತ್ತಿದ್ದರಂತೆ. ಹೋಟೆಲ್ ಅಂಗಡಿಗಳಿಂದ ಹಾಗೂ ಬೈಕ್ ನಿಲ್ಲಿಸಿ ಡೆಪ್ಯೂಟಿ ಫಾರೆಸ್ಟ್ ರೇಂಜರ್ ಹಣ ವಸೂಲಿ ಮಾಡುತ್ತಿದ್ದರೆನ್ನಲಾಗಿದೆ. ಹೋಟೆಲ್ ಕ್ಯಾಶಿಯರ್ ಬಳಿ ಕೆಂಚಪ್ಪ ಹಣ ಕೇಳಿದ್ದಾರೆ. ತ್ರಿಬಲ್ ಸ್ಟಾರ್ ಹಾಕಿಕೊಂಡಿದ್ದರಿಂದ ಹೊಟೆಲ್ ಸಿಬ್ಬಂದಿಗೆ ಅನುಮಾನ‌ ಬಂದು ಐಡಿ ಕೇಳಿದ್ದಾರೆ. ಐಡಿ ಕೂಡಾ ಡುಪ್ಲಿಕ್ಯೇಟ್ ಇದ್ದುದ್ದರಿಂದ ಅನುಮಾನಗೊಂಡು ಬಳಿಕ ಕೌಲ್ ಬಜಾರ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಬರೊದ್ರೊಳಗೆ ಕೆಂಚಪ್ಪಗೆ ಸಾರ್ವಜನಿಕರಿಂದ ಹಲ್ಲೆ ಮಾಡಲಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿದ ಬಳಿಕ ಡೆಪ್ಯೂಟಿ ಫಾರೆಸ್ಟ ರೇಜರ್ ಎಂದು ಗೊತ್ತಾಗಿದೆ.

ತಂದೆ ಕಣ್ಣೆದುರೆ ಮಗು ಕಳ್ಳತನಕ್ಕೆ ಯತ್ನ: ವ್ಯಕ್ತಿ ಬಂಧನ

ಬಳ್ಳಾರಿ: ಮಕ್ಕಳ ಕಳ್ಳರ ವದಂತಿಯ ಬೆನ್ನಲ್ಲೆ ಅಪರಿಚಿತ ವ್ಯಕ್ತಿಯಿಂದ ಮಗು ಕಳ್ಳತನಕ್ಕೆ ಯತ್ನಿಸಿರುವಂತಹ ಘಟನೆ ಜಿಲ್ಲೆಯ ಸಿರುಗುಪ್ಪ ತಾಲೂಕಿನ ದರೂರು ಗ್ರಾಮದಲ್ಲಿ ನಡೆದಿದೆ. ಮನೆ ಮುಂದೆ ಆಟ ಆಡುತ್ತಿದ್ದ ಮಗು ಕಳ್ಳತನಕ್ಕೆ ಯತ್ನಿಸಲಾಗಿದೆ. ಆರ್ಯನ್ ಎಂಬ ಒಂದು ವರ್ಷದ ಮಗುವನ್ನ ಕಳ್ಳತನ ಮಾಡಲು ವ್ಯಕ್ತಿ ಮುಂದಾಗಿದ್ದು, ಮಗುವನ್ನ ಎತ್ತಿಕೊಂಡು ತೆರಳಿತ್ತಿರುವಾಗ ಮಗುವಿನ ತಂದೆ ರಾಮಕೃಷ್ಣನ ಕೈಗೆ ಅಪರಿಚಿತ ವ್ಯಕ್ತಿ ಸಿಕ್ಕಿಬಿದಿದ್ದಾನೆ. ತಂದೆ ಕಣ್ಣೆದುರೆ ಮಗು ಕಳ್ಳತನ ಯತ್ನ ಹಿನ್ನೆಲೆ ತಕ್ಷಣವೇ  ಗ್ರಾಮಸ್ಥರು ಎಚ್ಚೆತ್ತುಗೊಂಡಿದ್ದು, ಕೂಡಲೇ ಅಪರಿಚಿತ ವ್ಯಕ್ತಿಯನ್ನ ಸೆರೆ ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಪರಿಚಿತ ವ್ಯಕ್ತಿಯನ್ನ ವಶಕ್ಕೆ ಪಡೆದು ಸಿರಿಗೇರಿ ಪೊಲೀಸರು ಠಾಣೆಗೆ ಕರೆದೊಯ್ದರು.

ಬೈಕ್​ಗೆ ಟಿಪ್ಪರ್ ಡಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

ಗದಗ: ಬೈಕ್​ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ-ರಾಮದುರ್ಗ ರಸ್ತೆಯಲ್ಲಿ ನಡೆದಿದೆ. ವಾಸನ ಗ್ರಾಮದ ನಿಂಗಪ್ಪ ಅಗಸಿಮನಿ (60) ಮೃತ ವ್ಯಕ್ತಿ. ಹಿಂಬದಿ ಸವಾರ ಹನಮಂತಗೌಡ ನಡಮನಿ ಎಂಬುವರಿಗೆ ಗಾಯವಾಗಿದೆ. ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ದೇವಸ್ಥಾನದ ಬಳಿ ಮಲಗುವ ವಿಚಾರಕ್ಕೆ ನಡೆದ ಕೊಲೆ

ಬೆಂಗಳೂರು: ದೇವಸ್ಥಾನದ ಬಳಿ ಮಲಗುವ ವಿಚಾರಕ್ಕೆ ಕೊಲೆ ನಡೆದಿದ್ದು, ಸಿಸಿ ಟಿವಿಯಲ್ಲಿ ಕೊಲೆಗಾರನ ಕೃತ್ಯ ಸೆರೆಯಾಗಿರುವಂತಹ ಘಟನೆ ಯಶವಂತಪುರ ಪೈಪ್ ಲೈನ್ ರಸ್ತೆಯಲ್ಲಿ ನಡೆದಿದೆ. ಆರೋಪಿ ಪ್ರಕಾಶ್ ಶಂಕರಪ್ಪ ಎಂಬವರನ್ನ ಕೊಲೆಗೈದಿದ್ದ. ಮೊದಲು ದೊಣ್ಣೆಯಿಂದ ಹೊಡೆದು ನಂತರ ಕೈ ಕಾಲಿನಿಂದ ಥಳಿಸಿ ಕೊಲೆ ಮಾಡಲಾಗಿದೆ. ಸೆ.13 ರಂದು ಕೊಲೆ ಪ್ರಕರಣ ನಡೆದಿದೆ. ವರಸಿದ್ದಿ ವಿನಾಯಕ ದೇವಸ್ಥಾನದ ಮುಂದೆ ಕೊಲೆ ಮಾಡಿದ್ದು, ಕೊಲೆಗಾರ ಪ್ರಕಾಶ್ ಪ್ರತಿನಿತ್ಯ ದೇವಸ್ಥಾನದ ಪೌಳಿಯಲ್ಲಿ ಮಲಗ್ತಿದ್ದ.


ಆ ಜಾಗದಲ್ಲಿ ಶಂಕರಪ್ಪ ಮಲಗಿದ್ದಾನೆ ಎಂದು ಕೆಂಡಾಮಂಡಲನಾದ ಪ್ರಕಾಶ, ಮಲಗಿದ್ದ ಪ್ರಕಾಶನನ್ನ ದೊಣ್ಣೆಯೊಂದರಿಂದ ಹೊಡೆದು ಏಳಿಸ್ತಾನೆ. ನಂತರ ಹೊಟ್ಟೆ ಹಾಗೂ ಮುಖದ ಭಾಗಕ್ಕೆ ಕಾಲಿನಿಂದ ಒದ್ದು ಗಾಯಗೊಳಿಸಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಶಂಕರಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದ. ಸದ್ಯ ಆರೋಪಿ ಪ್ರಕಾಶನನ್ನ ಬಂಧಿಸಿ ಯಶವಂತಪುರ ಪೊಲೀಸರು ಜೈಲಿಗಟ್ಟಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada