ಬಳ್ಳಾರಿ: ವಿಮ್ಸ್​ನ ವೈದ್ಯರ ತಂಡದಿಂದ ನೂತನ ಸಾಧನೆ; ಬೃಹತ್ ಗಾತ್ರದ ಅಂಡಾಶಯದ ಗಡ್ಡೆಯ ಯಶಸ್ವಿ ಶಸ್ತ್ರಚಿಕಿತ್ಸೆ

ಬಳ್ಳಾರಿ: ವಿಮ್ಸ್​ನ ವೈದ್ಯರ ತಂಡದಿಂದ ನೂತನ ಸಾಧನೆ; ಬೃಹತ್ ಗಾತ್ರದ ಅಂಡಾಶಯದ ಗಡ್ಡೆಯ ಯಶಸ್ವಿ ಶಸ್ತ್ರಚಿಕಿತ್ಸೆ
ವಿಮ್ಸ್​ ಆಸ್ಪತ್ರೆ

40 ವರ್ಷದ ದ್ಯಾವಮ್ಮ ಎನ್ನುವ ಮಹಿಳೆಯು ತೆಕ್ಕಲಕೋಟೆ ಸರ್ಕಾರಿ ಆಸ್ಪತ್ರೆಗೆ ಬರುವ ದಾರಿಯಲ್ಲಿಯೇ ಹೆರಿಗೆಯಾಗಿತ್ತು. ಅಲ್ಲಿನ ವೈದ್ಯರು ಬಾಣಂತಿಯ ಹೊಟ್ಟೆಯಲ್ಲಿ ಬೃಹದಾಕಾರದ ಗಡ್ಡೆ ಇರುವ ಕಾರಣಕ್ಕೆ ವಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದರು. ಆಸ್ಪತ್ರೆಗೆ ದಾಖಲಿಸಿಕೊಂಡ ಇಲ್ಲಿನ ವೈದ್ಯರು ಪರೀಕ್ಷೆ ಮಾಡಿದಾಗ ಬೃಹದಾಕಾರದ ಗಡ್ಡೆ ಇರುವುದು ಕಂಡು ಬಂದಿದೆ.

TV9kannada Web Team

| Edited By: preethi shettigar

Aug 03, 2021 | 8:14 AM

ಬಳ್ಳಾರಿ: ಜಿಲ್ಲೆಯ ವಿಮ್ಸ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ವೈದ್ಯರ ತಂಡ ಮಹಿಳೆಯ ಹೊಟ್ಟೆಯಿಂದ ಬೃಹದಾಕಾರದ 20 ಕೆಜಿ ತೂಕದ ಗಡ್ಡೆಯನ್ನು ಹೊರತೆಗೆಯುವ ಮೂಲಕ ಅತಿ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ್ದಾರೆ. ಈ ಶಸ್ತ್ರಚಿಕಿತ್ಸೆಗೆ ಅರವಳಿಕೆ ವಿಭಾಗದ ಡಾ.ಬಾಲಭಾಸ್ಕರ್ ನೇತೃತ್ವ ವಹಿಸಿದ್ದು, ವಿಮ್ಸ್ ಆಸ್ಪತ್ರೆಯ ಪ್ರಸೂತಿ ವಿಭಾಗದ ಬಿ-ಘಟಕದ ಮುಖ್ಯಸ್ಥರಾದ ಡಾ.ವಿಜಯ ಹರಸೂರು, ಡಾ.ವಾರಿಜ ರೆಡ್ಡಿ, ಡಾ.ಶಿವಕುಮಾರ್ ಹೆಚ್.ಸಿ, ಡಾ.ಸ್ಪೂರ್ತಿ ಪಿ.ರೆಡ್ಡಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಾದ ಡಾ.ಚಂದಪ್ಪಗೌಡ ಪಾಟೀಲ್, ಡಾ.ನಂದಿನಿ, ಡಾ.ಸಚಿನ್ ಮತ್ತು ಡಾ.ಅಯೇಶಾ ಅವರೊಂದಿಗೆ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ.

40 ವರ್ಷದ ದ್ಯಾವಮ್ಮ ಎನ್ನುವ ಮಹಿಳೆಯು ತೆಕ್ಕಲಕೋಟೆ ಸರ್ಕಾರಿ ಆಸ್ಪತ್ರೆಗೆ ಬರುವ ದಾರಿಯಲ್ಲಿಯೇ ಹೆರಿಗೆಯಾಗಿತ್ತು. ಅಲ್ಲಿನ ವೈದ್ಯರು ಬಾಣಂತಿಯ ಹೊಟ್ಟೆಯಲ್ಲಿ ಬೃಹದಾಕಾರದ ಗಡ್ಡೆ ಇರುವ ಕಾರಣಕ್ಕೆ ವಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದರು. ಆಸ್ಪತ್ರೆಗೆ ದಾಖಲಿಸಿಕೊಂಡ ಇಲ್ಲಿನ ವೈದ್ಯರು ಪರೀಕ್ಷೆ ಮಾಡಿದಾಗ ಬೃಹದಾಕಾರದ ಗಡ್ಡೆ ಇರುವುದು ಕಂಡು ಬಂದಿದೆ.

ಗಡ್ಡೆಯು 30 ರಿಂದ 50 ಸೆ.ಮೀ ಇದ್ದು, 20 ಕೆಜಿ ತೂಕ ಹೊಂದಿತ್ತು. ಅದರಲ್ಲಿ 15 ರಿಂದ 20 ಲೀಟರ್‌ನಷ್ಟು ದ್ರವ ಕಂಡುಬಂದಿದ್ದು, ಅದನ್ನು ಸೂಕ್ಷ್ಮವಾಗಿ ಹೊರತೆಗೆದು ಪರೀಕ್ಷೆಗೆ ಒಳಪಡಿಸಲಾಗಿತ್ತು. ಬಳಿಕ ಶಸ್ತ್ರಚಿಕಿತ್ಸೆ ಮಾಡಿದ್ದು, ಈಗ 40 ವರ್ಷದ ಮಹಿಳೆ ಆರೋಗ್ಯವಾಗಿದ್ದಾರೆ. ಈ ತರಹದ ಗಡ್ಡೆ ಅತಿ ವಿರಳವಾಗಿರುತ್ತದೆ. ಇಂತಹ ಶಸ್ತ್ರಚಿಕಿತ್ಸೆ ತುಂಬಾ ಕ್ಲಿಷ್ಟಕರ ಮತ್ತು ಕಠಿಣವಾಗಿರುತ್ತದೆ. ಇದನ್ನು ನಿರ್ವಹಿಸುವಲ್ಲಿ ನಮ್ಮ ತಂಡ ಯಶಸ್ವಿಯಾಗಿದೆ ಎಂದು ಅರವಳಿಕೆ ವಿಭಾಗದ ಡಾ.ಬಾಲಭಾಸ್ಕರ್ ತಿಳಿಸಿದ್ದಾರೆ.

ಚಾಮರಾಜನಗರ: ರಾಜ್ಯದಲ್ಲಿಯೇ ಮೊದಲ ಬಾರಿಗೆ ಲೈವ್ ಶಸ್ತ್ರ ಚಿಕಿತ್ಸೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರಾಜ್ಯದಲ್ಲಿಯೇ ಮೊದಲ ಬಾರಿಗೆ ಲೈವ್​ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಬೆಂಗಳೂರಿನ ಹೆಸರಾಂತ ಸ್ತ್ರೀ ತಜ್ಞ ಡಾ. ಚಂದ್ರಶೇಖರ್ ನೇತೃತ್ವದಲ್ಲಿ ಮಹಿಳೆಗೆ ಲೈವ್​ ಶಸ್ತ್ರ ಚಿಕಿತ್ಸೆ ಮಾಡಿದ್ದು, 10ಕ್ಕೂ ಹೆಚ್ಚು ಜನರ ವೈದ್ಯರ ತಂಡ ಶಸ್ತ್ರ ಚಿಕಿತ್ಸೆಯಲ್ಲಿ ಭಾಗಿ ಆಗಿದ್ದರು.

ರಾಜ್ಯ ಮತ್ತು ರಾಷ್ಟ್ರದಾದ್ಯಂತ ಸುಮಾರು 150ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ಲಾಗಿನ್ ಆಗಿ ಈ ಶಸ್ತ್ರ ಚಿಕಿತ್ಸೆಯ ನೇರ ಪ್ರಸಾರವನ್ನು ವೀಕ್ಷಣೆ ಮಾಡಿದ್ದಾರೆ. ಇನ್ನು ವೈದ್ಯಕೀಯ ವಿದ್ಯಾರ್ಥಿಗಳು, ವೈದ್ಯರು ಸೇರಿದಂತೆ ಲಕ್ಷಾಂತರ ಮಂದಿ ಈ ಲೈವ್ ವೀಕ್ಷಿಸಿದ್ದು, ಲೈವ್ ವೇಳೆ ಆಸಕ್ತರಿಗೆ ಪ್ರಶ್ನೆ ಕೇಳಲು ಕೂಡ ಅವಕಾಶ ಕಲ್ಪಿಸಲಾಗಿತ್ತು.

ಹೆಸರಾಂತ ವೈದ್ಯಕೀಯ ಸಂಸ್ಥೆಗಳಿಗೆ ಮೀಸಲಾಗಿದ್ದ ಆಧುನಿಕ ಮಾದರಿಯ ಶಸ್ತ್ರ ಚಿಕಿತ್ಸೆಯನ್ನ ತಾಲೂಕಿನ ಸಂತೇಮರಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಆದರಲ್ಲೂ ಹೋಬಳಿ ಮಟ್ಟದ ಆಸ್ಪತ್ರೆಯಲ್ಲಿ ಮಾಡುವ ಮೂಲಕ ರಾಜ್ಯದ ಜನತೆ ಹುಬ್ಬೆರಿಸುವ ಕಾರ್ಯ ಮಾಡಿದ್ದಾರೆ.

ಇದನ್ನೂ ಓದಿ: ಆಸ್ಕರ್ ಫೆರ್ನಾಂಡೀಸ್​ಗೆ ತಡರಾತ್ರಿ ಮೆದುಳಿನ ರಕ್ತನಾಳದ ಶಸ್ತ್ರಚಿಕಿತ್ಸೆ; ಶೀಘ್ರ ಪ್ರಜ್ಞೆ ಮರುಕಳಿಸುವ ನಿರೀಕ್ಷೆ

ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ರೇಡಿಯೋ ಥೆರಪಿ ಚಿಕಿತ್ಸೆ ಪುನಾರಂಭ.. ತಪ್ಪಿತು ಕ್ಯಾನ್ಸರ್ ರೋಗಿಗಳ ಪರದಾಟ

Follow us on

Related Stories

Most Read Stories

Click on your DTH Provider to Add TV9 Kannada