Ballari: ಪತ್ನಿ ಸೊಸೆ ಮೂವರು ಮಕ್ಕಳನ್ನ ಕೊಲೆ ಮಾಡಿದ ಆರೋಪಿಗೆ ಮರಣದಂಡನೆ ವಿಧಿಸಿದ ಹೈಕೋರ್ಟ್
ಅವನು ಸದಾ ಪತ್ನಿ ನಡತೆಯ ಮೇಲೆ ಅನುಮಾನ ಪಡುತ್ತಿದ್ದ. ಜೊತೆಗೆ ನಿತ್ಯ ಕುಡಿದು ಜಗಳ ಮಾಡುತ್ತಿದ್ದ. ಪತ್ನಿ ಜೊತೆ ಜಗಳಕ್ಕೆ ಇಳಿದಿದ್ದ ಆತ ಜಗಳ ಬಿಡಿಸಲು ಬಂದ ಸೊಸೆ, ಮೂವರು ಮಕ್ಕಳು ಜೊತೆಗೆ ಪತ್ನಿಯನ್ನ ಅಮಾನುಷವಾಗಿ ಹತ್ಯೆ ಮಾಡಿದ್ದ. ಸೊಸೆ ಮೂವರು ಮುದ್ದಾದ ಮಕ್ಕಳನ್ನ ಕೊಚ್ಚಿ ಕೊಲೆ ಮಾಡಿದ್ದ ಆರೋಪಿಗೆ ಇದೀಗ ಬಳ್ಳಾರಿ ಸೆಷನ್ಸ್ ನ್ಯಾಯಾಲಯ ಗಲ್ಲು ಶಿಕ್ಷೆಯನ್ನ ವಿಧಿಸಿದೆ.
ಬಳ್ಳಾರಿ: ಜಿಲ್ಲೆಯ ಕಂಪ್ಲಿ(Kampli) ಪಟ್ಟಣದ ಫಕ್ಕೀರಮ್ಮ ಎನ್ನುವ ಮಹಿಳೆಯನ್ನ ಮದುವೆಯಾಗಿದ್ದ ಈ ಅಪರಾಧಿ(Criminal) ತಿಪ್ಪಯ್ಯ ಎಂಬುವವರಿಗೆ ನಾಲ್ವರು ಮುದ್ದಾದ ಮಕ್ಕಳಿದ್ದರು. ಆದ್ರೆ, ಸದಾ ಪತ್ನಿಯ ನಡೆತೆಯ ಮೇಲೆ ಅನುಮಾನ ಪಡುತ್ತಿದ್ದ , ಪತ್ನಿ ಜೊತೆ ಜಗಳ ತಗೆದು ಮಾಡಬಾರದ ಕೃತ್ಯ ಎಸಗಿದ್ದ. 2017ರ ಫೆಬ್ರವರಿ 25ರಂದು ಪತ್ನಿ ಪಕ್ಕೀರಮ್ಮ, ಪತ್ನಿಯ ತಂಗಿ ಸೊಸೆ ಗಂಗಮ್ಮ, ತನ್ನ ನಾಲ್ವರ ಮಕ್ಕಳ ಫೈಕಿ 9 ವರ್ಷದ ಬಸಮ್ಮ. 8 ವರ್ಷದ ರಾಜಪ್ಪ, 6 ವರ್ಷದ ಪವಿತ್ರ ಎನ್ನುವ ಮೂರು ಮಕ್ಕಳನ್ನ ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದ. ಹೌದು ಮಾವ ತನ್ನ ಅಕ್ಕನ ಜೊತೆ ಜಗಳ ಮಾಡುತ್ತಿದ್ದ ವೇಳೆ ಜಗಳ ಬಿಡಿಸಲು ಬಂದ ಸೊಸೆ ಗಂಗಮ್ಮ ಸೇರಿದಂತೆ ಐವರು ಸ್ಥಳದಲ್ಲೆ ಪ್ರಾಣ ಚೆಲ್ಲಿದ್ದರು. ಅಂದು ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದ ಬಳ್ಳಾರಿ ಜಿಲ್ಲಾ ಪೊಲೀಸರು ಆರೋಪಿಗೆ ತಕ್ಕ ಶಿಕ್ಷೆ ಕೊಡಿಸುವಲ್ಲಿ ಯಶ್ವಸಿಯಾಗಿದ್ದಾರೆ. ಪತ್ನಿ, ಸೊಸೆ, ಮೂವರು ಮಕ್ಕಳನ್ನ ಕೊಲೆ ಮಾಡಿದ್ದ ಆರೋಪಿಗೆ ಬಳ್ಳಾರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ನೀಡಿದ್ದ ಗಲ್ಲು ಶಿಕ್ಷೆ ತೀರ್ಪನ್ನ ಇದೀಗ ರಾಜ್ಯ ಉಚ್ಛ ನ್ಯಾಯಾಲಯ ಎತ್ತಿ ಹಿಡಿದಿದೆ.
ಬಳ್ಳಾರಿ ಸೆಷನ್ಸ್ ನ್ಯಾಯಾಲಯ ನೀಡಿದ ತೀರ್ಪಿನ ವಿರುದ್ದ ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡಿ ಮೇಲ್ಮನವಿ ಸಲ್ಲಿಸಿದ್ದ ತಿಪ್ಪಯ್ಯ
ಮೊದಲ ಪತ್ನಿ ಬಿಟ್ಟು ಪಕ್ಕೀರಮ್ಮನನ್ನ ಎರಡನೇ ಮದುವೆಯಾಗಿದ್ದ ಪಾಪಿ ತಿಪ್ಪಯ್ಯಗೆ ನ್ಯಾಯಾಲಯ ತಕ್ಕ ಶಿಕ್ಷೆ ನೀಡಿದೆ. ಬಳ್ಳಾರಿ ಸೆಷನ್ಸ್ ನ್ಯಾಯಾಲಯ ನೀಡಿದ ತೀರ್ಪಿನ ವಿರುದ್ದ ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡಿ ಮೇಲ್ಮನವಿ ಸಲ್ಲಿಸಿದ್ದ ತಿಪ್ಪಯ್ಯನ ಅಮಾನುಷ ಕೃತ್ಯ ಸಾಬೀತಾದ ಪರಿಣಾಮ ಹೈಕೋರ್ಟ್ ಸಹ ಮರಣದಂಡನೆಯನ್ನ ಖಾಯಂಗೊಳಿಸಿದೆ. ಪತ್ನಿ, ಸೊಸೆ ಹಾಗೂ ಮೂವರು ಅಪ್ರಾಪ್ತ ಮಕ್ಕಳನ್ನ ಅಮಾನುಷವಾಗಿ ಹತ್ಯೆ ಮಾಡಿದ ತಿಪ್ಪಯ್ಯಗೆ ಹೈಕೋರ್ಟ್ ಗಲ್ಲು ಶಿಕ್ಷೆ ಖಾಯಂಗೊಳಿಸಿದೆ. ಪಾಪಿ ಪತಿ ತಿಪ್ಪಯ್ಯಗೆ ಗಲ್ಲು ಶಿಕ್ಷೆ ಖಾಯಂ ಆಗಿರುವುದು ಸಂತ್ರಸ್ಥರ ಕುಟುಂಬಕ್ಕೂ ಸಂತಸ ತಂದಿದೆ. ತಿಪ್ಪಯ್ಯ ಐವರನ್ನ ಕೊಲೆ ಮಾಡಿದ್ರು, ನ್ಯಾಯಾಲಯದ ತೀರ್ಪನ್ನ ಪ್ರಶ್ನೆ ಮಾಡಿದ್ದ. ಹೀಗಾಗಿ ಹೈಕೋರ್ಟ್ ಶಿಕ್ಷೆ ಖಾಯಂಗೊಳಿಸಿರುವುದಕ್ಕೆ ನಾವೂ ಧನ್ಯವಾದ ಹೇಳುತ್ತೇವೆ. ಇನ್ಯಾರ ಮಕ್ಕಳಿಗೂ ಇತರಹ ಆಗಬಾರದು. ಐವರನ್ನ ಕೊಲೆ ಮಾಡಿದ ತಿಪ್ಪಯ್ಯನನ್ನ ಆದಷ್ಟು ಬೇಗ ಗಲ್ಲಿಗೇರಿಸಬೇಕು ಎಂದಿದ್ದರು ಕೊಲೆಯಾದ ಫಕ್ಕೀರಮ್ಮನ ಕುಟುಂಬಸ್ಥರು.
ಇದನ್ನೂ ಓದಿ:Tumakuru: ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಅನುಮಾನಸ್ಪದ ಸಾವು; ಪ್ರಿಯಕರನೇ ಕೊಲೆ ಮಾಡಿರುವ ಶಂಕೆ
ಕೊಲೆ ಪ್ರಕರಣಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸುವುದು ಅಪರೂಪವಾಗಿದೆ. ಆದ್ರೆ, ತಿಪ್ಪಯ್ಯ ಎಸಗಿದ ಕೃತ್ಯ ಅಮಾನುಷ ಕ್ಷಮೆಗೆ ಅರ್ಹವಾಗದಿರುವ ಕಾರಣ ತಿಪ್ಪಯ್ಯನಿಗೆ ಗಲ್ಲು ಶಿಕ್ಷೆ ವಿಧಿಸಿ ತಕ್ಕ ಶಿಕ್ಷೆ ನೀಡಿದಂತಾಗಿದೆ. ಅಲ್ಲದೇ ಮೂವರು ಮಕ್ಕಳು ಎನ್ನದೇ ಕೊಚ್ಚಿ ಕೊಲೆ ಮಾಡಿದ ಪಾಪಿ ತಂದೆಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿರುವುದು ಸೂಕ್ತವಾಗಿದೆ. ಹೀಗಾಗೇ ಆರೋಪಿಗೆ ಆದಷ್ಟು ಬೇಗ ಗಲ್ಲಿಗೇರಿಸಿ ಸತ್ತವರ ಆತ್ಮಕ್ಕೆ ಶಾಂತಿ ಕೊಡಿಸಲಿ ಅಂತಿದ್ದಾರೆ ನೊಂದ ಕುಟುಂಬಸ್ಥರು.
ವರದಿ: ವಿರೇಶ್ ದಾನಿ ಟಿವಿ9 ಬಳ್ಳಾರಿ
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ