AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಸ್ಕಾಂ ಅಧಿಕಾರಿಗಳ ಮೇಲೆ MLC ಚನ್ನರಾಜ್ ಹಟ್ಟಿಹೊಳಿಯಿಂದ ಹಲ್ಲೆ ಆರೋಪ: ಪೊಲೀಸ್​​ ಠಾಣೆ ಬಳಿ ಸಿಬ್ಬಂದಿ ಪ್ರತಿಭಟನೆ

ಬಿಲ್​​ ಬಾಕಿ ಹಿನ್ನೆಲೆ ಆಪ್ತನ ಕಲ್ಲು ಕ್ರಷರ್​​ಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಕ್ಕೆ ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ ಹೆಸ್ಕಾಂ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹೆಬ್ಬಾಳ್ಕರ್ ಮೇಡಂ PA ಅಂತಾ ಹಿರೇಮಠ ಕರೆ ಮಾಡಿದ್ರು. ಬೆಳಗ್ಗೆ ಎಂಎಲ್​ಸಿ ಚನ್ನರಾಜ್ ಮನೆಗೆ ಬರುವಂತೆ ಹೇಳಿದ್ದರು. ಅದರಂತೆ ನಾವು ಅವರ ಮನೆಗೆ ಹೋದಾಗ ಹಲ್ಲೆ ನಡೆಸಿದ್ದಾರೆ ಎಂದು ಹೆಸ್ಕಾಂ ಎಇಇ ತಿಳಿಸಿದ್ದು, ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆ ಮುಂದೆ ಸಿಬ್ಬಂದಿ ಪ್ರತಿಭಟನೆ ನಡೆಸಿದ ಪ್ರಸಂಗವೂ ನಡೆದಿದೆ.

ಹೆಸ್ಕಾಂ ಅಧಿಕಾರಿಗಳ ಮೇಲೆ MLC ಚನ್ನರಾಜ್ ಹಟ್ಟಿಹೊಳಿಯಿಂದ ಹಲ್ಲೆ ಆರೋಪ: ಪೊಲೀಸ್​​ ಠಾಣೆ ಬಳಿ ಸಿಬ್ಬಂದಿ ಪ್ರತಿಭಟನೆ
ಚನ್ನರಾಜ್ ಹಟ್ಟಿಹೊಳಿImage Credit source: Channaraj Hattiholi Facebook Page
ಸಹದೇವ್​ ಮಾನೆ
| Edited By: |

Updated on:Sep 25, 2026 | 2:44 PM

Share

ಬೆಳಗಾವಿ, ಸೆಪ್ಟೆಂಬರ್​​ 25: ಹೆಸ್ಕಾಂ ಅಧಿಕಾರಿಗಳ ಮೇಲೆ MLC ಮತ್ತು ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​​ ಅವರ ಸಹೋದರ ಚನ್ನರಾಜ್ ಹಟ್ಟಿಹೊಳಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಬೆಳಗಾವಿಯ ಕುವೆಂಪು ನಗರದಲ್ಲಿರುವ ಚನ್ನರಾಜ್ ನಿವಾಸದಲ್ಲಿ ಎಇಇ ದೀಪಕ್, ಸೆಕ್ಷನ್ ಆಫೀಸರ್ ರಾಜು ಮೇಲೆ ಹಲ್ಲೆ ನಡೆದಿದೆ ಎಂದು ದೂರಲಾಗಿದೆ. ಮೂರು ತಿಂಗಳ ₹77,360 ಕರೆಂಟ್​ ಬಿಲ್ ಬಾಕಿ ಹಿನ್ನೆಲೆ MLC ಚನ್ನರಾಜ್ ಹಟ್ಟಿಹೊಳಿ ಆಪ್ತನಾಗಿರುವ ಪ್ರಮೋದ್ ಜಾಧವ್ ಎಂಬವರಿಗೆ ಸೇರಿದ ಲಕ್ಷ್ಮೀ ಸ್ಟೋನ್​ ಕ್ರಷರ್​ಗೆ ಕರೆಂಟ್ ಸಂಪರ್ಕ​ ಕಟ್ ಮಾಡಲಾಗಿತ್ತು. ​ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದಲ್ಲಿರುವ ಕ್ರಷರ್​​ಗೆ ಏಕೆ ವಿದ್ಯುತ್​ ಸಂಪರ್ಕ ಕಡಿತಗೊಳಿಸಿದ್ದೀರಿ ಎಂದು ಪ್ರಶ್ನಿಸಿ, ಅವಾಚ್ಯ ಶಬ್ದದಿಂದ ನಿಂದಿಸಿ ಎಂಎಲ್​ಸಿ ಹಟ್ಟಿಹೊಳಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಹೆಸ್ಕಾಂ ಸಿಬ್ಬಂದಿಯಿಂದ ಪ್ರತಿಭಟನೆ

ಹೆಸ್ಕಾಂ ಅಧಿಕಾರಿಗಳ ಮೇಲೆ ಚನ್ನರಾಜ್ ಹಟ್ಟಿಹೊಳಿ ಹಲ್ಲೆ ಆರೋಪ ಸಂಬಂಧ ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆ ಮುಂದೆ ಹೆಸ್ಕಾಂ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ. ಎಫ್ಐಆರ್ ದಾಖಲಿಸಲು ಹೆಸ್ಕಾಂ ಸಿಬ್ಬಂದಿ ಒತ್ತಾಯಿಸಿದ್ದುಮ ಪೊಲೀಸರು ಕೂಡ ಆ ಬಗ್ಗೆ ಪ್ರತಿಭಟನಾಕಾರರಿಗೆ ಭರವಸೆ ನೀಡಿ ಹೆಸ್ಕಾಂ ಸಿಬ್ಬಂದಿಯನ್ನು ಸ್ಥಳದಿಂದ ಕಳುಹಿಸುವ ಕೆಲಸ ಮಾಡಿದ್ದಾರೆ. ಘಟನೆ ಸಂಬಂಧ ಎಪಿಎಂಸಿ ಠಾಣೆಗೆ ಡಿಸಿಪಿ ನಾರಾಯಣ ಭರಮನಿ ಕೂಡ ಭೇಟಿ ನೀಡಿದ್ದಾರೆ.

LIVE TV

ಇದನ್ನೂ ಓದಿ: ಸತೀಶ್ ಜಾರಕಿಹೊಳಿಗೆ ಮತ್ತಷ್ಟು ಬಿಗಿಯಾಗಲಿದೆ ಇಡಿ ಕುಣಿಕೆ: ದೆಹಲಿ ಅಧಿಕಾರಿಗಳಿಂದ ನಡೆಯಲಿದ್ಯಂತೆ ತನಿಖೆ

ಹಲ್ಲೆಗೊಳಗಾದ ಹೆಸ್ಕಾಂ ಎಇಇ ದೀಪಕ್ ಟಿವಿ9 ಜೊತೆಗೆ ಮಾತನಾಡಿದ್ದು, ನಿನ್ನೆ ಪ್ರಮೋದ್ ಜಾಧವ್​ಗೆ ಸೇರಿದ ಕಲ್ಲು ಕ್ರಷರ್​​​ ವಿದ್ಯುತ್​ ಸಂಪರ್ಕ ಕಡಿತಮಾಡಲಾಗಿತ್ತು. ಹೆಬ್ಬಾಳ್ಕರ್ ಮೇಡಂ PA ಅಂತಾ ಹಿರೇಮಠ ಕರೆ ಮಾಡಿದ್ರು. ಬೆಳಗ್ಗೆ ಎಂಎಲ್​ಸಿ ಚನ್ನರಾಜ್ ಮನೆಗೆ ಬರುವಂತೆ ಹೇಳಿದ್ದರು. ಅದರಂತೆ ನಾವು ಅವರ ಮನೆಗೆ ಹೋದಾಗ ಹಲ್ಲೆ ನಡೆಸಿದ್ದಾರೆ. ನಮ್ಮ ಶರ್ಟ್ ಹಿಡಿದು ಎದೆ ಭಾಗಕ್ಕೆ ಚನ್ನರಾಜ್ ಹಟ್ಟಿಹೊಳಿಯವರೇ ಹಲ್ಲೆ ಮಾಡಿದ್ದಾರೆ. ನ್ಯಾಯ ಬೇಕು ಅಂತಾ ಎಪಿಎಂಸಿ ಠಾಣೆಗೆ ಬಂದಿದ್ದೇವೆ. ಎಲ್ಲ ಹೆಸ್ಕಾಂ ಸಿಬ್ಬಂದಿ ಕೂಡ ನಮಗೆ ಸಾಥ್ ನೀಡಿದ್ದಾರೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 2:08 pm, Fri, 25 September 26

Follow Us
ಸಹದೇವ್​ ಮಾನೆ
ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More