ಬೆಂಗಳೂರು, ಆಗಸ್ಟ್ 06: ಬೆಂಗಳೂರಿನ (Bengaluru) ಸಿಎಂ ಕಾನ್ವೆನ್ಶನ್ನಲ್ಲಿ ನಡೆದ ಸುನ್ನಿ ಕೋಆರ್ಡಿನೇಷನ್ ಕಾರ್ಯಕ್ರಮಕ್ಕೆ ಮುಸ್ಲಿಂ ಮೌಲ್ವಿ ಬಂದಿದ್ದು, ಇದಕ್ಕೆ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮೌಲ್ವಿ ಶೇಖ್ ಅಬೂಬಕರ್ ಅಹ್ಮದ್ (Sheikh Abubakar Ahmed) ಸರ್ಕಾರದ “ಜಿ” ಸಿರೀಸ್ನ ಕಾರಿನಲ್ಲಿ ಪೊಲೀಸ್ ಭದ್ರತೆಯಲ್ಲಿ ಬಂದಿದ್ದರು. ಮೌಲ್ವಿ ಶೇಖ್ ಅಬೂಬಕರ್ ಅಹ್ಮದ್ ಸರ್ಕಾರದ ಕಾರಿನಲ್ಲಿ ಬಂದಿರುವ ವಿಡಿಯೋವನ್ನು ಶಾಸಕ ಯತ್ನಾಳ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Why is a person who is not related to the Government travelling in a ‘G’ series car along with Police Security & Protocol. Is this not breach of rules and protocol. The Government is trying to provide benefits & facilities for a religious leader with an eye on minority votes.… pic.twitter.com/JPjPnJm3uO
— Basanagouda R Patil (Yatnal) (@BasanagoudaBJP) August 5, 2024
“ಸರ್ಕಾರಕ್ಕೆ ಸಂಬಂಧವಿಲ್ಲದ ವ್ಯಕ್ತಿಗೆ ಪೊಲೀಸ್ ಭದ್ರತೆ ಹಾಗೂ ಪೊಲೀಸ್ ಭದ್ರತೆ ಮತ್ತು ಪ್ರೊಟೋಕಾಲ್ ಅನ್ನು ನೀಡಲಾಗಿದೆ. ಅಲ್ಲದೆ, “ಜಿ” ಸಿರಿಸ್ನ ಸರ್ಕಾರಿ ಕಾರಿನಲ್ಲಿ ಏಕೆ ಬಂದರು? ಇದು ಶಿಷ್ಟಾಚಾರದ ನಿಯಮಗಳ ಉಲ್ಲಂಘನೆಯಲ್ಲವೇ? ಎಂದು ಸರ್ಕಾರಕ್ಕೆ ಯತ್ನಾಳ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಪಿಎಸ್ಐ ಅನುಮಾನಾಸ್ಪದ ಸಾವು: ಸಿದ್ದರಾಮಯ್ಯ ವಿರುದ್ಧ ರೊಚ್ಚಿಗೆದ್ದ ಶಾಸಕ ಯತ್ನಾಳ್
ಅಲ್ಪಸಂಖ್ಯಾತರ ಮತಗಳನ್ನು ಗಮನದಲ್ಲಿಟ್ಟುಕೊಂಡು ಧಾರ್ಮಿಕ ಮುಖಂಡರಿಗೆ ಅನುಕೂಲಗಳು ಮತ್ತು ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಇದು ನಿಯಮಗಳಿಗೆ ವಿರುದ್ಧವಾಗಿರುವುದು ಮಾತ್ರವಲ್ಲದೆ ತೆರಿಗೆದಾರರ ಹಣ ವ್ಯರ್ಥವೂ ಆಗಿದೆ. ರಾಜ್ಯವು ಮಳೆಯ ಅಬ್ಬರಕ್ಕೆ ತತ್ತರಿಸಿರುವ ಸಂದರ್ಭದಲ್ಲಿ ಸರ್ಕಾರ ಈ ರೀತಿ ಮಾಡುವುದು ಸರಿಯಲ್ಲ ಎಂದು ವಾಗ್ದಾಳಿ ಮಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ