ಬೆಂಗಳೂರು, ಆಗಸ್ಟ್ 28: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) 8 ವಲಯಗಳ ತೆರಿಗೆ ಬಾಕಿದಾರರ ಪಟ್ಟಿಯನ್ನು ಬುಧವಾರ ಬಿಡುಗಡೆಗೊಳಿಸಿದೆ. ಎಂಟು ವಲಯಗಳಿಂದ ಕೋಟಿ ಕೋಟಿ ರೂ. ತೆರಿಗೆ ಹಣ ಬಾಕಿ ಇದ್ದು, ಪ್ರತಿ ವಲಯದಲ್ಲೂ 50 ತೆರಿಗೆ ಬಾಕಿದಾರರ ಮಾಹಿತಿ ಪ್ರಕಟ ಮಾಡಲಾಗಿದೆ. ಒಟಿಎಸ್ ಸೌಲಭ್ಯ ನೀಡಿದ್ದರೂ ಬಾಕಿ ಹಣ ಬೊಕ್ಕಸಕ್ಕೆ ಬಂದಿಲ್ಲ. ಪುಟ್ಟೇನಹಳ್ಳಿಯ ಪ್ರೈಂಕೋ ಲಿಮಿಟೆಡ್ನಿಂದ ಬರೋಬ್ಬರಿ 22 ಲಕ್ಷದ 87 ಸಾವಿರದ 225 ರೂ.ತೆರಿಗೆ ಬಾಕಿ ಇದೆ.
ಇದನ್ನೂ ಓದಿ: ಆಸ್ತಿ ತೆರಿಗೆ ಮೂಲಕ ಬಿಬಿಎಂಪಿ ಬೊಕ್ಕಸಕ್ಕೆ ಹರಿದುಬಂತು ಕೊಟ್ಯಾಂತರ ರೂ. ಹಣ: ಜುಲೈ ವರೆಗಿನ ಕಲೆಕ್ಷನ್ ಇಲ್ಲಿದೆ
ಆಸ್ತಿ ತೆರಿಗೆ ಸಂಗ್ರಹ ವಿಚಾರವಾಗಿ ಇತ್ತೀಚೆಗೆ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಇಲ್ಲಿವರೆಗೆ ಸುಮಾರು 3 ಸಾವಿರ ಕೋಟಿಯಷ್ಟು ಆಸ್ತಿ ತೆರಿಗೆ ಸಂಗ್ರಹವಾಗಿದ್ದು, ಹೆಚ್ಚುವರಿಯಾಗಿ 400 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ ಎಂದು ಹೇಳಿದ್ದರು.
ಇದನ್ನೂ ಓದಿ: ಆಸ್ತಿ ತೆರಿಗೆ ಹೆಚ್ಚಳದ ಬಗ್ಗೆ ಸ್ಪಷ್ಟನೆ ನೀಡಿದ ಬಿಬಿಎಂಪಿ, 5% ರಿಯಾಯಿತಿ ಅವಧಿ ವಿಸ್ತರಣೆ
ಒಟಿಎಸ್ ಕಾಲಾವಧಿ ಒಂದು ತಿಂಗಳು ವಿಸ್ತರಣೆ ಮಾಡಬೇಕು ಎಂದು ಅಧಿಕಾರಿಗಳು ಹಾಗೂ ಸಾರ್ವಜನಿಕರಿಂದ ಒತ್ತಡ ಬರುತ್ತಿದೆ. ಸರ್ವರ್ ಸಮಸ್ಯೆಗಳಿದ್ದು, ಕೆಲವರು ಚೆಕ್ ಮೂಲಕ ಪಾವತಿ ಮಾಡಿದ್ದರಿಂದ ವಿಸ್ತರಣೆಯ ಅಗತ್ಯವಿತ್ತು. ಜುಲೈ 31ರವರೆಗೆ ನೀಡಲಾಗಿದ್ದ ಕಾಲಾವಧಿಯನ್ನು ಒಂದು ತಿಂಗಳ ಕಾಲ ಅಂದರೆ ಸೆಪ್ಟೆಂಬರ್ 30ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದರು.
ಪ್ರತಿ 8 ವಲಯಗಳ ಪ್ರಮುಖ 100 ಅತ್ಯಧಿಕ ಆಸ್ತಿ ತೆರಿಗೆ ಬಾಕಿ ಆಸ್ತಿಗಳ ಪಟ್ಟಿ ಇಲ್ಲಿದೆ. https://bbmptax.karnataka.gov.in/documents/DefaulterslistZones1.pdf
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:11 pm, Wed, 28 August 24