ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಕೇಸ್: ಬಳ್ಳಾರಿ ಜ್ಯುವೆಲ್ಲರಿ ಅಂಗಡಿ ಮಾಲೀಕ, ಉದ್ಯಮಿ ಸಾಹಿಲ್ ಜೈನ್ ಬಂಧನ
ಬಳ್ಳಾರಿ ಮೂಲದ ಆಭರಣ ವ್ಯಾಪಾರಿ ಸಾಹಿಲ್ ಜೈನ್ ಅನ್ನು ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಯು ರನ್ಯಾ ಮತ್ತು ತರುಣ್ ರಾಜ್ ಜೊತೆ ಸಂಪರ್ಕ ಹೊಂದಿದ್ದರು ಮತ್ತು ಅಕ್ರಮ ಚಿನ್ನದ ವ್ಯವಹಾರದಲ್ಲಿ ಶಾಮೀಲಾಗಿದ್ದರು ಎಂದು ಶಂಕಿಸಲಾಗಿದೆ. ಬಂಧಿತ ಸಾಹಿಲ್ ಜೈನ್ ಯಾರು? ಹಿನ್ನೆಲೆ ಏನು? ಎಲ್ಲ ವಿವರ ಇಲ್ಲಿದೆ.

ಬಳ್ಳಾರಿ, ಮಾರ್ಚ್ 27: ರನ್ಯಾ ರಾವ್ (Ranya Rao) ಚಿನ್ನ ಕಳ್ಳಸಾಗಣೆ (Gold Smuggling) ಪ್ರಕರಣದ ಜಾಲಾಡುತ್ತಿರುವ ಡಿಆರ್‌ಐ (DRI Officials) ಅಧಿಕಾರಿಗಳು, ಮತ್ತೊಂದು ಬೇಟೆಯಾಡಿದ್ದಾರೆ. ಜ್ಯುವೆಲ್ಲರಿ ಅಂಗಡಿ ಮಾಲೀಕ, ಬಳ್ಳಾರಿ ಮೂಲದ ಸಾಹಿಲ್ ಜೈನ್ ಎಂಬವರನ್ನು ಬಂಧಿಸಿದ್ದಾರೆ. ಈಗಾಗಲೇ ರನ್ಯಾ ರಾವ್ ಮತ್ತು ಆಕೆಯ ಮಾಜಿ ಬಾಯ್‌ಫ್ರೆಂಡ್ ತರುಣ್‌ನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದಾಗ ಸಾಹಿಲ್‌ನ ಸಂಪರ್ಕ ಇದ್ದುದು ಬಯಲಾಗಿದೆ. ಹೀಗಾಗಿ ಸಾಹಿಲ್ ಅನ್ನು 4 ದಿನಗಳ ಮಟ್ಟಿಗೆ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಚಿನ್ನ ಕರಗಿಸುತ್ತಿದ್ದ ಸಾಹಿಲ್!
ಜ್ಯುವೆಲ್ಲರಿ ಅಂಗಡಿ ಮಾಲೀಕನಾಗಿರುವ ಬಂಧಿತ ಸಾಹಿಲ್, ಬೆಂಗಳೂರಿನಲ್ಲೂ ಬ್ರ್ಯಾಂಚ್ ಹೊಂದಿದ್ದಾರೆ. ರನ್ಯಾರಾವ್ ಮತ್ತು ತರುಣ್ ರಾಜ್ ಜೊತೆ ನಿರಂತರ ಸಂಪರ್ಕದಲ್ಲಿದ್ದ ಸಾಹಿಲ್, ಅಕ್ರಮವಾಗಿ ತರುತ್ತಿದ್ದ ಚಿನ್ನ ಮತ್ತು ಚಿನ್ನದ ಪೀಸ್‌ಗಳನ್ನ ಖರೀದಸುತ್ತಿದ್ದರು. ಚಿನ್ನ ಕರಗಿಸಿ ಬಂದ ಹಣವನ್ನು ಕೊಡುತ್ತಿದ್ದರು. ಇದಕ್ಕಾಗಿ 10ರಿಂದ 15 ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದರು. ಈ ಬಗ್ಗೆ ಡಿಆರ್‌ಐ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ.
ಯಾರು ಈ ಸಾಹಿಲ್ ಜೈನ್?
ಬಂಧಿತ ಸಾಹಿಲ್ ಜೈನ್ ಮೂಲತಃ ಬಳ್ಳಾರಿಯವರು. ಸಾಹಿಲ್ ತಂದೆ ಮಹೇಂದ್ರ ಜೈನ್ ಬಟ್ಟೆವ್ಯಾಪಾರಿಯಾಗಿದ್ದು, ಬಳ್ಳಾರಿಯಲ್ಲೇ ಬಟ್ಟೆ ಅಂಗಡಿ ನಡೆಸುತ್ತಾ ವಾಸವಿದ್ದರು. ಹಲವು ವರ್ಷಗಳ ಹಿಂದೆ ಅವರ ಕುಟುಂಬ ಬೆಂಗಳೂರಿಗೆ ಸ್ಥಳಾಂತರವಾಗಿತ್ತು. ಸಾಹಿಲ್ ಮಾತ್ರ ತನ್ನ ಸೋದರ ಮಾವನ ಜೊತೆ ಮುಂಬೈನಲ್ಲಿ ವಾಸವಿದ್ದರು. ಈ ಹಿಂದೆ ಸ್ಮಗ್ಲಿಂಗ್ ಕೇಸ್‌ನಲ್ಲಿ ಸಾಹಿಲ್‌ನನ್ನು ಮುಂಬೈ ಏರ್‌ಪೋರ್ಟ್‌ನಲ್ಲಿ ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದರು. ಚಿನ್ನದ ವ್ಯಾಪಾರಿಗಳ ಜೊತೆ ನಂಟು ಹಿನ್ನೆಲೆ ಸಾಹಿಲ್ ಮಾರಾಟದ ಜವಾಬ್ದಾರಿ ಹೊತ್ತಿದ್ದರು ಎಂಬುದು ಗೊತ್ತಾಗಿದೆ. ಇದೇ ಕಸುಬನ್ನು ಈಗಲೂ ಮುಂದುವರೆಸಿದ್ದ ಸಾಹಿಲ್, ರನ್ಯಾ, ತರುಣ್‌ಗೂ ಚಿನ್ನ ಮಾರಾಟದಲ್ಲಿ ಸಹಾಯ ಮಾಡಿದ್ದರು ಎಂಬ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ರನ್ಯಾ ರಾವ್ ಗೋಲ್ಡ್ ಸ್ಮಂಗ್ಲಿಂಗ್ ಕೇಸ್: 2ನೇ ಆರೋಪಿ ತರುಣ್ಗೆ ಬಿಗ್ ಶಾಕ್!
ಮತ್ತೊಂದೆಡೆ, ಈಗಾಗಲೇ ಕೋರ್ಟ್‌ಗೆ ದಾಖಲೆ ಸಲ್ಲಿಸಿರೋ ಡಿಆರ್‌ಐ ಅಧಿಕಾರಿಗಳು, ಆರೋಪಿ ತರುಣ್ ರಾಜ್ ಬಂಧನಕ್ಕೆ ಕಾರಣ ನೀಡಿದ್ದಾರೆ. ಒಮ್ಮೆ 4ಕೆಜಿ ಚಿನ್ನ, ಮತ್ತೊಮ್ಮೆ 2 ಕೆಜಿ ಚಿನ್ನ ಸಾಗಿಸಿದ್ದಾಗಿ ತರುಣ್ ರಾಜ್ ಒಪ್ಪಿಕೊಂಡಿದ್ದಾನೆ. ಜಿನೀವಾಗೆ ಹೋಗುವುದಾಗಿ ಹೇಳಿ ಭಾರತಕ್ಕ ಚಿನ್ನ ತರುತ್ತಿದ್ದಾಗಿ ತರುಣ್ ಹೇಳಿಕೆ ದಾಖಲಿಸಿದ್ದನ್ನು ಕೋರ್ಟ್‌ಗೆ ಸಲ್ಲಿಸಲಾಗಿದೆ.