ಐತಿಹಾಸಿಕ ಹಂಪಿ ಸ್ಮಾರಕದ ನೈಜ ಸ್ವರೂಪಕ್ಕೆ ಧಕ್ಕೆ ಆರೋಪ: ನಿಯಮ ಉಲ್ಲಂಘಿಸಿ ಬಡವಿಲಿಂಗಕ್ಕೆ ಬೇಲಿ!

|

Updated on: May 18, 2023 | 9:30 PM

ಹಂಪಿಯ ಬಡವಿಲಿಂಗ ಸ್ಮಾರಕದ ಬಳಿಯ ನಿಯಮಾವಳಿ ಅನ್ವಯವೇ ಕಾಮಗಾರಿ ಮಾಡಲಾಗುತ್ತಿದೆ ಎಂದು ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳು ವಾದಿಸುತ್ತಿದ್ದಾರೆ.

ಐತಿಹಾಸಿಕ ಹಂಪಿ ಸ್ಮಾರಕದ ನೈಜ ಸ್ವರೂಪಕ್ಕೆ ಧಕ್ಕೆ ಆರೋಪ: ನಿಯಮ ಉಲ್ಲಂಘಿಸಿ ಬಡವಿಲಿಂಗಕ್ಕೆ ಬೇಲಿ!
ನಿಯಮ ಉಲ್ಲಂಘಿಸಿ ಬಡವಿಲಿಂಗಕ್ಕೆ ಬೇಲಿ ಹಾಕುತ್ತಿರುವುದು
Follow us on

ಬಳ್ಳಾರಿ: ವಿಶ್ವ ವಿಖ್ಯಾತ ಹಂಪಿ (Hampi) ಯಾರಿಗೆ ಗೊತ್ತಿಲ್ಲ ಹೇಳಿ, ಕಣ್ಣಿದ್ರೆ ಕನಕಗಿರಿ. ಕಾಲಿದ್ರೆ ಹಂಪಿ ನೋಡಬೇಕು ಅಂತಾರೆ. ಇತಂಹ ವಿಶ್ವ ಪ್ರಸಿದ್ದ ಹಂಪಿ ವೀಕ್ಷಣೆಗೆ ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಐತಿಹಾಸಿಕ ಸ್ಮಾರಕದ ನೈಜ ಸ್ವರೂಪಕ್ಕೆ ದಕ್ಕೆಯುಂಟು ಮಾಡಿ ಹಂಪಿಯಲ್ಲಿ ಕಾಮಗಾರಿ ಮಾಡುತ್ತಿರುವ ಘಟನೆಯೊಂದು ನಡೆದಿದೆ. ವಿಶ್ವ ವಿಖ್ಯಾತ ಹಂಪಿಯ ಸ್ಮಾರಕಗಳಿಗೆ ಅದರದ್ದೆಯಾದ ಇತಿಹಾಸ ಪರಂಪರೆಯಿದೆ. ಯುನೆಸ್ಕೂ ಪಟ್ಟಿಗೆ ಸೇರಿರುವ ಹಂಪಿಯಲ್ಲಿ ಏನೇ ಕಾಮಗಾರಿ ಮಾಡಿದ್ರು ಸ್ಮಾರಕಗಳ ಸಹಜತೆಗೆ ಧಕ್ಕೆಯುಂಟು ಮಾಡಬಾರದು ಅನ್ನೋ ನಿಯಮವಿದೆ. ಆದರೆ ಇದೀಗ ಹಂಪಿಯ ಬಡವಿಲಿಂಗ ದೇವಸ್ಥಾನದ ಬಳಿ ಮಾಸ್ಕರ್ ಪ್ಲ್ಯಾನ್ ಉಲ್ಲಂಘನೆ ಮಾಡಿ ಕಾಮಗಾರಿ ಮಾಡಲಾಗುತ್ತಿದೆ.

ವಿಶ್ವ ವಿಖ್ಯಾತ ಹಂಪಿ ಯುನೆಸ್ಕೂ ಪಟ್ಟಿಗೆ ಸೇರಿದೆ. ಐತಿಹಾಸಿಕ ಸ್ಮಾರಕಗಳು. ನೂರಾರು ವರ್ಷಗಳ ಇತಿಹಾಸ ಹೊಂದಿರುವ ವಿಶ್ವ ವಿಖ್ಯಾತ ಹಂಪಿಗೆ ತನ್ನದೇಯಾದ ಪರಂಪರೆಯಿದೆ. ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ಸ್ಮಾರಕಗಳು ಇಲ್ಲಿವೆ. ಹಂಪಿಯ ಸ್ಮಾರಕಗಳ ರಕ್ಷಣೆಗಾಗೇ ಯುನೆಸ್ಕೂ ಮಾರ್ಗದರ್ಶದ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಆದರೆ ಇದೀಗ ಯುನೆಸ್ಕೂ ಗೈಡ್ ಲೆನ್ಸ್ ಉಲ್ಲಂಘಿಸಿ ಕಾಮಗಾರಿ ನಡೆಸುತ್ತಿರುವುದಕ್ಕೆ ಸ್ಥಳೀಯರು ಆಕ್ರೋಶ ಹೊರಹಾಕುತ್ತಿದ್ದಾರೆ.

ಇದನ್ನೂ ಓದಿ: Geetha Shivarajkumar: ಹೊಸಪೇಟೆ – ಅಪ್ಪು ಕನಸಿನ ಶಕ್ತಿಧಾಮದ ಮೂಲಕ ಮತ್ತೊಂದು ಶಾಲೆ ದತ್ತು, ಇಂಗಳಗಿ ಶಾಲೆ ದತ್ತು ಪಡೆದ ಗೀತಾ ಶಿವರಾಜಕುಮಾರ್

ವಿಶ್ವ ಪ್ರಸಿದ್ದ ಹಂಪಿಯ ಬಡವಿಲಿಂಗ ಹಾಗೂ ಕೃಷ್ಣ ದೇವಸ್ಥಾನದ ಹಿಂಬದಿಯಲ್ಲೀಗ ಬೇಲಿ ನಿರ್ಮಾಣ ಕಾರ್ಯ ಮಾಡಲಾಗುತ್ತಿದೆ. ಜಿ-20 ಶೃಂಗಸಭೆಯ ಹಿನ್ನಲೆಯಲ್ಲಿ ಅಗತ್ಯ ಮೂಲಸೌಕರ್ಯ. ಪಾರ್ಕಿಂಗ್ ವ್ಯವಸ್ಥೆಗಾಗಿ ಬಡವಿಲಿಂಗದ ಬಳಿ ಬೇಲಿ ನಿರ್ಮಾಣ ಕಾರ್ಯ ಮಾಡಲಾಗುತ್ತಿದೆ. ಆದರೆ ಕಾಮಗಾರಿ ನಡೆಸುವ ವೇಳೆ ಯುನೆಸ್ಕೂ ಮಾರ್ಗದರ್ಶಿಯ ಸೂತ್ರಗಳನ್ನ ಉಲ್ಲಂಘಿಸಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಅಂತಾ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಸ್ಮಾರಕಗಳ ನೈಜ ಸ್ವರೂಪಕ್ಕೆ ದಕ್ಕೆಯುಂಟು ಮಾಡುವಂತೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಅಂತಾ ಪ್ರವಾಸಿಪ್ರೀಯರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಸೋತಿದ್ದಕ್ಕೆ ಬಿಕ್ಕಿ ಬಿಕ್ಕಿ ಅತ್ತ ಅಭಿಮಾನಿಗಳು, ಇದನ್ನು ನೋಡಿ ಗದ್ಗದಿತರಾದ ಶ್ರೀರಾಮುಲು: ವಿಡಿಯೋ ವೈರಲ್

ಹಂಪಿಯ ಬಡವಿಲಿಂಗ ಸ್ಮಾರಕದ ಬಳಿಯ ನಿಯಮಾವಳಿ ಅನ್ವಯವೇ ಕಾಮಗಾರಿ ಮಾಡಲಾಗುತ್ತಿದೆ ಎಂದು ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳು ವಾದಿಸುತ್ತಿದ್ದಾರೆ. ಆದರೆ ಹಂಪಿಯ ಸುತ್ತಮುತ್ತ ಇರೋ ಹೋಮ ಸ್ಟೇ, ಮನೆ ನಿರ್ಮಾಣ ಕಾರ್ಯಕ್ಕೆ ಅಡ್ಡಿಪಡಿಸುವ ಅಧಿಕಾರಿಗಳು ಇದೀಗ ಅವರೇ ನಿಯಮ ಉಲ್ಲಂಘಿಸಿ ಕಾಮಗಾರಿ ಮಾಡ್ತಿದ್ದಾರೆ ಅನ್ನೋ ಆರೋಪ ಸ್ಥಳೀಯರದ್ದಾಗಿದೆ.

ಅಲ್ಲದೇ ಬೇಲಿ ನಿರ್ಮಾಣಕ್ಕೆ ಬೃಹತ್ತಾದ ತಗ್ಗುಗುಂಡಿಗಳನ್ನ ತೋಡಿರುವುದು ಸ್ಮಾರಕಗಳ ನೈಜ ಸ್ವರೂಪಕ್ಕೆ ದಕ್ಕೆಯುಂಟಾಗಲಿದೆ ಅನ್ನೋದು ಸ್ಥಳೀಯರ ವಾದವಾಗಿದೆ. ಹೀಗಾಗಿ ವಿಶ್ವ ವಿಖ್ಯಾತ ಹಂಪಿಯ ಸ್ಮಾರಕಗಳ ರಕ್ಷಣೆಗೆ ದಕ್ಕೆಯಾಗದಂತೆ ಕ್ರಮ ಕೈಗೊಳ್ಳಲು ಸಂಬಧಪಟ್ಟವರು ಮುಂದಾಗಬೇಕಿದೆ. ಆಗ ಮಾತ್ರ ವಿಶ್ವ ವಿಖ್ಯಾತ ಹಂಪಿಯ ಸ್ಮಾರಕಗಳನ್ನ ಇನ್ನಷ್ಟು ವರ್ಷಗಳ ಕಾಲ ಕಾಪಾಡಬಹುದಾಗಿದೆ.

ವರದಿ: ವೀರೇಶ್​​ ದಾನಿ, ಟಿವಿ9, ಬಳ್ಳಾರಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:29 pm, Thu, 18 May 23