AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಮ್ಮೆ ಕ್ಷಮೆಯಾಚಿಸಿ ಸ್ವಯಂಪ್ರೇರಿತವಾಗಿ ಜಿಟಿ ಮಾಲ್ ಬಂದ್ ಮಾಡಿದ ಮಾಲೀಕ

ಜಿಟಿ ಮಾಲ್​ಗೆ ಪಂಚೆ ಧರಿಸಿದ್ದ ರೈತ ಪ್ರವೇಶಕ್ಕೆ ನಿರಾಕರಣೆ ವಿಚಾರವಾಗಿ ಇದೀಗ ಬಿಬಿಎಂಪಿ ಸೂಚನೆ ಮೇರೆಗೆ ಮಾಲೀಕರು ಸ್ವಯಂಪ್ರೇರಿತವಾಗಿ ಬಂದ್ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಮಾಲೀಕ ಆನಂದ್ ಪುತ್ರ ಪ್ರಶಾಂತ್, ಆಗಬಾರದಂತಹ ಘಟನೆ ನಡೆದಿದೆ, ಹೊಸ ಸಿಬ್ಬಂದಿಯಿಂದ ತಪ್ಪಾಗಿದೆ. ರೈತ ಫಕೀರಪ್ಪರನ್ನು ಖುದ್ದಾಗಿ ಭೇಟಿಯಾಗಿ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.

ಮತ್ತೊಮ್ಮೆ ಕ್ಷಮೆಯಾಚಿಸಿ ಸ್ವಯಂಪ್ರೇರಿತವಾಗಿ ಜಿಟಿ ಮಾಲ್ ಬಂದ್ ಮಾಡಿದ ಮಾಲೀಕ
ಮತ್ತೊಮ್ಮೆ ಕ್ಷಮೆಯಾಚಿಸಿ ಸ್ವಯಂಪ್ರೇರಿತವಾಗಿ ಜಿಟಿ ಮಾಲ್ ಬಂದ್ ಮಾಡಿದ ಮಾಲೀಕ
ಶಾಂತಮೂರ್ತಿ
| Updated By: ಗಂಗಾಧರ​ ಬ. ಸಾಬೋಜಿ|

Updated on: Jul 18, 2024 | 6:05 PM

Share

ಬೆಂಗಳೂರು, ಜುಲೈ 18: ಪಂಚೆ ಧರಿಸಿದ್ದಾರೆ ಬಂದಿದ್ದಾರೆ ಎನ್ನುವ ಕಾರಣಕ್ಕೆ ನಿನ್ನೆ ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್​​ನ (GT Mall) ಒಳಗೆ ಹಾವೇರಿ ಮೂಲದ ರೈತನನ್ನು ಬಿಟ್ಟಿರಲಿಲ್ಲ. ಇದು ವ್ಯಾಪಕ ಚರ್ಚೆಗೂ ಕಾರಣವಾಗಿತ್ತು. ಅಷ್ಟೇ ಅಲ್ಲದೆ ಇಂದು ಸದನದಲ್ಲಿ ಕೂಡ ಚರ್ಚೆಯಾಗಿದೆ. ಜಿಟಿ ಮಾಲ್​ ಅನ್ನು ಬಂದ ಮಾಡುವಂತೆ ಒತ್ತಾಯಿಸಲಾಗಿತ್ತು. ಇದೀಗ ಬಿಬಿಎಂಪಿ (BBMP) ಸೂಚನೆಯಂತೆ ಜಿಟಿ ಮಾಲ್​ ಅನ್ನು ಸ್ವಯಂಪ್ರೇರಿತವಾಗಿ ಮಾಲೀಕರು ಬಂದ್ ಮಾಡಿದ್ದಾರೆ.

ಮತ್ತೊಮ್ಮೆ ಕ್ಷಮೆಯಾಚಿಸಿದ ಜಿಟಿ ಮಾಲ್ ಮಾಲ್​ ಮಾಲೀಕ

ಈ ಬಗ್ಗೆ ಜಿಟಿ ಮಾಲ್ ಮಾಲ್​ ಮಾಲೀಕ ಆನಂದ್ ಪುತ್ರ ಪ್ರಶಾಂತ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ಆಗಬಾರದಂತ ಘಟನೆ ನಡೆದಿದೆ. ಹೊಸ ಸಿಬ್ಬಂದಿಯಿಂದ ತಪ್ಪಾಗಿದೆ. ಮಾಲ್​ ಮಾಲೀಕನಾಗಿ ನಾನು ಈ ಘಟನೆಗೆ ಕ್ಷಮೆ ಕೇಳುತ್ತಿದ್ದೇನೆ. ತಪ್ಪು ಮಾಡಿದ ಸಿಬ್ಬಂದಿಯನ್ನ ಕೆಲಸದಿಂದ ತೆಗೆದಿದ್ದೇವೆ. ಈ ರೀತಿಯ ಕೆಲಸ ಆಗಬಾರದಿತ್ತು. ನಮ್ಮ ತಂದೆಯವರು ಕೂಡ ಮಾತಾಡಿ ಕ್ಷಮೆ ಕೇಳಿದ್ದಾರೆ ಎಂದರು.

ಇದನ್ನೂ ಓದಿ: ಜಿಟಿ ಮಾಲ್​ಗೆ ಬೀಗ ಜಡಿಯಲು ಪಾಲಿಕೆ ಮೀನಾಮೇಷ: ಸೂಕ್ತ ಕಾರಣ ಸಿಗದೇ ಗೊಂದಲಕ್ಕೆ ಸಿಲುಕಿದ ಬಿಬಿಎಂಪಿ

ಬಿಬಿಎಂಪಿಯಿಂದ ನೋಟಿಸ್ ಬಂದಿದೆ. ಘಟನೆ ಬಗ್ಗೆ ಮಾಹಿತಿ ಕೊಡಿ ಅಂತಾ ನೋಟಿಸ್ ಕೊಟ್ಟಿದ್ದಾರೆ. 1 ಕೋಟಿ 70 ಲಕ್ಷ ರೂ. ಒಂದು ವರ್ಷದ ತೆರಿಗೆ ಬಾಕಿ ಇದೆ. ಆದರೆ ಪಾಲಿಕೆ ಘಟನೆ ಬಗ್ಗೆ ಮಾಹಿತಿ ಕೊಡಿ ಅಂತಾ ನೋಟಿಸ್ ಕೊಟ್ಟಿದೆ. ಅದರಂತೆ ಸ್ವಯಂಪ್ರೇರಿತವಾಗಿ ಬಂದ್ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜಿಟಿ ಮಾಲ್ ಮಾಲೀಕನ ವಿರುದ್ಧ ಎಫ್ಐಆರ್ ದಾಖಲಿಸಬೇಕು: ಶರಣಗೌಡ ಕಂದ್ಕೂರ್

ಮುಂದಿನ ಸೂಚನೆ ಬರುವ ತನಕ ಮಾಲ್ ಬಂದ್ ಮಾಡುತ್ತೇವೆ. ಆಗಿರುವ ತಪ್ಪಿನ ಬಗ್ಗೆ ಕ್ಷಮೆಯಾಚಿಸುತ್ತೇವೆ. ಘಟನೆ ಬಗ್ಗೆ ಮಾಹಿತಿ ಕೊಟ್ಟಿದ್ದೇವೆ. ಫಕೀರಪ್ಪ ಅವರನ್ನು ವೈಯಕ್ತಿವಾಗಿ ಕ್ಷಮೆ ಕೇಳುತ್ತೇವೆ. ಎರಡು ಮೂರು ದಿನ ನಮಗೆ ಕಾಲಾವಕಾಶ ಬೇಕಾಗಿದೆ ಎಂದರು.

ಎಷ್ಟು ದಿನ ಮಾಲ್​ ಬಂದ್​?

ಕಂದಾಯ ವಿಭಾಗ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಬಗ್ಗೆ ನೋಟಿಸ್ ಕೊಟ್ಟಿದೆ. ಆರೋಗ್ಯ ಇಲಾಖೆ ನೋಟಿಸ್ ಕೊಟ್ಟಿದೆ. ನಮ್ಮ ಮೇಲೆ ಯಾವುದೇ ರಾಜಕೀಯ ಒತ್ತಡ ಇಲ್ಲ. ನಮ್ಮ ಕಡೆಯಿಂದ ತಪ್ಪಾಗಿದೆ. ಅದಕ್ಕಾಗಿ ನಾವೇ ಬಂದ್ ಮಾಡುತ್ತಿದ್ದೇವೆ. 7 ದಿನ ಅಂತಾ ಸದನದಲ್ಲಿ ಹೇಳಿದ್ದಾರೆ. ಎಷ್ಟು ದಿನ ಆಗುತ್ತೆ ಗೊತ್ತಿಲ್ಲ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.