ಜನಾರ್ದನ್ ರೆಡ್ಡಿ ಬಳ್ಳಾರಿ ಪ್ರವೇಶಕ್ಕೆ ಮುಕ್ತ ಅವಕಾಶ: ಸಂಡೂರು ಉಪ ಚುನಾವಣೆಯಲ್ಲಿ ಬಿಜೆಪಿಗೆ ಆನೆ ಬಲ

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ 14 ವರ್ಷಗಳಿಂದ ಬಳ್ಳಾರಿಯಿಂದ ದೂರವೇ ಇದ್ದ ಜನಾರ್ದನ್ ರೆಡ್ಡಿಗೆ, ಬಳ್ಳಾರಿಗೆ ಮುಕ್ತ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ತಮ್ಮೂರಿಗೆ ಪ್ರವೇಶಕ್ಕೆ ರೆಡ್ಡಿಗೆ ಅನುಮತಿ ಸಿಗುತ್ತಿದ್ದಂತೆಯೇ ಗಣಿನಾಡಲ್ಲಿ ರಾಜಕೀಯ ಗರಿಗೆದರಿದೆ. ಜೊತೆಗೆ ರೆಡ್ಡಿ ವಿರೋಧಿ ಬಣಕ್ಕೆ ಢವ ಢವ ಶುರುವಾಗಿದೆ.

ಜನಾರ್ದನ್ ರೆಡ್ಡಿ ಬಳ್ಳಾರಿ ಪ್ರವೇಶಕ್ಕೆ ಮುಕ್ತ ಅವಕಾಶ: ಸಂಡೂರು ಉಪ ಚುನಾವಣೆಯಲ್ಲಿ ಬಿಜೆಪಿಗೆ ಆನೆ ಬಲ
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಬೆಂಬಲಿಗರಿಂದ ಸಿಹಿ ಹಂಚಿ ಸಂಭ್ರಮ. ಒಳ ಚಿತ್ರದಲ್ಲಿ ಜನಾರ್ದನ ರೆಡ್ಡಿ.
Follow us
| Updated By: ಗಣಪತಿ ಶರ್ಮ

Updated on: Oct 01, 2024 | 7:46 AM

ಬಳ್ಳಾರಿ, ಅಕ್ಟೋಬರ್ 1: ಬಳ್ಳಾರಿ ಗಣಿ ಧಣಿ ಜನಾರ್ದನ ರೆಡ್ಡಿ ಅಕ್ರಮಗಣಿಗಾರಿಕೆ ಪ್ರಕರಣದಡಿ 2011 ರಲ್ಲಿ ಜೈಲು ಸೇರಿದ್ದರು. ಸುಮಾರು ನಾಲ್ಕು ವರ್ಷಗಳ ಕಾಲ ಸೆರೆವಾಸ ಅನುಭವಿಸಿದ ರೆಡ್ಡಿ, ಬಳಿಕ ಷರತ್ತುಬದ್ಧ ಜಾಮೀನಿ ಪಡೆದಿದ್ದರು. 2011 ರಿಂದ ಈವರಗೆ ತನ್ನೂರು ಬಳ್ಳಾರಿಗೆ ಮುಕ್ತ ಪ್ರವೇಶಕ್ಕೆ ರೆಡ್ಡಿಗೆ ಅವಕಾಶ ಇರಲಿಲ್ಲ. ಕೋರ್ಟ್ ಅನುಮತಿ ಪಡದೇ ರೆಡ್ಡಿ ಬಳ್ಳಾರಿಗೆ ಬರಬೇಕಿತ್ತು. ಸುಮಾರು 14 ವರ್ಷಗಳ ಕಾಲ ರೆಡ್ಡಿ ತನ್ನೂರನ್ನ ಬಿಟ್ಟು, ಹೈದರಾಬಾದ್, ಬೆಂಗಳೂರು, ಗಂಗಾವತಿಯಲ್ಲಿ ಜೀವನ ಮಾಡುವಂತಾಗಿತ್ತು. ಕೊನೆಗೂ ನಿರಂತರ ಕಾನೂನು ಹೋರಾಟದ ಬಳಿಕ ಸುಪ್ರೀಂ ಕೋರ್ಟ ಬಳ್ಳಾರಿಗೆ ಮುಕ್ತ ಪ್ರವೇಶಕ್ಕೆ ರೆಡ್ಡಿಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ.

ಸಂಡೂರು ಉಪ ಚುನಾವಣೆ: ಬಿಜೆಪಿಗೆ ಆನೆ ಬಲ

ಹೀಗಾಗಿ ಬಳ್ಳಾರಿಗೆ ರೆಡ್ಡಿ ಬರುತ್ತಿದ್ದಾರೆ ಎನ್ನುತ್ತಲೇ ರಾಜಕೀಯ ಗರಿಗೆದರಿದೆ‌. ಅಭಿಮಾನಿಗಳು ಬಳ್ಳಾರಿ ಎಸ್ಪಿ ಸರ್ಕಲ್, ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ‌‌. ಇನ್ನು ಮುಂಬರುವ ಸಂಡೂರು ಉಪ ಚುನಾವಣೆಗೆ ರೆಡ್ಡಿ ಎಂಟ್ರಿ ಬಹಳಷ್ಟು ಪ್ರಾಮುಖ್ಯತೆ ಪಡೆಯುತ್ತದೆ. ತನ್ನದೇ ಆದ ರಾಜಕೀಯ ತಂತ್ರಗಾರಿಕೆ ಮೂಲಕ ಸಂಡೂರನ್ನು ಬಿಜೆಪಿ ತೆಕ್ಕೆಗೆ ಪಡೆಯಲು ಶತಪ್ರಯತ್ನ ಮಾಡುವುದಂತೂ ಖಚಿತವಾಗಿದೆ.

2008 ರಲ್ಲಿದ್ದ ರಾಜಕೀಯ ಪಾರುಪತ್ಯವನ್ನ ರೆಡ್ಡಿ ಮತ್ತೊಮ್ಮೆ ಸಾಧಿಸಲು ಮತ್ತು ಅಖಂಡ ಬಳ್ಳಾರಿ ಮೇಲೆ ರಾಜಕೀಯ ಹಿಡಿತ ಸಾಧಿಸಲು ಗಾಲಿ ರೆಡ್ಡಿ ಚಾಣಾಕ್ಷತನ, ತಂತ್ರಗಾರಿಕೆ ಮಾಡುವುದಂತು ಪಕ್ಕಾ. ಹೀಗಾಗಿ ರೆಡ್ಡಿ ವಿರೋಧಿ ಬಣಕ್ಕೆ ಈಗಾಗಲೇ ಆತಂಕ‌ ಶುರುವಾಗಿದೆ.

ಜನಾರ್ದನ ರೆಡ್ಡಿ ಮುಂದಿನ ನಡೆ ಏನಿದರಲಿದೆ?

ಇನ್ನು ರೆಡ್ಡಿ ಅಕ್ರಮಗಣಿಗಾರಿಕೆ ಪ್ರಕರಣದಡಿ ಜೈಲು ಸೇರುತ್ತಿದ್ದಂತೆಯೇ ರೆಡ್ಡಿಯ ಹಳೆಯ ಪಟಾಲಂ ಗ್ಯಾಂಗ್ ತನ್ನದೆ ಬಳಗ ಮಾಡಿಕೊಂಡು ರಾಜಕೀಯವಾಗಿ, ಆರ್ಥಿಕವಾಗಿ ಬೆಳೆದಿತ್ತು. ಬೆಳೆಯುತ್ತಿದಂತೆಯೇ ಗ್ಯಾಂಗ್​ನವರು ಜನಾರ್ದನ್ ರೆಡ್ಡಿಯನ್ನು ಮರತೇ ಬಿಟ್ಟಿದ್ದರು. ರೆಡ್ಡಿಗಿಂತ ನಾವೇನು ಕಮ್ಮಿ ಇಲ್ಲ ಎನ್ನುವಂತೆ ಅವರಿಗೆ ಸೆಡ್ಡು ಹೊಡೆದು ನಿಲ್ಲುವ ಹಾಗೆ ನಿಂತಿದ್ದರು. ಮಾತು ಮಾತಿಗೂ ರೆಡ್ಡಿಯನ್ನ ವಿರೋಧ ಮಾಡಿದ್ರು. ಆದರೆ ಈಗ ರೆಡ್ಡಿ ಮತ್ತೆ ಬಳ್ಳಾರಿಗೆ ಎಂಟ್ರಿ ಕೊಡುವ ಬಗ್ಗೆ ತಿಳಿಯುತ್ತಿದಂತೆಯೇ ವಿರೋಧಿ ಬಣ ಸೈಲೆಂಟ್ ಆಗಿದೆ. ಇನ್ನು ಶ್ರೀರಾಮುಲು, ಸಹೋದರ ಸೋಮಶೇಖರ್ ರೆಡ್ಡಿ, ಕರುಣಾಕರ್ ರೆಡ್ಡಿ, ಸುರೇಶ ಬಾಬು, ಆನಂದ ಸಿಂಗ್, ನಾಗೇಂದ್ರ, ಕೊಂಡಯ್ಯ, ಸಂತೋಷ ಲಾಡ್ ರ ನಡುವೆ ರಾಜಕೀಯ ಬಿನ್ನಾಭಿಪ್ರಾಯ ವೈಮನಸ್ಸು ಉಂಟಾಗಿ ದೂರ – ದೂರ ಆಗಿದ್ದಾರೆ. ಮುಂದೆ ಇದೆಲ್ಲವನ್ನ ಹೇಗೆ ನಿಭಾಯಿಸುತ್ತಾರೆ? ಅಥವಾ ಅವರಿಂದ ದೂರವಿದ್ದೇ ತಮ್ಮ ಪಾರುಪತ್ಯ ಸಾಧಿಸುತ್ತಾರೆ ಅನ್ನೊದು ಕುತೂಹಲ ಮೂಡಿಸಿದೆ.

ಜನಾರ್ದನ ರೆಡ್ಡಿ ಮುಂದಿವೆ ಹಲವು ಸವಾಲು

ಇನ್ನು ಮೊದಲಿದ್ದ ರೆಡ್ಡಿ ಪಡೆ ಸದ್ಯಕ್ಕೆ ಬಳ್ಳಾರಿಯಲ್ಲಿಲ್ಲ. ಮತ್ತೆ ಹೊಸದಾಗಿ ತನ್ನ ಪಡೆ ಕಟ್ಟಬೇಕು ಅದಾದ ಮೇಲೆ ಎಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಹಲವು ಸವಾಲಗಳು ಅವರ ಮುಂದಿವೆ ಅವುಗಳನ್ನ ಹೇಗೆ ನಿಭಾಯಿಸುತ್ತಾರೆ ಎಂಬುದೇ ಸದ್ಯದ ಮಟ್ಟಿಗೆ ಯಕ್ಷ ಪ್ರಶ್ನೆಯಾಗಿದೆ.

ಇದನ್ನೂ ಓದಿ: ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್: ಪೂರ್ವಾನುಮತಿ ಇಲ್ಲದೆ ಬಳ್ಳಾರಿ ಪ್ರವೇಶಕ್ಕೆ ಅನುಮತಿ

2023ರ ವಿಧಾನ ಸಭಾ ಚುನಾವಣೆಯಲ್ಲಿ ತನ್ನದೆ ಸ್ವಂತ ಪಕ್ಷ ಕಟ್ಟಿದ ರೆಡ್ಡಿ ಸೋಮಶೇಖರ ರೆಡ್ಡಿ, ಶ್ರೀರಾಮುಲರನ್ನ ತನ್ನ ಪಕ್ಷಕ್ಕೆ ಕರೆದಿದ್ದರು. ಆದರೆ ಆ ಹೊತ್ತಲ್ಲಿ ಇಬ್ಬರೂ ಬರಲಿಲ್ಲ. ಹೀಗಾಗಿ ಆಗಿನಿಂದಲೂ ಸ್ವಲ್ಪ ವೈಮನಸ್ಸು, ಭಿನ್ನಾಭಿಪ್ರಾಯ ಮೂಡಿವೆ. ಆಸ್ತಿ ವಿಚಾರಕ್ಕೆ ಮನಸ್ಸುಗಳು ದೂರ ದೂರ ಆಗಿವೆ ಎಂಬ ಚರ್ಚೆಯೂ ಇದೆ. 14 ವರ್ಷಗಳ ಬಳಿಕ ರೆಡ್ಡಿ ಬಳ್ಳಾರಿಗೆ ಬರುತ್ತಿದ್ದು, ಈಗ ಯಾವ ರೀತಿ ರಾಜಕೀಯ ಬದಲಾವಣೆ ಆಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Daily Devotional: ಮಹಾಲಯ ಅಮಾವಾಸ್ಯೆ ಪಿತೃಪಕ್ಷದ ಮಹತ್ವ ತಿಳಿಯಿರಿ
Daily Devotional: ಮಹಾಲಯ ಅಮಾವಾಸ್ಯೆ ಪಿತೃಪಕ್ಷದ ಮಹತ್ವ ತಿಳಿಯಿರಿ
Nithya Bhavishya: ಈ ರಾಶಿಯವರಿಗೆ ಪ್ರಭಾವಿ ವ್ಯಕ್ತಿಗಳಿಂದ ಕೆಲಸ ಆಗಲಿದೆ
Nithya Bhavishya: ಈ ರಾಶಿಯವರಿಗೆ ಪ್ರಭಾವಿ ವ್ಯಕ್ತಿಗಳಿಂದ ಕೆಲಸ ಆಗಲಿದೆ
ರಾಹುಲ್ ಗಾಂಧಿ ಕಾರಿನ ಪಕ್ಕ ಬೈಕ್​ನಲ್ಲಿ ಕೋಲು ಹಿಡಿದು ಬಂದ ವ್ಯಕ್ತಿ
ರಾಹುಲ್ ಗಾಂಧಿ ಕಾರಿನ ಪಕ್ಕ ಬೈಕ್​ನಲ್ಲಿ ಕೋಲು ಹಿಡಿದು ಬಂದ ವ್ಯಕ್ತಿ
ಪೊಲೀಸ್ ಠಾಣೆ ಮುಂದೆ ಯುವಕನ ಹೈಡ್ರಾಮಾ: ಕೊನೆಗೆ ಪೊಲೀಸ್​ ಮಾಡಿದ್ದೇನು?
ಪೊಲೀಸ್ ಠಾಣೆ ಮುಂದೆ ಯುವಕನ ಹೈಡ್ರಾಮಾ: ಕೊನೆಗೆ ಪೊಲೀಸ್​ ಮಾಡಿದ್ದೇನು?
ಆಂಧ್ರಪ್ರದೇಶದ ಎಟಿಎಂನಲ್ಲಿ ಹಾವು ಕಂಡು ಬೆಚ್ಚಿಬಿದ್ದ ಜನ
ಆಂಧ್ರಪ್ರದೇಶದ ಎಟಿಎಂನಲ್ಲಿ ಹಾವು ಕಂಡು ಬೆಚ್ಚಿಬಿದ್ದ ಜನ
‘ದೇವರು ಬಂದ್ರು, ಹುಲಿ ಬಂತು’: ದರ್ಶನ್ ಕಂಡು ಜೈಕಾರ ಹಾಕಿದ ಫ್ಯಾನ್ಸ್
‘ದೇವರು ಬಂದ್ರು, ಹುಲಿ ಬಂತು’: ದರ್ಶನ್ ಕಂಡು ಜೈಕಾರ ಹಾಕಿದ ಫ್ಯಾನ್ಸ್
ರೆಡ್ಮಿ ಲೇಟೆಸ್ಟ್ ಸ್ಮಾರ್ಟ್​​ಫೋನ್ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ!
ರೆಡ್ಮಿ ಲೇಟೆಸ್ಟ್ ಸ್ಮಾರ್ಟ್​​ಫೋನ್ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ!
ಜಿಗಣಿಯಲ್ಲಿ ಪಾಕಿಸ್ತಾನ ಪ್ರಜೆ ಬಂಧನ: ಗೃಹ ಸಚಿವ ಪರಮೇಶ್ವರ್ ಹೇಳಿದ್ದಿಷ್ಟು​
ಜಿಗಣಿಯಲ್ಲಿ ಪಾಕಿಸ್ತಾನ ಪ್ರಜೆ ಬಂಧನ: ಗೃಹ ಸಚಿವ ಪರಮೇಶ್ವರ್ ಹೇಳಿದ್ದಿಷ್ಟು​
ಡಿಸಿಎಂ ಡಿ.ಕೆ ಶಿವಕುಮಾರ್ ಸುದ್ದಿಗೋಷ್ಠಿ ಲೈವ್ ​
ಡಿಸಿಎಂ ಡಿ.ಕೆ ಶಿವಕುಮಾರ್ ಸುದ್ದಿಗೋಷ್ಠಿ ಲೈವ್ ​
ಅತ್ಯದ್ಭುತ ಕ್ಯಾಚ್ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ ಸಿರಾಜ್
ಅತ್ಯದ್ಭುತ ಕ್ಯಾಚ್ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ ಸಿರಾಜ್