ತೀವ್ರ ಸ್ವರೂಪಗೊಂಡ ಹೋರಾಟ: ನಿರಾಣಿ ಫ್ಯಾಕ್ಟರಿಯಿಂದ ಸಕ್ಕರೆ ಸಾಗಿಸುತ್ತಿದ್ದ ಲಾರಿಗಳನ್ನ ತಡೆದ ರೈತರು
ಮುಖ್ಯಾಂಶಗಳು
- ನಿರಾಣಿ ಶುಗರ್ ಫ್ಯಾಕ್ಟರಿಯಿಂದ ಲಾರಿಯಲ್ಲಿ ಸಕ್ಕರೆ ಸಾಗಾಟ
- ಖಟಕಭಾವಿ ಕ್ರಾಸ್‌ನಲ್ಲಿ ಲಾರಿಗಳನ್ನ ತಡೆ ಹಿಡಿದ ರೈತರು
- ಸಕ್ಕರೆ ಸಾಗಿಸ್ತಿದ್ದ ಲಾರಿಗಳ ಟೈರ್ ಗಾಳಿ ತೆಗೆದು ಆಕ್ರೋಶ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಖಟಕಭಾವಿ ಕ್ರಾಸ್‌ನಲ್ಲಿ ನಿರಾಣಿ ಸಕ್ಕರೆ ಕಾರ್ಖಾನೆಯ ಸಕ್ಕರೆ ಸಾಗಾಟ ಮಾಡುತ್ತಿದ್ದ ಲಾರಿಗಳನ್ನು ರೈತರು ತಡೆದಿದ್ದಾರೆ. MSP ನಿಗದಿಪಡಿಸದೆ ಸಕ್ಕರೆ ಮಾರಾಟ ಮಾಡುವ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು, ಐದು ಲಾರಿಗಳ ಟೈರ್ ಗಾಳಿ ತೆಗೆದು ಪ್ರತಿಭಟಿಸಿದರು. ಕನಿಷ್ಠ ಬೆಂಬಲ ಬೆಲೆ ಘೋಷಿಸಿದ ನಂತರವೇ ಸಕ್ಕರೆ ಮಾರಾಟ ಮಾಡುವಂತೆ ರೈತರು ತಾಕೀತು ಮಾಡಿದ್ದಾರೆ.
ಬೆಳಗಾವಿ, ಅಕ್ಟೋಬರ್ 30: ನಿರಾಣಿ ಶುಗರ್ ಫ್ಯಾಕ್ಟರಿಯಿಂದ ಸಕ್ಕರೆ ಸಾಗಿಸುತ್ತಿದ್ದ 5 ಲಾರಿಗಳನ್ನ ರಸ್ತೆಯಲ್ಲೇ ರೈತರು ತಡೆದಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಖಟಕಭಾವಿ ಕ್ರಾಸ್‌ನಲ್ಲಿ ನಡೆದಿದೆ. ಸಕ್ಕರೆ ಸಾಗಿಸುತ್ತಿದ್ದ ಲಾರಿಗಳ ಟೈರ್ ಗಾಳಿ ತೆಗೆದು ಆಕ್ರೋಶ ವ್ಯಕ್ತಪಡಿಸಿದ್ದು, ಲಾರಿಗಳನ್ನ ವಾಪಸ್ ತೆಗೆದುಕೊಂಡು ಹೋಗುವಂತೆ ತಾಕೀತು ಮಾಡಿದ್ದಾರೆ. ಎಂಎಸ್ಪಿ ನಿಗದಿಪಡಿಸಿದ ಬಳಿಕ ಸಕ್ಕರೆ ಮಾರುವಂತೆ ಎಚ್ಚರಿಕೆ ನೀಡಲಾಗಿದೆ. ಇತ್ತೀಚೆಗೆ ಜಿಲ್ಲೆಯ ವಿವಿಧ ಸಕ್ಕರೆ ಕಾರ್ಖಾನೆಗಳ ಗೋದಾಮುಗಳಿಗೆ ರೈತರು ಮುತ್ತಿಗೆ ಹಾಕಿದ್ದರು. ಆ ಮೂಲಕ ಕಬ್ಬಿನ ಬೆಲೆ ನಿಗದಿಯಾಗುವವರೆಗೆ ಸಕ್ಕರೆ ಮಾರಾಟ ಮಾಡದಂತೆ ಒತ್ತಾಯಿಸಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Oct 30, 2026 10:35 PM
Follow Us
Latest Videos
ರಷ್ಯಾದ ತೈಲ ಸಂಸ್ಕರಣಾಗಾದ ಮೇಲೆ ಉಕ್ರೇನ್ನ ಡ್ರೋನ್ ದಾಳಿ
ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ CCB ಇನ್ಸ್ಪೆಕ್ಟರ್ ಅರುಣ್ ಯಾರು
ದೇವೇಗೌಡರ ಭೇಟಿಯಾದ ಯಡಿಯೂರಪ್ಪ: ಕುತೂಹಲ ಮೂಡಿಸಿದ ಮಾಜಿ CM ನಡೆ
ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನಕ್ಕೆ ದಿನಾಂಕ ನಿಗದಿ, ರಜನೀಕಾಂತ್ ಅತಿಥಿ?

