ಸುವರ್ಣಾಸೌಧದ ಮುಖ್ಯ ದ್ವಾರದ ಮುಂದೆ ಶಾವಿಗೆ ಒಣಹಾಕಿದ ಕಾರ್ಮಿಕ ಮಹಿಳೆ

ಸುವರ್ಣಸೌಧ ಮುಂದೆ ಶಾವಿಗೆ ಒಣಹಾಕಿದ ಕಾರ್ಮಿಕ ಮಹಿಳೆ. ಸುವರ್ಣಾಸೌಧದ ಮುಖ್ಯ ದ್ವಾರದ ಮೆಟ್ಟಿಗಳು ಬಳಿಯೇ ಶಾವಿಗೆ ಒಣಹಾಕಿದ ಮಹಿಳೆ.

ಸುವರ್ಣಾಸೌಧದ ಮುಖ್ಯ ದ್ವಾರದ ಮುಂದೆ ಶಾವಿಗೆ ಒಣಹಾಕಿದ ಕಾರ್ಮಿಕ ಮಹಿಳೆ
ಸುವರ್ಣಾಸೌಧದ ಮುಖ್ಯ ದ್ವಾರದ ಮುಂದೆ ಶಾವಿಗೆ ಒಣಹಾಕಿರುವುದು.
Edited By:

Updated on: Jun 01, 2022 | 10:43 AM

ಬೆಳಗಾವಿ: ಸುವರ್ಣಾಸೌಧದ ಮುಖ್ಯ ದ್ವಾರದ ಮೆಟ್ಟಿಲುಗಳ ಮೇಲೆ ಶಾವಿಗೆ ಸೆಂಡಿಗೆ ಮತ್ತು ಹಪ್ಪಳ ಒಣಗಿಸಲು ಹಾಕಿರುವ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಓರ್ವ ಕಾರ್ಮಿಕ ಮಹಿಳೆಗೆ ಸಾಂಬ್ರಾ ಮೂಲದ ಕಾರ್ಮಿಕ ಮಹಿಳೆ ಶಾವಿಗೆ ತಂದು ಕೊಟ್ಟಿದ್ದರು. ಶಾವಿಗೆ ಹಸಿ ಇದ್ದವು ಎಂಬ ಕಾರಣಕ್ಕೆ ಸೀರೆ ಹಾಸಿ ಮಹಿಳೆ ಶಾವಿಗೆ ಒಣಹಾಕಿದ್ದಾರೆ. ಮಧ್ಯಾಹ್ನ ಪೆಟ್ರೋಲಿಂಗ್ ವೇಳೆ ಶಾವಿಗೆ ಒಣಹಾಕಿದ್ದನ್ನು ಭದ್ರತಾ ಸಿಬ್ಬಂದಿ ಗಮನಿಸಿದ್ದಾರೆ. ತಕ್ಷಣ ಶಾವಿಗೆ ತೆರವುಗೊಳಿಸಿ ಕಾರ್ಮಿಕ ಮಹಿಳೆಯರಿಗೆ ತರಾಟೆ ತೆಗೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಟೋಗಳು ವೈರಲ್ ಆಗುತ್ತಿದ್ದಂತೆ ಸಾಕಷ್ಟು ಜನರು ಟೀಕೆ ಟಿಪ್ಪಣಿ ಮಾಡಿದ್ದಾರೆ. ಚಳಿಗಾಲ ಅಧಿವೇಶನಕ್ಕಾಗಿ ತಯಾರಿ ನಡೆಸುವ ಮುಂಚಿತವಾಗಿಯೇ ಸಂಡಿಗೆ, ಹಪ್ಪಳ ಒಣಗಿಸಲಾಗುತ್ತಿದೆ ಎಂದು ಕೆಲವರು ಹಾಸ್ಯಮಯವಾಗಿ ಟ್ವೀಟ್​ ಮಾಡಿದ್ದಾರೆ. ಇನ್ನೂ ಕೆಲವರು ಸರ್ಕಾರ ಇಲ್ಲಿ ಸಂಡಿಗೆ, ಹಪ್ಪಳ ಮೇಳ ಹಮ್ಮಿಕೊಳ್ಳಲಿದೆ ಎಂದು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ದೃಷ್ಟಿದೋಷವಿರುವ ದೆಹಲಿ ಶಾಲಾ ಶಿಕ್ಷಕಿಯ ಮೇರು ಸಾಧನೆ: 5ನೇ ಪ್ರಯತ್ನದಲ್ಲಿ ಯುಪಿಎಸ್​ಎಸ್​ ಪಾಸ್, 48ನೇ ರ‍್ಯಾಂಕ್

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 10:25 am, Wed, 1 June 22