ರಾಜಕಾಲುವೆಗಳ ಮೇಲೆ ಮತ್ತೆ ಘರ್ಜಿಸಲಿವೆ ಬಿಬಿಎಂಪಿ ಜೆಸಿಬಿಗಳು! ಯಾವಾಗಿನಿಂದ, ಎಲ್ಲೆಲ್ಲಿ?

| Updated By: ಸಾಧು ಶ್ರೀನಾಥ್​

Updated on: Jan 07, 2021 | 10:23 AM

2016 ರಲ್ಲಿ ರಾಜಕಾಲುವೆ ಮೇಲಿನ ಕಟ್ಟಡಗಳನ್ನು ತೆರವು ಮಾಡುವ ಮೂಲಕ ತನ್ನ ವರಸೆಯನ್ನು ಬಿಬಿಎಂಪಿ ತೋರಿಸಿತ್ತು. ಇದೀಗ 4 ವರ್ಷಗಳ ಬಳಿಕ ಒತ್ತುವರಿ ತೆರವು ಮಾಡಲು ಸಿದ್ಧತೆ ನಡೆಸಿಕೊಂಡಿದೆ.

ರಾಜಕಾಲುವೆಗಳ ಮೇಲೆ ಮತ್ತೆ ಘರ್ಜಿಸಲಿವೆ ಬಿಬಿಎಂಪಿ ಜೆಸಿಬಿಗಳು! ಯಾವಾಗಿನಿಂದ, ಎಲ್ಲೆಲ್ಲಿ?
ರಾಜಕಾಲುವೆ ಮೇಲಿನ ಕಟ್ಟಡಗಳ ತೆರವು ಕಾರ್ಯಾಚರಣೆ
Follow us on

ಬೆಂಗಳೂರು: ಈ ಹಿಂದೆ 2016 ರಲ್ಲಿ ರಾಜಕಾಲುವೆ ಮೇಲಿನ ಕಟ್ಟಡಗಳನ್ನು ತೆರವು ಮಾಡುವ ಮೂಲಕ ತನ್ನ ವರಸೆಯನ್ನು ಬಿಬಿಎಂಪಿ ತೋರಿಸಿತ್ತು. ಇದೀಗ 4 ವರ್ಷಗಳ ಬಳಿಕ ಒತ್ತುವರಿ ತೆರವು ಮಾಡಲು ಮರುಸಿದ್ಧತೆ ನಡೆಸಿಕೊಂಡಿದೆ.

ನಗರದಲ್ಲಿ ಒಟ್ಟು 714 ಕಡೆ ತೆರವು ಕಾರ್ಯಾಚರಣೆ ಹಮ್ಮಿಕೊಂಡಿದೆ. ಈಗಾಗಲೇ 1,912 ಒತ್ತುವರಿ ತೆರವು ಪ್ರಕರಣಗಳು ಪೂರ್ಣಗೊಂಡಿವೆ. ರಾಜಕಾಲುವೆ ಮೇಲಿರುವ 348 ಕಟ್ಟಡಗಳನ್ನು ಗುರುತಿಸಲಾಗಿದೆ. ಇದೀಗ ಬಾಕಿ ಇರುವ ಒತ್ತುವರಿ ಕಟ್ಟಡಗಳನ್ನ ತೆರವು ಮಾಡಲು ಬಿಬಿಎಂಪಿ ಮುಂದಾಗಿದೆ.

ನಗರದಲ್ಲಿ ಮತ್ತೆ ಜೆಸಿಬಿಗಳ ಘರ್ಜನೆ ಶುರುವಾಗಲಿದ್ದು, ನಾಳೆ (ಜ.08) ಅಥವಾ ನಾಡಿದ್ದು (ಜ.09) ಒತ್ತುವರಿ ಕಾರ್ಯಾಚರಣೆ ಪ್ರಾರಂಭಗೊಳ್ಳಲಿದೆ. ಆರ್​.ಆರ್. ನಗರ, ಬೊಮ್ಮನಹಳ್ಳಿ, ದೊಡ್ಡಬೊಮ್ಮಸಂದ್ರ ಸೇರಿದಂತೆ ಹಲವೆಡೆ ತೆರವು ಕಾರ್ಯಾಚರಣೆ ನಡೆಯಲಿದೆ.

ರಾಜಕಾಲುವೆಯ ನೀರಿನಲ್ಲಿ ಕೊಚ್ಚಿ ಹೋಗಿದ್ದ ಸ್ವಿಫ್ಟ್​ ಕಾರ್ ಇಂದು ಪತ್ತೆ.. ಎಲ್ಲಿ ಸಿಕ್ತು?

Published On - 10:22 am, Thu, 7 January 21