ಬೆಳಗಾವಿಯಲ್ಲಿ ಹಿಂದೂ ಕಾರ್ಯಕರ್ತರಿಂದ ನೈತಿಕ ಪೊಲೀಸ್​ಗಿರಿ: ಅಕ್ರಮವಾಗಿ ಗೋವು ಸಾಗಾಟ ಮಾಡ್ತಿದ್ದ ಚಾಲಕನಿಗೆ ಥಳಿತ

ಅಕ್ರಮವಾಗಿ ಗೋವು ಸಾಗಾಟ ಮಾಡುತ್ತಿದ್ದ ಲಾರಿ ಚಾಲಕನಿಗೆ 50ಕ್ಕೂ ಹೆಚ್ಚು ಹಿಂದೂಪರ ಕಾರ್ಯಕರ್ತರಿಂದ ಥಳಿಸುವ ಮೂಲಕ ನೈತಿಕ ಪೊಲೀಸ್​ಗಿರಿ ಮೆರೆದಿದ್ದಾರೆ. ನಗರದ  ಸುವರ್ಣಸೌಧದ ಮುಂಭಾಗದಲ್ಲಿಯೇ ಘಟನೆ ನಡೆದಿದೆ. ಸ್ಥಳಕ್ಕೆ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಭೇಟಿ ನೀಡಿದ್ದು, ಹಿಂದೂಪರ ಕಾರ್ಯಕರ್ತರನ್ನ ಸಮಾಧಾನ ಪಡಿಸಿದ್ದಾರೆ. ಗೋ ಹತ್ಯೆ ನಿಷೇಧ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೆ ಒತ್ತಾಯಿಸಲಾಗಿದೆ.

ಬೆಳಗಾವಿಯಲ್ಲಿ ಹಿಂದೂ ಕಾರ್ಯಕರ್ತರಿಂದ ನೈತಿಕ ಪೊಲೀಸ್​ಗಿರಿ: ಅಕ್ರಮವಾಗಿ ಗೋವು ಸಾಗಾಟ ಮಾಡ್ತಿದ್ದ ಚಾಲಕನಿಗೆ ಥಳಿತ
ಅಕ್ರಮವಾಗಿ ಗೋವು ಸಾಗಾಟ
Follow us
Sahadev Mane
| Updated By: ಗಂಗಾಧರ​ ಬ. ಸಾಬೋಜಿ

Updated on: Apr 21, 2024 | 10:20 PM

ಬೆಳಗಾವಿ, ಏಪ್ರಿಲ್​ 21: ಅಕ್ರಮವಾಗಿ ಗೋವು (cows) ಸಾಗಾಟ ಮಾಡುತ್ತಿದ್ದ ಲಾರಿ ಚಾಲಕನಿಗೆ 50ಕ್ಕೂ ಹೆಚ್ಚು ಹಿಂದೂಪರ ಕಾರ್ಯಕರ್ತರಿಂದ ಥಳಿಸುವ ಮೂಲಕ ನೈತಿಕ ಪೊಲೀಸ್​ಗಿರಿ (Moral policing) ಮೆರೆದಿದ್ದಾರೆ. ನಗರದ  ಸುವರ್ಣಸೌಧದ ಮುಂಭಾಗದಲ್ಲಿಯೇ ಘಟನೆ ನಡೆದಿದೆ. ಮಹಾರಾಷ್ಟ್ರದಿಂದ ಹುಬ್ಬಳ್ಳಿ ಕಡೆ ಹೊರಟ್ಟಿದ್ದ ಲಾರಿಯನ್ನು ಹೆದ್ದಾರಿಯಲ್ಲೇ ತಡೆದು ಕಲ್ಲು ತೂರಿ, ಅಕ್ರಮವಾಗಿ ಗೋವು ಸಾಗಿಸುತ್ತಿದ್ದ ಎಂದು ಚಾಲಕನ ಮೇಲೆ ಹಲ್ಲೆ ಮಾಡಲಾಗಿದೆ. ಕಾಸರಗೋಡು ಮೂಲದ ಲಾರಿ ಚಾಲಕ ಉಮರ್​ ಮೋಯಿದ್ದೀನ್​​ಗೆ ಕಾಲಿನಿಂದ ಒದ್ದು ಕಟ್ಟಿಗೆಯಿಂದಲೂ ಹಲ್ಲೆ ಮಾಡಿದ್ದು, ಗಂಭೀರ ಗಾಯಗೊಂಡಿದ್ದಾರೆ.

ಲಾರಿ ಚಾಲಕ ಉಮರ್ ತಲೆ, ಹೊಟ್ಟೆ, ಬೆನ್ನು, ಕಾಲಿಗೆ ಗಾಯಗಳಾಗಿದ್ದು, ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮತ್ತೋರ್ವ ಲಾರಿ ಚಾಲಕ ಸುನೀಲ್ ಕುಮಾರ್​ಗೂ ಗಾಯವಾಗಿದೆ. ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಹಿರೇಬಾಗೆವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸ್ಥಳಕ್ಕೆ ಭೇಟಿ ನೀಡಿದ ಜಗದೀಶ್ ಶೆಟ್ಟರ್: ಕ್ರಮಕ್ಕೆ ಒತ್ತಾಯ

ಸ್ಥಳಕ್ಕೆ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಭೇಟಿ ನೀಡಿದ್ದು, ಹಿಂದೂಪರ ಕಾರ್ಯಕರ್ತರನ್ನ ಸಮಾಧಾನ ಪಡಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ಜತೆಗೆ ಪೋನ್ ಕರೆ ಮಾಡಿ ಮಾತನಾಡಿದ್ದು, ಅಕ್ರಮವಾಗಿ ಗೋವು ಸಾಗಾಟ ಮಾಡುತ್ತಿದ್ದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಡಿಸಿಪಿ ರೋಹನ್ ಜಗದೀಶ್ ಹೇಳಿದ್ದಿಷ್ಟು 

ಟಿವಿ9ಗೆ ಡಿಸಿಪಿ ರೋಹನ್ ಜಗದೀಶ್ ಪ್ರತಿಕ್ರಿಯಿಸಿದ್ದು, ಹಲ್ಲೆ ಮಾಡಿದವರ ಮೇಲೆ ಕೇಸ್ ದಾಖಲಿಸಿ ತನಿಖೆ ಮಾಡುತ್ತೇವೆ. ಸಂಜೆ 7 ಗಂಟೆಗೆ ಹಸು ಸಾಗಿಸುತ್ತಿದ್ದ ವಾಹನ ತಡೆಯಲಾಗಿದೆ. ಚಾಲಕ ಹಾಗೂ ಸ್ಥಳೀಯ ಯುವಕರ ಮಧ್ಯೆ ವಾಗ್ವಾದ ನಡೆದಿದೆ. ಚಾಲಕ ಹಾಗೂ ಕ್ಲೀನರ್ ಮೇಲೆ ಯುವಕರು ಹಲ್ಲೆ ಮಾಡಿದ್ದಾರೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಲವ್​ ಜಿಹಾದ್​: ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಇಸ್ಲಾಂಗೆ ಮತಾಂತರಕ್ಕೆ ಯತ್ನ

ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ಕಂಟ್ರೋಲ್ ಮಾಡಿದ್ದಾರೆ. ಯಮಕನಮರಡಿಯಿಂದ ಮುಂದೆ ಎಲ್ಲಿಗೆ ಲಾರಿ ಹೋಗುತ್ತಿತ್ತು ಅನ್ನೋ ಮಾಹಿತಿ ಪಡೆಯುತ್ತಿದ್ದೇವೆ‌. ಅಕ್ರಮವಾಗಿ ಗೋವು ಸಾಗಿಸುತ್ತಿದ್ದರೆ ಅವರ ಕುರಿತು ಪ್ರಕರಣ ದಾಖಲಾಗುತ್ತೆ‌‌‌. ಹಲ್ಲೆ ಮಾಡಿದವರ ಮೇಲೆಯೂ ಕೇಸ್ ದಾಖಲಿಸಿ ತನಿಖೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಗೋ ಹತ್ಯೆ ನಿಷೇಧ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೆ ಒತ್ತಾಯ: ರಮಾಕಾಂತ್ ಕೊಂಡುಸ್ಕೂರ್

ಒಂದೇ ಲಾರಿಯಲ್ಲಿ 28 ಗೋವುಗಳ ಸಾಗಾಟ ಮಾಡಲಾಗುತ್ತಿತ್ತು. ಸದ್ಯ ಎಲ್ಲ ಗೋವುಗಳನ್ನ ಕಮಕಾರಟ್ಟಿಯಲ್ಲಿರುವ ಮಹಾವೀರ ಗೋ ಶಾಲೆಗೆ ಶಿಫ್ಟ್ ಮಾಡಲಾಗಿದೆ. ಈ ವೇಳೆ ಗೋ ಶಾಲೆ ಬಳಿ ನೂರಾರು ಹಿಂದೂಪರ ಕಾರ್ಯಕರ್ತರು ಜಮಾವಣೆಗೊಂಡಿದ್ದಾರೆ. ಶ್ರೀರಾಮಸೇನೆ ಹಿಂದೂಸ್ತಾನ್ ಸಂಘಟನೆ ಸಂಸ್ಥಾಪಕ ರಮಾಕಾಂತ್ ಕೊಂಡುಸ್ಕೂರ್ ಆಗಮಿಸಿದ್ದಾರೆ. ಗೋ ಹತ್ಯೆ ನಿಷೇಧ ಕಾಯ್ದೆ ಕಟ್ಟುನಿಟ್ಟಾಗಿ ಜಾರಿ ತರುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಕೃಷ್ಣಾ ತೀರದಲ್ಲಿ ನೀರಿಗಾಗಿ ಹಾಹಾಕಾರ; ಜೀವವನ್ನೂ ಲೆಕ್ಕಿಸದೇ ಮೆಟ್ಟಲಿಲ್ಲದ ಬಾವಿಗಳಿದು ನೀರು ತುಂಬುತ್ತಿರೋ ಮಹಿಳೆಯರು

ಪೊಲೀಸರು ಮಾಡದ ಕೆಲಸ ಹಿಂದೂ ಕಾರ್ಯಕರ್ತರು ಮಾಡುತ್ತಿದ್ದಾರೆ. ಕೇಸ್ ಆದ್ರೂ ಎದುರಿಸುತ್ತೇವೆ. ಯಾವುದೇ ಕಾರಣಕ್ಕೂ ಗೋ ಹತ್ಯೆ ಮಾಡಲು ಬಿಡಲ್ಲ. ಈ ಪ್ರಕರಣವನ್ನ ಯಾರು ಚುನಾವಣೆಗೆ ಬಳಸಿಕೊಳ್ಳಬಾರದು. ಕೇಂದ್ರ ಮತ್ತು ರಾಜ್ಯ ಸರ್ಕಾರ ಗೋವು ಉಳಿಸಲು ಏನೂ ಮಾಡುತ್ತಿಲ್ಲ. ಕಾಯ್ದೆಯನ್ನ ಕೂಡ ಜಾರಿಗೆ ತರ್ತಿಲ್ಲ ಅಂತಾ ಎರಡು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.