ಹುಣ್ಣಿಮೆ ಆರಂಭವಾದ ದಿನದಿಂದಲೂ ನಮಗೆ ಕೆಲವು ವ್ಯವಹಾರಗಳು ಕಾಡಿಸುತ್ತಿವೆ: ಸಿರಿಗೇರಿ ತರಳಬಾಳು ಶ್ರೀ
ಹುಣ್ಣಿಮೆಯಂದು ಆದ ಕಲ್ಲು ತೂರಾಟದ ಕುರಿತು ಇಂದು(ಜ.31) ತರಳುಬಾಳು ಹುಣ್ಣಿಮೆಯ ಸಾನಿಧ್ಯವಹಿಸಿ ಸಿರಿಗೇರಿಯ ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿದರು.
ವಿಜಯನಗರ: ಕೊಟ್ಟೂರು ಪಟ್ಟಣದಲ್ಲಿ ತರಳಬಾಳು ಹುಣ್ಣಿಮೆ ಅಂಗವಾಗಿ ಜ.28 ರಂದು ಆಯೋಜಿಸಿದ್ದ ಬೈಕ್ ರ್‍ಯಾಲಿ ವೇಳೆ ಆದ ಕಲ್ಲು ತೂರಾಟ ಕುರಿತು ಇಂದು ಕೊಟ್ಟೂರಿನಲ್ಲಿ ನಡೆಯುತ್ತಿರುವ ತರಳುಬಾಳು ಹುಣ್ಣಿಮೆಯ ಸಾನಿಧ್ಯವಹಿಸಿದ ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಹುಣ್ಣಿಮೆ ಆರಂಭವಾದ ದಿನದಿಂದಲೂ ನಮಗೆ ಕೆಲವು ವ್ಯವಹಾರಗಳು ನಮ್ಮ ಬುದ್ದಿಯನ್ನ ಕೆಡಿಸಿಬಿಟ್ಟಿವೆ. ಜ.28ರಂದು ಕಾಳಾಪುರ ಗ್ರಾಮದಲ್ಲಿ ನಡೆದ ಘಟನೆ ನಮ್ಮನ್ನ ಕಾಡಿಸುತ್ತಿದೆ. ತರಳುಬಾಳು ಹುಣ್ಣಿಮೆಯ ಆದರ್ಶಕ್ಕೆ ತದ್ದಿರುದ್ದವಾದ ಘಟನೆಗಳು ನಡೆದಿವೆ, ಅದನ್ನ ನಾವೂ ಖಂಡಿಸುತ್ತವೆ ಎಂದರು.
ಘಟನೆ ನಡೆದ ನಂತರ ನಾವೂ ಏನೂ ಮಾಡಿದ್ದೇವೆ ನಮಗೆ ಗೊತ್ತಿವೆ. ಈ ಘಟನೆಗೆ ಕಾರಣರಾದವರನ್ನ ಒದ್ದು ಒಳಗೆ ಹಾಕಿ ಎಂದು ಹೇಳಿದ್ದೇವೆ. ಆದರೆ ಕೊಳಕು ರಾಜಕೀಯ ಮಾಡಿ ಅಮಾಯಕರ ಮೇಲೆ ಕೇಸ್ ಹಾಕಬಾರದು. ಇತಂಹ ಕೆಟ್ಟ ಕೊಳಕು ರಾಜಕೀಯ ರಾಜ್ಯ, ದೇಶದಲ್ಲಿ ನಡೆಯುತ್ತಿವೆ. ಘಟನೆಯಲ್ಲಿನ ಸಂತ್ರಸ್ತರಿಗೆ ನಾನು ದೂರವಾಣಿಯಲ್ಲಿ ಸಂಪರ್ಕಿಸಿ ಒಂದು ಜಾತಿಯವರಲ್ಲ. ಎಲ್ಲ ಜನಾಂಗದವರಿಗೂ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ವಿಐಪಿ ಚಿಕಿತ್ಸೆ ಕೊಡಿಸುತ್ತಿದ್ದೇವೆ. ಆ ಚಿಕಿತ್ಸೆಯ ವೆಚ್ಚವನ್ನ ತರಳುಬಾಳು ಹುಣ್ಣಿಮೆಯವರು ಭರಿಸುತ್ತಾರೆ ಎಂದಿದ್ದಾರೆ.
ತರಳುಬಾಳು ಹುಣ್ಣಿಮೆ ಸ್ವಾಗತ ಸಮಿತಿಯವರ ಮೇಲೆ ಕೇಸ್ ದಾಖಲಿಸಲು ಷಡಂತ್ರ್ಯ ನಡೆಯುತ್ತಿದೆ. ನಮ್ಮದೂ ಬೂಡಾಡಿಕೆಯ ಮಾತುಗಳಲ್ಲ. ನಾನು ಹಳ್ಳಿಗೆ ಯಾಕೆ ಹೋಗಿಲ್ಲ ಎಂದು ಪ್ರಶ್ನೆ ಮಾಡಬೇಡಿ. ನಾನು ಎಸ್ಪಿ ಅವರಿಗೆ ರಾತ್ರಿಯೇ ಬರುತ್ತೇವೆ ಎಂದು ಕೇಳಿದ್ದೇವೆ. ನಾನು ದೂರವಾಣಿಯ ಮೂಲಕ ಮಾತನಾಡಿ ಗಲಾಟೆ ಮಾಡುತ್ತಿದ್ದವರನ್ನ ಅಲ್ಲಿಂದ ಓಡಿಸಿದ್ದೇವೆ. ಕಾನೂನು ಇರುವುದು ಜನರ ಹಿತಕ್ಕಾಗಿ, ಜನರನ್ನ ತುಳಿಯಲು ಅಲ್ಲ. ನಾವೂ ಯಾವ ಜಾತಿಯನ್ನ ನಿಂದನೆ ಮಾಡಿಲ್ಲ. ಪೊಲೀಸರು ಒಳಹೊಕ್ಕು ತನಿಖೆ ಮಾಡಬೇಕು ಎಂದರು.
ನಮ್ಮ ಹುಣ್ಣಿಮೆಗೆ ಯಾಕೆ ರಾಡಿ ಎಬ್ಬಿಸುತ್ತಿದ್ದೀರಾ..?
ನಮ್ಮದು ಎಲ್ಲ ಜನರ ಸರ್ವಧರ್ಮ ಜಾತಿಯ ತೋಟ, ನಮ್ಮದೂ ಜಾತಿ ಮಠ ಆದರೆ ನಾವೂ ಜಾತಿಗೆ ಅಂಟಿಕೊಂಡಿಲ್ಲ. ಕಾಳಪುರದಲ್ಲಿ ನಡೆದ ಘಟನೆ ಅಸಹ್ಯಕರವಾದ ಘಟನೆಯಾಗಿದೆ. ನಮ್ಮ ಮಠದಲ್ಲಿ ಎಲ್ಲ ಜಾತಿಯವರು ಉಚಿತವಾಗಿ ಓದುತ್ತಿದ್ದಾರೆ. ಸತ್ಯ ಶೋಧಕರು ಸತ್ಯಶೋಧನೆ ಮಾಡಬೇಕು. ಕಾಳಾಪುರ ಜನರ ಎಲ್ಲ ಸಮಸ್ಯೆಗಳನ್ನ ನಾವೂ ಬಗೆಹರಿಸುತ್ತೇವೆ. ತರಳಬಾಳು ಹುಣ್ಣಿಮೆಯ ನಿಧಿಯನ್ನ ಕಾಳಾಪುರ ಗ್ರಾಮದ ಒಳತಿಗಾಗಿ ಬಳಸುತ್ತೇವೆ. ಕಾಳಪುರ ಗ್ರಾಮದ ಅಭಿವೃದ್ಧಿಗೆ ಹಣ ಕೊರತೆ ಬಿದ್ರೆ ಮಠದಿಂದ ಹಣ ಕೊಡುತ್ತೇವೆ. ಸರ್ಕಾರ ಒಂದು ಪೈಸೆ ಹಣ ಕೊಡುವುದು ಬೇಡ. ನಾವೂ ಕಾಳಾಪುರ ಗ್ರಾಮವನ್ನ ದತ್ತು ಪಡೆಯುತ್ತೇವೆ ಎಂದಿದ್ದಾರೆ.
ಯಾವ ಯಾವ ಕೇಸ್ಗಳನ್ನ ದಾಖಲಿಸಿದ್ದಾರೋ ಅವುಗಳನ್ನ ಸಿಎಂ & ಕಾನೂನು ಸಚಿವರು ಹಿಂದೆ ಪಡೆಯಬೇಕು. ಧರ್ಮಗುರುಗಳು ಧರ್ಮ ಕಾರ್ಯ ಮಾಡಬೇಕು. ಅಧರ್ಮಕ್ಕೆ ಬೆಲೆ ಕೊಡಬಾರದು, ಅಧಿಕಾರಿಗಳು ಯಾರಿಂದ ಪ್ರಚೋಧನೆ ಸಿಕ್ತು ಅನ್ನೋದನ್ನ ಪತ್ತೆ ಹಚ್ಚಬೇಕು. ನಮ್ಮ ತರಳಬಾಳು ಹುಣ್ಣಿಮೆಯಲ್ಲಿ ಇದೊಂದು ಕಳಂಕವಾಗಿದೆ. ಈ ಭಾಗದಲ್ಲಿನ ರಾಜಕೀಯ ಮುಖಂಡರು ಕೊಳಕು ರಾಜಕೀಯದಲ್ಲಿ ತೊಡಗಬಾರದು. ಕೆಟ್ಟ, ದುಷ್ಟ ಶಕ್ತಿಗಳು ಕಾಳಾಪುರ ಗ್ರಾಮವನ್ನ ಕ್ಷುದ್ರಗೊಳಿಸಿದ್ದಾರೆ ಎಂದು ಹೇಳಿದರು.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:57 pm, Tue, 31 January 23