Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ ಕಾಂಗ್ರೆಸ್​ ಅಧಿವೇಶನ: “ಗಾಂಧಿ ಭಾರತ” ಕಾರ್ಯಕ್ರಮದ ವೇಳಾಪಟ್ಟಿ ಇಲ್ಲಿದೆ

ಬೆಳಗಾವಿಯಲ್ಲಿ 1924ರಲ್ಲಿ ನಡೆದ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲು ಕಾಂಗ್ರೆಸ್​ ಸಿದ್ದವಾಗಿದೆ. ಡಿಸೆಂಬರ್ 26 ಮತ್ತು 27 ರಂದು ಎರಡು ದಿನಗಳ ಕಾರ್ಯಕ್ರಮ ನಡೆಯಲಿದೆ. ಕಾಂಗ್ರೆಸ್ ನಾಯಕರು ಮತ್ತು ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮ ವೇಳಾಪಟ್ಟಿ ಇಲ್ಲಿದೆ.

ಬೆಳಗಾವಿ ಕಾಂಗ್ರೆಸ್​ ಅಧಿವೇಶನ: ಗಾಂಧಿ ಭಾರತ ಕಾರ್ಯಕ್ರಮದ ವೇಳಾಪಟ್ಟಿ ಇಲ್ಲಿದೆ
ಅಧಿವೇಶನ ತಯಾರಿಗಾಗಿ ಬೆಳಗಾವಿಯಲ್ಲಿ ಡಿಕೆ ಶಿವಕುಮಾರ್, ಜಿ ಪರಮೇಶ್ವರ್​
Follow us
Sahadev Mane
| Updated By: ವಿವೇಕ ಬಿರಾದಾರ

Updated on:Dec 25, 2024 | 2:41 PM

ಬೆಳಗಾವಿ, ಡಿಸೆಂಬರ್​ 25: 1924ರಲ್ಲಿ ಬೆಳಗಾವಿಯಲ್ಲಿ (Belagavi) ನಡೆದಿದ್ದ ಕಾಂಗ್ರೆಸ್ ​ ಅಧಿವೇಶನದ ಅಧ್ಯಕ್ಷತೆಯನ್ನು ಮಹಾತ್ಮ ಗಾಂಧಿಯವರು ವಹಿಸಿಕೊಂಡಿದ್ದರು. ಈ ಸಮಾವೇಶ ನಡೆದು ನೂರು ವರ್ಷಗಳಾಗಿದ್ದು, ಕಾಂಗ್ರೆಸ್ ಪಕ್ಷ ಇದನ್ನು ಬಹಳ ವಿಜೃಂಭಣೆಯಿಂದ ಆಚರಿಸಲು ಸಜ್ಜಾಗಿದೆ. ಗುರುವಾರ ಮತ್ತು ಶುಕ್ರವಾರ (ಡಿಸೆಂಬರ್​ 26 ಮತ್ತು 27) ಎರಡು ದಿನ ಬೆಳಗಾವಿಯಲ್ಲಿ ಮಹಾತ್ಮ ಗಾಂಧಿ ಅಧ್ಯಕ್ಷತೆಯ ಕಾಂಗ್ರೆಸ್ ಅಧಿವೇಶನದ ‌ಶತಮಾನೋತ್ಸವ(Centenary of the Congress session) ಕಾರ್ಯಕ್ರಮವು “ಗಾಂಧಿ ಭಾರತ” ಎನ್ನುವ ಹೆಸರಲಿನಲ್ಲಿ ನಡೆಯಲಿದೆ. ಈ ಸಂಬಂಧ ಕಾಂಗ್ರೆಸ್​ ಸಕಲ ಸಿದ್ದತೆ ಮಾಡಿಕೊಂಡಿದೆ. ಕಾರ್ಯಕ್ರಮಕ್ಕೆ ಕಾಂಗ್ರೆಸ್​ನ ಹೈಕಮಾಂಡ್​ ನಾಯಕರೂ ಕೂಡ ಆಗಮಿಸಲಿದ್ದಾರೆ.

ಕಾರ್ಯಕ್ರಮದ ವೇಳಾಪಟ್ಟಿ

ಡಿಸೆಂಬರ್ 26 (ಗುರುವಾರ ಮೊದಲ ದಿನ)

  • ಬೆಳಗ್ಗೆ 10ಕ್ಕೆ ತಿಲಕ್ವಾಡಿ ಬಳಿಯ ವೀರಸೌಧದಲ್ಲಿ ಗಾಂಧಿ ಪುತ್ಥಳಿ ಅನಾವರಣ, ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ. ಫೋಟೋ ಗ್ಯಾಲರಿ ಉದ್ಘಾಟನೆ ಮಾಡಲಾಗುತ್ತದೆ.
  • ಬೆಳಗ್ಗೆ 10.45ಕ್ಕೆ ಸರ್ದಾರ್ ಮೈದಾನದಲ್ಲಿ ಖಾದಿ ಉತ್ಸವ ಮತ್ತು ಮಳಿಗೆಗಳ ಉದ್ಘಾಟನೆಯಾಗಲಿದೆ.
  • 11.15ಕ್ಕೆ ರಾಮತೀರ್ಥ ನಗರ- ಗಂಗಾಧರ ರಾವ್ ದೇಶಪಾಂಡೆ ಸ್ಮಾರಕ ಭವನ‌, ಗಂಗಾಧರ ರಾವ್ ದೇಶಪಾಂಡೆ ಪುತ್ಥಳಿ ಹಾಗೂ ಫೋಟೋ ಗ್ಯಾಲರಿ ಉದ್ಘಾಟನೆಯಾಗಲಿದೆ.
  • ಮಧ್ಯಾಹ್ನ 3ಕ್ಕೆ ವೀರ ಸೌಧದಲ್ಲಿ ಸಿಡಬ್ಲೂಸಿ ಸಭೆ ನಡೆಯಲಿದೆ.

ಡಿಸೆಂಬರ್ 27 (ಶುಕ್ರವಾರ ಎರಡನೇ ದಿನ)

  • ಬೆಳಗ್ಗೆ 10ಕ್ಕೆ ಸುವರ್ಣ ವಿಧಾನಸೌಧದಲ್ಲಿ ಮಹಾತ್ಮಾ ಗಾಂಧಿ ಪುತ್ಥಳಿ ಅನಾವರಣ, ಮಧ್ಯಾಹ್ನ 12ಕ್ಕೆ ಸುವರ್ಣ ಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಸಿಎಂ ಸಿದ್ದರಾಮಯ್ಯರಿಂದ ಭೋಜನಕೂಟ ಇರುತ್ತದೆ.
  • ಮಧ್ಯಾಹ್ನ 1ಕ್ಕೆ ಸಿಪಿಇಡಿ ಮೈದಾನದಲ್ಲಿ ಸಾರ್ವಜನಿಕ ಸಮಾರಂಭ ನಡೆಯಲಿದೆ.

ಇದನ್ನೂ ಓದಿ: ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ಸಿದ್ಧತೆ ಹೇಗಿದೆ? ಡಿಸಿಎಂ ಡಿಕೆ ಶಿವಕುಮಾರ್ ನೀಡಿದ ವಿವರ ಇಲ್ಲಿದೆ

ಕೊನೆ ಹಂತದ ತಯಾರಿ

ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮಕ್ಕೆ ಇದೀಗ ಕೊನೆಯ ಹಂತದ ಸಿದ್ದತೆ ನಡೆದಿದೆ. ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ, ಮುನಿಯಪ್ಪ, ಎಂಬಿ ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ ಎಲ್ಲ ಘಟಾನುಘಟಿ ನಾಯಕರು ಬೆಳಗಾವಿಯಲ್ಲೇ ವಾಸ್ತವ್ಯ ಹೂಡಿದ್ದಾರೆ. ಹಲವು ಕಮಿಟಿಗಳನ್ನ ಮಾಡಿದ್ದು ಊಟ, ವಸತಿ ಸೇರಿ ಒಂದೊಂದು ಕಮಿಟಿಗೆ ಒಂದೊಂದು ಜವಾಬ್ದಾರಿಯನ್ನು ಈಗಾಗಲೇ ನೀಡಲಾಗಿದೆ.

ಕಾಂಗ್ರೆಸ್ ಕಚೇರಿಯಲ್ಲಿ ಸಚಿವರು ಮತ್ತು ಶಾಸಕರ ಜೊತೆಗೆ ಸಭೆ ನಡೆಸಿರುವ ಡಿಕೆ ಶಿವಕುಮಾರ್​ ಎಲ್ಲವೂ ಅಚ್ಚಕಟ್ಟಾಗಿ ಯಾವುದೇ ಅಸ್ತವ್ಯಸ್ಥ ಆಗದಂತೆ ಕೆಲಸ ಕಾರ್ಯಗಳು ನಡೆಯಬೇಕು ಎಂದು ಸೂಚನೆ ನೀಡಿದ್ದಾರೆ. ಇದೇ ವೇಳೆ ಮಾತನಾಡಿದ ಸಚಿವ ಮುನಿಯಪ್ಪ ದೇಶದ ವಿವಿಧಡೆಯಿಂದ ಬರುವ ಘಣ್ಯರಿಗೆ ಊಟದ ವ್ಯವಸ್ಥೆ ಸೇರಿ ಎಲ್ಲವನ್ನೂ ಮಾಡಲಾಗುತ್ತೆ ಅಂತ ಹೇಳಿದ್ದಾರೆ.

ಡಿ.26ರಂದು ಬೆಳಗ್ಗೆ ದೆಹಲಿಯಿಂದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಬೆಳಗಾವಿ ನಗರಕ್ಕೆ ಆಗಮಿಸಲಿದ್ದಾರೆ. ನಗರದ ಸರ್ಕ್ಯೂಟ್ ಹೌಸ್​ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಪೀರನವಾಡಿಯಲ್ಲಿರುವ ಗಾಂಧಿ ಭವನದಲ್ಲಿ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಎಐಸಿಸಿ ಕಾರ್ಯಕಾರಣಿ ಸಭೆ ನಡೆಯಲಿದೆ. ಸಭೆಯಲ್ಲಿ ಗಾಂಧಿ ಪರಿವಾರ, 140 ಜನ ಸಂಸದರು, ಪಿಸಿಸಿ ಅಧ್ಯಕ್ಷರು, ಸಿಎಂ ಭಾಗಿಯಾಗಲಿದ್ದಾರೆ.

ಇನ್ನೂ ಗಾಂಧಿ ಶತಮಾನೋತ್ಸವವನ್ನ ಪಕ್ಷದ ಕಾರ್ಯಕ್ರಮದ ರೀತಿಯಲ್ಲಿ ಮಾಡದೆ ರಾಮ ರಾಜ್ಯದ ಮಾದರಿಯಲ್ಲಿ ಇಡೀ ಸಮಾಜವನ್ನು ಕೂಡಿಸಿಕೊಂಡು ಕಾರ್ಯಕ್ರಮ ಮಾಡುವಂತೆ ರೈತ ಹೋರಾಟಗಾರರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಸದ್ಯ ಇಡೀ ನಗರವೇ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು ಕಾರ್ಯಕ್ರಮದ ಕೊನೆ ಸಿದ್ದತೆ ಕೂಡ ಆಗಿದೆ. ಸಿಎಂ ಸೇರಿದಂತೆ ಹಲವು ನಾಯಕರು ನಗರಕ್ಕೆ ಬರಲಿದ್ದು, ಹೊಟೆಲ್ ವಾಸ್ತವ್ಯದ ವ್ಯವಸ್ಥೆ ಕೂಡ ಆಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:40 pm, Wed, 25 December 24

ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ನೀರಿನ ಸಮಸ್ಯೆ, ಎಲ್ಲಿ ಜನಪ್ರತಿನಿಧಿಗಳು?
ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ನೀರಿನ ಸಮಸ್ಯೆ, ಎಲ್ಲಿ ಜನಪ್ರತಿನಿಧಿಗಳು?
ಗ್ಯಾಸ್​ ಸಿಲಿಂಡರ್​ ತುಂಬಿದ್ದ ಲಾರಿ ಬ್ರೇಕ್​ ಫೇಲ್​ ಆಗಿ ಮರಕ್ಕೆ ಡಿಕ್ಕಿ
ಗ್ಯಾಸ್​ ಸಿಲಿಂಡರ್​ ತುಂಬಿದ್ದ ಲಾರಿ ಬ್ರೇಕ್​ ಫೇಲ್​ ಆಗಿ ಮರಕ್ಕೆ ಡಿಕ್ಕಿ
ಫೆಲೈನ್ ಪ್ಯಾನ್​ಲ್ಯೂಕೊಪೇನಿಯಾ ವೈರಸ್ ಸೋಂಕು ಬೆಕ್ಕುಗಳಲ್ಲಿ ಸಾಂಕ್ರಾಮಿಕ!
ಫೆಲೈನ್ ಪ್ಯಾನ್​ಲ್ಯೂಕೊಪೇನಿಯಾ ವೈರಸ್ ಸೋಂಕು ಬೆಕ್ಕುಗಳಲ್ಲಿ ಸಾಂಕ್ರಾಮಿಕ!
ಸೀರೆಯುಟ್ಟು, ಚಪ್ಪಲಿ ಧರಿಸಿ ಲಂಡನ್​ನ ಪಾರ್ಕ್​ನಲ್ಲಿ ಮಮತಾ ಜಾಗಿಂಗ್
ಸೀರೆಯುಟ್ಟು, ಚಪ್ಪಲಿ ಧರಿಸಿ ಲಂಡನ್​ನ ಪಾರ್ಕ್​ನಲ್ಲಿ ಮಮತಾ ಜಾಗಿಂಗ್
ದಾವಣಗೆರೆ: ನೋಡ ನೋಡ್ತಿದ್ದಂತೆಯೇ ಸುಟ್ಟು ಕರಕಲಾದ ಕಾರುಗಳು
ದಾವಣಗೆರೆ: ನೋಡ ನೋಡ್ತಿದ್ದಂತೆಯೇ ಸುಟ್ಟು ಕರಕಲಾದ ಕಾರುಗಳು
ಕೋಲಾರ: ಹೆಲ್ಮೆಟ್ ತೆಗೀತಿದ್ದಂತೆ ಬುಸ್ ಎಂದ ನಾಗಪ್ಪ! ಆಮೇಲೇನಾಯ್ತು ನೋಡಿ
ಕೋಲಾರ: ಹೆಲ್ಮೆಟ್ ತೆಗೀತಿದ್ದಂತೆ ಬುಸ್ ಎಂದ ನಾಗಪ್ಪ! ಆಮೇಲೇನಾಯ್ತು ನೋಡಿ
ಧಗ ಧಗನೆ ಹೊತ್ತಿ ಉರಿದ ಸಿಲಿಂಡರ್ ತುಂಬಿದ್ದ ಟ್ರಕ್, ಹಲವು ಬಾರಿ ಸ್ಫೋಟ
ಧಗ ಧಗನೆ ಹೊತ್ತಿ ಉರಿದ ಸಿಲಿಂಡರ್ ತುಂಬಿದ್ದ ಟ್ರಕ್, ಹಲವು ಬಾರಿ ಸ್ಫೋಟ
VIDEO: ರನೌಟ್ ಮಾಡಲು ಕುಲ್ದೀಪ್ ಯಾದವ್​ನ ತಳ್ಳಿದ ರಿಷಭ್ ಪಂತ್
VIDEO: ರನೌಟ್ ಮಾಡಲು ಕುಲ್ದೀಪ್ ಯಾದವ್​ನ ತಳ್ಳಿದ ರಿಷಭ್ ಪಂತ್
VIDEO: ಗೆಲ್ಲುವ ಪಂದ್ಯವನ್ನು 'ಕೈ ಚೆಲ್ಲಿದ' ರಿಷಭ್ ಪಂತ್
VIDEO: ಗೆಲ್ಲುವ ಪಂದ್ಯವನ್ನು 'ಕೈ ಚೆಲ್ಲಿದ' ರಿಷಭ್ ಪಂತ್
Daily Devotional: ಸ್ತ್ರೀಯರಿಗೆ ಎಡಗಣ್ಣು ಅದುರುವುದರ ಹಿಂದಿನ ರಹಸ್ಯ
Daily Devotional: ಸ್ತ್ರೀಯರಿಗೆ ಎಡಗಣ್ಣು ಅದುರುವುದರ ಹಿಂದಿನ ರಹಸ್ಯ