ಬೆಳಗಾವಿ: ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನ ತಡೆಯಲು ಜಿಲ್ಲಾಡಳಿತ ಸರ್ವ ಸನ್ನದ್ದವಾಗಿದ್ದು, ಬಹುಮುಖ್ಯವಾಗಿ ಬೇಕಿರುವ ಆಕ್ಸಿಜನ್ ಕೊರತೆ ನಿಗಿಸಲು ಬೆಳಗಾವಿ ಜಿಲ್ಲಾಡಳಿತ ಎಲ್ಲಾ ಯೋಜನೆಗಳನ್ನು ಮಾಡಿಕೊಂಡಿದೆ. ಈ ಯೋಜನೆಗೆ ಖಾಸಗಿ ಆಸ್ಪತ್ರೆಗಳು ಕೂಡ ಸಾಥ್ ನೀಡಿದ್ದು, ಕೊರೊನಾ ಸೋಂಕನ್ನು ತಡೆಯಲು ಮತ್ತಷ್ಟು ಬಲ ಸಿಕ್ಕಿದಂತಾಗಿದೆ.
ಕುಂದಾನಗರಿ ಬೆಳಗಾವಿಯಲ್ಲಿ ದಿನಕ್ಕೆ 300ಕ್ಕೂ ಹೆಚ್ಚು ಜನರಲ್ಲಿ ಸೋಂಕು ಕಂಡು ಬಂದಿದೆ. ಸೋಂಕು ಪತ್ತೆಯಾಗುತ್ತಿರುವವರ ಪೈಕಿ ಬಹುತೇಕರು ಹೋಮ್ ಐಸೋಲೇಷನ್ ಆಗುತ್ತಿದ್ದಾರೆ. ಇನ್ನೂಳಿದಂತೆ ಆಸ್ಪತ್ರೆಗೆ ದಾಖಲಾದ ಕೆಲವರು ಉಸಿರಾಟದ ಸಮಸ್ಯೆಯಿಂದಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಬೆಳಗಾವಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬಂದರೆ ಆಕ್ಸಿಜನ್ ಕೊರತೆ ಆಗಬಾರದು ಎಂದು ಎಲ್ಲಾ ರೀತಿಯ ಸಿದ್ಧತೆಯನ್ನ ಜಿಲ್ಲಾಡಳಿತ ಮಾಡಿಕೊಂಡಿದೆ.
ಇದರಲ್ಲಿ ಮುಖ್ಯವಾಗಿ ಬೆಳಗಾವಿ ನಗರದಲ್ಲಿರುವ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ 18 ಟನ್ ನಷ್ಟು ಆಕ್ಸಿಜನ್ ಈಗಾಗಲೇ ರೆಡಿ ಇದ್ದು, ಏಕಕಾಲಕ್ಕೆ ಈ ಒಂದೇ ಆಸ್ಪತ್ರೆಯಲ್ಲಿ 800 ಜನರಿಗೆ ಆಕ್ಸಿಜನ್ ಒದಗಿಸಬಹುದಾಗಿದೆ. ಇನ್ನೂಳಿದಂತೆ ಖಾಸಗಿ ಆಸ್ಪತ್ರೆಯಲ್ಲಿ ಏಕಕಾಲಕ್ಕೆ 500 ಜನರಿಗೆ ಆಕ್ಸಿಜನ್ ನೀಡುವ ವ್ಯವಸ್ಥೆ ಕೂಡ ಮಾಡಲಾಗಿದೆ. ಇದೆಲ್ಲದರ ಜತೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ 600 ಆಕ್ಸಿಜನ್ ಒದಗಿಸುವ ವ್ಯವಸ್ಥೆಯನ್ನ ಮಾಡಿಕೊಳ್ಳಲಾಗಿದೆ. ಇದಕ್ಕೆ ಬೇಕಾಗುವಷ್ಟು ಆಕ್ಸಿಜನ್ ಈಗಗಾಲೇ ರೆಡಿ ಇದೆ. ಇನ್ನೂ ಜಿಲ್ಲಾಡಳಿತ ಎಲ್ಲಾ ಖಾಸಗಿ ಆಸ್ಪತ್ರೆಗಳಿಂದ ಶೇಕಡಾ 50 ರಷ್ಟು ಬೆಡ್ಗಳನ್ನ ಸರ್ಕಾರಕ್ಕೆ ನೀಡಬೇಕು ಎಂದು ಹೇಳಿದ್ದು ಹೀಗಾಗಿ ಸದ್ಯ ಬೆಳಗಾವಿಯಲ್ಲಿ ಆಕ್ಸಿಜನ್ ಮತ್ತು ಬೆಡ್ ಗಳ ಸಮಸ್ಯೆ ಇಲ್ಲ ಎಂದು ಡಿಎಚ್ಒ ಶಶಿಕಾಂತ್ ಮುನ್ಯಾಳ್ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಸದ್ಯ 2199 ಸಕ್ರೀಯ ಕೇಸ್ಗಳಿದ್ದು, ಇದರಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ 210 ಆಕ್ಸಿಜನ್ ಮೇಲಿದ್ದರೆ 62 ಜನ ರೋಗಿಗಳು ಐಸಿಯುನಲ್ಲಿದ್ದು ಎಲ್ಲಿರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಬೆಳಗಾವಿ ಜಿಲ್ಲೆಗೆ ಬಳ್ಳಾರಿ ಜಿಲ್ಲೆಯಿಂದ ಆಕ್ಸಿಜನ್ ಪೂರೈಕೆಯಾಗುತ್ತಿದ್ದು, ಇತ್ತ ಲಿಕ್ವಿಡ್ ಆಕ್ಸಿಜನ್ ಕೂಡ ಬೇರೆ ಬೇರೆ ಕಡೆಗಳಿಂದ ಬರುತ್ತಲಿದೆ. ಇದನ್ನ ಈಗಾಗಲೇ ಶೇಖರಿಸಿಕೊಂಡಿದ್ದು, ಏಕಕಾಲಕ್ಕೆ 1900 ಜನ ರೋಗಿಗಳಿಗೆ ಜಿಲ್ಲೆಯಲ್ಲಿ ಆಕ್ಸಿಜನ್ ನೀಡುವ ವ್ಯವಸ್ಥೆ ಕೂಡ ಮಾಡಿಕೊಳ್ಳಲಾಗಿದೆ.
ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಬೆಳಗಾವಿ ಜಿಲ್ಲೆಗೆ ಯಾವಾಗ ಕೊರೊನಾ ಆವರಿಸಿಕೊಂಡಿತ್ತು ಗೊತ್ತಿಲ್ಲ. ಒಂದು ವಾರದ ಅವಧಿಯಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಕೊರೊನಾ ಸೋಂಕಿತರು ಇಲ್ಲಿ ಪತ್ತೆಯಾಗುತ್ತಿದ್ದು, ಇದಕ್ಕೆ ಬೇಕಾದ ವ್ಯವಸ್ಥೆಯನ್ನ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳಗಾವಿ ಜಿಲ್ಲಾಡಳಿತ ಮಾಡಬೇಕಿದೆ. ಆಕ್ಸಿಜನ್ ಸ್ಟಾಕ್ ಇಟ್ಟಿರುವ ಜಿಲ್ಲಾಡಳಿತ ಅದನ್ನು ಸಮರ್ಪಕವಾಗಿ ಸರಿಯಾದ ಸಮಯಕ್ಕೆ ಬಳಸಿಕೊಳ್ಳುವ ವ್ಯವಸ್ಥೆಯನ್ನೂ ಕೂಡ ಮಾಡಿಕೊಳ್ಳಲಿ ಎನ್ನುವುದು ಟಿವಿ9 ಡಿಜಿಟಲ್ನ ಆಶಯ.
ಇದನ್ನೂ ಓದಿ;
ಕೊರೊನಾ ಲಸಿಕೆ ಬಗ್ಗೆ ಗೊಂದಲ ಬೇಡ, 18 ವರ್ಷ ಮೇಲ್ಪಟ್ಟವರು ಕೂಡಾ 2 ಡೋಸ್ ಲಸಿಕೆ ಪಡೆಯಬೇಕು: ಆರೋಗ್ಯ ಸಚಿವ ಸುಧಾಕರ್
ಕೊರೊನಾ ಸೋಂಕಿನ ಹರಡುವಿಕೆಗೆ ಮಂಡ್ಯದ ಜನ ಹೈರಾಣು; ಲಸಿಕೆ ಪಡೆದುಕೊಳ್ಳಲು ಸಾಲುಗಟ್ಟಿ ನಿಂತ ಸಾರ್ವಜನಿಕರು
(Belagavi District Admin get read to curb covid with required quantity of Oxygen in all Covid Hospitals)