AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಪ್ಪೋ ದಾಳಿಗೆ ಬಲಿಯಾಗಿದ್ದ ಪಶುವೈದ್ಯೆ 'ಸಮೀಕ್ಷಾ ರೆಡ್ಡಿ' ಹೆಸರು ಬನ್ನೇರುಘಟ್ಟದ ನೀರಾನೆ ಮರಿಗೆ ನಾಮಕರಣ

ಹಿಪ್ಪೋ ದಾಳಿಗೆ ಬಲಿಯಾಗಿದ್ದ ಪಶುವೈದ್ಯೆ ‘ಸಮೀಕ್ಷಾ ರೆಡ್ಡಿ’ ಹೆಸರು ಬನ್ನೇರುಘಟ್ಟದ ನೀರಾನೆ ಮರಿಗೆ ನಾಮಕರಣ

ರಾಮು, ಆನೇಕಲ್​
| Edited By: |

Updated on: Nov 09, 2026 | 8:26 PM

Share

ಶಿವಮೊಗ್ಗದಲ್ಲಿ ಹಿಪ್ಪೋ ದಾಳಿಗೆ ಬಲಿಯಾದ ಯುವ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ನೆನಪನ್ನು ಶಾಶ್ವತವಾಗಿಸಲು ಸರ್ಕಾರ ನಿರ್ಧರಿಸಿದೆ. ಅವರ ಪೋಷಕರ ಭಾವುಕ ಮನವಿಗೆ ಸ್ಪಂದಿಸಿ, ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಜನಿಸಿದ ಮರಿ ನೀರಾನೆಗೆ 'ಡಾ. ಸಮೀಕ್ಷಾ ರೆಡ್ಡಿ' ಎಂದು ಹೆಸರಿಡಲಾಗಿದೆ. ಇದು ಸಮೀಕ್ಷಾ ಅವರ ಸೇವೆಗೆ ಸಲ್ಲಿಸಿದ ಗೌರವವಾಗಿದೆ.

ಆನೇಕಲ್, ನ.9 : ಶಿವಮೊಗ್ಗದಲ್ಲಿ ನೀರಾನೆ (ಹಿಪ್ಪೋಪೊಟಮಸ್) ದಾಳಿಗೆ ಬಲಿಯಾಗಿದ್ದ ಯುವ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ನೆನಪನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಅರಣ್ಯ ಇಲಾಖೆ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಬೆಂಗಳೂರಿನ ಪ್ರಸಿದ್ಧ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಜನಿಸಿದ ಮರಿ ನೀರಾನೆಗೆ ‘ಡಾ. ಸಮೀಕ್ಷಾ ರೆಡ್ಡಿ’ ಎಂದು ನಾಮಕರಣ ಮಾಡಲಾಗಿದೆ. ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಬನ್ನೇರುಘಟ್ಟ ಉದ್ಯಾನವನದಲ್ಲಿ ನೂತನವಾಗಿ ನಿರ್ಮಿಸಲಾದ ಸುಮಾರು 28 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳನ್ನು ಅನಾವರಣಗೊಳಿಸಿದ ಬಳಿಕ ಈ ನಾಮಕರಣ ಕಾರ್ಯಕ್ರಮವನ್ನು ಅಧಿಕೃತವಾಗಿ ನೆರವೇರಿಸಿದರು. ಶಿವಮೊಗ್ಗದಲ್ಲಿ ಕರ್ತವ್ಯದಲ್ಲಿದ್ದಾಗ ಹಿಪ್ಪೋ ದಾಳಿಗೆ ಬಲಿಯಾಗಿದ್ದ ಡಾ. ಸಮೀಕ್ಷಾ ರೆಡ್ಡಿ ಅವರ ಕುಟುಂಬಸ್ಥರಿಗೆ ಸರ್ಕಾರ ಪರಿಹಾರ ಹಣವನ್ನು ಘೋಷಿಸಿತ್ತು. ಆದರೆ, ಸಮೀಕ್ಷಾ ಅವರ ಪೋಷಕರು ಸರ್ಕಾರದ ಪರಿಹಾರ ಹಣವನ್ನು ಸ್ವೀಕರಿಸಲು ನಿರಾಕರಿಸಿದ್ದರು. “ನಮಗೆ ಹಣಕ್ಕಿಂತ ಮಗಳ ಸೇವೆಯ ನೆನಪು ಮುಖ್ಯ. ಆಕೆಯ ಹೆಸರು ಶಾಶ್ವತವಾಗಿ ಉಳಿಯುವಂತೆ ಝೂ ಅಥವಾ ಜೈವಿಕ ಉದ್ಯಾನವನದ ಒಂದು ಸ್ಥಳಕ್ಕೆ ಅಥವಾ ಜೀವಿಗೆ ಆಕೆಯ ಹೆಸರಿಡಿ” ಎಂದು ಪೋಷಕರು ಸರ್ಕಾರಕ್ಕೆ ವಿನಮ್ರವಾಗಿ ಮನವಿ ಮಾಡಿಕೊಂಡಿದ್ದರು. ಪೋಷಕರ ಈ ಭಾವುಕ ಮನವಿಗೆ ತಕ್ಷಣವೇ ಸ್ಪಂದಿಸಿದ ಅರಣ್ಯ ಸಚಿವ ರಾಮಲಿಂಗಾರೆಡ್ಡಿ, ಬನ್ನೇರುಘಟ್ಟ ಝೂನ ಅಧಿಕಾರಿಗಳಿಗೆ ತಕ್ಷಣವೇ ಕ್ರಮ ಕೈಗೊಳ್ಳಲು ಸೂಚಿಸಿದ್ದರು. ಬನ್ನೇರುಘಟ್ಟ ಉದ್ಯಾನವನದಲ್ಲಿದ್ದ ‘ದಶ್ಯಾ’ ಮತ್ತು ‘ನಾಗ’ ಎಂಬ ನೀರಾನೆ ಜೋಡಿಗೆ ನೂತನವಾಗಿ ಹುಟ್ಟಿದ್ದ ಮರಿ ಹಿಪ್ಪೋಗೆ ಇದೀಗ ‘ಸಮೀಕ್ಷಾ ರೆಡ್ಡಿ’ ಎಂದು ಅಧಿಕೃತವಾಗಿ ಹೆಸರಿಡಲಾಗಿದೆ. ಇದರ ಜೊತೆಗೆ, ಬನ್ನೇರುಘಟ್ಟ ಜೈವಿಕ ಉದ್ಯಾನವನದ ನಿರ್ದಿಷ್ಟ ಸ್ಥಳವೊಂದಕ್ಕೂ ಸಮೀಕ್ಷಾ ರೆಡ್ಡಿ ಅವರ ಹೆಸರನ್ನಿಡಲು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ರಾಮು, ಆನೇಕಲ್​
ರಾಮು, ಆನೇಕಲ್​

ರಾಮು, ಟಿವಿ9 ವಾಹಿನಿ ಮುಖ್ಯ ಕಚೇರಿಯ ಬೆಂಗಳೂರಿನಲ್ಲಿ11 ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದು,2023 ಜುಲೈ ತಿಂಗಳಿಂದ ಆನೇಕಲ್ ತಾಲೂಕು ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ, ನಾನು ಕ್ರೈಂ ಪೊಲಿಟಿಕಲ್ ಸಿನಿಮಾ ಮತ್ತು ಮೆಟ್ರೋ ಸ್ಟೋರೀಸ್ ಗಳನ್ನು ಕವರೇಜ್ ಮಾಡುತ್ತೇನೆ .

Read More