ವರದಕ್ಷಿಣೆ ಕಿರುಕುಳಕ್ಕೆ ಎರಡು ಮಕ್ಕಳ ತಾಯಿ ಬಲಿ: ಕಿಟಕಿಯ ಗ್ರಿಲ್​​ಗೆ ವೇಲ್​​ ಬಿಗಿದುಕೊಂಡು ಆತ್ಮಹತ್ಯೆ

ಬೆಳಗಾವಿಯ ಜ್ಯೋತಿ ನಗರದಲ್ಲಿ ವರದಕ್ಷಿಣೆ ಕಿರುಕುಳ ಮತ್ತು ಕೌಟುಂಬಿಕ ಕಲಹಕ್ಕೆ ಬೇಸತ್ತು 28 ವರ್ಷದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರು ಮಕ್ಕಳ ತಾಯಿಯಾದ ಇವರು ಮನೆಯ ಕಿಟಕಿಗೆ ನೇಣು ಬಿಗಿದುಕೊಂಡಿದ್ದಾರೆ. ಪ್ರಕರಣ ಸಂಬಂಧ ಪತಿಯನ್ನು ಬಂಧಿಸಲಾಗಿದ್ದು, ಕುಟುಂಬಸ್ಥರು ಇದನ್ನು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪಿಸಿದ್ದಾರೆ.

ವರದಕ್ಷಿಣೆ ಕಿರುಕುಳಕ್ಕೆ ಎರಡು ಮಕ್ಕಳ ತಾಯಿ ಬಲಿ: ಕಿಟಕಿಯ ಗ್ರಿಲ್​​ಗೆ ವೇಲ್​​ ಬಿಗಿದುಕೊಂಡು ಆತ್ಮಹತ್ಯೆ
ಮೃತ ಯುವತಿ
Image Credit source: Tv9 Kannada
Edited By:

Updated on: Apr 20, 2026 | 11:30 AM

ಬೆಳಗಾವಿ, ಏಪ್ರಿಲ್​​ 20: ಕೌಟುಂಬಿಕ ಕಲಹ ಮತ್ತು ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯ ಜ್ಯೋತಿ ನಗರದಲ್ಲಿ ನಡೆದಿದೆ. ಶ್ರೀನಿಧಿ ನಾವಿ (28) ಮೃತ ಗೃಹಿಣಿಯಾಗಿದ್ದು, ಮನೆಯ ಕಿಟಕಿಯ ಗ್ರಿಲ್​​ಗೆ ವೇಲ್​​ ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾಳೆ. ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಕೇಸ್ ದಾಖಲಾಗಿದ್ದು, ಪ್ರಕರಣ ಸಂಬಂಧ ಮಹಿಳೆಯ ಪತಿ ಸಂತೋಷ್​​ನನ್ನು ಪೊಲೀಸರು ಬಂಧಿಸಿದ್ದಾರೆ.

2021ರಲ್ಲಿ ಶ್ರೀನಿಧಿ ಮತ್ತು ಸಂತೋಷ್​​ ವಿವಾಹ ನಡೆದಿತ್ತು. ‌ಆರಂಭದಲ್ಲಿ ಸಂಸಾರ ಚೆನ್ನಾಗಿಯೇ ಇದ್ದು, ಇದಕ್ಕೆ ಸಾಕ್ಷಿ ಎಂಬಂತೆ ದಂಪತಿಗೆ ಇಬ್ಬರು ಮಕ್ಕಳೂ ಇದ್ದಾರೆ. ಆದರೆ ಇತ್ತೀಚೆಗೆ ಕೌಟುಂಬಿಕ ಕಲಹ ಆರಂಭವಾಗಿದ್ದು, ತವರು ಮನೆಯವರೊಂದಿಗೆ ಮಾತಾಡದಂತೆ ಪತಿ ಸಂತೋಷ ಶ್ರೀನಿಧಿ ಬಳಿಯಿದ್ದ ಮೊಬೈಲ್ ಪೋನ್ ಕಿತ್ತುಕೊಂಡಿದ್ದ ಎನ್ನಲಾಗಿದೆ. ಶ್ರೀನಿಧಿ ಆತ್ಮಹತ್ಯೆ ಸಂಬಂಧ ಆಕೆಯ ಗಂಡ, ಅತ್ತೆ, ಮತ್ತು ಇನ್ನಿಬ್ಬರು ಸಂಬಂಧಿಕರ ವಿರುದ್ಧ ಕುಟುಂಬಸ್ಥರು ದೂರು ನೀಡಿದ್ದು, ಆಕೆಯದ್ದು ಆತ್ಮಹತ್ಯೆ ಅಲ್ಲ. ಬದಲಾಗಿ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಮರ್ಯಾದಾ ಹತ್ಯೆ; ಪ್ರೀತಿಸಿದವನ ಜೊತೆ ಹೋಗಿದ್ದಕ್ಕೆ ವಿಷ ಹಾಕಿದ ಅಣ್ಣ!

ಯುವಕ‌ ಆತ್ಮಹತ್ಯೆ

ಊರಿಗೆ ಹೋಗಲು ಬಿಡಲಿಲ್ಲ ಎಂಬ ಕಾರಣಕ್ಕೆ ಮನನೊಂದು ಬಿಹಾರ ಮೂಲದಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೇವನಹಳ್ಳಿ ತಾಲೂಕಿನ ‌ವಿಜಯಪುರ ಪಟ್ಟಣದಲ್ಲಿ ನಡೆದಿದೆ. ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಗೋವಿಂದ ಯಾದವ್ ಮೃತಪಟ್ಟಿದ್ದು, ಕಳೆದ ಆರು‌ ತಿಂಗಳ ಹಿಂದೆ ಸಹೋದರನ ಜೊತೆ‌ ಸೆಂಟ್ರಿಂಗ್ ಕೆಲಸಕ್ಕೆಂದು ಈತ ಬಂದಿದ್ದ. ಆದ್ರೆ ಕಳೆದ‌‌‌‌ ಕೆಲ ತಿಂಗಳುಗಳಿಂದ ಕೆಲಸ‌ ಬೇಡ ಊರಿಗೆ ಹೋಗಬೇಕು ಎಂದು ಗೋವಿಂದ ಹೇಳುತ್ತಿದ್ದರೂ, ಇನ್ನು ಎರಡು ತಿಂಗಳು‌ ಬೇಡ ಎಂದು ಆತನನ್ನು ಊರಿಗೆ ಹೋಗದಂತೆ ಸಹೋದರ ತಡೆದಿದ್ದ. ಇದೇ ವಿಚಾರಕ್ಕೆ ಆತ ತೀವ್ರ ನೊಂದಿದ್ದ ಎನ್ನಲಾಗಿದ್ದು, ಪ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us