ಬೆಳಗಾವಿಯಲ್ಲಿ ಹೆರಾಯಿನ್ ಮಾರಾಟ ಮಾಡುತ್ತಿದ್ದ ನಾಲ್ವರ ಬಂಧನ

ಬೆಳಗಾವಿಯಲ್ಲಿ ಹೆರಾಯಿನ್ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಖಡೇಬಜಾರ್ ಮತ್ತು ಮಾರ್ಕೆಟ್ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 28 ಗ್ರಾಂ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಮೈಸೂರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಎಂಡಿಎಂಎ ಅನ್ನು ಮಹಾರಾಷ್ಟ್ರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಬೆಳಗಾವಿಯಲ್ಲಿ ಹೆರಾಯಿನ್ ಮಾರಾಟ ಮಾಡುತ್ತಿದ್ದ ನಾಲ್ವರ ಬಂಧನ
ಬಂಧಿತ ಆರೋಪಿಗಳು
Edited By:

Updated on: Jul 27, 2025 | 3:08 PM

ಬೆಳಗಾವಿ, ಜುಲೈ 27: ಹೆರಾಯಿನ್ (Drugs) ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬೆಳಗಾವಿಯ (Belagavi) ಖಡೇಬಜಾರ್ ಹಾಗೂ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಾಂಗಡಿ ಗಲ್ಲಿಯಲ್ಲಿ ವಿಶ್ವನಾಥ್ ಗೋಟಡಕಿ, ಮಯೂರ್ ರಾವುತ್ ಮತ್ತು ಕಾಮತ್ ಗಲ್ಲಿಯಲ್ಲಿ ವಕ್ತಾರಾಹ್ಮದ್ ನಾಯ್ಕವಾಡಿ, ರೋಷನ್, ಜಮೀನ್ ಮುಲ್ಲಾ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಾದ ವಿಶ್ವನಾಥ್ ಗೋಟಡಕಿ, ಮಯೂರ್ ರಾವುತ್ ಎಂಬುವರಿಂದ ಪೊಲೀಸರು 33,000 ಸಾವಿರ ಮೌಲ್ಯದ 14.63 ಗ್ರಾಂ ತೂಕದ ಹೆರಾಯಿನ್ ವಶಕ್ಕೆ ಪಡೆದಿದ್ದಾರೆ. ಇನ್ನು ಮತ್ತಿಬ್ಬರು ಬಂಧಿತ ಆರೋಪಿಗಳಾದ ವಕ್ತಾರಾಹ್ಮದ್ ನಾಯ್ಕವಾಡಿ, ರೋಷನ್, ಜಮೀನ್ ಮುಲ್ಲಾ ಎಂಬುವರಿಂದ 14.39 ಗ್ರಾಂ ತೂಕದ 11,800 ರೂಪಾಯಿ ಮೌಲ್ಯದ ಹೆರಾಯಿನ್​ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಖಡೇಬಜಾರ್ ಹಾಗೂ ಮಾರ್ಕೆಟ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಕೋಟ್ಯಾಂತರ ಬೆಲೆಯ ಎಂಡಿಎಂಎ ವಶಕ್ಕೆ

ಮೈಸೂರು ಹೊರವಲಯದ ರಿಂಗ್ ರಸ್ತೆ ಬಳಿ ತಯಾರಿಸಲಾಗುತ್ತಿದ್ದ ಡ್ರಗ್ಸ್ ತಯಾರಿಕಾ ಘಟಕದ ಮೇಲೆ ಮಹಾರಾಷ್ಟ್ರ ಪೊಲೀಸರು ದಾಳಿ ಮಾಡಿದ್ದಾರೆ. ಇತ್ತೀಚಿಗೆ ಮಹಾರಾಷ್ಟ್ರ ಪೊಲೀಸರು ಓರ್ವ ಡ್ರಗ್​ಪೆಡ್ಲರ್​ನನ್ನು ಬಂಧಿಸಿದ್ದರು.​ ವಿಚಾರಣೆ ವೇಳೆ ಆರೋಪಿ ಮೈಸೂರಿನಿಂದ ಡ್ರಗ್ ಸರಬರಾಜು ಆಗುತ್ತಿರುವ ಬಗ್ಗೆ ಬಾಯಿ ಬಿಟ್ಟಿದ್ದನು. ಈ ಮಾಹಿತಿ ಆಧರಿಸಿ ಮಹಾರಾಷ್ಟ್ರ ಪೊಲೀಸರು ಡ್ರಗ್ಸ್​ ತಯಾರಿಕಾ ಘಟಕದ ಮೇಲೆ ದಾಳಿ ಮಾಡಿದ್ದಾರೆ. ಗ್ಯಾರೇಜ್ ಅಂತ ಬೋರ್ಡ್​ ಹಾಕಿಕೊಂಡು ಇಲ್ಲಿ ಡ್ರಗ್ಸ್​ ತಯಾರಿಸಲಾಗುತ್ತಿತ್ತು. ಮಹಾರಾಷ್ಟ್ರ ಪೊಲೀಸರು ಕೋಟ್ಯಾಂತರ ರೂಪಾಯಿ ಬೆಲೆಯ ಎಂಡಿಎಂಎ ವಶಕ್ಕೆ ಪಡೆದಿದ್ದಾರೆ. ಡ್ರಗ್ಸ್ ತಯಾರಿಸುತ್ತಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ತಯಾರಿಕ ಘಟಕದಿಂದ ದೇಶ ವಿದೇಶಗಳಿಗೆ ಎಂಡಿಎಂಎ ಸರಬರಾಜು ಆಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ
ಬೆಂಗಳೂರಿನಲ್ಲಿ 10 ಕೋಟಿ ರೂ. ಮೌಲ್ಯದ MDMA ಡ್ರಗ್ಸ್‌ ಜಪ್ತಿ!
ಹೊಸ ವರ್ಷಾಚರಣೆ: ಲಾಡ್ಜ್, ರೆಸ್ಟೋರೆಂಟ್ ಮೇಲೆ ಪೊಲೀಸ್​ ಕಣ್ಣು
ಬೆಂಗಳೂರಿಗೆ ಬರ್ತಿದೆ ವಿದೇಶಿ ಡ್ರಗ್ಸ್​: 21 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ
ಲೋಕಾಯುಕ್ತ ದಾಳಿ: ಸರ್ಕಾರಿ ಕಚೇರಿಯಲ್ಲಿ ಗಾಂಜಾ, ಡ್ರಗ್ಸ್, ಮದ್ಯ ಪತ್ತೆ!

ಇದನ್ನೂ ನೋಡಿ: ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ ಪತ್ತೆ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್

ಓದಲು ಬಂದವಳು ಪೆಡ್ಲರ್ ಆದಳು

ವಿದೇಶದಿಂದ ಭಾರತಕ್ಕೆ ಓದಲು ಬಂದಿದ್ದ ಪ್ರಿನ್ಸಸ್ ಎಂಬ ವಿದೇಶಿ ಮಹಿಳೆ ಬೆಂಗಳೂರಿನಲ್ಲಿ ಡ್ರಗ್​ ಪೆಡ್ಲಿಂಗ್​ ಮಾಡುತ್ತಿದ್ದಳು. ಈ ಮಾಹಿತಿ ತಿಳಿದ ಸಿಸಿಬಿ ಹಾಗೂ ಬೆಂಗಳೂರಿನ ಚಿಕ್ಕಜಾಲ ಠಾಣೆಯ ಪೊಲೀಸರು ಕಾರ್ಯಾಚರಣೆ ಡ್ರಗ್​ ಪೆಡ್ಲರ್​ ಪ್ರಿನ್ಸಸ್​​ಳನ್ನು ಬಂಧಿಸಿದ್ದರು. ಪ್ರಿನ್ಸಸ್​ ಬಳಿ ಇದ್ದ 10 ಕೋಟಿ ರೂಪಾಯಿ ಮೌಲ್ಯದ 5.325 ಕೆಜಿ ಎಂಡಿಎಂಎ ಜಪ್ತಿ ಮಾಡಿದ್ದರು.

ಕಳೆದ 3 ವರ್ಷದ ಹಿಂದೆ ಬ್ಯುಸಿನೆಸ್ ವೀಸಾದಲ್ಲಿ ಭಾರತಕ್ಕೆ ಬಂದಿದ್ದ ಪ್ರಿನ್ಸಸ್ ಎಂಬ ವಿದೇಶಿ ಮಹಿಳೆ ಡ್ರಗ್ ಪೆಡ್ಲಿಂಗ್‌ ಮಾಡುತ್ತಿದ್ದಳು. ಕಳೆದ ತಿಂಗಳು ಚಿಕ್ಕಜಾಲ ಠಾಣಾ ವ್ಯಾಪ್ತಿಯ ರಾಜಾನುಕುಂಟೆ ಬಳಿ ವ್ಯಾಪಾರ ಮಾಡುವಾಗ ಸಿಕ್ಕಿಬಿದ್ದಿದ್ದಳು. ಬಂಧಿತ ಪ್ರಿನ್ಸಸ್​ನಿಂದ 10 ಕೋಟಿ ರೂ. ಮೌಲ್ಯದ 5.325 ಕೆಜಿ ಎಂಡಿಎಂಎಯನ್ನು ಪೊಲೀಸರು ಜಪ್ತಿ ಮಾಡಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:06 pm, Sun, 27 July 25