Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿಯಲ್ಲಿ ಭಾರಿ ಪ್ರಮಾಣದ ಸ್ಫೋಟಕ ಪತ್ತೆ; ನಾಲ್ವರ ವಶ

Gelatin Sticks in Belagavi: ಟಾಟಾ ಕ್ಯಾಂಟರ್, ಬೊಲೆರೊ ಪಿಕ್‌ಅಪ್ ವಾಹನಗಳಲ್ಲಿ ಇಷ್ಟು ಪ್ರಮಾಣದ ಸ್ಫೋಟಕಗಳನ್ನು ಬಂಧಿತರು ಸಾಗಿಸುತ್ತಿದ್ದರು. ನಿಯಮ ಉಲ್ಲಂಘಿಸಿ ನಿರ್ಲಕ್ಷ್ಯತನದಿಂದ ಸ್ಫೋಟಕ ಸಾಗಿಸುತ್ತಿರುವ ಮಾಹಿತಿಯ ಆಧಾರದ ಮೇಲೆ ಕಾಕತಿ ಠಾಣೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

ಬೆಳಗಾವಿಯಲ್ಲಿ ಭಾರಿ ಪ್ರಮಾಣದ ಸ್ಫೋಟಕ ಪತ್ತೆ; ನಾಲ್ವರ ವಶ
ವಶಪಡಿಸಿಕೊಂಡಿರುವ ಸ್ಫೋಟಕಗಳು
Follow us
guruganesh bhat
|

Updated on: Mar 07, 2021 | 9:38 PM

ಬೆಳಗಾವಿ: ನಿಯಮ ಉಲ್ಲಂಘಿಸಿ ಸಾಗಿಸುತ್ತಿದ್ದ ಬರೋಬ್ಬರಿ 6.675 ಟನ್ ಜಿಲೆಟಿನ್ ಕಡ್ಡಿ, ಡಿಟೋನೇಟರ್​ಗಳನ್ನು ಜಿಲ್ಲೆಯ ಹೊನಗಾ ಗ್ರಾಮದ ಬಳಿ ಪೊಲೀಸರು ಜಪ್ತಿಪಡಿಸಿಕೊಂಡಿದ್ದಾರೆ. ಎರಡು ವಾಹನಗಳಲ್ಲಿ ಸ್ಫೋಟಕ ಸಾಗಿಸುತ್ತಿದ್ದ ಚಿಕ್ಕೋಡಿ ತಾಲೂಕಿನ ಬೊಬಲವಾಡದ ರಮೇಶ್ ಲಕ್ಕೋಟಿ, ರಾಜು ಶಿರಗಾವಿ,‌ ಮುಗಳಿ ನಿವಾಸಿ ಅರುಣಮಠದ, ವಿನಯ್ ಅವರುಗಳನ್ನು ಪೊಲೀಸರು ಬಂಧಿಸಿದ್ದಾರೆ. ಕರೋಶಿ ಗ್ರಾಮದಿಂದ ಧಾರವಾಡ, ಗದಗ ಕಡೆ ಸ್ಫೋಟಕಗಳನ್ನು ಈ ನಾಲ್ವರು ಸಾಗಿಸುತ್ತಿದ್ದು, ಸ್ಫೋಟಕಗಳ ಮೌಲ್ಯ ನಾಲ್ಕು ಲಕ್ಷ ಎಂದು ಅಂದಾಜಿಸಲಾಗಿದೆ.

ಟಾಟಾ ಕ್ಯಾಂಟರ್, ಬೊಲೆರೊ ಪಿಕ್‌ಅಪ್ ವಾಹನಗಳಲ್ಲಿ ಇಷ್ಟು ಪ್ರಮಾಣದ ಸ್ಫೋಟಕಗಳನ್ನು ಬಂಧಿತರು ಸಾಗಿಸುತ್ತಿದ್ದರು. ನಿಯಮ ಉಲ್ಲಂಘಿಸಿ ನಿರ್ಲಕ್ಷ್ಯದಿಂದ ಸ್ಫೋಟಕ ಸಾಗಿಸುತ್ತಿರುವ ಮಾಹಿತಿಯ ಆಧಾರದ ಮೇಲೆ ಕಾಕತಿ ಠಾಣೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

ರಾಜ್ಯದಲ್ಲಿ ಸಾಲುಸಾಲು ಜಿಲೆಟಿನ್ ದುರಂತ

ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್‌ ಹೋಬಳಿಯ ಹಿರೇನಾಗವೇಲಿ ಗ್ರಾಮದ ಬಳಿ ಅಕ್ರಮ ಬ್ಲಾಸ್ಟಿಂಗ್ ನಡೆದಿತ್ತು. ಹಾಗೂ ಟಾಟಾ ಏಸ್ ವಾಹನ ಚಾಲಕ ರಿಯಾಜ್​ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆರೋಗ್ಯ ಸಚಿವ ಸುಧಾಕರ್ ತವರು ಕ್ಷೇತ್ರದಲ್ಲಿ ಇಂತಹದೊಂದು ದುರಂತ ಸಂಭವಿಸಿತ್ತು. ಹಾಗೂ ಸ್ಫೋಟದ ತೀವ್ರತೆಗೆ ಹತ್ತಾರು ಕಿ.ಮೀ ವರೆಗೂ ಭೂಮಿ ಕಂಪಿಸಿತ್ತು.

ಚಿಕ್ಕಬಳ್ಳಾಪುರ ಘಟನೆಗೂ ಮುನ್ನ ಶಿವಮೊಗ್ಗದ ಹುಣಸೋಡು ಬಳಿಯಿರುವ ರೈಲ್ವೆ ಕ್ವಾರಿಯತ್ತ ತೆರಳುತ್ತಿತ್ತು. ಇನ್ನೇನು ಕ್ವಾರಿ ರೀಚ್ ಆಗ್ಬೇಕಿತ್ತು..ಆದರೆ ಲಾರಿಯಲ್ಲಿದ್ದ ಸುಮಾರು 50ಕ್ಕೂ ಹೆಚ್ಚು ಜಿಲೆಟಿನ್ ಕಡ್ಡಿಗಳಲ್ಲಿ, ಬಹುತೇಕ ಜಿಲ್ಲೆಟಿನ್ ಕಡ್ಡಿಗಳು ಸ್ಫೋಟಗೊಂಡಿತ್ತು. ಸ್ಫೋಟದ ತೀವ್ರತೆಗೆ ಲಾರಿ ಛಿದ್ರ ಛಿದ್ರವಾಗಿದ್ರೆ, ಲಾರಿಯಲ್ಲಿದ್ದ ಬಿಹಾರ ಮೂಲದ 8ಕ್ಕೂ ಹೆಚ್ಚು ಕಾರ್ಮಿಕರು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಲಾರಿ ಚಾಲಕ, ಕಾರ್ಮಿಕರು ಸೇರಿದಂತೆ 8ಕ್ಕೂ ಹೆಚ್ಚು ಕಾರ್ಮಿಕರ ಮೃತದೇಹವೂ ಒಂದೊಂದು ದಿಕ್ಕಿನಲ್ಲಿ ಛಿದ್ರ ಛಿದ್ರವಾಗಿ ಬಿದ್ದಿದ್ದವು. ಸ್ಫೋಟದ ತೀವ್ರತೆ ಹೇಗಿತ್ತು ಅಂದ್ರೆ, ದುರಂತದಲ್ಲಿ ಮೃತಪಟ್ಟಿರೋ ಅದೆಷ್ಟೋ ಕಾರ್ಮಿಕರ ಮೃತದೇಹ ಗುರುತೇ ಸಿಗದಷ್ಟು ಛಿದ್ರ ಛಿದ್ರವಾಗಿದ್ದವು.

ಹೀಗೆ ಶಿವಮೊಗ್ಗ, ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ ದುರ್ಘಟನೆಗಳು ಮಾಸುವ ಮುನ್ನವೇ ಬೆಳಗಾವಿಯಲ್ಲಿ ದೊರೆತ ಜಿಲೆಟಿನ್ ಕಡ್ಡಿಗಳು ಆತಂಕ ಮೂಡಿಸಿವೆ.

ಇದನ್ನೂ ಓದಿ: Shivamogga Blast ಶಿವಮೊಗ್ಗದ ಹುಣಸೋಡಿಯಲ್ಲಿನ ವಿಸ್ಫೋಟಕ್ಕೆ ಇದು ಕಾರಣವಾಗಿರಬಹುದಾ?

ಚಿಕ್ಕಬಳ್ಳಾಪುರ ಸ್ಫೋಟ ಪ್ರಕರಣ: ಕ್ವಾರಿ ಮಾಲೀಕ, ಬಿಜೆಪಿ ಮುಖಂಡನಾಗಿರುವ ಪ್ರಮುಖ ಆರೋಪಿ G.S.ನಾಗರಾಜ್ ಬಂಧನ

ಧನ್ವೀರ್ ಜೊತೆ ಸಿನಿಮಾ ಮಾಡ್ತಾರೆ ದರ್ಶನ್; ಸೂಚನೆ ಕೊಟ್ಟ ದಾಸ
ಧನ್ವೀರ್ ಜೊತೆ ಸಿನಿಮಾ ಮಾಡ್ತಾರೆ ದರ್ಶನ್; ಸೂಚನೆ ಕೊಟ್ಟ ದಾಸ
ಬಸನಗೌಡ ಯತ್ನಾಳ್ ಬಗ್ಗೆ ಮಾತಾಡಲು ಇಚ್ಛಿಸದ ವಿಜಯೇಂದ್ರ
ಬಸನಗೌಡ ಯತ್ನಾಳ್ ಬಗ್ಗೆ ಮಾತಾಡಲು ಇಚ್ಛಿಸದ ವಿಜಯೇಂದ್ರ
ತುಮಕೂರು ಜಿಲ್ಲೆ ನೀರಿನ ಯೋಜನೆಗಳ ಬಗ್ಗೆ ಶ್ರೀಗಳಿಗೆ ವಿವರಿಸಿದ ಪರಮೇಶ್ವರ್
ತುಮಕೂರು ಜಿಲ್ಲೆ ನೀರಿನ ಯೋಜನೆಗಳ ಬಗ್ಗೆ ಶ್ರೀಗಳಿಗೆ ವಿವರಿಸಿದ ಪರಮೇಶ್ವರ್
ಕಾಂಗ್ರೆಸ್ ಅಧಿಕಾರದಲ್ಲಿ 50 ವಸ್ತುಗಳ ಬೆಲೆ ಜಾಸ್ತಿಯಾಗಿದೆ: ಹಿರಿಯ ನಾಗರಿಕ
ಕಾಂಗ್ರೆಸ್ ಅಧಿಕಾರದಲ್ಲಿ 50 ವಸ್ತುಗಳ ಬೆಲೆ ಜಾಸ್ತಿಯಾಗಿದೆ: ಹಿರಿಯ ನಾಗರಿಕ
ತುಮಕೂರು ರೈಲ್ವೆ ನಿಲ್ದಾಣಕ್ಕೆ ಶ್ರೀಗಳ ಹೆಸರು: ಪರಮೇಶ್ವರ್ ಹೇಳಿದ್ದಿಷ್ಟು
ತುಮಕೂರು ರೈಲ್ವೆ ನಿಲ್ದಾಣಕ್ಕೆ ಶ್ರೀಗಳ ಹೆಸರು: ಪರಮೇಶ್ವರ್ ಹೇಳಿದ್ದಿಷ್ಟು
ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ಹಿಂದಿನಿಂದ ಗುದ್ದಿದ ಮಿನಿಬಸ್ ಚಾಲಕ
ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ಹಿಂದಿನಿಂದ ಗುದ್ದಿದ ಮಿನಿಬಸ್ ಚಾಲಕ
ಧನ್ವೀರ್ ಮದುವೆಗೆ ಯಾವ ಬಟ್ಟೆ ಧರಿಸಬೇಕು? ಪ್ಲ್ಯಾನ್ ರಿವೀಲ್ ಮಾಡಿದ ದಾಸ
ಧನ್ವೀರ್ ಮದುವೆಗೆ ಯಾವ ಬಟ್ಟೆ ಧರಿಸಬೇಕು? ಪ್ಲ್ಯಾನ್ ರಿವೀಲ್ ಮಾಡಿದ ದಾಸ
VIDEO: ರಶೀದ್ ಖಾನ್ ವಿಚಿತ್ರ ಶಾಟ್, ಯಶಸ್ವಿ ಜೈಸ್ವಾಲ್ ಅದ್ಭುತ ಕ್ಯಾಚ್
VIDEO: ರಶೀದ್ ಖಾನ್ ವಿಚಿತ್ರ ಶಾಟ್, ಯಶಸ್ವಿ ಜೈಸ್ವಾಲ್ ಅದ್ಭುತ ಕ್ಯಾಚ್
ಅತಿಥಿಗಳಿಗೆ ನೀಡುವ ಆಹಾರದ ಪುಣ್ಯ ಹೇಗೆ ಸಿಗುತ್ತೆ ಗೊತ್ತಾ?
ಅತಿಥಿಗಳಿಗೆ ನೀಡುವ ಆಹಾರದ ಪುಣ್ಯ ಹೇಗೆ ಸಿಗುತ್ತೆ ಗೊತ್ತಾ?
Daily Horoscope: ಈ ರಾಶಿಯವರಿಗೆ ವಿವಾಹ ಯೋಗ ಕೂಡಿಬರಲಿದೆ
Daily Horoscope: ಈ ರಾಶಿಯವರಿಗೆ ವಿವಾಹ ಯೋಗ ಕೂಡಿಬರಲಿದೆ