ಬೆಂಗಳೂರು: ಇಂದು ನಡೆಯಬೇಕಿದ್ದ ರೇಸ್ ಅನ್ನು ರದ್ದುಗೊಳಿಸಿದ್ದಕ್ಕೆ ರೇಸ್ಕೋರ್ಸ್ನಲ್ಲಿ ಮಾರಾಮಾರಿ ನಡೆದಿದೆ. ಬೆಂಗಳೂರಿನ ರೇಸ್ಕೋರ್ಸ್ನಲ್ಲಿ ಈ ಘಟನೆ ನಡೆದಿದೆ.
ಮೊದಲನೇ ರೇಸ್ ವೇಳೆ ಅವಘಡ:
ಮೊದಲನೇ ರೇಸಿನಲ್ಲಿ 3 ಕುದುರೆಗಳು ಬಿದ್ದಿದ್ದು, ಅದರಿಂದ ಮೂವರು ಪ್ರಮುಖ ಜಾಕಿಗಳಿಗೆ ಗಾಯಗಳಾಗಿವೆ. ಇದಾದ ತಕ್ಷಣ, ಬೆಂಗಳೂರಿನ ರೇಸ್ ಕೋರ್ಸ್ ಸಂಸ್ಥೆಯವರು ದಿನದ ಉಳಿದ ಆರು ರೇಸ್ ಗಳನ್ನು ಕ್ಯಾನ್ಸಲ್ ಮಾಡಿದ್ದರು.
ಪಂಟರ್ಗಳಿಂದ ಎಲ್ಲಾ ಪೀಸ್ ಪೀಸ್! ಪೊಲೀಸರ ಒಳಪ್ರವೇಶ
ಮೊದಲೇ ರೇಸಿನಲ್ಲಿ ಹಣ ಕಳೆದುಕೊಂಡ ಪಂಟರ್ಗಳು ಉಳಿದ ರೇಸ್ ಕ್ಯಾನ್ಸಲ್ ಮಾಡಿದ್ದು ಏಕೆ ಅಂತಾ ಗಲಾಟೆ ಮಾಡತೊಡಗಿದ್ದಾರೆ. ಉಳಿದ ರೇಸ್ ಗಳನ್ನು ಕ್ಯಾನ್ಸಲ್ ಮಾಡಿದ್ದಕ್ಕೆ ಆಕ್ರೋಶ ಹೊರಹಾಕಿದ್ದಾರೆ. ರೇಸ್ ಕೋರ್ಸ್ ನಲ್ಲಿದ್ದ ಟಿವಿ, ಚೇರ್ ಗಳನ್ನು ಧ್ವಂಸಗೊಳಿಸಿದ್ದಾರೆ. ಹೈಗ್ರೌಂಡ್ಸ್ ಪೊಲೀಸರು ಒಳಪ್ರವೇಶಿಸಿದ್ದು, ಪರಿಸ್ಥಿತಿಯನ್ನು ತಹಬಂದಿಗೆ ತರಲು ಪ್ರತ್ನಿಸುತ್ತಿದ್ದಾರೆ.
ಟರ್ಫ್ ಕ್ಲಬ್ ನಿರ್ಲಕ್ಷ್ಯ, ಕುದುರೆ ಕಾಲು ಮುರಿತ:
ಟರ್ಫ್ ಕ್ಲಬ್ ಮ್ಯಾನೇಜ್ ಮೆಂಟ್ ನಿರ್ಲಕ್ಷ್ಯಕ್ಕೆ ಕುದುರೆಯ ಕಾಲು ಮುರಿದಿದೆ ಎಂದು ಜಾಕಿಗಳು ಆರೋಪಿಸಿದ್ದಾರೆ. ವಾರದ ಹಿಂದೆಯೇ ಮಾಕ್ ರೇಸ್ ನಡೆಸಿದ್ದ ಜಾಕಿಗಳು ಟ್ರ್ಯಾಕ್ ಸರಿಯಿಲ್ಲ, ರೇಸ್ ನಡೆಸಿದ್ರೆ ಕುದುರೆಗಳ ಕಾಲು ಮುರಿಯಬಹುದು. ಜಾಕಿಗಳ ಜೀವಕ್ಕೆ ಅಪಾಯವಿದೆ ಎಂದು ಜಾಕಿಗಳು ಟರ್ಫ್ ಕ್ಲಬ್ ಕಾರ್ಯದರ್ಶಿಗೆ ದೂರು ಕೊಟ್ಟಿದ್ದರು. ಆದರೆ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ರೇಸ್ ನಡೆಸಿ ಹೊಡೆದಾಟ ತಂದಿಟ್ಟಿದೆ.
ಆಡಳಿತ ಮಂಡಳಿ ನಿರ್ಲಕ್ಷ್ಯದಿಂದ ವಿಲ್ ಟು ವಿನ್ ಕುದುರೆ ಕಾಲು ಮುರಿದುಕೊಂಡಿದೆ ಎಂದು ಜಾಕಿಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಏನದು BTC ಅವಾಂತರ?
ಮೊದಲ ರೇಸ್ ನಲ್ಲಿ ಮೊದಲ ಎರಡು ಕುದುರೆಗಳ ಮೇಲೆ ಹೆಚ್ಚು ಬೆಟ್ಟಿಂಗ್ ನಡೆದಿತ್ತು. ಆದ್ರೆ ಆ ಕುದುರೆಗಳು ಮುಗ್ಗರಿಸಿ ಬಿದ್ದು ಬುಕ್ಕಿಗಳ ಬೆಟ್ಟಿಂಗ್ ಹಣ ಲಾಸ್ ಆಗಿದೆ. ಕುದುರೆ ಮುಗ್ಗರಿಸುತ್ತಿದ್ದ ಹಾಗೇ ಇವತ್ತಿನ್ನ ಎಲ್ಲಾ ರೇಸ್ ಕ್ಯಾನ್ಸಲ್ ಮಾಡಲಾಗಿದೆ. ಆಗ ಮೊದಲ ರೇಸ್ ನಲ್ಲಿ ಹಣ ಕಳೆದುಕೊಂಡ ಬುಕ್ಕಿಗಳು ಕಂಗಾಲಾಗಿ ಗಲಾಟೆ ಮಾಡಿದ್ದಾರೆ ಎಂದು ಜಾಕಿಗಳು ತಿಳಿಸಿದ್ದಾರೆ.
ರೇಸ್ ನಲ್ಲಿದ್ದ ಕುದುರೆ ವಿಲ್ ಟೂ ವಿನ್ ರೇಸ್ ವೇಳೆ ಕಾಲು ಮುರಿದುಕೊಂಡು ಬಿದ್ದಿದೆ. ಸೂರಜ್ ನೆರಡೋ ಅನ್ನೋ ಜಾಕಿ ಕುದುರೆ ಸವಾರಿ ಮಾಡ್ತಿದ್ದ. ವಿಲ್ ಟೂ ವಿನ್ ಕುದುರೆ ಬಿದ್ದಾಗ ಅದರ ಹಿಂದೆ ಬರ್ತಿದ್ದ ಎರಡೂ ಕುದುರೆಗಳು ಬಿದ್ದಿವೆ. ಬೆಂಗಳೂರು ರೇಸ್ ನಲ್ಲಿ ನಯಾಬ್ ಅನ್ನೋ ಕುದುರೆ ರೇಸ್ ವಿನ್ ಆಗಿದೆ. ಹೀಗಾಗಿ ವಿಲ್ ಟೂ ವಿನ್ ಕುದುರೆ ಬಾಲಕ್ಕೆ ದುಡ್ಡು ಕಟ್ಟಿದ್ದ ಪ್ರೇಕ್ಷಕರು ಗಲಾಟೆ ಮಾಡಿದ್ದಾರೆ ಎಂದು ಜಾಕಿ ಶ್ರೀನಾಥ್ ಹೇಳಿದ್ದಾರೆ.
Published On - 4:01 pm, Fri, 15 November 19