AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರನ್ಯಾ ರಾವ್​​ ಗೋಲ್ಡ್ ಸ್ಮಂಗ್ಲಿಂಗ್​ ಕೇಸ್​: 2ನೇ ಆರೋಪಿ ತರುಣ್​ಗೆ ಬಿಗ್ ಶಾಕ್​!

ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಈ ಪ್ರಕರಣದ ಎರಡನೇ ಆರೋಪಿ ತರುಣ್ ರಾಜು ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ರನ್ಯಾ ಮತ್ತು ತರುಣ್ ಇಬ್ಬರೂ ದುಬೈಗೆ ಹೋಗಿ ಚಿನ್ನದ ಕಳ್ಳಸಾಗಣೆ ಮಾಡುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ರನ್ಯಾ ಪತಿ ಜತಿನ್ ಮನೆ ಮೇಲೆ ಇಡಿ ದಾಳಿ ಮಾಡಲಾಗಿತ್ತು.

ರನ್ಯಾ ರಾವ್​​ ಗೋಲ್ಡ್ ಸ್ಮಂಗ್ಲಿಂಗ್​ ಕೇಸ್​: 2ನೇ ಆರೋಪಿ ತರುಣ್​ಗೆ ಬಿಗ್ ಶಾಕ್​!
ರನ್ಯಾ ರಾವ್​​ ಗೋಲ್ಡ್ ಸ್ಮಂಗ್ಲಿಂಗ್​ ಕೇಸ್​: 2ನೇ ಆರೋಪಿ ತರುಣ್​ಗೆ ಬಿಗ್ ಶಾಕ್​!
Shivaprasad B
| Edited By: |

Updated on: Mar 19, 2025 | 6:32 PM

Share

ಬೆಂಗಳೂರು, ಮಾರ್ಚ್​ 19: ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ (Ranya Rao) ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ತಗ್ಲಾಕ್ಕೊಂಡಿದ್ದು, ಈ ಬಿಸ್ಕೆಟ್ ಬ್ಯೂಟಿ ಸದ್ಯ ಪರಪ್ಪನ ಅಗ್ರಹಾರ ಸೇರಿದ್ದಾರೆ. ಇನ್ನು ಇದೇ ಪ್ರಕರಣ ಎರಡನೇ ಆರೋಪಿಯಾಗಿರುವ ತರುಣ್ ರಾಜು (Tarun raju) ಜಾಮೀನು ಅರ್ಜಿಯನ್ನು ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್‌ ಬುಧವಾರ ವಜಾಗೊಳಿಸಿದೆ. ವಿಶ್ವನಾಥ್ ಸಿ ಗೌಡರ್​​ರಿಂದ ತರುಣ್ ಜಾಮೀನು ಅರ್ಜಿ ವಜಾಗೊಳಿಸಿ ಆದೇಶಿಸಲಾಗಿದೆ.

ಇನ್ನು ಗೋಲ್ಡ್ ಸ್ಮಗ್ಲಿಂಗ್​ನ 2ನೇ ಆರೋಪಿ ತರುಣ್ ರಾಜುಗೆ ಇತ್ತೀಚೆಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಡಿಆರ್​​​ಐ ಕಸ್ಟಡಿ ಅವಧಿ ಮುಗಿದಿದ್ದರಿಂದ ಇತ್ತೀಚೆಗೆ ಜಡ್ಜ್ ಮನೆಗೆ ಹಾಜರುಪಡಿಸಿಲಾಗಿತ್ತು. ಡಿಆರ್​ಐ ಅಧಿಕಾರಿಗಳು ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಮನವಿ ಮಾಡಿದ್ದರಿಂದ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಆದೇಶಿಸಲಾಗಿತ್ತು. ಇದೇ ವೇಳೆ ತರುಣ್ ರಾಜು ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ DRIಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿತ್ತು. ಅದರಂತೆ DRI ಅಧಿಕಾರಿಗಳು ಆಕ್ಷೇಪಣೆ ಸಲ್ಲಿಸಲಿದ್ದರು.

ಇದನ್ನೂ ಓದಿ: ‘ರನ್ಯಾ ಮನಸ್ಥಿತಿ ನೋಡಿದರೆ ಜೈಲಿನಲ್ಲಿ ಇರುವುದು ಸೂಕ್ತ’: ಡಿಆರ್​ಐ ಪರ ವಕೀಲರ ವಾದ

ಇದನ್ನೂ ಓದಿ
Image
‘ರನ್ಯಾ ಮನಸ್ಥಿತಿ ನೋಡಿದರೆ ಜೈಲಿನಲ್ಲಿ ಇರುವುದು ಸೂಕ್ತ’: ಡಿಆರ್​ಐ ವಾದ
Image
ಚಿನ್ನ ಕಳ್ಳ ಸಾಗಣೆ: ರನ್ಯಾ ಜತೆ ನಿರಂತರ ಸಂಪರ್ಕದಲ್ಲಿ ಇದ್ದ ಪ್ರಭಾವಿಗಳು
Image
ಚಿನ್ನ ಕಳ್ಳಸಾಗಣೆ: ನಟಿ ರನ್ಯಾ ರಾವ್ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಸಿಬಿಐ
Image
ಅಧಿಕಾರಿಗಳ ಮುಂದೆ ಗೋಲ್ಡ್ ಸ್ಮಗ್ಲಿಂಗ್ ಬಗ್ಗೆ ಒಪ್ಪಿಕೊಂಡ ನಟಿ ರನ್ಯಾ ರಾವ್

ಅಮೇರಿಕಾದಲ್ಲಿ ಹುಟ್ಟಿ ಬೆಳೆದು ಭಾರತಕ್ಕೆ ಬಂದಿದ್ದ ತರುಣ್​ ರಾಜು, ಸಾವಿರಾರು ಕೋಟಿಗೆ ಬಾಳುವ ಫ್ಯಾಮಿಲಿಯವನು. ಕಾಲೇಜು ಸಮಯದಿಂದ ರನ್ಯಾ ಜತೆಗೆ ಗೆಳೆತನವೂ ಇತ್ತು. ಆದರೆ 2017 ನಂತರ ರನ್ಯಾಗೆ ಅಷ್ಟೇನೂ ಸಿನಿಮಾಗಳು ಸಿಗಲಿಲ್ಲ. ಹೀಗಾಗಿ ಬಿಜಿನೆಸ್​ ಪ್ಲ್ಯಾನ್​ ಮಾಡಿ ದುಬೈಗೆ ಇಬ್ಬರೂ ಓಡಾಡುತ್ತಿದ್ದರು. 2023ರ ನಂತರ ಗೋಲ್ಡ್ ಸ್ಮಗ್ಲಿಂಗ್ ಶುರು ಮಾಡಿರುವ ಬಗ್ಗೆ ಮಾಹಿಗಳು ಬಹಿರಂಗವಾಗಿವೆ.

ರನ್ಯಾ ಪತಿ ಜತಿನ್​ ಮನೆ ಮೇಲೆ ಇಡಿ ದಾಳಿ

ಇನ್ನು ಇತ್ತೀಚೆಗೆ ರನ್ಯಾ ಪತಿ ಜತಿನ್​ಗೆ ಸಂಬಂಧಿಸಿದ ಮನೆ ಮೇಲೆ ಇಡಿ ಅದಿಕಾರಿಗಳು ದಾಳಿ ಮಾಡಿದ್ದರು. ಮೂರು ಗಂಟೆಗಳ ಕಾಲ ವಿಚಾರಣೆ ಮಾಡಿದ್ದರು. ಯಾಕಂದರೆ, ರನ್ಯಾ ದುಬೈ ಟಿಕೆಟ್​ ಬುಕ್ಕಿಂಗ್​ ಮಾಡಲು ಪತಿ ಜತಿನ್​ ಕ್ರೆಡಿಟ್​ ಕಾರ್ಡ್​ ಬಳಕೆ ಮಾಡಿದ್ದರು. ಮಾರ್ಚ್​ 1ರಂದು Emirates ವೆಬ್​ಸೈಟ್​​ನಲ್ಲಿ ರನ್ಯಾ ಟಿಕೆಟ್​ ಬುಕ್ ಮಾಡಿದ್ದು, ನಿಮ್ಮ ಬಳಿ ಓಟಿಪಿ ಕೇಳಿಲ್ವಾ ಅಂತಾ ಪ್ರಶ್ನಿಸಲಾಗಿತ್ತು.

ಇದನ್ನೂ ಓದಿ: ಚಿನ್ನ ಕಳ್ಳ ಸಾಗಣೆ ಕೇಸ್: ರನ್ಯಾ ರಾವ್ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದ ಪ್ರಭಾವಿ ವ್ಯಕ್ತಿಗಳು

ಸದ್ಯ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಆರೋಪಿಗಳಿಗೆ ನಡುಕು ಶುರುವಾಗಿದೆ. ಹವಾಲ ಹಣ ವರ್ಗಾವಣೆ, ಅಕ್ರಮ ಹಣ ವರ್ಗಾವಣೆ, ಚಿನ್ನ ಮತ್ತು 12 ಕೋಟಿ ರೂ ವಹಿವಾಟು ನಡೆದಿರೋದ್ರಿಂದ ಇಡಿ ಎಂಟ್ರಿ ಕೊಟ್ಟಿದೆ. ಜ್ಯುವೆಲ್ಲರಿ ಶಾಪ್‌ಗಳ ಮೂಲ, ಹಣ ಎಲ್ಲಿಂದ ಬಂತು, ಬ್ಯಾಂಕ್ ಖಾತೆಗಳ ಮಾಹಿತಿ ಪಡೆದಿರುವ ಇಡಿ, ಈಗಾಗಲೇ ತನಿಖೆಗಿಳಿದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ
ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ
ಗಿಲ್ಲಿ ನಟ ಬರೆದು ಹಾಡಿದ ರ್ಯಾಪ್ ಸಾಂಗ್ ಪೂರ್ಣ ವಿಡಿಯೋ ಇಲ್ಲಿದೆ
ಗಿಲ್ಲಿ ನಟ ಬರೆದು ಹಾಡಿದ ರ್ಯಾಪ್ ಸಾಂಗ್ ಪೂರ್ಣ ವಿಡಿಯೋ ಇಲ್ಲಿದೆ